ಮಹಿಳೆಗೆ ಕಿರುಕುಳ ನೀಡಿದ ನೆಪದಲ್ಲಿ ಹುಬ್ಬಳ್ಳಿ ಬೇಕರಿ ಮಾಲೀಕನಿಂದ 50 ಸಾವಿರ ರೂ. ವಸೂಲಿ: ನಾಲ್ವರ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಮಹಿಳೆಗೆ ಕಿರುಕುಳ ನೀಡಿದ ನೆಪದಲ್ಲಿ ಹುಬ್ಬಳ್ಳಿ ಬೇಕರಿ ಮಾಲೀಕನಿಂದ 50 ಸಾವಿರ ರೂ. ವಸೂಲಿ: ನಾಲ್ವರ ಬಂಧನ

ಮಹಿಳೆಗೆ ಕಿರುಕುಳ ನೀಡಿದ ನೆಪದಲ್ಲಿ ಹುಬ್ಬಳ್ಳಿ ಬೇಕರಿ ಮಾಲೀಕನಿಂದ 50 ಸಾವಿರ ರೂ. ವಸೂಲಿ: ನಾಲ್ವರ ಬಂಧನ

ಹುಬ್ಬಳ್ಳಿ ನಗರದಲ್ಲಿ ಬೇಕರಿ ಮಾಲೀಕರೊಬ್ಬರು ಮಹಿಳೆಯ ಜತೆ ವಹಿವಾಟು ನಡೆಸುವಾಗ ಮೊಬೈಲ್‌ ನಂಬರ್‌ ನೀಡಿದ್ದು,ಈ ವೇಳೆ ಮಹಿಳೆಗೆ ಕಿರುಕುಳ ನೀಡಿರುವುದಾಗಿ ಆರೋಪಿಸಿ ಹಣ ಕಿತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ.

ಹುಬ್ಬಳ್ಳಿಯಲ್ಲಿ ಸೆರೆ ಸಿಕ್ಕ ನಾಲ್ವರು
ಹುಬ್ಬಳ್ಳಿಯಲ್ಲಿ ಸೆರೆ ಸಿಕ್ಕ ನಾಲ್ವರು

ಹುಬ್ಬಳ್ಳಿ : ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಹುಬ್ಬಳ್ಳಿ ನಗರದ ಯಲ್ಲಾಪುರ ಓಣಿಯ ಬೇಕರಿ ನಡೆಸುತ್ತಿರುವ ಮಧು ಎಂ.ಟಿ. ಎಂಬವರನ್ನು ಬೆದರಿಸಿ, ಅಪಹರಿಸಿ, ಅವರ ಮೇಲೆ ಹಲ್ಲೆ ನಡೆಸಿ 50 ಸಾವಿರ ರೂ. ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಹುಬ್ಬಳ್ಳಿ ಧಾರವಾಡದ ಘಂಟಿಕೇರಿ ಪೊಲೀಸರು ಬಂಧಿಸಿದ್ದಾರೆ. ಸೆಟ್ಲಮೆಂಟ್ ನಿವಾಸಿಗಳಾದ ಕೃಷ್ಣಾ ಇಂದರಗಿ(31), ಸುನೀಲ ಕನ್ನೇಶ್ವರ (36), ಸತೀಶ ಇಂದರಗಿ (26) ಹಾಗೂ ಹಾಸನ ಜಿಲ್ಲೆ ಸುಂಡೇನಹಳ್ಳಿಯ ಹಾಲಿ ಹಳೇಹುಬ್ಬಳ್ಳಿ ಗಣೇಶ ಕಾಲನಿ ನಿವಾಸಿಯಾಗಿರುವ ಕುಮಾರ ಬಿ.ಎಸ್. ಎಂಬವರೇ ಬಂಧಿತರಾಗಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಬೈಕ್, ಹಾಗೂ ೫೦ ಸಾವಿರ ರೂ.ಗಳನ್ನು ವಶಪಡಿಕೊಳ್ಳಲಾಗಿದೆ ಎಂದು ಘಂಟಿಕೇರಿ ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಬೇಕರಿ ಮಾಲೀಕ ಮಧು ಎಂ.ಟಿ. ಎಂಬವರು, ’ಕೆಲದಿನಗಳ ಹಿಂದೆ ಯಲ್ಲಾಪೂರ ಓಣಿಯ ಬೇಕರಿಗೆ ಆಗಮಿಸಿದ್ದ ಮಹಿಳೆಯೊಬ್ಬರು ಕೆಲವು ತಿಂಡಿಗಳನ್ನು ತೆಗೆದುಕೊಂಡು ಹೋಗಿದ್ದು, ಈ ವೇಳೆ ನನ್ನ ಮೊಬೈಲ್ ನಂಬರ್ ಪಡೆದು ಹೋಗಿದ್ದಳು. ನಂತರ ಆ ಮಹಿಳೆಗೆ ಕಿರುಕುಳ ನೀಡುತ್ತಿರುವುದಾಗಿ ಬಂಧಿತ ನಾಲ್ವರು ಆರೋಪಿಗಳು ಬೆದರಿಸಿ 50 ಸಾವಿರ ರೂ.ಗಳನ್ನು ವಸೂಲ್ ಮಾಡಿದ್ದಾರೆ. ನಂತರ ಮತ್ತೇ 15 ಸಾವಿರ ರೂ. ಕೊಡಬೇಕೆಂದು ಒತ್ತಾಯಿಸಿ ಥಳಿಸಿದ್ದಾರೆ’ ಎಂದು ವಿವರಿಸಿದ್ದರು

ದೂರು ಆಧರಿಸಿ ತನಿಖೆ ನಡೆಸಿದಾಗ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದಾಗ ಘಟನೆಯನ್ನು ವಿವರಿಸಿದ್ದು, ಹಣ ವಸೂಲಿ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ಮಹಿಳೆಯಿಂದ ಬೇಕರಿ ಮಾಲೀಕ ನಂಬರ್‌ ಪಡೆದಿದ್ದು. ಆನಂತರದ ಮಾಹಿತಿ ಇವರಿಗೆ ಹೇಗೆ ಸಿಕ್ಕಿತು ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ. ಮಹಿಳೆ ಪಾತ್ರ ಇರುವ ಕುರಿತೂ ವಿಚಾರಣೆ ನಡೆದಿದೆ. ಸದ್ಯಕ್ಕೆ ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಜ್ವರದಿಂದ ಬಳಲಿದ್ದ ವಿದ್ಯಾರ್ಥಿ ಆಸ್ಪತ್ರೆಯ ಮೂರನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ

ತೀವ್ರ ಜ್ವರದಿಂದ ಬಳಲಿ ಹುಬ್ಬಳ್ಳಿ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಾಗಿದ್ದ ವಿದ್ಯಾರ್ಥಿಯೊಬ್ಬ ಆಸ್ಪತ್ರೆಯ ಮೂರನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.

ಆದರ್ಶ ಗೌಂಡಕರ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸದ್ಯಕ್ಕೆ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ. ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner