ಒಂದು ಕ್ಷಣದ ತಪ್ಪಿಗಾಗಿ 8 ಮಂದಿ ಜೀವ ಕಳೆದುಕೊಂಡರು; ಹುಬ್ಬಳ್ಳಿ ಅಯ್ಯಪ್ಪ ಮಾಲಾಧಾರಿಗಳ ಸಾವು, ಕುಟುಂಬಗಳಿಗೂ ಜೀವನ ಪರ್ಯಂತ ನೋವು
ಹುಬ್ಬಳ್ಳಿಯಲ್ಲಿ ಅಯ್ಯಪ್ಪಸ್ವಾಮಿ ಭಕ್ತರು ಒಳಿತಾಗಲೆಂದು ಮಾಲಾಧಾರಿಗಳಾಗಿದ್ದಾಗ ಸಂಭವಿಸಿದ ದುರಂತ ಅವರ ಬದುಕನ್ನೇ ತೆಗೆದುಕೊಂಡಿದೆ. ಅವರ ಸಾವಿನ ನೋವು ಕುಟುಂಬಗಳಲ್ಲಿ ಆವರಿಸಿದೆ.
ಹುಬ್ಬಳ್ಳಿ: ಅವರು ತಮ್ಮ ಕಷ್ಟಗಳನ್ನು ದೂರ ಮಾಡುವ ಭರವಸೆಯೊಂದಿಗೆ, ಬದುಕಿನಲ್ಲಿ ಒಳ್ಳೆಯದಾಗಲಿ ಎಂಬ ಆಶಯದೊಂದಿಗೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಾಗಿದ್ದರು, ಕೆಲವರು ಹಲವು ವರ್ಷಗಳಿಂದ ಅಯ್ಯಪ್ಪನ ಸೇವೆಯಲ್ಲಿ ನಿರತರಾಗಿದ್ದರು. ಹಿರಿಯರೊಂದಿಗೆ ಯುವಕರು ಅವರೊಂದಿಗೆ ಸೇರಿಕೊಂಡಿದ್ದರು. ನಾಲ್ಕೈದು ದಿನಗಳ ಕಾಲ ಬೆಳಿಗ್ಗೆ ಹಾಗೂ ಸಂಜೆ ಭಕ್ತಿಯಿಂದಲೇ ಪೂಜೆಗಳನ್ನು ನೆರವೇರಿಸಿದ್ದರು. ಇನ್ನೇನು ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದು ಹೊಸ ವರ್ಷದಲ್ಲಿ ನಮಗೆ, ನಮ್ಮ ಕುಟುಂಬಕ್ಕೆ , ಹಿತೈಷಿಗಳಿಗೆ ಒಳಿತು ಮಾಡು ಎಂದು ಕೇಳಿಕೊಳ್ಳಲುವವರು ಇದ್ದರು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ಇನ್ನು ಮೂರು ಗಂಟೆ ಕಳೆದಿದ್ದರೆ ಬೆಳಗಿನ ಪೂಜೆಗೆ ಅಣಿಯಾಗಬೇಕಿತ್ತು ಅಲ್ಲಿ ನಡೆದದ್ದೇ ಇನ್ನೊಂದು. ಅದು ಸಿಲೆಂಡರ್ ಸ್ಪೋಟ. ಹುಬ್ಬಳ್ಳಿಯಲ್ಲಿ ಕಳೆದ ವಾರ ನಡೆದಿದ್ದ ಸಿಲೆಂಡರ್ ಸೋರಿಕೆ ಹಾಗೂ ನಂತರ ಸ್ಪೋಟದಲ್ಲಿ ಎಂಟು ಮಂದಿ ಜೀವ ಕಳೆದುಕೊಂಡ ದುರ್ಘಟನೆಯಿದು
ಘಟನಾವಳಿ ನೋಟ
- ಹುಬ್ಬಳ್ಳಿ ಸಾಯಿನಗರದ ಅಚ್ಚವ್ವಳ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಕಳೆದ ಭಾನುವಾರ ಡಿಸೆಂಬರ್ 22ರಂದು ಸಂಜೆ ಸಿಲಿಂಡರ್ ಸ್ಫೋಟ ಸಂಭವಿಸಿ, 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು.
- ಅದರಲ್ಲಿ ಹಿರಿಯರಾದ ನಿಜಲಿಂಗಪ್ಪ ಬೇಪುರಿ ಎನ್ನುವವರು ಮೊದಲ ದಿನವೇ ನಿಧನರಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದು ಇನ್ನೂ ಎಂಟು ಮಂದಿಗೆ ಚಿಕಿತ್ಸೆ ಮುಂದುವರಿತ್ತಾದರೂ ಏಳು ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದರು.
