ಕನ್ನಡ ಸುದ್ದಿ  /  ಕರ್ನಾಟಕ  /  Neha Hiremath: ಹುಬ್ಬಳ್ಳಿ ಅಂಜುಮನ್‌ ಸಂಸ್ಥೆ ಕೊಠಡಿಗೆ ನೇಹಾ ಹೆಸರು, ಸೋಮವಾರ ವಹಿವಾಟು ಬಂದ್‌, ಮೆರವಣಿಗೆ

Neha Hiremath: ಹುಬ್ಬಳ್ಳಿ ಅಂಜುಮನ್‌ ಸಂಸ್ಥೆ ಕೊಠಡಿಗೆ ನೇಹಾ ಹೆಸರು, ಸೋಮವಾರ ವಹಿವಾಟು ಬಂದ್‌, ಮೆರವಣಿಗೆ

ನೇಹಾ ಹಿರೇಮಠ್‌ ಅವರ ಹತ್ಯೆಯನ್ನು ಖಂಡಿಸಿರುವ ಹುಬ್ಬಳ್ಳಿ ಮುಸ್ಲಿಂ ಸಮುದಾಯ ಸೋಮವಾರ ಮೌನ ಮೆರವಣಿಗೆ ಹಮ್ಮಿಕೊಂಡಿದೆ.

ನೇಹಾ ಹಿರೇಮಠ ಹತ್ಯೆಯನ್ನು ಹುಬ್ಬಳ್ಳಿ ಮುಸ್ಲೀಂ ಸಮುದಾಯ ಖಂಡಿಸಿದೆ.
ನೇಹಾ ಹಿರೇಮಠ ಹತ್ಯೆಯನ್ನು ಹುಬ್ಬಳ್ಳಿ ಮುಸ್ಲೀಂ ಸಮುದಾಯ ಖಂಡಿಸಿದೆ.

