Hubli Dharwad News: ಹುಬ್ಬಳ್ಳಿ ಧಾರವಾಡದಲ್ಲಿ ಮೀಟರ್‌ ಬಡ್ಡಿ ಅವ್ಯಾಹತ, 23 ಜನರನ್ನು ಬಂಧಿಸಿ ಹೆಡೆ ಮುರಿ ಕಟ್ಟಿದ ಪೊಲೀಸರು-hubli dharwad crime hubli dharwad raid on heavy interest loan firms arrested 23 people seized vehicles kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Hubli Dharwad News: ಹುಬ್ಬಳ್ಳಿ ಧಾರವಾಡದಲ್ಲಿ ಮೀಟರ್‌ ಬಡ್ಡಿ ಅವ್ಯಾಹತ, 23 ಜನರನ್ನು ಬಂಧಿಸಿ ಹೆಡೆ ಮುರಿ ಕಟ್ಟಿದ ಪೊಲೀಸರು

Hubli Dharwad News: ಹುಬ್ಬಳ್ಳಿ ಧಾರವಾಡದಲ್ಲಿ ಮೀಟರ್‌ ಬಡ್ಡಿ ಅವ್ಯಾಹತ, 23 ಜನರನ್ನು ಬಂಧಿಸಿ ಹೆಡೆ ಮುರಿ ಕಟ್ಟಿದ ಪೊಲೀಸರು

Hubli Crime ಮೀಟರ್‌ ಬಡ್ಡಿ ದಂಧೆಯ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಹಾಗೂ ಧಾರವಾಡ ನಗರ ಪೊಲೀಸರು( Hubli Dharwad Police) ಭಾರೀ ಪ್ರಮಾಣದಲ್ಲಿ ದಾಳಿ ಮಾಡಿದ್ದಾರೆ.

ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಮಾರ್ಗದರ್ಶನದಲ್ಲಿ ಮೀಟರ್‌ ಬಡ್ಡಿ ದಂಧೆಯ ಅಡ್ಡೆಗಳ ಮೇಲೆ ದಾಳಿ ಮಾಡಲಾಗಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತ ಶಶಿಕುಮಾರ್‌ ಮಾರ್ಗದರ್ಶನದಲ್ಲಿ ಮೀಟರ್‌ ಬಡ್ಡಿ ದಂಧೆಯ ಅಡ್ಡೆಗಳ ಮೇಲೆ ದಾಳಿ ಮಾಡಲಾಗಿದೆ.

ಹುಬ್ಬಳ್ಳಿ: ಛೋಟಾ ಮುಂಬೈ ಎಂದು ಕರೆಯಿಸಿಕೊಳ್ಳುವ ಹುಬ್ಬಳ್ಳಿಯ ಜತೆಗೆ ಶಿಕ್ಷಣ ಕಾಶಿ ಧಾರವಾಡದಲ್ಲೂ ಮೀಟರ್‌ ಬಡ್ಡಿ ವಸೂಲಿ ಮಾಡುತ್ತಿದ್ದ ದೂರುಗಳು ಆಗಾಗ ಕೇಳಿ ಬರುತ್ತಲೇ ಇದ್ದವು. ಇದು ದೊಡ್ಡ ದಂಧೆಯ ಸ್ವರೂಪವನ್ನೇ ಪಡೆದುಕೊಂಡಿತ್ತು. ಈ ಕುರಿತು ಮಾಹಿತಿ ಕಲೆ ಹಾಕಿದ ಹುಬ್ಬಳ್ಳಿ ಧಾರವಾಡ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ ಬರೋಬ್ಬರಿ 23 ಜನರ ಬಂಧಿಸಿದ್ದಾರೆ. ಗುರುವಾರ ಬೆಳಿಗ್ಗೆಯಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ ತಂಡಗಳು ದೂರುಗಳಿದ್ದ ಕೇಂದ್ರಗಳ ಮೇಳೆ ದಾಳಿ ನಡೆಸಿವೆ. ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 12 ಜನ ಹಾಗೂ ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ 3 ಜನರನ್ನು ಬಂಧಿಸಲಾಗಿದೆ.

ಹುಬ್ಬಳ್ಳಿ ಹಾಗೂ ಧಾರವಾಡ ನಗರದಲ್ಲಿ ವಿವಿಧ ರೀತಿಯ ವಹಿವಾಟುಗಳಿವೆ. ಇದರಲ್ಲಿ ಮೀಟರ್‌ ಬಡ್ಡಿ ದಂಧೆಯೂ ಕೂಡ ಒಂದು. ಯಾರಿಗಾದರೂ ತತ್‌ಕ್ಷಣದಲ್ಲಿ ಸಾಲ ಬೇಕು ಎಂದರೆ ಇಂತಿಷ್ಟ ಬಡ್ಡಿ ನಿಗದಿಪಡಿಸಿ ನೀಡುವುದು ವಹಿವಾಟಿನ ಹಿನ್ನೆಲೆ. ಅದರಲ್ಲೂ ಭಾರೀ ಪ್ರಮಾಣದಲ್ಲಿ ಬಡ್ಡಿ ನಿಗದಿಪಡಿಸುವುದು, ಬಡ್ಡಿ ಮೊತ್ತ ಕಡಿತ ಮಾಡಿ ನೀಡುವುದು ಇದರಲ್ಲಿ ಸೇರಿದೆ. ಇದು ಕೆಲವು ಕಡೆ ಮಾಫಿಯಾ ಸ್ವರೂಪವನ್ನೂ ಪಡೆದುಕೊಂಡಿದೆ.

