ಧಾರವಾಡದಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವತಿ, ಯುವಕ; ಡಿಎಲ್ ರದ್ದುಗೊಳಿಸಲು ಶಿಫಾರಸು ಮಾಡಿದ ಪೊಲೀಸರು- ವಿಡಿಯೋ ವೈರಲ್‌
ಕನ್ನಡ ಸುದ್ದಿ  /  ಕರ್ನಾಟಕ  /  ಧಾರವಾಡದಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವತಿ, ಯುವಕ; ಡಿಎಲ್ ರದ್ದುಗೊಳಿಸಲು ಶಿಫಾರಸು ಮಾಡಿದ ಪೊಲೀಸರು- ವಿಡಿಯೋ ವೈರಲ್‌

ಧಾರವಾಡದಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವತಿ, ಯುವಕ; ಡಿಎಲ್ ರದ್ದುಗೊಳಿಸಲು ಶಿಫಾರಸು ಮಾಡಿದ ಪೊಲೀಸರು- ವಿಡಿಯೋ ವೈರಲ್‌

ಹುಬ್ಬಳ್ಳಿ - ಧಾರವಾಡ ನಗರ ಪೊಲೀಸರು ಶನಿವಾರ ವ್ಹೀಲಿಂಗ್ ಮಾಡುತ್ತಿದ್ದವರ ಮೇಲೆ ಕ್ರಮ ಜರುಗಿಸಿದ್ದಾರೆ. ಯುವತಿಯೊಬ್ಬಳು ವ್ಹೀಲಿಂಗ್ ಮಾಡುತ್ತಿದ್ದ ವಿಚಾರ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಅಲ್ಲಿ ಮತ್ತೊಬ್ಬ ಯುವಕ ಕೂಡ ವ್ಹೀಲಿಂಗ್ ಮಾಡುತ್ತಿದ್ದುದನ್ನು ಗುರುತಿಸಿ ಎರಡೂ ಬೈಕ್‌ಗಳನ್ನು ವಶಪಡಿಸಿಕೊಂಡರು. ವೈರಲ್ ವಿಡಿಯೋ ವರದಿ ಇಲ್ಲಿದೆ.

ಹುಬ್ಬಳ್ಳಿ ಧಾರವಾಡದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವತಿ ಮತ್ತು ಯುವಕ. ಪೊಲೀಸ್ ಕಾರ್ಯಾಚರಣೆಯಲ್ಲಿ ಎರಡು ಬೈಕ್ ವಶ.
ಹುಬ್ಬಳ್ಳಿ ಧಾರವಾಡದಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಯುವತಿ ಮತ್ತು ಯುವಕ. ಪೊಲೀಸ್ ಕಾರ್ಯಾಚರಣೆಯಲ್ಲಿ ಎರಡು ಬೈಕ್ ವಶ.

ಧಾರವಾಡ: ಬೆಂಗಳೂರಿನಂತಹ ಮಹಾನಗರದಲ್ಲಿ ಪುಂಡು ಪೋಕರಿಗಳು ವ್ಹೀಲಿಂಗ್ ಮಾಡುವುದು, ಅದರಿಂದ ರಸ್ತೆಯಲ್ಲಿ ಸಂಚರಿಸುವವರಿಗೆ ತೊಂದರೆ ಆಗುತ್ತಿರುವುದು ಪದೇಪದೆ ಗಮನಸೆಳೆಯುತ್ತಿರುವಾಗಲೇ ಧಾರಾವಾಡದಿಂದ ಬಂದ ಸುದ್ದಿ ಗಮನಸೆಳೆದಿದೆ.

ಹುಬ್ಬಳ್ಳಿ ಧಾರವಾಡ ಪೊಲೀಸರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಯುವತಿ, ಯುವಕ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ದೃಶ್ಯವಿದೆ. ಅದಾಗಿ ಎರಡು ಕೆಟಿಎಂ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡ ದೃಶ್ಯವಿದೆ.

ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವತಿಯ ವಿಡಿಯೋ

ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಯುವತಿ ಮತ್ತು ಯುವಕ ವಿದ್ಯಾರ್ಥಿಗಳು ಎಂದು ತಿಳಿದುಬಂದಿದ್ದು, ಅವರ ವಿರುದ್ಧ ಸಂಚಾರಿ ಠಾಣಾ ಪೊಲೀಸರು ಕ್ರಮ ಜರುಗಿಸಿದ್ದಾರೆ.

ಪೊಲೀಸರು ಹಂಚಿಕೊಂಡಿರುವ ಮಾಹಿತ ಪ್ರಕಾರ, ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಸಂಚಾರಿ ಠಾಣಾ ಪೊಲೀಸರು ಕ್ರಮ ಜರುಗಿಸಿ 2 ಬೈಕ್‌ಗಳನ್ನು ಶನಿವಾರ ವಶಪಡಿಸಿಕೊಂಡಿದ್ದಾರೆ.

ಧಾರವಾಡ ಸಚ್ಚಿದಾನಂದ ಹಾಗೂ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಕೋಮಲ್ ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ಈ ಕುರಿತು ಮಾಹಿತಿ ಬಂದ ಕೂಡಲೇ ಕಾರ್ಯಾಚರಣೆ ನಡೆಸಿದ ಸಂಚಾರಿ ಪೊಲೀಸರು ಎರಡೂ ಬೈಕ್‌ಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ವೇಳೆ, ಅಪ್ರಾಪ್ತ ಮಕ್ಕಳಿಗೆ ವಾಹನ ಚಲಾಯಿಸಲು ವಾಹನ ಕೊಟ್ಟವರಿಗೆ ನ್ಯಾಯಾಲಯದಿಂದ ದಂಡ ವಿಧಿಸಲಾಗಿದೆ. ಅಪ್ರಾಪ್ತರು ವಾಹನ ಚಲಾಯಿಸದಂತೆ, ಅವರನ್ನು ಪ್ರೊತ್ಸಾಹಿಸದಂತೆ ಪೋಷಕರು ಜಾಗ್ರತೆ ವಹಿಸುವುದು ಸೂಕ್ತ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕಾರ್ಯಾಚರಣೆ

ಪೊಲೀಸ್ ಕಮಿಷನ್‌ರೇಟ್‌ನಿಂದ ಶನಿವಾರ ಧಾರವಾಡ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸ್ ಏರಿಯಾ ಡಾಮಿನೇಷನ್ ಕ್ರಮ ಕೈಗೊಳ್ಳಲಾಯಿತು.

ಠಾಣಾ ವ್ಯಾಪ್ತಿಯಲ್ಲಿನ 25 ರೌಡಿಶೀಟರ್‌ಗಳು, 15 ಎಒಬಿಗಳು, ಓಸಿ ಮಟ್ಕಾ ಪ್ರಕರಣದ 15, ಜೂಜಾಟ ಪ್ರಕರಣದ 26, ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ 10 ಜನ ಆರೋಪಿಗಳು, ಕೋಟ್ಟಾ ಕಾಯ್ದೆಯಡಿ 30 ಜನ, ಸಂಚಾರ ನಿಯಮ ಉಲ್ಲಂಘಿಸಿದ 20 ಜನ, ಸಾಮಾಜಿಕ ಜಾಲತಾಣಗಳಲ್ಲಿ ಭಯವುಂಟು ಮಾಡುವ ರೀತಿಯಲ್ಲಿ ರೀಲ್ಸ್ ಮಾಡುತ್ತಿದ್ದ 11 ಜನರು ಸೇರಿದಂತೆ ಒಟ್ಟು 152 ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ಸಿಇಎನ್ ಪೊಲೀಸ್ ಠಾಣೆಯ ಎಸಿಪಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Whats_app_banner