- ಇದಾದ ಮೂರು ದಿನಕ್ಕೆ ಸಂಜಯ್ ಸವದತ್ತಿ (20), ರಾಜು ಮೂಗೇರಿ (21) ಎನ್ನುವವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದರು. ಈ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿಯಿಂದ ತಲಾ ಐದು ಲಕ್ಷ ರೂ. ಘೋಷಣೆ ಮಾಡಲಾಗಿತ್ತು.
- ಆನಂತರದ ಎರಡು ದಿನದಲ್ಲಿ ಇನ್ನಿಬ್ಬರು ಲಿಂಗರಾಜು ಬೀರನೂರ (24) ಪ್ರವೀಣ ಚಲವಾದಿ(24) ಮೃತಪಟ್ಟಿದ್ದರು.
- ಭಾನುವಾರ ರಾತ್ರಿ ಶಂಕರ ಚವ್ಹಾಣ್ (30), ಸೋಮವಾರ ಬೆಳಗಿನ ಜಾವದ ಹೊತ್ತಿಗೆ ಮಂಜುನಾಥ ವಾಘ್ಮೋಡೆ ಕೊನೆಯುಸಿರೆಳೆದಿದ್ದಾರೆ. ಸೋಮವಾರ ಸಂಜೆ ಮತ್ತೊಬ್ಬಾತ ತೇಜೇಶ್ವರ್ ಎಂಬುವವರು ನಿಧನರಾದರೆ, ಮಂಗಳವಾರ ಬೆಳಿಗ್ಗೆ ಉಣಕಲ್ ನಿವಾಸಿ ಪ್ರಕಾಶ ಬಾರಕೇರ ನಿಧನರಾದರು.
- ಘಟನೆಯಲ್ಲಿ ಗಾಯಗೊಂಡವರಲ್ಲಿ ವಿನಾಯಕ ಬಾರಕೇರ(12) ಎಂಬ ಬಾಲಕ ಮಾತ್ರ ಬದುಕುಳಿದಿದ್ದು, ಆತನಿಗೆ ಚಿಕಿತ್ಸೆ ಮುಂದುವರಿದಿದೆ.
- ಈಗಾಗಲೇ ಸರ್ಕಾರದಿಂದ ಮೊದಲು ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಘೋಷಿಸಲಾಗಿದೆ. ಉಳಿದ ನಾಲ್ಕು ಮಂದಿ ಕುಟುಂಬಗಳಿಗೂ ಸಿಎಂ ಪರಿಹಾರ ನಿಧಿಯಿಂದ ಪರಿಹಾರ ನೀಡುವ ಸಾಧ್ಯತೆಯಿದೆ.
- ಅಂದು ಪೂಜೆ ಮುಗಿಸಿ ಮಲಗಿದಾಗ ಪಕ್ಕದಲ್ಲೇ ಇರಿಸಿದ್ದ ಸಿಲೆಂಡರ್ ಗೆ ನಿದ್ದೆಗಣ್ಣಿನಲ್ಲಿ ಒದ್ದಾಗ ಅದು ಉರುಳಿ ಬಿದ್ದು ಸೋರಿಕೆ ನಂತರ ಸ್ಪೋಟಿಸಿ ಎಲ್ಲರಿಗೂ ತೀವ್ರ ಗಾಯವಾಗಿದೆ. ಒಂದು ಕ್ಷಣದ ಆ ತಪ್ಪು ಎಂಟು ಜೀವಗಳನ್ನು ಕಳೆದುಕೊಂಡಂತಾಗಿದೆ. ಅಲ್ಲದೇ ಅವರ ಕುಟುಂಬಗಳಿಗೂ ಇನ್ನಿಲ್ಲದ ನೋವು ತಂದಿದೆ.
- ಸರ್ಕಾರ ಹಾಗೂ ತೈಲ ಕಂಪೆನಿಗಳು ಸಿಲೆಂಡರ್ ಬಳಕೆ ವಿಚಾರದಲ್ಲಿ, ಅವುಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡಬೇಕಾದ ಬಗ್ಗೆ ಮಾಹಿತಿ ನೀಡುತ್ತಲೇ ಇರುತ್ತವೆ. ಆದರೂ ಆ ಕ್ಷಣದಲ್ಲಿ ಮೈ ಮರೆತರೆ ಆಗುವ ದುರಂತಕ್ಕೆ ಹುಬ್ಬಳ್ಳಿ ಘಟನೆಯೇ ಸಾಕ್ಷಿಯಂತಿದೆ.
---
ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ
2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.
ವಿಭಾಗ