ವರೂರು ನವಗ್ರಹ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ 2025; ಶ್ರದ್ಧೆಯಿಂದ ಸೇವಾಕಾರ್ಯ ಮಾಡುವಂತೆ ಡಾ ವೀರೇಂದ್ರ ಹೆಗ್ಗಡೆ ಮನವಿ
ಕನ್ನಡ ಸುದ್ದಿ  /  ಕರ್ನಾಟಕ  /  ವರೂರು ನವಗ್ರಹ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ 2025; ಶ್ರದ್ಧೆಯಿಂದ ಸೇವಾಕಾರ್ಯ ಮಾಡುವಂತೆ ಡಾ ವೀರೇಂದ್ರ ಹೆಗ್ಗಡೆ ಮನವಿ

ವರೂರು ನವಗ್ರಹ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ 2025; ಶ್ರದ್ಧೆಯಿಂದ ಸೇವಾಕಾರ್ಯ ಮಾಡುವಂತೆ ಡಾ ವೀರೇಂದ್ರ ಹೆಗ್ಗಡೆ ಮನವಿ

Mahamastakabhisheka 2025: ಹುಬ್ಬಳ್ಳಿ ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಜನವರಿ 15 ರಿಂದ 26ರ ತನಕ ಮಹಾಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಅದರಲ್ಲಿ ಪ್ರತಿಯೊಬ್ಬರೂ ಶ್ರದ್ಧೆಯಿಂದ ಸೇವಾಕಾರ್ಯ ಮಾಡಬೇಕು ಡಾ ವೀರೇಂದ್ರ ಹೆಗ್ಗಡೆ ಮನವಿ ಮಾಡಿದರು.

ವರೂರು ನವಗ್ರಹ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ ಮುಂದಿನ ತಿಂಗಳು ನಡೆಯಲಿದ್ದು, ಪ್ರತಿಯೊಬ್ಬರೂ ಶ್ರದ್ಧೆಯಿಂದ ಸೇವಾ ಕಾರ್ಯ ಮಾಡುವಂತೆ ಡಾ ವೀರೇಂದ್ರ ಹೆಗ್ಗಡೆ ಮನವಿ ಮಾಡಿದರು.
ವರೂರು ನವಗ್ರಹ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ ಮುಂದಿನ ತಿಂಗಳು ನಡೆಯಲಿದ್ದು, ಪ್ರತಿಯೊಬ್ಬರೂ ಶ್ರದ್ಧೆಯಿಂದ ಸೇವಾ ಕಾರ್ಯ ಮಾಡುವಂತೆ ಡಾ ವೀರೇಂದ್ರ ಹೆಗ್ಗಡೆ ಮನವಿ ಮಾಡಿದರು.

Mahamastakabhisheka 2025: ಹುಬ್ಬಳ್ಳಿ ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಜನವರಿ ತಿಂಗಳು ಪಾರ್ಶ್ವನಾಥ ತೀರ್ಥಂಕರರ ಮಹಾಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಅದರಲ್ಲಿ ಪ್ರತಿಯೊಬ್ಬರೂ ಶ್ರದ್ಧಾ, ಭಕ್ತಿಯಿಂದ ಸೇವಾ ಕಾರ್ಯ ಮಾಡಬೇಕು ಎಂದು ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಮನವಿ ಮಾಡಿದರು. ಅವರು, ವರೂರು ನವಗ್ರಹ ಕ್ಷೇತ್ರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಾಮಸ್ತಕಾಭಿಷೇಕದ ಅಂಗವಾಗಿ ಸುತ್ತಲಿನ ಗ್ರಾಮಸ್ಥರೊಂದಿಗಿನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ವರೂರು ನವಗ್ರಹ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕ 2025; ಏಳೆಂಟು ತಿಂಗಳ ತಯಾರಿ

ಕಳೆದ ಏಳೆಂಟು ತಿಂಗಳಿಂದ ಮಹಾಮಸ್ತಕಾಭಿಷೇಕದ ಸಿದ್ಧತೆ ನಡೆಯುತ್ತಿದೆ. ಇದೊಂದು ಧರ್ಮಕಾರ್ಯವಾಗಿದ್ದು, ಪ್ರತಿಯೊಬ್ಬರೂ ಸಮಾನವಾಗಿ ಕೆಲಸ ಮಾಡಬೇಕು ಎಂದು ಡಾ ವೀರೇಂದ್ರ ಹೆಗ್ಗಡೆಯವರು ಹೇಳಿದರು.

ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಮಾತನಾಡಿ, ಮೊದಲ ಸಲದ ಮಹಾಮಸ್ತಕಾಭಿಷೇಕ ಮಹೋತ್ಸವದಲ್ಲಿ ಸರ್ವಧರ್ಮದ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. 2010ರಲ್ಲಿ ಆ ಮಹಾಮಸ್ತಕಾಭಿಷೇಕ ನಡೆಯಿತು. ಈ ಬಾರಿಯೂ ಇನ್ನೂ ಹೆಚ್ಚಿನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು. ಶ್ರೀ ಧ್ಯಾನಸಾಗರ ತಿಲಕ ಮುನಿ ಮಹಾರಾಜರು, ಜೈನ ಸಮಾಜದ ಪ್ರಮುಖರಾದ ವಿಮಲ ತಾಳಿಕೋಟಿ, ವಿದ್ಯಾಧರ ಪಾಟೀಲ, ದೇವೇಂದ್ರ ಕಾಗೇನವರ ಮತ್ತಿತರರಿದ್ದರು.

2025ರ ಜನವರಿ 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ

ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ 2025ರ ಜನವರಿ 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದೆ. ಭಗವಾನ್​ ಪಾರ್ಶ್ವನಾಥ ತೀರ್ಥಂಕರರ ಜೀವನ ದರ್ಶನ ಮಾಡುತ್ತ ಮಹಾಮಸ್ತಕಾಭಿಷೇಕ ನಡೆಸುವ ಮೂಲಕ ಲೋಕ‌ಕಲ್ಯಾಣಕ್ಕೆ ಸಂಕಲ್ಪ ಮಾಡಲಾಗಿದೆ ಎಂದು ಗುಣಧರನಂದಿ ಮಹಾರಾಜರು ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ಮಾಹಿತಿ ನೀಡಿದ್ದಾರೆ.

ದಶಕದ ಬಳಿಕ ನಡೆಯುವ ಮಹಾಮಸ್ತಕಾಭಿಷೇಕ ಹಲವು ವಿಶೇಷಗಳಿಂದ ಕೂಡಿರಲಿದೆ. 27 ಪದಾರ್ಥಗಳು, 18 ದಿಗಂಬರ ಆಚಾರ್ಯರು, ಶ್ವೇತಾಂಬರ, ದಿಗಂಬರ ಹಾಗೂ ಮೂರ್ತಿಪೂಜಕರು ಆಗಮಿಸಲಿದ್ದು, ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಮಹಾಮಸ್ತಕಾಭಿಷೇಕ ಸಮಿತಿ ನಿರ್ಧರಿಸಿದೆ. ಒಂಬತ್ತು ದೇಶಗಳಿಂದ ಒಂಬತ್ತು ವಿಶೇಷ ಹೂವುಗಳನ್ನು ತರಿಸಿ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಪುಷ್ಪವೃಷ್ಟಿ ಮಾಡಲಾಗುತ್ತದೆ. ಸರ್ವಧರ್ಮ ಸಮ್ಮೇಳನದ ಜೊತೆಗೆ ಜೈನ​ ಸಾಹಿತ್ಯ ಸಮ್ಮೇಳನ ನಡೆಯಲಿದೆ. 24 ಆನೆ‌, ಕುದುರೆ ಹಾಗೂ 108 ರಥದಿಂದ ಮಹಾ ಮೆರವಣಿಗೆ ನಡೆಸಲು ಸಮಿತಿ ತೀರ್ಮಾನಿಸಿದೆ.

ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಕಲಾವಿದರು ಈ ಹತ್ತು‌ ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಿ ಮಾಡಲಿದ್ದಾರೆ. ಜೈನ ಸಂಸ್ಕೃತಿಯನ್ನು ಬಿಂಬಿಸುವ ಈ ಮಹಾಮಸ್ತಕಾಭಿಷೇಕ ಕಾರ್ಯಕ್ರದಲ್ಲಿ ರಾಷ್ಟ್ರಪತಿ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಪಾಲರು, ಕೇಂದ್ರ ಸಚಿವರು ಭಾಗಿಯಾಗಲಿದ್ದಾರೆ.

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ. kannada.hindustantimes.com/astrology/yearly-horoscope

Whats_app_banner