ಧಾರವಾಡ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಕೊಲೆ ಪ್ರಕರಣವನ್ನು ಉಗ್ರವಾಗಿ ಖಂಡಿಸಿರುವ ಹುಬ್ಬಳ್ಳಿ ಧಾರವಾಡದ ಮುಸ್ಲೀಂ ಸಮುದಾಯ, ಕೊಲೆ ಆರೋಪಿ ಫಯಾಜ್‌ಗ ಕಠಿಣ ಶಿಕ್ಷಣ ನೀಡಬೇಕು ಎಂದು ಆಗ್ರಹಿಸಿ ಏ. 22ರ ಸೋಮವಾರ ಹುಬ್ಬಳ್ಳಿಯಲ್ಲಿ ಮೌನ ಮೆರವಣಿಗೆ ನಡೆಸಲು ಮುಂದಾಗಿದ್ದಾರೆ. ಅಲ್ಲದೇ ಮಧ್ಯಾಹ್ನದವರೆಗೂ ಅಂಗಡಿ ಮುಂಗಟ್ಟನ್ನು ಮುಚ್ಚಿ ನೈತಿಕವಾಗಿ ನೇಹಾ ಹಿರೇಮಠ ಕುಟುಂಬಕ್ಕ ಬೆಂಬಲ ನೀಡುವ ನಿರ್ಧಾರಕ್ಕೂ ಬಂದಿದ್ದಾರೆ. ಇದರೊಟ್ಟಿಗೆ ಕಾಲೇಜು ಅಂಗಳದಲ್ಲಿ ಕೊಲೆಯಾದ ನೇಹಾ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯಲ್ಲಿರುವ ಅಂಜುಮನ್‌ ಶಿಕ್ಷಣ ಸಂಸ್ಥೆಯ ಕೊಠಡಿ ಇಲ್ಲವೇ ಬ್ಲಾಕ್‌ ಒಂದಕ್ಕೆ ಇಡುವ ಕುರಿತಾಗಿಯೂ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮುಂದಿನ ಶೈಕ್ಷಣಿಕ ವರ್ಷ ಆರಂಭ ಆಗುವ ನಡುವೆಯೇ ಇದು ಜಾರಿಯಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಪ್ರಕರಣ ಸಮುದಾಯಗಳ ನಡುವಿನ ದ್ವೇಷದ ಕಿಡಿಯಾಗಿ ಬದಲಾವಣೆಯಾಗುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಹುಬ್ಬಳ್ಳಿ ಧಾರವಾಡದ ಕೆಲವು ಮುಸ್ಲೀಂ ಸಮುದಾಯದ ನಾಯಕರು ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ನೇಹಾ ಕೊಲೆ ಪ್ರಕರಣ ಖಂಡಿಸುವ ಜತೆಗೆ ಆರೋಪಿ ಫಯಾಜ್‌ಗ ಕಠಿಣ ಶಿಕ್ಷೆ ಆಗಬೇಕು ಎಂದು ಸೋಮವಾರ ಮೌನ ಮೆರವಣಿಗೆ ನಡೆಸಲಿದ್ದಾರೆ. ಬೆಳಿಗ್ಗೆ 10 ಕ್ಕೆ ಹುಬ್ಬಳ್ಳಿಯಲ್ಲಿ ಮೆರವಣಿಗೆ ಆರಂಭಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಿದ್ದಾರೆ ಎಂದು ಅಂಜುಮನ್‌ ಶಿಕ್ಷಣ ಸಂಸ್ಥೆ ಅಧ್ಯಕ್ಷ ಇಸ್ಮಾಯಿಲ್‌ ತಮಟಗಾರ ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಮುಸ್ಲೀಂ ಸಮುದಾಯದವರು ಅಂಗಡಿ, ಮುಂಗಟ್ಟುಗಳನ್ನು ಮುಚ್ಚಬೇಕು. ಇದು ಒತ್ತಡದ ನಿರ್ಧಾರವಲ್ಲ. ಬದಲಿಗೆ ಸಮುದಾಯದಲ್ಲಿ ಸೌಹಾರ್ದತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ನೋವು ಅನುಭವಿಸಿರುವ ಕುಟುಂಬಕ್ಕೆ ಬೆಂಬಲ ನೀಡುವ ಕ್ರಮ. ಅಂಜಮನ್‌ ಸಂಸ್ಥೆಯಿಂದ ಜುಬಿಲಿ ವೃತ್ತ, ಕೋರ್ಟ್‌ ವೃತ್ತ ದಾಟಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ನೇಹಾ ಕೊಲೆ ನಿಜಕ್ಕೂ ಅಮಾನೀಯವೇ. ಇದನ್ನು ಯಾರೂ ಕೂಡ ಒಪ್ಪುವುದಿಲ್ಲ. ಅದನ್ನು ಎಲ್ಲರೂ ಒಟ್ಟಾಗಿ ಖಂಡಿಸಬೇಕು. ನಮ್ಮ ಸಂಸ್ಥೆಯೂ ಈ ಘಟನೆಯನ್ನು ಖಂಡಿಸಲಿದೆ. ಇಂತಹ ಪ್ರಕರಣದಲ್ಲಿ ಆರೋಪಿಗಳಿಗೆ ತ್ವರಿತವಾಗಿ ಶಿಕ್ಷೆಯಾಗುವುದು ಒಳ್ಳೆಯದು ಎಂದು ಹೇಳಿದರು.

ಅಂಜುಮನ್‌ ಶಿಕ್ಷಣ ಸಂಸ್ಥೆಯಲ್ಲೂ ನೇಹಾ ಹಿರೇಮಠ ಅವರ ಹೆಸರನ್ನು ಶಾಶ್ವತಗೊಳಿಸಲು ಕೊಠಡಿಗೆ ಇಲ್ಲಿಗೆ ಬ್ಲಾಕ್‌ ಒಂದಕ್ಕೆ ಹೆಸರು ಇಡುವ ಚರ್ಚೆ ನಡೆದಿದೆ. ಆದಷ್ಟು ಬೇಗನೇ ಈ ಕುರಿತು ನಿರ್ಧಾರ ಕೈಗೊಂಡು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

IPL_Entry_Point

ವಿಭಾಗ