ಹುಬ್ಬಳ್ಳಿ ಹಾಗೂ ಧಾರವಾಡ ಅವಳಿ ನಗರಗಳಲ್ಲಿ ಅವ್ಯಾಹತವಾಗಿ ಮೀಟರ್‌ ಬಡ್ಡಿ ದಂಧೆ ನಡೆಯುತ್ತಿತ್ತು. ಈ ಕುರಿತು ನಗರ ಪೊಲೀಸ್‌ ಆಯುಕ್ತರಿ ಶಶಿಕುಮಾರ್‌ ಅವರಿಗೂ ಕೆಲವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಹುಬ್ಬಳ್ಳಿ ಹಾಗೂ ಧಾರವಾಡ ವಿವಿಧ ಪೊಲೀಸ್‌ ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಈ ವೇಳೆ ಲೈಸನ್ಸ್ ಇಲ್ಲದೇ ಮೀಟರ್ ಬಡ್ಡಿ ವ್ಯವಹಾರ ಮಾಡ್ತಿದ್ದ 23 ಜನರ ಬಂಧನ ಮಾಡಲಾಗಿದೆ.

ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 12 ಜನ, ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ 3 ಜನ, ಧಾರವಾಡ ಶಹರ ಠಾಣೆ ವ್ಯಾಪ್ತಿಯಲ್ಲಿ 4 ಜನ ಹಾಗೂ ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4 ಜನರ ಬಂಧನ‌ ಮಾಡಲಾಗಿದೆ. ಬಂಧಿತರಿಂದ ಸಾಲದ ವ್ಯವಹಾರದ ದಾಖಲೆಗಳು,ಚೆಕ್ ಬುಕ್,10ಕ್ಕೂ ಹೆಚ್ಚು ಮೊಬೈಲ್, ಹತ್ತಕ್ಕೂ ಹೆಚ್ಚು ದ್ವಿಚಕ್ರ ವಾಹನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಡ್ಡಿ ವ್ಯವಹಾರ ಮಾಡುವ ಕೆಲವರ ಬಳಿ ಚಾಕು ಚೂರಿ ಪತ್ತೆಯಾಗಿದ್ದು, ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲವರ ಬಳಿ ಚಾಕು,ಡ್ರ್ಯಾಗನ್ ಇರುವುದು ಕಂಡು ಬಂದಿದೆ. ಕಳೆದ ಕೆಲ ದಿನಗಳ ಹಿಂದೆ ಅಪ್ರಾಪ್ತ ಬಾಲಕರನ್ನು ಬಳಸಿ ಬಡ್ಡಿ ವ್ಯವಹಾರ ಮಾಡೋ ಪ್ರಕರಣ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿತ್ತು. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಸೆಟಲ್ ಮೆಂಟ್ ನಿವಾಸಿಗಳಿಂದ ಮೀಟರ್ ಬಡ್ಡಿ ವ್ಯವಹಾರ ನಡೆಯುವ ದೂರುಗಳಿದ್ದವು. ವಾರದ ಬಡ್ಡಿ,ದಿನದ ಬಡ್ಡಿ ಲೆಕ್ಕದಲ್ಲಿ ವ್ಯವಹಾರ ಮಾಡ್ತಿದ್ದ ಆರೋಪಿಗಳು. ಹಣ ಕೊಡದೇ ಹೋದಾಗ ದ್ವಿಚಕ್ರ ವಾಹನ ,ಸೇರಿ ಕೆಲ ದಾಖಲೆಗಳನ್ನು ಅಡ ಇಟ್ಟುಕೊಂಡು ಹಣ ವಸೂಲಿ ಮಾಡುತ್ತಿದ್ದರು ಎನ್ನುವ ದೂರುಗಳು ವ್ಯಾಪಕವಾಗಿದ್ದವು. ಈ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡಿದ್ದ ಹುಬ್ಬಳ್ಳ ಧಾರವಾಡ ಪೊಲೀಸರು‌ ದೂರುಗಳು ಬರುತ್ತಿದ್ದಂತೆ ಸಕ್ರಿಯವಾಗಿ ದಾಳಿ ಮಾಡಿದ್ದಾರೆ.