ಹುಬ್ಬಳ್ಳಿ ಎನ್‌ಕೌಂಟರ್ ಮೂಲಕ ಮನೆಮಾತಾಗಿರುವ ಪಿಎಸ್‌ಐ ಅನ್ನಪೂರ್ಣ ರೈತನ ಮಗಳು, ಎಂಎಸ್‌ಸಿ ಚಿನ್ನದ ಪದಕ ವಿಜೇತೆ
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿ ಎನ್‌ಕೌಂಟರ್ ಮೂಲಕ ಮನೆಮಾತಾಗಿರುವ ಪಿಎಸ್‌ಐ ಅನ್ನಪೂರ್ಣ ರೈತನ ಮಗಳು, ಎಂಎಸ್‌ಸಿ ಚಿನ್ನದ ಪದಕ ವಿಜೇತೆ

ಹುಬ್ಬಳ್ಳಿ ಎನ್‌ಕೌಂಟರ್ ಮೂಲಕ ಮನೆಮಾತಾಗಿರುವ ಪಿಎಸ್‌ಐ ಅನ್ನಪೂರ್ಣ ರೈತನ ಮಗಳು, ಎಂಎಸ್‌ಸಿ ಚಿನ್ನದ ಪದಕ ವಿಜೇತೆ

ಹುಬ್ಬಳ್ಳಿ ಎನ್‌ಕೌಂಟರ್ ಮೂಲಕ ಮನೆಮಾತಾಗಿರುವ ಪಿಎಸ್‌ಐ ಅನ್ನಪೂರ್ಣ ಎಂಎಸ್‌ಸಿ ರೈತನ ಮಗಳು. ಪುಟ್ಟ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿ, ಕೊಲೆ ಮಾಡುವ ಮೂಲಕ ಇಡೀ ಮನುಕುಲವೇ ತಲೆತಗ್ಗಿಸುವಂತೆ ಮಾಡಿದ ದುರುಳನ ಕಥೆ ಮುಗಿಸಿದ ಗಟ್ಟಿಗಿತ್ತಿ ಎಂಎಸ್‌ಸಿ ಚಿನ್ನದ ಪದಕ ವಿಜೇತೆ ಕೂಡ.

ಹುಬ್ಬಳ್ಳಿ ಎನ್‌ಕೌಂಟರ್ ಮೂಲಕ ಮನೆಮಾತಾಗಿರುವ ಪಿಎಸ್‌ಐ ಅನ್ನಪೂರ್ಣ ಎಂಎಸ್‌ಸಿ ರೈತನ ಮಗಳು
ಹುಬ್ಬಳ್ಳಿ ಎನ್‌ಕೌಂಟರ್ ಮೂಲಕ ಮನೆಮಾತಾಗಿರುವ ಪಿಎಸ್‌ಐ ಅನ್ನಪೂರ್ಣ ಎಂಎಸ್‌ಸಿ ರೈತನ ಮಗಳು

PSI Annapurna: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪಿ ರಿತೇಶ್‌ನನ್ನು ಎನ್‌ಕೌಂಟರ್ ಮಾಡಿದ ಪಿಎಸ್‌ಐ ಅನ್ನಪೂರ್ಣಾ ಮುಕ್ಕಣ್ಣವರ ಸಾಹಸಕ್ಕೆ ಇಡೀ ರಾಜ್ಯವೇ ಬಹು ಪರಾಕ್ ಎನ್ನುತ್ತಿದೆ. ಪುಟ್ಟ ಬಾಲಕಿಯ ಮೇಲೆ ಪೈಶಾಚಿಕ ಕೃತ್ಯ ಎಸಗಿ, ಕೊಲೆ ಮಾಡುವ ಮೂಲಕ ಇಡೀ ಮನುಕುಲವೇ ತಲೆತಗ್ಗಿಸುವಂತೆ ಮಾಡಿದ ದುರುಳನ ಕಥೆ ಮುಗಿಸಿದ ಗಟ್ಟಿಗಿತ್ತಿ ಯಾರು ಎಂಬ ಕುತೂಹಲ ಸಹಜ. ಇಲ್ಲಿದೆ ಅವರ ಕಿರುಪರಿಚಯ.

