ಗುಂಡು ಹೊಡೆಯುವಂಥ ಕೆಟ್ಟ ಮಾದರಿ ನಂಬಿ ಸರ್ಕಾರವನ್ನು ಹೊಗಳುವ ಮುನ್ನ: ಹುಬ್ಬಳ್ಳಿ ಹತ್ಯೆಯ ಬಗ್ಗೆ ಕೃಷ್ಣ ಭಟ್ ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಗುಂಡು ಹೊಡೆಯುವಂಥ ಕೆಟ್ಟ ಮಾದರಿ ನಂಬಿ ಸರ್ಕಾರವನ್ನು ಹೊಗಳುವ ಮುನ್ನ: ಹುಬ್ಬಳ್ಳಿ ಹತ್ಯೆಯ ಬಗ್ಗೆ ಕೃಷ್ಣ ಭಟ್ ಬರಹ

ಗುಂಡು ಹೊಡೆಯುವಂಥ ಕೆಟ್ಟ ಮಾದರಿ ನಂಬಿ ಸರ್ಕಾರವನ್ನು ಹೊಗಳುವ ಮುನ್ನ: ಹುಬ್ಬಳ್ಳಿ ಹತ್ಯೆಯ ಬಗ್ಗೆ ಕೃಷ್ಣ ಭಟ್ ಬರಹ

ಗುಂಡು ಹೊಡೆಯುವಂಥ ಕೆಟ್ಟ ಮಾದರಿ ನಂಬಿ ಸರ್ಕಾರವನ್ನು ಹೊಗಳುವ ಮುನ್ನ ಗಮನಿಸಬೇಕಾದ ಕೆಲ ಅಂಶಗಳನ್ನು ಕೃಷ್ಣಭಟ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆ ಸಂಗತಿಗಳು ಇಲ್ಲಿವೆ ಗಮನಿಸಿ.

ಗುಂಡು ಹೊಡೆಯುವಂಥ ಕೆಟ್ಟ ಮಾದರಿ ನಂಬಿ ಸರ್ಕಾರವನ್ನು ಹೊಗಳುವ ಮುನ್ನ
ಗುಂಡು ಹೊಡೆಯುವಂಥ ಕೆಟ್ಟ ಮಾದರಿ ನಂಬಿ ಸರ್ಕಾರವನ್ನು ಹೊಗಳುವ ಮುನ್ನ (ಪ್ರಾತಿನಿಧಿಕ ಚಿತ್ರ - Canva)

ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿ ಕೊಲೆಯಾಗಿರುವ ಸಂಗತಿ ಹಬ್ಬಿದೆ. ಅದಕ್ಕಿಂತ ಹೆಚ್ಚಾಗಿ ಕೊಲೆ ಆದ ಕೆಲವೇ ಗಂಟೆಗಳ ಬಳಿಕ ಆರೋಪಿಯನ್ನು ಪೊಲೀಸರು ಸೆರೆಹಿಡಿಯಲು ಮಾಡಿದ ಪ್ರಯತ್ನ ಮತ್ತು ಪೊಲೀಸರು ಆತನ ಮೇಲೆ ನಡೆಸಿದ ಗುಂಡಿನ ದಾಳಿ ಹೆಚ್ಚು ಚರ್ಚೆಯಾಗುತ್ತಿದೆ. ಪೊಲೀಸರ ಗುಂಡೇಟಿಗೆ ಆರೋಪಿ ಈಗಾಗಲೇ ಮೃತನಾಗಿದ್ದಾನೆ. ಇದೇ ಸಂಗತಿಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೃಷ್ಣ ಭಟ್‌ ಅವರು ಹಂಚಿಕೊಂಡ ಕೆಲಸ ಸಂಗತಿಗಳನ್ನು ನಾವಿಲ್ಲಿ ಯಥಾವತ್ತಾಗಿ ನೀಡಿದ್ದೇವೆ ಗಮನಿಸಿ. ಅವರ ಫೇಸ್ಬುಕ್‌ ಪೋಸ್ಟ್‌ನಲ್ಲಿನ ಮಾಹಿತಿ ಹೀಗಿದೆ.

