Indian Railways:ಬೆಳಗಾವಿ-ಭದ್ರಾಚಲಂ, ಅರಸಿಕೆರೆ-ಹೈದ್ರಾಬಾದ್‌ ರೈಲು ರದ್ದು, ವಂದೇಭಾರತ್‌ ರೈಲು ಮಾರ್ಗ ಬದಲಾವಣೆ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways:ಬೆಳಗಾವಿ-ಭದ್ರಾಚಲಂ, ಅರಸಿಕೆರೆ-ಹೈದ್ರಾಬಾದ್‌ ರೈಲು ರದ್ದು, ವಂದೇಭಾರತ್‌ ರೈಲು ಮಾರ್ಗ ಬದಲಾವಣೆ

Indian Railways:ಬೆಳಗಾವಿ-ಭದ್ರಾಚಲಂ, ಅರಸಿಕೆರೆ-ಹೈದ್ರಾಬಾದ್‌ ರೈಲು ರದ್ದು, ವಂದೇಭಾರತ್‌ ರೈಲು ಮಾರ್ಗ ಬದಲಾವಣೆ

ರೈಲು ಮಾರ್ಗದ ಸುರಕ್ಷತೆ ಹಾಗೂ ಕಾಮಗಾರಿ ಕಾರಣಗಳಿಂದ ಕೆಲವು ರೈಲು ಸಂಚಾರ ರದ್ದಾಗಿದ್ದರೆ, ಇನ್ನು ಕೆಲವು ರೈಲುಗಳ ಮಾರ್ಗವನ್ನು ಭಾರತೀಯ ರೈಲ್ವೆ( Indian Railways) ಬದಲಾಯಿಸಿದೆ. ಅದರ ವಿವರ ಇಲ್ಲಿದೆ.

ಭಾರತೀಯ ರೈಲ್ವೆಯು ಕೆಲವು ರೈಲು ರದ್ದುಪಡಿಸಿದರೆ, ಇನ್ನಷ್ಟು ರೈಲು ಮಾರ್ಗ ಬದಲಿಸಿದೆ.
ಭಾರತೀಯ ರೈಲ್ವೆಯು ಕೆಲವು ರೈಲು ರದ್ದುಪಡಿಸಿದರೆ, ಇನ್ನಷ್ಟು ರೈಲು ಮಾರ್ಗ ಬದಲಿಸಿದೆ.

ಬೆಂಗಳೂರು: ರೈಲ್ವೆ ಸುರಕ್ಷತೆಗೆ ಸಂಬಂಧಿಸಿದ ಕೆಲಸಗಳ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಕೆಲವು ರೈಲುಗಳ ಸಂಚಾರವನ್ನು ರದ್ದು ಮಾಡಿದೆ. ಮುಂದಿನ ಆದೇಶ ಬರುವವರೆಗೂ ಬೆಳಗಾವಿ ಭದ್ರಾಚಲಂ, ಅರಸಿಕೆರೆ- ಹೈದ್ರಾಬಾದ್‌, ಅರಸಿಕೆರೆ- ಸಿಂಕದರಾಬಾದ್‌ ಸಹಿತ ಕೆಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ. ಇನ್ನು ಯಶವಂತಪುರದಿಂದ ಹೊರಡುವ ಕಲಬುರಗಿ ಹಾಗೂ ಕಾಚಿಗೂಡ ವಂದೇ ಭಾರತ್‌ ರೈಲುಗಳ ಮಾರ್ಗವನ್ನು ಕೆಲ ದಿನಗಳ ಮಟ್ಟಿಗೆ ಬದಲಾಯಿಸಲಾಗುತ್ತಿದೆ. ಈ ಸಂಬಂಧ ಬದಲಾವಣೆಗೆ ಸಂಬಂಧಿಸಿದ ಆದೇಶಗಳನ್ನು ನೈರುತ್ಯ ರೈಲ್ವೆ ಹೊರಡಿಸಿದೆ ಎಂದು ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಧಿಕಾರಿ ಡಾ.ಮಂಜುನಾಥ ಕನಮಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವ್ಯಾವ ರೈಲು ರದ್ದು

ರೈಲು ಗಾಡಿ ಸಂಖ್ಯೆ 07335 ಬೆಳಗಾವಿಯಿಂದ ದಕ್ಷಿಣ ಭಾರತದ ರಾಮಕ್ಷೇತ್ರ ತೆಲಂಗಾಣದ ಭದ್ರಾಚಲಂ ರಸ್ತೆ ವರೆಗಿನ ರೈಲು ಹಾಗೂ ಗಾಡಿ ಸಂಖ್ಯೆ 07336 ಭದ್ರಾಚಲಂ ರಸ್ತೆಯಿಂದ ಬೆಳಗಾವಿ ವರೆಗಿನ ರೈಲು ಸಂಚಾರ ರದ್ದುಪಡಿಸಲಾಗಿದೆ.

ಇದಲ್ಲದೇ ರೈಲು ಗಾಡಿ ಸಂಖ್ಯೆ07265 ಹೈದರಾಬಾದ್ - ಅರಸೀಕೆರೆ ರೈಲು ಮೇ 07ರಿಂದ ಹಾಗೂ ರೈಲು ಗಾಡಿ ಸಂಖ್ಯೆ07266 ಅರಸೀಕೆರೆ - ಹೈದರಾಬಾದ್ ಮೇ 08ರಿಂದ ರದ್ದಾಗಲಿವೆ.

