ಹುಬ್ಬಳ್ಳಿ: 9 ವರ್ಷದ ಬಾಲಕಿ ಮೇಲೆ ಅನುಚಿತ ವರ್ತನೆ; ಹೆಡ್ ಕಾನ್​ಸ್ಟೇಬಲ್ ವಿರುದ್ಧ ದಾಖಲಾಯ್ತು ಪೋಕ್ಸೋ ಪ್ರಕರಣ
ಕನ್ನಡ ಸುದ್ದಿ  /  ಕರ್ನಾಟಕ  /  ಹುಬ್ಬಳ್ಳಿ: 9 ವರ್ಷದ ಬಾಲಕಿ ಮೇಲೆ ಅನುಚಿತ ವರ್ತನೆ; ಹೆಡ್ ಕಾನ್​ಸ್ಟೇಬಲ್ ವಿರುದ್ಧ ದಾಖಲಾಯ್ತು ಪೋಕ್ಸೋ ಪ್ರಕರಣ

ಹುಬ್ಬಳ್ಳಿ: 9 ವರ್ಷದ ಬಾಲಕಿ ಮೇಲೆ ಅನುಚಿತ ವರ್ತನೆ; ಹೆಡ್ ಕಾನ್​ಸ್ಟೇಬಲ್ ವಿರುದ್ಧ ದಾಖಲಾಯ್ತು ಪೋಕ್ಸೋ ಪ್ರಕರಣ

POCSO case: 9 ವರ್ಷದ ಬಾಲಕಿ ಮೇಲೆ ಅನುಚಿತ ವರ್ತನೆ ತೋರಿದ ಹೆಡ್ ಕಾನ್​ಸ್ಟೇಬಲ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಘಟನೆ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

9 ವರ್ಷದ ಬಾಲಕಿ ಮೇಲೆ ಅನುಚಿತ ವರ್ತನೆ; ಹೆಡ್ ಕಾನ್​ಸ್ಟೇಬಲ್ ವಿರುದ್ಧ ದಾಖಲಾಯ್ತು ಪೋಕ್ಸೋ ಪ್ರಕರಣ
9 ವರ್ಷದ ಬಾಲಕಿ ಮೇಲೆ ಅನುಚಿತ ವರ್ತನೆ; ಹೆಡ್ ಕಾನ್​ಸ್ಟೇಬಲ್ ವಿರುದ್ಧ ದಾಖಲಾಯ್ತು ಪೋಕ್ಸೋ ಪ್ರಕರಣ

ಹುಬ್ಬಳ್ಳಿ: ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ಹೆಡ್ ಕಾನ್​ಸ್ಟೇಬಲ್​ವೊಬ್ಬರು ಅನುಚಿತ ವರ್ತನೆ ತೋರಿರುವ ಘಟನೆ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಶಬರಿ ನಗರದ ಎಂಎ ಖಾದಿರ್​ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. ನವೆಂಬರ್ 5ರ ಭಾನುವಾರ ಮಧ್ಯಾಹ್ನ 9 ವರ್ಷದ ಬಾಲಕಿ ಪುಸುಲಾಯಿಸಿ ಮನೆಗೆ ಕರೆಸಿಕೊಂಡಿದ್ದ. ಮೂವರು ಮಕ್ಕಳ ತಂದೆ ಎಂಬುದನ್ನು ಮರೆತ ಹುಬ್ಬಳ್ಳಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್​​ಸ್ಟೇಬಲ್ ಖಾದೀರ್​ ಅನುಚಿತ ವರ್ತನೆ ತೋರಿದ್ದ.

ಇದೀಗ ಅನುಚಿತ ವರ್ತನೆ ತೋರಿರುವ ಆರೋಪಿ ಕಾನ್​ಸ್ಟೇಬಲ್​ಗೆ ಸ್ಥಳೀಯರು ಧರ್ಮಧೇಟು ನೀಡಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಯನ್ನು ಕೇಶ್ವಾಪುರ ಪೊಲೀಸರಿಗೆ ಒಪ್ಪಿಸಿ ಪ್ರಕರಣವನ್ನು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾತನಾಡಿ, ಇಂದು ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊರ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದ್ದಾರೆ.

ಸ್ವಿಮ್ಸ್ ಕಾರ್ಮಿಕರಿಂದ ಧರಣಿ ಆರಂಭ

ಹುಬ್ಬಳ್ಳಿ: ಕಾನೂನು ಬಾಹಿರ ವರ್ಗಾವಣೆ ಖಂಡಿಸಿ ನಗರದ ಗೋಕುಲ ರಸ್ತೆಯಲ್ಲಿರುವ ಸ್ವಿಮ್ಸ್ ಟೆಕ್ನಾಲಜೀಸ್ ಪ್ರೈ.ಲಿ ಕಾರ್ಖಾನೆಯ ಎದುರು ಕಾರ್ಮಿಕರ ಇಂದಿನಿಂದ (ನ.4) ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಕಾರ್ಖಾನೆಯಲ್ಲಿ 350ಕ್ಕೂ ಅಧಿಕ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ 170 ಮಂದಿಯಷ್ಟೆ ಖಾಯಂ ಆಗಿದ್ದಾರೆ. 3 ವರ್ಷಗಳ ಹಿಂದೆ ಗುಜರಾತ್ ಮೂಲದ ಮಾಲೀಕರು ಈ ಕಂಪನಿ ಖರೀದಿಸಿದರು. ಆ ಬಳಿಕ ಸ್ಥಳೀಯ ಕಾರ್ಮಿಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ಜನವರಿ 13 ರಂದು 41 ಜನ ಕಾರ್ಮಿಕರನ್ನು ಗುಜರಾತ್​ಗೆ​ ದಿಢೀರ್ ವರ್ಗಾವಣೆ ಮಾಡಿದ್ದರು. ಜೊತೆಗೆ 12 ಜನ ಕಾರ್ಮಿಕರ ಅಮಾನತು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ.

ಜನರ ದಿಕ್ಕು ತಪ್ಪಿಸಲು ಬಿಜೆಪಿ ಹೋರಾಟ

ಹುಬ್ಬಳ್ಳಿ: ವಕ್ಫ್ ವಿಚಾರವಾಗಿ ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಆದರೆ ಬಿಜೆಪಿಯವರು ರಾಜಕಾರಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇವರ ಕಾಲದಲ್ಲಿ ನೋಟಿಸ್ ನೀಡಿರುವ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಪರ ಪ್ರಚಾರಕ್ಕೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಯವರು ಯಾವಾಗಲೂ ಸಮಸ್ಯೆ ಮೇಲೆ ಹೋರಾಟ ಮಾಡುವುದಿಲ್ಲ. ಇಡೀ ಪಕ್ಷ ಸುಳ್ಳು ಆರೋಪ ಮಾಡಿ ಜನರ ದಿಕ್ಕು ತಪ್ಪಿಸಿ ಹೋರಾಟ ಮಾಡುವುದೇ ಇವರ ಕೆಲಸ ಎಂದರು.

ನಮ್ಮ ಸರ್ಕಾರವು ರೈತರ ಪರ ಇದೆ. ನೋಟಿಸ್ ಕೊಟ್ಟಿದ್ದರೆ ವಾಪಸ್ ಪಡೆಯಬೇಕು, ದಾಖಲಾತಿಯಲ್ಲಿ ತಿದ್ದುಪಡಿಯಾಗಿದ್ದರೆ ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲ್ಲ ಎಂದ ಅವರು, ಶಿಗ್ಗಾಂವಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಈ ಬಾರಿ ಮೂರು ದಿನ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತೇನೆ. ಈ ಕ್ಷೇತ್ರದಲ್ಲಿ ನಮ್ಮ ಪಕ್ಷಕ್ಕೆ ಶಕ್ತಿ ಇದೆ. ಕಳೆದ ಲೋಕ ಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಹೆಚ್ಚಿನ ಮತ ಪಡೆದಿದ್ದಾರೆ. ಹೀಗಾಗಿ, ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸವಿದೆ ಎಂದು ಸಿಎಂ ಹೇಳಿದರು.

Whats_app_banner