ಕನ್ನಡ ಸುದ್ದಿ  /  Karnataka  /  Hubballi News Sw Railway Announces Weekly Special Trains Between Hubballi-rameswaram Check Dets Here Indian Railways Uks

Hubballi News: ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವೆ ಶುರುವಾಗಲಿದೆ ಸಾಪ್ತಾಹಿಕ ವಿಶೇಷ ರೈಲು ಸಂಚಾರ, ವಿವರ ಹೀಗಿದೆ

Hubballi News: ಹುಬ್ಬಳ್ಳಿ ಭಾಗದ ಜನರಿಗೊಂದು ಶುಭ ಸುದ್ದಿ. ನೈಋತ್ಯ ರೈಲ್ವೆಯು ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವೆ ಸಾಪ್ತಾಹಿಕ ವಿಶೇಷ ರೈಲು ಸಂಚಾರ ಶುರುಮಾಡಲಿದೆ. ಈ ರೈಲು ಸಂಚಾರಕ್ಕೆ ಸಂಬಂಧಿಸಿದ ವಿವರ ಹೀಗಿದೆ.

ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವೆ ಶುರುವಾಗಲಿದೆ ಸಾಪ್ತಾಹಿಕ ವಿಶೇಷ ರೈಲು ಸಂಚಾರ (ಸಾಂಕೇತಿಕ ಚಿತ್ರ)
ಹುಬ್ಬಳ್ಳಿ ಮತ್ತು ರಾಮೇಶ್ವರಂ ನಡುವೆ ಶುರುವಾಗಲಿದೆ ಸಾಪ್ತಾಹಿಕ ವಿಶೇಷ ರೈಲು ಸಂಚಾರ (ಸಾಂಕೇತಿಕ ಚಿತ್ರ)

ಹುಬ್ಬಳ್ಳಿ: ರಾಮೇಶ್ವರಂ ಭಾಗಕ್ಕೆ ತೆರಳಲು ಇಚ್ಛಿಸುವ ರೈಲ್ವೆ ಪ್ರಯಾಣಿಕರು ಮತ್ತು ಹುಬ್ಬಳ್ಳಿ ಭಾಗದ ಜನರಿಗೆ ನೈಋತ್ಯ ರೈಲ್ವೆ ಒಂದು ಶುಭ ಸುದ್ದಿ ನೀಡಿದೆ. ಹುಬಳ್ಳಿಯಿಂದ ರಾಮೇಶ್ವರಂಗೆ ಹೊಸದಾಗಿ ಸಾಪ್ತಾಹಿಕ ವಿಶೇಷ ರೈಲು ಸಂಚಾರ ಆರಂಭ ಮಾಡುತ್ತಿರುವುದಾಗಿ ನೈಋತ್ಯ ರೈಲ್ವೆ ಘೋಷಿಸಿದೆ.

ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಿಲ್ದಾಣಗಳ ನಡುವೆ ಯಶವಂತಪುರ ಬೈಪಾಸ್‌ ಮೂಲಕ ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರ ಮುಂದಿನ ತಿಂಗಳಿಂದ ಆರಂಭವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಈ ವಿಶೇಷ ರೈಲುಗಳು ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಚಿಕ್ಕಜಾಜೂರು, ಬೀರೂರು, ಅರಸೀಕೆರೆ, ತುಮಕೂರು, ಬಾಣಸವಾಡಿ, ಹೊಸೂರು, ಧರ್ಮಪುರಿ, ಸೇಲಂ, ನಮಕ್ಕಲ್‌, ಕರೂರ್, ತಿರುಚಿರಾಪಳ್ಳಿ, ಪುದುಕೊಟ್ಟೆ, ಕಾರೈಕುಡಿ, ಮನಮದುರೈ ಮತ್ತು ರಾಮನಾಥಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ.

ಹುಬ್ಬಳ್ಳಿ - ರಾಮೇಶ್ವರಂ ರೈಲು ಸಂಚಾರದ ವಿವರ

1. ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ರಾಮೇಶ್ವರಂ ರೈಲು ನಿಲ್ದಾಣಗಳ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 07355) ಏಪ್ರಿಲ್ 6 ರಿಂದ ಜೂನ್ 29 ರವರೆಗೆ ಪ್ರತಿ ಶನಿವಾರ ಬೆಳಿಗ್ಗೆ 6:30 ಗಂಟೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣ ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಿಗ್ಗೆ 6:15 ಕ್ಕೆ ರಾಮೇಶ್ವರಂ ನಿಲ್ದಾಣವನ್ನು ತಲುಪಲಿದೆ.

2. ರಾಮೇಶ್ವರಂ- ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 07356) ಏಪ್ರಿಲ್ 7 ರಿಂದ ಜೂನ್ 30ರವರೆಗೆ ಪ್ರತಿ ಭಾನುವಾರ ರಾತ್ರಿ 9 ಗಂಟೆಗೆ ರಾಮೇಶ್ವರಂ ನಿಲ್ದಾಣದಿಂದ ಹೊರಟು ಮರುದಿನ ಸಂಜೆ 07:25 ಗಂಟೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣಕ್ಕೆ ಆಗಮಿಸಲಿದೆ.

ಸಾಪ್ತಾಹಿಕ ರೈಲಿನಲ್ಲಿ ಎಷ್ಟು ಕೋಚ್‌ಗಳಿವೆ

ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ರಾಮೇಶ್ವರಂ ನಿಲ್ದಾಣಗಳ ನಡುವೆ ಯಶವಂತಪುರ ಬೈಪಾಸ್‌ ಮೂಲಕ ಸಾಪ್ತಾಹಿಕ ವಿಶೇಷ ರೈಲುಗಳಲ್ಲಿ ಎಸಿ-2 ಟೈಯರ್-1, ಎಸಿ-3 ಟೈಯರ್-3, ಕ್ಲೀಪರ್ ಕ್ಲಾಸ್ ಕೋಚ್-9, ಜನರಲ್ ಸೆಕೆಂಡ್ ಕ್ಲಾಸ್ ಕೋಚ್-5 ಮತ್ತು ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್/ಅಂಗವಿಕಲ ಕೋಚ್-2 ಸೇರಿದಂತೆ ಒಟ್ಟು 20 ಬೋಗಿಗಳಿವೆ.

ಎಸ್‌ಎಸ್‌ಎಸ್‌ ಹುಬ್ಬಳ್ಳಿ-ರಾಮೇಶ್ವರಂ-ಎಸ್‌ಎಸ್‌ಎಸ್‌ ಹುಬ್ಬಳ್ಳಿ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು (ರೈಲುಗಳ ಸಂಖ್ಯೆ 07355/07356) ಯಶವಂತಪುರ ಬೈಪಾಸ್‌ ಮೂಲಕ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point