Indian Railways: ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ಜೂನ್‌ವರೆಗೂ ರದ್ದು, ಡೋರನಹಳ್ಳಿಯಲ್ಲಿ ತಾಳಗುಪ್ಪ ರೈಲು ನಿಲುಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ಜೂನ್‌ವರೆಗೂ ರದ್ದು, ಡೋರನಹಳ್ಳಿಯಲ್ಲಿ ತಾಳಗುಪ್ಪ ರೈಲು ನಿಲುಗಡೆ

Indian Railways: ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ಜೂನ್‌ವರೆಗೂ ರದ್ದು, ಡೋರನಹಳ್ಳಿಯಲ್ಲಿ ತಾಳಗುಪ್ಪ ರೈಲು ನಿಲುಗಡೆ

Hubli News ಭಾರತೀಯ ರೈಲ್ವೆ( Indian Railways) ನೈರುತ್ಯ ವಲಯ(South Western Railways)ವು ರೈಲುಗಳ ರದ್ದು, ನಿಲುಗಡೆ ಕುರಿತು ಪ್ರಕಟಣೆ ನೀಡಿದೆ.

ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯವು ರೈಲು ನಿಲುಗಡೆ ಮಾಹಿತಿ ನೀಡಿದೆ.
ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯವು ರೈಲು ನಿಲುಗಡೆ ಮಾಹಿತಿ ನೀಡಿದೆ.

ಬೆಂಗಳೂರು: ಭಾರತೀಯ ರೈಲ್ವೆಯ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ವಲಯವು ಕೆಲವು ರೈಲುಗಳ ಕುರಿತು ಮಾಹಿತಿ ಬಿಡುಗಡೆ ಮಾಡಿದೆ. ಹುಬ್ಬಳ್ಳಿ ಹಾಗೂ ವಿಜಯವಾಡ ನಡುವೆ ಇದ್ದ ಡೈಲಿ ಎಕ್ಸ್‌ ಪ್ರೆಸ್‌ ರೈಲನ್ನು ಕೆಲವು ಕಾರಣಗಳಿಂದ ರದ್ದುಪಡಿಸಲಾಗಿತ್ತು.ಈಗ ರದ್ದುಪಡಿಸಿರುವ ಆದೇಶವನ್ನು ಇನ್ನೊಂದು ತಿಂಗಳು ವಿಸ್ತರಿಸಲಾಗಿದ್ದು, ಜೂನ್‌ ಅಂತ್ಯದವರೆಗೂ ಹುಬ್ಬಳ್ಳಿ ವಿಜಯವಾಡ ಎಕ್ಸ್‌ ಪ್ರೆಸ್‌ ರೈಲು ಸಂಚಾರ ಇರುವುದಿಲ್ಲ. ಅದೇ ರೀತಿ ವಿಜಯವಾಡ ಹುಬ್ಬಳ್ಳಿ ರೈಲು ಸಂಚಾರ ಕೂಡ ರದ್ದಾಗಿದೆ. ಇದಲ್ಲದೇ ಮೈಸೂರು ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾದ ಡೋರನಹಳ್ಳಿ ಸಂತ ಆಂಥೋಣಿ ಜಾತ್ರೆ ಅಂಗವಾಗಿ ಮೈಸೂರು ತಾಳಗುಪ್ಪ ರೈಲು ನಿಲುಗಡೆಗೂ ಅವಕಾಶ ಮಾಡಿಕೊಡಲಾಗಿದೆ ಎಂದು ನೈರುತ್ಯ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.

