Hubli News Today: ಡ್ರಗ್ ಪೆಡ್ಲರ್‌ಗಳ ಬಂಧನ, ಟಿಪ್ಪರ್ ಗುದ್ದಿ ಬೈಕ್ ಸವಾರ ಸಾವು-hubli news drugs peddlers arrensted person died in tipper bike accident dmg ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Hubli News Today: ಡ್ರಗ್ ಪೆಡ್ಲರ್‌ಗಳ ಬಂಧನ, ಟಿಪ್ಪರ್ ಗುದ್ದಿ ಬೈಕ್ ಸವಾರ ಸಾವು

Hubli News Today: ಡ್ರಗ್ ಪೆಡ್ಲರ್‌ಗಳ ಬಂಧನ, ಟಿಪ್ಪರ್ ಗುದ್ದಿ ಬೈಕ್ ಸವಾರ ಸಾವು

ಅಣ್ಣಿಗೇರಿ ತಾಲ್ಲೂಕಿನ ನಲವಡಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಉಮಚಗಿ ರಸ್ತೆ ಕಡೆಯಿಂದ ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿ 67 ದಾಟುವಾಗ ಗದಗ ಕಡೆಯಿಂದ ಬಂದ ಟಾಟಾ ಟಿಪ್ಪರ್ ವಾಹನ ಡಿಕ್ಕಿ ಹೊಡೆಯಿತು.

ಹುಬ್ಬಳ್ಳಿ ಅಪರಾಧ ಸುದ್ದಿ
ಹುಬ್ಬಳ್ಳಿ ಅಪರಾಧ ಸುದ್ದಿ

ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ತಿಮ್ಮಸಾಗರ ರಸ್ತೆಯ ಪಾಳು ಬಿದ್ದ ಕಟ್ಟಡವೊಂದರಲ್ಲಿ ಅಫೀಮ್ ಮಾರಾಟ ಮಾಡುತ್ತಿದ್ದ ಆರೋಪಿಗಳ ಮೇಲೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಸುರೇಶ ಯಳ್ಳೂರ ನೇತೃತ್ವದ ತಂಡವು ದಾಳಿ ಮಾಡಿ ಮೂವರನ್ನು ಬಂಧಿಸಿದೆ. ರಾಜಸ್ಥಾನ ಮೂಲದ ವಿಕಾಸ್ ಬಿಷ್ಣೊಯ್, ಜೈಸಾರಾಮ್ ಚೌದರಿ, ರಾಮರಾಮ ಬಿಷ್ಣೊಯ್ ಎಂಬ ಮೂವರು ಡ್ರಗ್ಸ್ ಪೆಡ್ಲರ್‌ಗಳನ್ನು ವಶಕ್ಕೆ ಪಡೆದು ಆರೋಪಿಗಳಿಂದ ರೂ 23,500 ಮೌಲ್ಯದ 46 ಗ್ರಾಂ ಅಫೀಮು, ಒಂದು ದ್ವಿಚಕ್ರ ವಾಹನ, ಮೂರು ಮೊಬೈಲ್ ಗಳು, ಸೇರಿದಂತೆ ಒಟ್ಟು ರೂ 1,29,500 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಬೈಕ್-ಟಿಪ್ಪರ್ ಅಪಘಾತ: ಬೈಕ್ ಸವಾರ ಸಾವು

ಅಣ್ಣಿಗೇರಿ ತಾಲ್ಲೂಕಿನ ನಲವಡಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಉಮಚಗಿ ರಸ್ತೆ ಕಡೆಯಿಂದ ಗ್ರಾಮಕ್ಕೆ ರಾಷ್ಟ್ರೀಯ ಹೆದ್ದಾರಿ 67 ದಾಟುವಾಗ ಗದಗ ಕಡೆಯಿಂದ ಬಂದ ಟಾಟಾ ಟಿಪ್ಪರ್ ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಗ್ರಾಮದ ಬಸಪ್ಪ ರುದ್ರಪ್ಪ ಹಡಪದ (54) ಮೃತರು. ಗ್ರಾಮದಲ್ಲಿ ಹೇರ್ ಕಟಿಂಗ್ ಅಂಗಡಿ ನಡೆಸುತ್ತಿದ್ದರು.

ಶೀಘ್ರ ಸಿದ್ದರಾಮಯ್ಯ ರಾಜೀನಾಮೆ: ವಿಜಯೇಂದ್ರ

ಹುಬ್ಬಳ್ಳಿ: ವಾಲ್ಮೀಕಿ ಮತ್ತು ಮೂಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯ ಅವರ ಸಮಾಜವಾದಿ ಮುಖವಾಡ ಕಳಚಿ ಬಿದ್ದಿದೆ, ಭ್ರಷ್ಟಾಚಾರದ ಕಳಂಕ ಮೆತ್ತಿದೆ. ಪರಿಣಾಮ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ಕೊಡುತ್ತಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಮಾತುಕತೆಯ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಕೇವಲ 14 ನಿವೇಶನಕ್ಕೆ ಸೀಮಿತವಾದುದಲ್ಲ. ಅದು ರೂ 5000 ಕೋಟಿಗೂ ಮೀರಿದ ಸಾವಿರಾರು ನಿವೇಶನಗಳ ಬಹುದೊಡ್ಡ ಹಗರಣ ಎಂದರು. ಸಿಎಂ ತವರು ಜಿಲ್ಲೆಯಲ್ಲಿ ಬಡವರನ್ನು ತಲುಪಬೇಕಿದ್ಧ 5000 ಕೋಟಿ ಬೆಲೆ ಬಾಳುವ ಸಾವಿರಾರು ಮೂಡಾ ನಿವೇಶನಗಳು ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಕಾಂಗ್ರೆಸ್ ನಾಯಕರ ಪಾಲಾಗಿವೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದಲ್ಲಿ ಎಸ್‌ಐಟಿ ನಾಗೇಂದ್ರ ಮತ್ತು ಬಸವರಾಜ ದದ್ದಲ್ ಮೇಲೆ ಚಾರ್ಜ್‌ಶೀಟ್ ಹಾಕಿದರೂ ಸಿಎಂ ಮತ್ತು ಡಿಸಿಎಂ ಅವರನ್ನು ರಕ್ಷಿಸಲು ಯತ್ನಿಸಿದರು. ಹಾಗಾಗಿ ವಾಲ್ಮೀಕಿ ಮತ್ತು ಮೂಡಾ ಹಗರಣ ಎರಡರಲ್ಲೂ ಎಸ್ ಐಟಿ ತನಿಖೆಯಿಂದ ನ್ಯಾಯ ನಿರೀಕ್ಷೆ ಅಸಾಧ್ಯವೆಂದು ವಿಜಯೇಂದ್ರ ಹೇಳಿದರು.

ಸಿಎಂ ನೇತೃತ್ವದ ಏಕ ಸದಸ್ಯ ತನಿಖಾ ಆಯೋಗದಿಂದ ತನಿಖೆ ಸಾಧ್ಯವಿಲ್ಲ. ಹಾಗಾಗಿ ಮುಖ್ಯಮಂತ್ರಿ ಇದನ್ನು ಸಿಬಿಐ ತನಿಖೆಗೇ ವಹಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಇನ್ನಿತರರು ಇದ್ದರು.