ಹುಬ್ಬಳ್ಳಿಯ ಘಟನೆ ಒಂದು ದುರದೃಷ್ಟಕರ ಘಟನೆ. ಆತ ಮಾಡಿದ್ದು ಘನಘೋರ ಅಪರಾಧ. ಅವನನ್ನು ಅಷ್ಟೇ ಬೇಗ ಪತ್ತೆ ಮಾಡಿ ಹಿಡಿಯಲು ಹೋಗುವವರೆಗೆ ಪೊಲೀಸರು ಸರಿಯಾದ ಮತ್ತು ದಕ್ಷ ಕೆಲಸ ಮಾಡಿದ್ದಾರೆ. ಆದರೆ, ಅರೆಸ್ಟ್ ಮಾಡಲು ಬಂದವರ ಮೇಲೆ ಆತ ಗನ್ ಎತ್ತಲಿಲ್ಲ. ಆತನ ಬಳಿ ಗನ್ ಇರಲಿಲ್ಲ. ಕಲ್ಲು ಇತ್ತು. ಕಲ್ಲು ಎಸೆದಿದ್ದ. ಇವರು ಗುಂಡು ಹೊಡೆದರು. ಕಲ್ಲು ಹೊಡೆಯುವವನ ಮೇಲೆ ಗುಂಡಿನ ಮಳೆ ಸುರಿಸುತ್ತೀರಿ ಎಂದಾದರೆ, ಕಾಶ್ಮೀರದಲ್ಲಿ ಇವತ್ತು ಜನಸಂಖ್ಯೆಯೇ ನಾಶವಾಗುತ್ತಿತ್ತಲ್ಲ! ಅಲ್ಲಿ ಗುಂಡು ಹೊಡೆಯಲು ಪೊಲೀಸರಿಗೆ ಇಲ್ಲದ ಧೈರ್ಯ ಹುಬ್ಬಳ್ಳಿಯಲ್ಲಿ ಹೇಗೆ ಬಂತು? ಆತನನ್ನು ಕಲ್ಲು ಎಸೆದ ಎಂದು ಬಿಟ್ಟು ಬರಬೇಕಿರಲಿಲ್ಲ. ಕಾಲಿಗೆ ಗುಂಡು ಹೊಡೆದು, ಎತ್ತಿಕೊಂಡು ಬಂದು ಕಾನೂನಿನ ಕೈಗೆ ಒಪ್ಪಿಸಬಹುದಿತ್ತು.

ಇದೊಂದು ಕೆಟ್ಟ ಪರಂಪರೆಯನ್ನು ಆಡಳಿತ ವರ್ಗ ಕಾಂಗ್ರೆಸ್ ಸರ್ಕಾರವಿದ್ದಲ್ಲೆಲ್ಲ ಮಾಡಿಕೊಂಡೇ ಬಂದಿದೆ. ಅದು ಹೆಲ್ಮೆಟ್ ಹಾಕದೇ ಗಾಡಿ ಓಡಿಸುವುದರಿಂದ ಹಿಡಿದು, ಕಲ್ಲು ಎಸೆಯುವುದು, ಟೆರರಿಸ್ಟ್ ಕೃತ್ಯ ನಡೆಸುವುದು, ದಾಂಧಲೆ ಎಬ್ಬಿಸುವವರೆಗೂ ಮುಂದುವರಿಯುತ್ತದೆ. ಇಲ್ಲೆಲ್ಲ ವ್ಯಕ್ತಿಯ ಧರ್ಮ, ಜಾತಿ ಆಧರಿಸಿ ಆಡಳಿತ ವರ್ಗಕ್ಕೆ ಕ್ರಮ ತೆಗೆದುಕೊಳ್ಳು ಹುಕಿ ಬರುತ್ತದೆ.

ಜಾತಿ ಸಮೀಕ್ಷೆ ಮಾಡಿದಾಗ ಇದನ್ನೂ ಸೇರಿಸಬಿಡಿ. ಅಪರಾಧಕ್ಕೆ ಶಿಕ್ಷೆ ವಿಧಿಸುವುದರಲ್ಲೂ ಒಂದು ಮೀಸಲಾತಿ. ಆ ಧರ್ಮದವರು ಉಗ್ರ ಕೃತ್ಯ ನಡೆಸಿದರೆ ಅದಕ್ಕೆ ಅತಿ ಕಡಿಮೆ ಶಿಕ್ಷೆ. ಈ ವರ್ಗದವನು ಪಟಾಕಿ ಹೊಡೆದರೆ ಗಲ್ಲು ಶಿಕ್ಷೆ ಅಂತ ಗುಂಡು ಹೊಡೆಯುವಂಥ, ಕೆಟ್ಟ ಮಾದರಿಯಾಗುವಂತಹ ಕೆಲಸವನ್ನು ಅಪರೂಪಕ್ಕೊಂದು ಮಾಡಿ, 'ನಮ್ಮ ಸರ್ಕಾರ ಆಡಳಿತವನ್ನು ಹತೋಟಿಯಲ್ಲಿಟ್ಟುಕೊಂಡಿದೆ' ಎಂಬ ಪೋಸು ಕೊಡಲಾಗುತ್ತದೆ. ಮತ್ತು, ಅದನ್ನು ನಾವು ನಂಬಿ, ಆಡಳಿತ ವರ್ಗವನ್ನು ಹೊಗಳುತ್ತೇವೆ.

ಕೆಲವೇ ದಿನಗಳ ಮೊದಲು, ಅದೇ ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್‌ ಮೇಲೆ ಕಲ್ಲು ತೂರಿದವರನ್ನು ಸಾಲಾಗಿ ನಿಲ್ಲಿಸಿ ಗುಂಡು ಹೊಡೆಯಲು ಧೈರ್ಯವಿಲ್ಲದ ಆಡಳಿತ ವರ್ಗ ಮತ್ತು ಸರ್ಕಾರ, ಅವರ ಮೇಲೆ ಹಾಕಿದ ಕೇಸನ್ನೂ ಹಿಂತೆಗೆದುಕೊಂಡಿದ್ದನ್ನು ನಾವು ಜಾಣರಾಗಿ ಮರೆಯುತ್ತೇವೆ.

“ಬಂಧಿಸಲು ಹೋದಾಗ ಪೋಲೀಸರ ಮೇಲೆ ಆ ರೇಪಿಸ್ಟ್-ಕೊಲೆಗಾರ ಆಕ್ರಮಣ ಮಾಡಿದ್ದಾನೆ, ಆತ್ಮರಕ್ಷಣೆಗಾಗಿ ಮಹಿಳಾ ಸಬ್ ಇನ್ಸ್ಪೆಕ್ಟರ್ ಗುಂಡು ಹಾರಿಸಿದ್ದಾರೆ, ಒಂದು ಗುಂಡು ರೇಪಿಸ್ಟ್ ನ ಹೃದಯ ಸೀಳಿಕೊಂಡು ಹೋಗಿದೆ, ಅವನ ಅಂತ್ಯವಾಗಿದೆ. ಬೇರೆಲ್ಲಾ ಚರ್ಚೆ ವ್ಯರ್ಥ, ಮಹಿಳಾ ಸಬ್ ಇನ್ಸ್ಪೆಕ್ಟರ್ ಅಭಿನಂದನೆಗೆ ಅರ್ಹರು, ಅಷ್ಟೇ” ಎಂದು ರಾಮಚಂದ್ರ ರಾವ್ ಕಾಮೆಂಟ್‌ ಮಾಡಿದ್ದಾರೆ.

“ಸಾಮೂಹಿಕವಾಗಿ ಸಾಯಿಸಿದರೆ ಅದು ಹತ್ಯಾಕಾಂಡ ವಾಗುತ್ತದೆ, ಹಲವು ಜನ ಒಂದೋ ಆತನ ಧರ್ಮ ನೋಡಿ ಇನ್ನೂ ಕೆಲವೊಬ್ಬರು ಆತ ಬಡವ ಎಂದು ಕೆಟ್ಟ ಅನುಕಂಪ ತೋರಿಸುತ್ತಿದ್ದಾರೆ. ಅದಕ್ಕೆ ಆತ ಅರ್ಹನಲ್ಲ, ಐದು ವರ್ಷದ ಮಗುವನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿ ಅದು ಕೂಗಿಕೊಂಡಾಗ ಕುತ್ತಿಗೆ ಹಿಸುಕಿ ಕೊಂದಿದ್ದಾನೆ ಒಂದು ಮಗುವಿನ ಭವಿಷ್ಯವನ್ನು ಕಿತ್ತುಕೊಂಡವನನ್ನು ಆ ರೀತಿ ಶಿಕ್ಷಿಸಿ ದ್ದು ಸರಿಯಿದೆ. ನೀವು ಹೇಳಿದ ಎರಡೂ ವಿಷಯಗಳು ಕೂಡ ಧರ್ಮಾಧಾರಿತ ರಾಜಕೀಯಕ್ಕೆ ಸೇರಿದ್ದು ಬುಲ್ಲೆಟುಗಳು ಇರೋ ವರೆಗೂ ಅವರೂ ಹೊಡೆಯುತ್ತಾರೆ ಇವರೂ ಕಲ್ಲಿರೋವರೆಗೂ ಎಸೆಯುತ್ತಾರೆ ಅನ್ನೋ ಹಾಗೆ ಆಗಬಾರದು” ನಿಖಿಲ್ ಎನ್‌ ಸಿ ಕಾಮೆಂಟ್‌ ಮಾಡಿದ್ದಾರೆ.

ಸಾಕಷ್ಟು ಜನರು ಪೊಲೀಸರ ಪರವಾಗಿ ಕಾಮೆಂಟ್‌ ಮಾಡಿದ್ದರೂ ಸಹ ಇನ್ನು ಕೆಲವರು ಸೂಚ್ಯವಾಗಿ ಈ ವಾದವೂ ಸರಿ ಇದೆ ಎಂದಿದ್ಧಾರೆ.

Suma Gaonkar

eMail
Whats_app_banner