ಡೋರನಹಳ್ಳಿ ನಿಲ್ದಾಣದಲ್ಲಿ ರೈಲುಗಳ ತಾತ್ಕಾಲಿಕ ನಿಲುಗಡೆ

ಸಂತ ಅಂಥೋಣಿ ಉತ್ಸವದ ಅಂಗವಾಗಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮೈಸೂರು-ತಾಳಗುಪ್ಪ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಎಕ್ಸ್ ಪ್ರೆಸ್ (16222/16221) ರೈಲುಗಳನ್ನು ಮೈಸೂರು ಜಿಲ್ಲೆ ಕೆಆರ್‌ನಗರ ತಾಲ್ಲೂಕಿನ ಡೋರನಹಳ್ಳಿ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆ ಮಾಡಲು ನೈರುತ್ಯ ರೈಲ್ವೆಯು ನಿರ್ಧರಿಸಿದೆ. ಜೂನ್ 11 ರಿಂದ 14, 2024 ರವರೆಗೆ ಈ ಸೌಲಭ್ಯ ಒದಗಿಸಲಾಗಿದೆ.

1. ರೈಲು ಸಂಖ್ಯೆ 16222 ಮೈಸೂರು-ತಾಳಗುಪ್ಪ ಎಕ್ಸ್ ಪ್ರೆಸ್ ರೈಲು ಡೋರನಹಳ್ಳಿಗೆ ಮಧ್ಯಾಹ್ನ 14.35ಕ್ಕೆ ಬಂದು, 14.36 ಗಂಟೆಗೆ ಹೊರಡಲಿದೆ.

2. ರೈಲು ಸಂಖ್ಯೆ 16221 ತಾಳಗುಪ್ಪ-ಮೈಸೂರು ಎಕ್ಸ್ ಪ್ರೆಸ್ ರೈಲು ಡೋರನಹಳ್ಳಿ ನಿಲ್ದಾಣಕ್ಕೆ ಮಧ್ಯಾಹ್ನ 14.20ಕ್ಕೆ ಬಂದು, 14.21 ಗಂಟೆಗೆ ಹೊರಡಲಿದೆ.

ಪ್ರಯಾಣಿಕರು ಈ ರೈಲುಗಳ ತಾತ್ಕಾಲಿಕ ನಿಲುಗಡೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಲಾಗಿದೆ.

ರೈಲುಗಳ ಸಂಚಾರ ತಾತ್ಕಾಲಿಕ ರದ್ದು ಮುಂದುವರಿಕೆ

ಗುಂಟೂರು ವಿಭಾಗದಲ್ಲಿ ನಡೆಯುತ್ತಿರುವ ಸುರಕ್ಷತಾ ಸಂಬಂಧಿತ ಕಾಮಗಾರಿ ಸಲುವಾಗಿ ಹುಬ್ಬಳ್ಳಿ ವಿಜಯವಾಡ ರೈಲುಗಳ ರದ್ದತಿಯನ್ನು ಮುಂದುವರಿಸಲಾಗುತ್ತಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.

1.ರೈಲು ಸಂಖ್ಯೆ 17329 ಎಸ್ಎಸ್ಎಸ್ ಹುಬ್ಬಳ್ಳಿ-ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮತ್ತೆ ಜೂನ್ 30, 2024 ರವರೆಗೆ ರದ್ದು ಮಾಡಲಾಗುತ್ತಿದೆ. ಮೊದಲು ಮೇ 31, 2024 ರವರೆಗೆ ರದ್ದುಗೊಳಿಸಲಾಗುತ್ತಿದೆ ಎಂದು ಸೂಚಿಸಲಾಗಿತ್ತು.

2. ರೈಲು ಸಂಖ್ಯೆ 17330 ವಿಜಯವಾಡ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲನ್ನು ಮತ್ತೆ ಜುಲೈ 1, 2024 ರವರೆಗೆ ರದ್ದು ಮಾಡಲಾಗುತ್ತಿದೆ. ಮೊದಲು ಜೂನ್ 1, 2024 ರವರೆಗೆ ರದ್ದುಗೊಳಿಸಲಾಗುತ್ತಿದೆ.

ರೈಲುಗಳ ಸಂಬಂಧಿತ ಮಾಹಿತಿಗೆ 139 ಕ್ಕೆ ಕರೆ ಮಾಡಬಹುದು. ಇಲ್ಲವೇ www.enquiry.indianrail.gov.in. ಮೂಲಕ ವೂ ವಿವರ ಪಡೆಯಬಹುದಾಗಿ ಎಂದು ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.


(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner