Hubballi News: ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು ASI ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು-hubballi news case of asi death due to fall of flyover work rod police arrested 11 people dharwad news in kannada prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Hubballi News: ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು Asi ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು

Hubballi News: ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು ASI ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು

Hubballi News: ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಎಎಸ್​ಐ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಝಂಡು ಕನ್​ಸ್ಟ್ರಕ್ಷನ್ ಎಂಬ ಕಂಪನಿಯ 11 ಮಂದಿಯನ್ನು ಹುಬ್ಬಳ್ಳಿ ಉಪನಗರ ಪೊಲೀಸರು ಬಂಧಿಸಿದ್ದಾರೆ.

ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು ASI ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು
ಫ್ಲೈಓವರ್​​ ಕಾಮಗಾರಿಯ ರಾಡ್ ಬಿದ್ದು ASI ಸಾವು ಪ್ರಕರಣ; 11 ಮಂದಿಯನ್ನು ಬಂಧಿಸಿದ ಪೊಲೀಸರು

ಹುಬ್ಬಳ್ಳಿ: ಹಳೇ ಕೋರ್ಟ್ ಬಳಿ ತೆರಳುತ್ತಿದ್ದ ವೇಳೆ ಫ್ಲೈಓವರ್ ಕಾಮಗಾರಿಯ ಕಬ್ಬಿಣದ ರಾಡ್ ತಲೆಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಐದು ದಿನಗಳ ನಂತರ ಎಎಸ್‌ಐ ನಾಭಿರಾಜ್ ದಯಣ್ಣವರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿಯನ್ನು ಉಪನಗರ ಪೊಲೀಸರು ಬಂಧಿಸಿದ್ದಾರೆ. ಫ್ಲೈಓವರ್ ಕಾಮಗಾರಿ ನಡೆಸುವ ವೇಳೆ ನಿರ್ಲಕ್ಷ್ಯ ವಹಿಸಿದ್ದ ಝಂಡು ಕನ್​ಸ್ಟ್ರಕ್ಷನ್​ ಕಂಪನಿಯ ಸೂಪರ್​​ವೈಸರ್​, ಲೈಜನಿಂಗ್ ಇಂಜಿನಿಯರ್​, ಇಂಜಿನಿಯರ್​ ಮತ್ತು ನೌಕರರು ಸೇರಿ 11 ಮಂದಿಯನ್ನು ಬಂಧಿಸಿದ್ದಾರೆ.

ಸೆಪ್ಟೆಂಬರ್​​ 10 ರಂದು ಭದ್ರತಾ ಕರ್ತವ್ಯ ನಿರ್ವಹಿಸಿ ಠಾಣೆಗೆ ತೆರಳುತ್ತಿದ್ದ ವೇಳೆ ನಾಭಿರಾಜ್ ದಯಣ್ಣವರ ಮೇಲೆ ಕೋರ್ಟ್ ವೃತ್ತದ ಬಳಿಯ ಫ್ಲೈಓವರ್ ಕಾಮಗಾರಿ ಸ್ಥಳದಲ್ಲಿ ಮೇಲಿನಿಂದ ಕಬ್ಬಿಣದ ರಾಡ್ ಬಿದ್ದಿತ್ತು. ಕಾಮಗಾರಿಯನ್ನು ಮಾಡುತ್ತಿರುವ ಝಂಡು ಕನ್​ಸ್ಟ್ರಕ್ಷನ್​ ಕಂಪನಿಯ ನೌಕರರು ಕಾಮಗಾರಿ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮ ಪಾಲಿಸದ ಹಾಗೂ ಸೇತುವೆ ಮೇಲೆ ಕಬ್ಬಿಣದ ರಾಡ್​ಗಳು ಸಾಗಿಸುತ್ತಿದ್ದ ನೌಕರರ ನಿರ್ಲಕ್ಷತನದಿಂದ ಘಟನೆ ಸಂಭವಿಸಿತು. ಸೆಪ್ಟೆಂಬರ್​ 15ರಂದು ಭಾನುವಾರ ಎಎಸ್​​ಐ ನಿಧನರಾದರು.

ಬಂಧನಕ್ಕೆ ಒಳಗಾದ ನೌಕರರು

  1. ಹರ್ಷಾ ಶಿವಾನಂದ ಹೊಸಗಾಣಿಗೇರ (ಸೂಪರ್​​ವೈಸರ್​)
  2. ಜಿತೇಂದ್ರಪಾಲ ಶರ್ಮಾ ಶ್ರೀ ದೇವಕೃಷ್ಣ (ಲೈಜನಿಂಗ್ ಇಂಜಿನಿಯರ್​​)
  3. ಭೂಪೇಂದರ್ ಪಾಲ್ ಮಹಾರಾಜಸಿಂಗ್ (ಇಂಜಿನಿಯರ್)
  4. ಅಸ್ಲಂ ಅಲಿ ಜಲೀಲಮಿಯಾ (ಕ್ರೇನ್ ಚಾಲಕ)
  5. ಮೊಹಮ್ಮದ ಇಮಾದರೂ ಸಹರುಲ್ ಮಿಯಾ (ಸಿಬ್ಬಂದಿ)
  6. ಮೊಹಮ್ಮದ ಮಸೂದರ ರೆಹಮಾನ್​ ತಂದೆ ಮೆಹಮೂದ್ದೀನ ಹಾಜಿ (ನೌಕರ)
  7. ಸಬೀಬ ಶೇಕ್​ ತಂದೆ ಮನ್ಸೂರ ಅಲಿ (ನೌಕರ)
  8. ರಿಜಾವುಲ್ ಹಕ್ ತಂದೆ ಮಂಜೂರಅಲಿ (ನೌಕರ)
  9. ಶಮೀಮ ಶೇಕ್​​ ತಂದೆ ಪಿಂಟು ಶೇಕ್​​ (ನೌಕರ)
  10. ಮೊಹಮ್ಮದ ಆರೀಫ ತಂದೆ ಖಯೂಮ್​ (ನೌಕರ)
  11. ಮೊಹಮ್ಮದ್​ ರಬಿವುಲ್ ಹಕ್ ತಂದೆ ಮಜಬೂರ ರಹಿಮಾನ್​ (ಕಾರ್ಮಿಕ ಗುತ್ತಿಗೆದಾರ)

ಇದನ್ನೂ ಓದಿ: Tumakuru News: ಗಣಪತಿ ವಿಸರ್ಜನೆ ಮಾಡಲು ಹೋಗಿದ್ದ ಮೂವರು ಸಾವು; ಅಪ್ಪ, ಮಗನ ಜೊತೆ ಓರ್ವ ಯುವಕ ದುರ್ಮರಣ

mysore-dasara_Entry_Point