ಹಣದ ಆಸೆ ತೋರಿಸಿ ಅಪ್ರಾಪ್ತರೊಂದಿಗೆ ಕಾಮದಾಟ, ವಿಕೃತಕಾಮಿ ಅರೆಸ್ಟ್; ATMಗೆ ಹಣ ತುಂಬದೆ ಕದ್ದೊಯ್ದವನ ವಿರುದ್ಧ ಎಫ್​ಐಆರ್
ಕನ್ನಡ ಸುದ್ದಿ  /  ಕರ್ನಾಟಕ  /  ಹಣದ ಆಸೆ ತೋರಿಸಿ ಅಪ್ರಾಪ್ತರೊಂದಿಗೆ ಕಾಮದಾಟ, ವಿಕೃತಕಾಮಿ ಅರೆಸ್ಟ್; Atmಗೆ ಹಣ ತುಂಬದೆ ಕದ್ದೊಯ್ದವನ ವಿರುದ್ಧ ಎಫ್​ಐಆರ್

ಹಣದ ಆಸೆ ತೋರಿಸಿ ಅಪ್ರಾಪ್ತರೊಂದಿಗೆ ಕಾಮದಾಟ, ವಿಕೃತಕಾಮಿ ಅರೆಸ್ಟ್; ATMಗೆ ಹಣ ತುಂಬದೆ ಕದ್ದೊಯ್ದವನ ವಿರುದ್ಧ ಎಫ್​ಐಆರ್

Hubballi and Mysore Crime: ಹಣದ ಆಸೆ ತೋರಿಸಿ ಅಪ್ರಾಪ್ತ ಯುವತಿಯರೊಂದಿಗೆ ಕಾಮದಾಟ ನಡೆಸುತ್ತಿದ್ದ ವಿಕೃತಕಾಮಿ ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೈಸೂರಿನಲ್ಲಿ ಎಂಟಿಎಂಗೆ ಹಣ ತುಂಬಿಸದೆ ತೆಗೆದುಕೊಂಡ ಹೋದ ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಹಣದ ಆಸೆ ತೋರಿಸಿ ಅಪ್ರಾಪ್ತರೊಂದಿಗೆ ಕಾಮದಾಟ, ವಿಕೃತಕಾಮಿ ಅರೆಸ್ಟ್; ATMಗೆ ಹಣ ತುಂಬದೆ ಕದ್ದೊಯ್ದವನ ವಿರುದ್ಧ ಎಫ್​ಐಆರ್
ಹಣದ ಆಸೆ ತೋರಿಸಿ ಅಪ್ರಾಪ್ತರೊಂದಿಗೆ ಕಾಮದಾಟ, ವಿಕೃತಕಾಮಿ ಅರೆಸ್ಟ್; ATMಗೆ ಹಣ ತುಂಬದೆ ಕದ್ದೊಯ್ದವನ ವಿರುದ್ಧ ಎಫ್​ಐಆರ್

ಹುಬ್ಬಳ್ಳಿ: ಪ್ರೀತಿಸುವ ನೆಪ ಹಾಗೂ ಹಣದ ಆಸೆ ತೋರಿಸುವ ಮೂಲಕ ಯುವತಿಯರೊಂದಿಗೆ ಚೆಲ್ಲಾಟವಾಡಿ ರಾಸಲೀಲೆ ವಿಡಿಯೊ ಸೆರೆ ಹಿಡಿದು, ಬೆದರಿಕೆ ಹಾಕುತ್ತಿದ್ದ ವಿಕೃತ ಕಾಮಿಯನ್ನು ಹುಬ್ಬಳ್ಳಿಯ ಕಸಬಾಪೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಶರಾವತಿನಗರದ ಕೆಇಬಿ ಲೇಔಟ್ ನಿವಾಸಿ ಹಾಗೂ ಜೆರಾಕ್ಸ್ ಅಂಗಡಿ ಮಾಲೀಕ ಅಸ್ಪಾಕ್ ಜೋಗನ್ ಕೊಪ್ಪ (35) ಎಂಬಾತ ಬಂಧಿತ ಆರೋಪಿ.

