ಹುಬ್ಬಳ್ಳಿ: ಹಿರಿಯ ಸ್ವಯಂಸೇವಕ, ಮಾಜಿ ಮಹಾನಗರ ಸಂಘಚಾಲಕ, ವಿಶ್ವ ಹಿಂದೂ ಪರಿಷತ್ ನಾಯಕ ಡಾ ಗೋವಿಂದ ನರೇಗಲ್ ನಿಧನ
Dr Govinda Naregal Death: ಹುಬ್ಬಳ್ಳಿಯ ಹಿರಿಯ ಸ್ವಯಂಸೇವಕ, ಮಾಜಿ ಮಹಾನಗರ ಸಂಘಚಾಲಕ, ವಿಶ್ವ ಹಿಂದೂ ಪರಿಷತ್ ನಾಯಕ ಡಾ ಗೋವಿಂದ ನರೇಗಲ್ ನಿಧನರಾದರು. ಅವರು ಇಂದು (ಫೆ 18) ಬೆಳಿಗ್ಗೆ ನಿಧನರಾಗಿದ್ದು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು, ಹುಬ್ಬಳ್ಳಿಯ ಮಾಜಿ ಸಂಘ ಚಾಲಕರಾಗಿದ್ದ ಹಿರಿಯ ವೈದ್ಯ ಡಾ. ಗೋವಿಂದ ನರೇಗಲ್ಲ (91) ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಹುಬ್ಬಳ್ಳಿಯಲ್ಲಿ 60ವರ್ಷಗಳ ಹಿಂದೆ ತಮ್ಮ ವೈದ್ಯಕೀಯ ವೃತ್ತಿ ಆರಂಭಿಸಿರುವ ನರೇಗಲ್ಲ ಅವರು ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂ ಸೇವಕ ಸ್ವಯಂಸೇವಕರಾಗಿದ್ದರಲ್ಲದೇ 48 ವರ್ಷ ಕಾಲ ಹುಬ್ಬಳ್ಳಿ ಮಹಾನಗರ ಸಂಘ ಚಾಲಕರಾಗಿ ಜವಾಬ್ದಾರಿ ನಿರ್ವಹಿಸಿದ್ದರು. ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ಉತ್ತರ ಪ್ರಾಂತ್ಯದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಡಾ ಗೋವಿಂದ ನರೇಗಲ್ ನಿಧನ
ಆರ್‌ಎಸ್‌ಎಸ್‌ನ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಅವರು ಡಾ ಗೋವಿಂದ ನರೇಗಲ್ ನಿಧನವಾಗಿರುವ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ.
ಡಾ ಗೋವಿಂದ ನರೇಗಲ್ ನಿಧನ; ಗಣ್ಯರಿಂದ ಸಂತಾಪ
ಆರ್‌ಎಸ್‌ಎಸ್‌ನ ಹಿರಿಯರಾದ ಹುಬ್ಬಳ್ಳಿಯ ಡಾ. ಗೋವಿಂದ ನರೇಗಲ್ಲ ಅವರ ನಿಧನಕ್ಕೆ ಸಚಿವ ಪ್ರಲ್ಹಾದ ಜೋಶಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮತಾಂತರ ತಡೆಯವಲ್ಲಿ ಅತ್ಯಂತ ಮಹತ್ತರ ಪಾತ್ರವಹಿಸಿ ‘ಪರಾವರ್ತನ’ದ ರಾಷ್ಟ್ರೀಯ ಪ್ರಮುಖರಲ್ಲಿ ಒಬ್ಬರಾಗಿ ಸುಮಾರು ಆರು ಸಾವಿರಕ್ಕಿಂತಲೂ ಹೆಚ್ಚು ಜನರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತಂದಿದ್ದರೆಂದು ತಮ್ಮ ಶೋಕ ಸಂದೇಶದಲ್ಲಿ ಹೇಳಿದ್ದಾರೆ.
