Hubli Crime: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ಪ್ರಕರಣ; ಕಾಲಿಗೆ ಗುಂಡು ಹೊಡೆದು 3 ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  Hubli Crime: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ಪ್ರಕರಣ; ಕಾಲಿಗೆ ಗುಂಡು ಹೊಡೆದು 3 ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

Hubli Crime: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ಪ್ರಕರಣ; ಕಾಲಿಗೆ ಗುಂಡು ಹೊಡೆದು 3 ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು

Hubli Crime News: ಕ್ಷುಲ್ಲಕ ವಿಷಯವಾಗಿ ಮೂವರು ಯುವಕರ ತಂಡವು ಓರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಹುಬ್ಬಳ್ಳಿಯ ವಿದ್ಯಾನಗರದ ಗೋಲ್ಡನ್ ಹೈಟ್ಸ್ ಬಾರ್ ಆಂಡ್ ಫ್ಯಾಮಿಲಿ ರೆಸ್ಟೋರೆಂಟ್‌ನ ಪಾರ್ಕಿಂಗ್ ಜಾಗದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.

Hubli Crime: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ; ಕಾಲಿಗೆ ಗುಂಡು ಹೊಡೆದು 3 ಆರೋಪಿಗಳ ವಶ
Hubli Crime: ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ; ಕಾಲಿಗೆ ಗುಂಡು ಹೊಡೆದು 3 ಆರೋಪಿಗಳ ವಶ

ಹುಬ್ಬಳ್ಳಿ: ಕ್ಷುಲ್ಲಕ ವಿಷಯವಾಗಿ ಮೂವರು ಯುವಕರ ತಂಡವು ಓರ್ವನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಹುಬ್ಬಳ್ಳಿಯ ವಿದ್ಯಾನಗರದ ಗೋಲ್ಡನ್ ಹೈಟ್ಸ್ ಬಾರ್ ಆಂಡ್ ಫ್ಯಾಮಿಲಿ ರೆಸ್ಟೋರೆಂಟ್‌ನ ಪಾರ್ಕಿಂಗ್ ಜಾಗದಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆದಿದ್ದಾರೆ.

ಹಳೇಹುಬ್ಬಳ್ಳಿ ಇಂದ್ರಪ್ರಸ್ಥ ನಗರದ ಆಕಾಶ ವಾಲ್ಮೀಕಿ (22) ಎಂಬಾತ ಕೊಲೆಯಾಗಿದ್ದಾನೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಭೇಟಿ ನೀಡಿ ಪರಿಶೀಲಿಸಿ ಮೃತ ದೇಹವನ್ನು ಕೆಎಂಸಿಆರ್ ಐಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಬಲೆ ಬೀಸಿದ್ದರು. ಹಳೇಹುಬ್ಬಳ್ಳಿ ಆನಂದನಗರದ ಅಭಿಷೇಕ ಶಿರೂರ, ಯಲ್ಲಪ್ಪ ಕೋಟಿ, ವಿನೋದ ಅಂಬಿಗೇರ ಎಂಬುವವರೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ವಿದ್ಯಾನಗರ ಪಿಎಸ್ ಐ ಶ್ರೀಮಂತ ಪಾಟೀಲ, ಕಮರಿಪೇಟ ಪಿಎಸ್ಐ‌ ಸುನೀಲ ಎಂ. ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಲೆ ನಡೆದ ಘಟನಾ ಸ್ಥಳಕ್ಕೆ ಹಾಗೂ ನಗರದ ಕೆಎಂಸಿಆರ್ ಐ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭೇಟಿ ನೀಡಿ ಪರಿಶೀಲಿಸಿ, ಪೊಲೀಸ್ ಸಿಬ್ಬಂದಿ ಆರೋಗ್ಯ ವಿಚಾರಿಸಿದ್ದಾರೆ. ಅವರೊಂದಿಗೆ ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ಶಿವಪ್ರಕಾಶ ನಾಯ್ಡು, ವಿದ್ಯಾನಗರ ಪಿಎಸ್‌ಐ ಜಯಂತ ಗೌಳಿ ಇದ್ದರು.

ಎರಡು ಗುಂಪುಗಳ ಮಧ್ಯೆ ಇದ್ದ ಹಳೇ ವೈಷಮ್ಯ ಆಕಾಶ ಕೊಲೆಯಲ್ಲಿ ಅಂತ್ಯವಾಗಿದೆ. ಪೂರ್ವ ಸಂಚು ರೂಪಿಸಿ ಕೊಲೆ ಮಾಡಿದ್ದಾರೆ. ಮೃತ ಆಕಾಶ ಮೇಲೆ ಒಂದು ಪ್ರಕರಣ ದಾಖಲಿದ್ದು, ಕೊಲೆ ಮಾಡಿ ಎಂಟಿಎಸ್ ಕಾಲೋನಿಯಲ್ಲಿ ಸೇರಿದ್ದ ಆರೋಪಿಗಳನ್ನು ಬಂಧಿಸಲು ಸಿಬ್ಬಂದಿ ಹೋದಾಗ ಅವರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಅವರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಆಯುಕ್ತ ಎನ್. ಶಶಿಕುಮಾರ್ ಮಾಧ್ಯಮದವರಿಗೆ ತಿಳಿಸಿದರು.

ಹುಬ್ಬಳ್ಳಿಯ ವಿದ್ಯಾನಗರ ಪಿಎಸ್ ಐ ಶ್ರೀಮಂತ ಪಾಟೀಲ, ಕಮರಿಪೇಟ ಪಿಎಸ್ ಐ ಸುನೀಲ ಎಂ., ಶರಣಗೌಡ ಮುಲಿಮನಿ, ಮುತ್ತಪ್ಪ ಲಮಾಣಿ ಗಾಯಗೊಂಡ ಪೊಲೀಸ್ ಕೆಎಂಸಿಆರ್ ಐ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Whats_app_banner