ಈತ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಜೆರಾಕ್ಸ್ ಮತ್ತು ಮೊಬೈಲ್ ರೀಚಾರ್ಜ್ ಸ್ಟೋರ್ ಇಟ್ಟುಕೊಂಡಿದ್ದಾನೆ. ಅಂಗಡಿಗೆ ಬರುವ ಬಡ ಯುವತಿಯರು ಸೇರಿದಂತೆ ಅಪ್ರಾಪ್ತ ಹೆಣ್ಣುಮಕ್ಕಳನ್ನು ಹಣದ ಆಸೆ ತೋರಿಸಿ, ಪುಸಲಾಯಿಸಿ ಕಾಮದಾಟಕ್ಕೆ ಬಳಸಿಕೊಳ್ಳುತ್ತಿದ್ದ. ಅಷ್ಟೇ ಅಲ್ಲದೆ ವಿಡಿಯೋ ಕಾಲ್‌ನಲ್ಲಿ ಹೆಣ್ಣು ಮಕ್ಕಳ ಬಟ್ಟೆ ಬಿಚ್ಚಿಸಿ, ನಗ್ನ ಚಿತ್ರ ರೆಕಾರ್ಡ್ ಮಾಡಿಕೊಂಡು ತನ್ನ ಕಾಮದಾಸೆ ತೀರಿಸಿಕೊಳ್ಳುತ್ತಿದ್ದ.

ಅಪ್ರಾಪ್ತ ಬಾಲಕಿಯ ಪೋಷಕರ ದೂರಿನ ಮೇರೆಗೆ ಜೆರಾಕ್ಸ್ ಅಂಗಡಿ ಮಾಲೀಕನನ್ನು ಕಸಬಾಪೇಟ್ ಠಾಣೆಯ ಇನ್ಸ್‌ಪೆಕ್ಟರ್ ರಾಘವೇಂದ್ರ ಹಳ್ಳೂರ ನೇತೃತ್ವದ ತಂಡ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ ಸೈಕೋ ಕಾಮಿ ಮೊಬೈಲ್‌ನಲ್ಲಿ ಪೊಲೀಸರಿಗೆ 10ಕ್ಕೂ ಹೆಚ್ಚು ಮಹಿಳೆಯರೊಂದಿಗಿನ ರಾಸಲೀಲೆ ವಿಡಿಯೋಗಳು ಸಿಕ್ಕಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.

ಎಂಟಿಎಂಗೆ ತುಂಬದೆ 5.80 ಹಣ ಎಗರಿಸಿದ!

ಮೈಸೂರು: ಹಣ ಎಟಿಎಂಗೆ ತುಂಬದೇ ತೆಗೆದುಕೊಂಡ ಹೋದ ಆರೋಪದಡಿ ಇಬ್ಬರ ವಿರುದ್ದ ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ಎಂಬವರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಅಕ್ಷಯ್ ಎಟಿಎಂಗೆ ಹಣ‌ ತುಂಬವ ಏಜೆನ್ಸಿ‌ ಪಡೆದಿದ್ದ ಟಿಎಲ್ ಎಂಟರ್ ಪ್ರೈಸಸ್‌ನಲ್ಲಿ ಕೆಲಸ ಮಾಡುತ್ತಿದ್ದ. ಅಕ್ಷಯ್ ಮೈಸೂರು ಜಿಲ್ಲೆಯ ಒಟ್ಟು 16 ಎಟಿಎಂಗಳಿಗೆ ಹಣ‌ ತುಂಬುತ್ತಿದ್ದ.

ಆದರೆ ಕಂಪನಿ ಆಡಿಟ್ ಮಾಡಿದಾಗ ಹಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಹೀಗಾಗಿ ಕ್ಯಾಶ್ ಲೋಡಿಂಗ್ ಎಟಿಎಂನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಅಕ್ಷಯ್ ಎಟಿಎಂಗೆ ಹಣ ಹಾಕದೇ ಬ್ಯಾಗ್‌ನಲ್ಲಿ ತುಂಬಿಕೊಂಡು ಹೋಗಿರುವ ದೃಶ್ಯ ಸೆರೆಯಾಗಿದೆ. ಗದ್ದಿಗೆ ಗ್ರಾಮದ ಎಟಿಎಂ ನಲ್ಲಿ 5 ಲಕ್ಷದ 80 ಸಾವಿರ ಹಣ ಲೋಡ್ ಮಾಡಿಲ್ಲ ಎಂಬುದು ಗೊತ್ತಾಗಿದೆ. ಈ ಕೃತ್ಯಕ್ಕೆ ಆತನಿಗೆ ಪರಿಚಯವಿರುವ ತೇಜಸ್ವಿನಿ‌ ಎಂಬಾಕೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪ ಇದೆ. ಇಬ್ಬರು ಈ ಹಣದಿಂದ ಚಿನ್ನ ಖರೀದಿಸಿದ್ದಾರೆ ಎನ್ನಲಾಗಿದೆ. ಚಿನ್ನದ ಅಂಗಡಿಯಲ್ಲಿ ಚಿನ್ನ ಖರೀದಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Whats_app_banner