ಹುಬ್ಬಳ್ಳಿ ಎನ್‌ಕೌಂಟರ್ ಮೂಲಕ ಮನೆಮಾತಾಗಿರುವ ಪಿಎಸ್‌ಐ ಅನ್ನಪೂರ್ಣ ಎಂಎಸ್‌ಸಿ ರೈತನ ಮಗಳು

ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅತ್ಯಾಚಾರವೆಸಗಿ ಕೊಲೆ ಪ್ರಕರಣ ಜನರನ್ನು ರೊಚ್ಚಿಗೆಬ್ಬಿಸಿತ್ತು. ಜಾತಿ, ಮತ, ಪಂಥಗಳನ್ನೆಲ್ಲ ಬಿಟ್ಟು ಬಾಲಕಿಯ ಸಾವಿಗೆ ನ್ಯಾಯ ಸಿಗಬೇಕೆಂಬ ಉದ್ದೇಶದಿಂದ ಬೀದಿಗಿಳಿದು ಜನ ಪ್ರತಿಭಟನೆ ಶುರು ಮಾಡಿದ್ದರು. ಸಾರ್ವಜನಿಕರ ಪ್ರತಿಭಟನೆಯ ಕಾರಣ ಪೊಲೀಸರ ಮೇಲೆ ಒತ್ತಡ ಹೆಚ್ಚಾಗಿತ್ತು. ಹೀಗಾಗಿ, ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ ಅವರು, ಐದು ತಂಡ ರಚನೆ ಮಾಡಿದ್ದರು. ಅಲ್ಲದೆ, ಏನೇ ಆದರೂ ಇನ್ನೆರಡು ಗಂಟೆಯಲ್ಲಿ ಆರೋಪಿಯನ್ನೇ ಬಂಧಿಸಲೇಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿ ತಂಡಗಳನ್ನು ರವಾನಿಸಿದ್ದರು. ಅದರಲ್ಲಿ ಒಂದು ಟೀಂ ಲೀಡ್ ಮಾಡಿದ್ದೇ ಪಿಎಸ್‌ಐ ಅನ್ನಪೂರ್ಣಾ.

ಪಿಎಸ್‌ಐ ಅನ್ನಪೂರ್ಣಾ ಮುಕ್ಕಣ್ಣವರ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಗುಜನಗಟ್ಟಿ ಗ್ರಾಮದವರು. ಅನ್ನಪೂರ್ಣಾ, 2017ರ ಬ್ಯಾಚಿನವರಾಗಿದ್ದು, ಹುಬ್ಬಳ್ಳಿ ಶಹರ ಠಾಣೆಯ ಸಿಇಎನ್ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸಿ ಇದೀಗ ಅಶೋಕನಗರ ಠಾಣೆಯಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಎಂಎಸ್‌ಸಿ ಚಿನ್ನದ ಪದಕ ವಿಜೇತೆ

ರೈತಾಪಿ ವರ್ಗದ ಮನೆಯಿಂದ ಬಂದಿರುವ ಅನ್ನಪೂರ್ಣಾ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡವರು. ಬಳಿಕ ತಾಯಿಯ ಗರಡಿಯಲ್ಲಿ ಪಳಗಿದವರು. ಚಿಕ್ಕಂದಿನಿಂದಲೇ ತಾಯಿಗೆ ಮನೆಗೆಲಸದಲ್ಲಿ ಸಹಾಯ ಮಾಡುತ್ತ, ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಪದವಿ ಪಡೆದು, ಬೆಂಗಳೂರಿನ ಜೆಕೆವಿಕೆಯಲ್ಲಿ ಎಂಎಸ್‌ಸಿ ಪದವಿಯಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು. ಬೇರೆ ಕೆಲಸಕ್ಕೆ ಸೇರದೆ, ಪೊಲೀಸ್ ಇಲಾಖೆಗೆ ಕೆಲಸಕ್ಕೆ ಸೇರ್ಪಡೆಯಾಗಿದ್ದರು.

ಎನ್‌ಕೌಂಟರ್ ಹೇಗಾಯಿತು ಎಂಬುದನ್ನು ವಿವರಿಸಿದ ಅನ್ನಪೂರ್ಣಾ

ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ದುರುಳನನ್ನು ಎನ್‌ಕೌಂಟರ್ ಮಾಡಿದ ಬಳಿಕ ಸುದ್ದಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ್ದ ಅನ್ನಪೂರ್ಣಾ, ಎನ್‌ಕೌ೦ಟರ್‌ಗೂ ಮುನ್ನ 10 ನಿಮಿಷದ ಕ್ಷಣ ನನ್ನ ಜೀವನದಲ್ಲೇ ಅವಿಸ್ಮರಣೀಯ ಎಂದುಕೊಂಡಿದ್ದೇನೆ ಎಂದು ಮಾತಿಗಾರಂಭಿಸಿದ್ದರು. ಪುಟ್ಟ ಬಾಲಕಿಯ ಮುಖ, ಆಕೆಯ ತಂದೆ, ತಾಯಿ ಮತ್ತು ಸಂಬಂಧಿಕರ ಆಕ್ರಂದನ ಕಿವಿಯಲ್ಲಿ ಈಗಲೂ ಗುಯ್ ಗುಡುತ್ತಿದೆ. ಆರೋಪಿಯನ್ನು ಸ್ಥಳ ಮಹಜರಿಗೆ ಕರೆದೊಯ್ಯುತ್ತಿದ್ದಾಗ ಅಮಾಯಕ ಮಗು ಎಷ್ಟು ನೋವು ಅನುಭವಿಸಿರಬಹುದು ಎಂದು ಯೋಚಿಸುತ್ತಲೇ ಇದ್ದೆ. ಇದೇ ವೇಳೆ ಸ್ಥಳ ಮಹಜರು ಸಂದರ್ಭದಲ್ಲಿ ಆರೋಪಿಯ ಪುಂಡಾಟ ಅತೀವ ಬೇಸರ ತರಿಸಿತ್ತು. ಏಕಾಕಿ ಪೊಲೀಸ್ ಸಿಬ್ಬಂದಿಯ ಮೇಲೂ ಆರೋಪಿ ಕಲ್ಲು ಎಸೆಯಲು ಆರಂಭಿಸಿದ್ದ. ನಮ್ಮ ವಾಹನವನ್ನೂ ಜಖಂ ಮಾಡಿದ್ದ. ಅವನನ್ನು ಎಚ್ಚರಿಸಲು ಗುಂಡು ಹಾರಿಸುವುದಾಗಿ ಕೂಗಿದೆವು. ಆದರೂ ಆತ, ಕಲ್ಲೆಸೆತ ಮುಂದುವರೆಸಿದ್ದ. ಹೀಗಾಗಿ ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದೆ. ಎರಡನೇ ಗುಂಡು ಆತನ ಕಾಲಿಗೆ ತಗುಲಿತು ಮತ್ತು ಮೂರನೇ ಗುಂಡು ಆತನ ಎದೆ ಸೀಳಿತ್ತು ಎಂದು ವಿವರಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಪಿಎಸ್ಐ ಅನ್ನಪೂರ್ಣ ಮತ್ತು ಇನ್ನಿಬ್ಬರು ಪೊಲೀಸರು ಸದ್ಯ ಹುಬ್ಬಳ್ಳಿ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆದರು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
Whats_app_banner