ಹುಬ್ಬಳ್ಳಿ: ಚಡ್ಡಿ ಗ್ಯಾಂಗ್‌ನ ಕುಖ್ಯಾತ ಪಾಲಾ ವೆಂಕಟೇಶ್ವರ ರಾವ್ ಮೇಲೆ ಫೈರಿಂಗ್, ಬಂಧನ; ವಿದ್ಯಾಗಿರಿ ಪೊಲೀಸರ ಕಾರ್ಯಾಚರಣೆ
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿ: ಚಡ್ಡಿ ಗ್ಯಾಂಗ್‌ನ ಕುಖ್ಯಾತ ಪಾಲಾ ವೆಂಕಟೇಶ್ವರ ರಾವ್ ಮೇಲೆ ಫೈರಿಂಗ್, ಬಂಧನ; ವಿದ್ಯಾಗಿರಿ ಪೊಲೀಸರ ಕಾರ್ಯಾಚರಣೆ

ಹುಬ್ಬಳ್ಳಿ: ಚಡ್ಡಿ ಗ್ಯಾಂಗ್‌ನ ಕುಖ್ಯಾತ ಪಾಲಾ ವೆಂಕಟೇಶ್ವರ ರಾವ್ ಮೇಲೆ ಫೈರಿಂಗ್, ಬಂಧನ; ವಿದ್ಯಾಗಿರಿ ಪೊಲೀಸರ ಕಾರ್ಯಾಚರಣೆ

Hubballi Crime: ಹುಬ್ಬಳ್ಳಿಯ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ತಿಂಗಳ ಹಿಂದೆ ನಡೆದ ಮನೆ ದರೋಡೆ ಪ್ರಕರಣದ ಚಡ್ಡಿ ಗ್ಯಾಂಗ್‌ನ ನಾಯಕ ಪಾಲಾ ವೆಂಕಟೇಶ್ವರ ರಾವ್ ಮೇಲೆ ಫೈರಂಗ್ ನಡೆಸಿ ಬಂಧಿಸಲಾಗಿದೆ. ವಿದ್ಯಾಗಿರಿ ಪೊಲೀಸರ ಕಾರ್ಯಾಚರಣೆಯ ವಿವರ ಇಲ್ಲಿದೆ.

ಹುಬ್ಬಳ್ಳಿಯಲ್ಲಿ ಆರು ತಿಂಗಳ ಹಿಂದೆ ಮನೆಯೊಂದಕ್ಕೆ ನುಗ್ಗಿ ಭಯಹುಟ್ಟಿಸುವಂತೆ ದಂಪತಿಗೆ ಹೊಡೆದು ದರೋಡೆ ಮಾಡಿದ್ದ ಚಡ್ಡಿ ಗ್ಯಾಂಗ್‌ನ ಕುಖ್ಯಾತ ಪಾಲಾ ವೆಂಕಟೇಶ್ವರ ರಾವ್ ಮೇಲೆ ಫೈರಿಂಗ್ ನಡೆಸಿ ಬಂಧಿಸಲಾಗಿದೆ, ವಿದ್ಯಾಗಿರಿ ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದೆ.
ಹುಬ್ಬಳ್ಳಿಯಲ್ಲಿ ಆರು ತಿಂಗಳ ಹಿಂದೆ ಮನೆಯೊಂದಕ್ಕೆ ನುಗ್ಗಿ ಭಯಹುಟ್ಟಿಸುವಂತೆ ದಂಪತಿಗೆ ಹೊಡೆದು ದರೋಡೆ ಮಾಡಿದ್ದ ಚಡ್ಡಿ ಗ್ಯಾಂಗ್‌ನ ಕುಖ್ಯಾತ ಪಾಲಾ ವೆಂಕಟೇಶ್ವರ ರಾವ್ ಮೇಲೆ ಫೈರಿಂಗ್ ನಡೆಸಿ ಬಂಧಿಸಲಾಗಿದೆ, ವಿದ್ಯಾಗಿರಿ ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದೆ.

Hubballi Crime: ಮನೆ ಕಳವು ಪ್ರಕರಣದ ಆರೋಪಿ, ಆಂಧ್ರದ ಕರ್ನೂಲ್ ಮೂಲದ ನೆಟೋರಿಯಸ್ ಪಾಲಾ ವೆಂಕಟೇಶ್ವರ ರಾವ್ ಎರಡೂ ಕಾಲಿಗೆ ವಿದ್ಯಾಗಿರಿ ಪೋಲೀಸರು ಇಂದು (ಡಿಸೆಂಬರ್ 28) ಬೆಳಗ್ಗೆ ಗುಂಡು ಹೊಡೆದಿದ್ದಾರೆ. ಧಾರವಾಡದ ನವಲೂರಿನ ಮನೆಯೊಂದಕ್ಕೆ ಕನ್ನ ಹಾಕಿದ್ದ ಭೂಪ, ಪಾಲಾ ವೆಂಕಟೇಶ್ವರ ರಾವ್‌ನನ್ನ ಬಂಧಿಸಿ ಹೆಚ್ಚಿನ ವಿಚಾರಣೆ ಕರೆದುಕೊಂಡು ಹೋದಾಗ ಪೊಲೀಸರ ಮೇಲೆ ದಾಳಿ ಮಾಡಿದ್ದಾನೆ. ಆರೋಪಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ಪಿಎಸ್‌ಐ ಸೇರಿ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿದ್ದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಡ್ಡಿ ಗ್ಯಾಂಗ್‌ನ ಕುಖ್ಯಾತ ಪಾಲಾ ವೆಂಕಟೇಶ್ವರ ರಾವ್ ಬಂಧನ

ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್‌ಡಿಎಂ ಆಸ್ಪತ್ರೆಯ ಹಿಂಭಾಗದ ಅಶೋಕ ಕದಂ ಎಂಬುವರ ಮನೆ ಬಾಗಿಲಿಗೆ ಕಲ್ಲು ಒಗೆದು ಬಾಗಿಲು ಮುರಿದು ದಂಪತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು ಈ ಚಡ್ಡಿ ಗ್ಯಾಂಗ್‌. ಬಳಿಕ ಮನೆಯಲ್ಲಿದ್ದ ನಗ, ನಗದು ದರೋಡೆ ಮಾಡಿ ಅಲ್ಲಿಂದ ಪರಾರಿಯಾಗಿತ್ತು. ಈ ಘಟನೆ ನಡೆದು 6 ತಿಂಗಳ ಬಳಿಕ ಚಡ್ಡಿ ಗ್ಯಾಂಗ್‌ನ ಪಾಲಾ ವೆಂಕಟೇಶ್ವರ ರಾವ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಭೀಕರ ದರೋಡೆ ಪ್ರಕರಣವನ್ನು ಬೆನ್ನು ಹತ್ತಿದ್ದ ವಿದ್ಯಾಗಿರಿ ಠಾಣೆಯ ಪೊಲೀಸರು ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಆರೋಪಿಗಳು ಆಂಧ್ರಪ್ರದೇಶದ ಕರ್ನುಲ್’ನ ನಟೋರಿಯಸ್ ಚಡ್ಡಿ ಗ್ಯಾಂಗ್ ಸದಸ್ಯರು ಎಂಬುದು ಅರಿವಾಗಿದೆ. ಇದು ಗೊತ್ತಾದ ಬಳಿಕ ವಿದ್ಯಾಗಿರಿ ಪೊಲೀಸರು ತನಿಖೆ ತೀವ್ರಗೊಳಿಸಿ, ಆರೋಪಿಗಳಿಗಾಗಿ ಶೋಧ ನಡೆಸಿದ್ದರು. 80 ಕ್ಕೂ ಹೆಚ್ಚು ಕಳ್ಳತನದಲ್ಲಿ ಭಾಗಿಯಾಗಿದ್ದ ನಟೋರಿಯಸ್ ಪಾಲಾ ವೆಂಕಟೇಶ್ವರ ರಾವ್ ಮೂಲತಃ ಆಂದ್ರಪ್ರದೇಶದವ. ಸುಮಾರು ಐದು ರಾಜ್ಯಗಳ ಪೊಲೀಸರ ಬೇಕಾಗಿದ್ದ ಪಾಲಾ ಈಗ ಪೊಲೀಸರ ವಶದಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.

ಚಡ್ಡಿ ಗ್ಯಾಂಗ್‌ನ ಕುಖ್ಯಾತ ಪಾಲಾ ವೆಂಕಟೇಶ್ವರ ರಾವ್ ಮೇಲೆ ಫೈರಿಂಗ್‌

ಪೊಲೀಸರು ಆರೋಪಿಗಳನ್ನು ಬಂಧಿಸಲು ಹೋದಾಗ, ಅವರು ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದರು . ಆ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ಐ ಪ್ರಮೋದ ಅವರು ದರೊಡೆಕೋರ ಪಾಲಾ ವೆಂಕಟೇಶ್ವರ ರಾವ್ ಮೇಲೆ ಗುಂಡು ಹಾರಿಸಿದ್ದಾರೆ.

ಸದ್ಯ ಘಟನೆಯಲ್ಲಿ ಪಿ.ಎಸ್.ಐ ಪ್ರಮೋದ ಸೇರಿದಂತೆ ಓರ್ವ ಪೊಲೀಸ್ ಕಾನ್‌ಸ್ಟೆಬಲ್‌ಗೆ ಗಾಯವಾಗಿದ್ದು, ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಫೈರಿಂಗ್ ಮಾಡಿದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ನಟೋರಿಯಸ್ ದರೋಡೆ ಮಾಡುವ ಚಡ್ಡಿ ಗ್ಯಾಂಗ್ ಕರ್ನಾಟಕದ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದರೋಡೆ ಮಾಡಿದೆ ಎನ್ನಲಾಗುತ್ತಿದ್ದು ಖಾಕಿ ವಿಚಾರಣೆಯಲ್ಲಿ ಮತ್ತಷ್ಟು ಪ್ರಕರಣಗಳು ಹೊರಬರುವ ಸಾಧ್ಯತೆಗಳಿವೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಸುಳ್ಳ ರೋಡ ಕೊಲೆ ಪ್ರಕರಣ; ಆರೋಪಿ ಗೌಸ ಅಂದರ್

ಹುಬ್ಬಳ್ಳಿಯ ಸುಳ್ಳ ರೋಡ್ ಇಂದ್ರಪ್ರಸ್ಥ ಲೇಔಟ್‌ನಲ್ಲಿ ಸೋನಿಯಾ ಗಾಂಧಿ ನಗರದ ನಿವಾಸಿಯಾದ ಕುಮಾರ್ ಬೆಟಗೇರಿ (57) ಎಂಬಾತನನ್ನು ಕೊಲೆ ಮಾಡಿ, ಪರಾರಿಯಾದ ಆರೋಪಿ ಬಂಧಿಸುವಲ್ಲಿ ಕೇಶ್ವಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕೊಲೆ ಡಿಸೆಂಬರ್ 22 ರಂದು ನಡೆದಿತ್ತು. ಈ ಪ್ರಕರಣ ಪತ್ತೆ ಹಚ್ಚಲು ಉತ್ತರ ಉಪವಿಭಾಗದ ಎಸಿಪಿ ಶಿವಪ್ರಕಾಶ್ ನಾಯಕ್ ನೇತೃತ್ವದಲ್ಲಿ ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್‌ ಕೆ ಎಸ್ ಹಟ್ಟಿ ಮತ್ತವರ ಠಾಣೆಯ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ರಚಿಸಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ತಂಡವು ಆರೋಪಿ ದೇವಾಂಗಪೇಟೆ ನಿವಾಸಿ ಗೌಸ್ ಮೊಹಮ್ಮದ್ ನದಾಫ್ (40) ಎಂಬಾತನನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ಮತ್ತು ಮೃತನಿಂದ ಸುಲಿಗೆ ಮಾಡಿದ ನಗದು ಹಣವನ್ನು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಆರೋಪಿಯ ಕುರಿತು ಯಾವುದೇ ಸುಳಿವು ಇರದ ಪ್ರಕರಣವನ್ನು ಪತ್ತೆ ಮಾಡಿ ಆರೋಪಿಯನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯವೈಖರಿಯನ್ನು ಪೊಲೀಸ್‌ ಆಯುಕ್ತ ಶಶಿಕುಮಾರ ಪ್ರಶಂಸಿಸಿದ್ದಾರೆ.

Whats_app_banner