ರೈಲು ಗಾಡಿ ಸಂಖ್ಯೆ07231 ಸಿಕಂದರಾಬಾದ್ - ಅರಸೀಕೆರೆ ರೈಲು ಮೇ 02ರಿಂದ ಹಾಗೂ ರೈಲು ಗಾಡಿ ಸಂಖ್ಯೆ 07232 ಅರಸೀಕೆರೆ - ಸಿಕಂದರಾಬಾದ್ ಮೇ3 ರಿಂದ ರದ್ದಾಗಲಿವೆ.

ಮಕ್ಕಾಜಿಪಲ್ಲಿ ಯಾರ್ಡ್‌ನಲ್ಲಿ ಕಟ್ ಮತ್ತು ಕವರ್ ವಿಧಾನದ ಮೂಲಕ ಕಲ್ಲಿನ ಚಪ್ಪಡಿ/ಪೈಪ್ ಸೇತುವೆಗಳನ್ನು ಬದಲಾಯಿಸುವ ಕಾರಣದಿಂದ ರೈಲು ಗಾಡಿ ಸಂಖ್ಯೆ 06595 ಕೆಎಸ್ಆರ್ ಬೆಂಗಳೂರು - ಧರ್ಮಾವರಂ ಮೆಮು ರೈಲು ಮೇ 06,ಮೇ 08, ಮೇ 10, ಮೇ12, ಮೇ14, ಮೇ 16, ಮೇ 18, ಮೇ 20 ಹಾಗೂ ಮೇ 22ರಂದು ರದ್ದುಗೊಳಿಸಲಾಗಿದೆ. ರೈಲು ಗಾಡಿ ಸಂಖ್ಯೆ 06596 ಧರ್ಮಾವರಂ - ಕೆಎಸ್‌ಆರ್ ಬೆಂಗಳೂರು ಕೂಡ ಇದೇ ದಿನಗಳಂದು ಸಂಚರಿಸುವುದಿಲ್ಲ.

ಪ್ರಮುಖ ರೈಲುಗಳ ತಿರುವು

  • ರೈಲು ಗಾಡಿ ಸಂಖ್ಯೆ16613 ರಾಜ್‌ಕೋಟ್ - ಕೊಯಮತ್ತೂರು ಎಕ್ಸ್‌ಪ್ರೆಸ್ ಮೇ 05 ಹಾಗೂ ಮೇ 19ರಂದು ಧರ್ಮವರಂ - ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ - ಪೆನುಕೊಂಡ - ಹಿಂದೂಪುರ ಮಾರ್ಗವಾಗಿ ಹಾಗೂ ರೈಲು ಗಾಡಿ ಸಂಖ್ಯೆ 12252 ಕೊರ್ಬಾ - ಯಶವಂತಪುರ ಎಕ್ಸ್‌ಪ್ರೆಸ್ ಮೇ05,ಮೇ 09 ಹಾಗೂ ಮೇ 19ರಂದು ಧರ್ಮಾವರಂ - ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ - ಪೆನುಕೊಂಡ - ಯಲಹಂಕ ಮಾರ್ಗವಾಘಿ ಸಂಚರಿಸಲಿದೆ.
  • ರೈಲು ಗಾಡಿ ಸಂಖ್ಯೆ 22231 ಕಲಬುರಗಿ-ಬೆಂಗಳೂರು ವಂದೇ ಭಾರತ್ ಎಕ್ಸ್ ಪ್ರೆಸ್‌ ಮೇ 06, ಮೇ 08, ಮೇ 12, ಮೇ14, ಮೇ 16, ಮೇ 18,ಮೇ 20 ಹಾಗೂ ಮೇ 22ರಂದು ಹಾಗೂ ರೈಲು ಗಾಡಿ ಸಂಖ್ಯೆ 20703 ಕಾಚೆಗುಡ-ಯಶವಂತಪುರ ವಂದೇ ಭಾರತ್ ಎಕ್ಸ್ ಪ್ರೆಸ್‌ ರೈಲಯ ಮೇ 06. ಮೇ 10, ಮೇ12, ಮೇ 14, ಮೇ 16, ಮೇ 18 ಮತ್ತು ಮೇ 20 ರಂದು ಧರ್ಮಾವರಂ - ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ - ಪೆನುಕೊಂಡ - ಯಶವಂತಪುರ ಮಾರ್ಗದಲ್ಲಿ ಸಂಚರಿಸಲಿದೆ.
  • ರೈಲು ಗಾಡಿ ಸಂಖ್ಯೆ 12976 ಜೈಪುರ - ಮೈಸೂರು ಎಕ್ಸ್‌ಪ್ರೆಸ್‌ ರೈಲು ಮೇ 06, ಮೇ 08 ಹಾಗೂ ಮೇ 20ರಂದು ಧರ್ಮಾವರಂ - ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ - ಪೆನುಕೊಂಡ - ಹಿಂದೂಪುರ ಮಾರ್ಗ,
  • ರೈಲು ಗಾಡಿ ಸಂಖ್ಯೆ 16614 ಕೊಯಮತ್ತೂರು - ರಾಜ್‌ಕೋಟ್ ಎಕ್ಸ್‌ಪ್ರೆಸ್. ಮೇ10ರಂದು ಹಿಂದೂಪುರ - ಪೆನುಕೊಂಡ - ಶ್ರೀ ಸತ್ಯಸಾಯಿ ಪ್ರಶಾಂತಿನಿಲಯ - ಧರ್ಮಾವರಂ ಮಾರ್ಗ,
  • ರೈಲು ಗಾಡಿ ಸಂಖ್ಯೆ 12194 ಜಬಲ್‌ಪುರ್-ಯಶವಂತಪುರ ಎಕ್ಸ್‌ಪ್ರೆಸ್. ಮೇ 11ರಂದು ಧರ್ಮಾವರಂ - ಶ್ರೀ ಸತ್ಯಸಾಯಿ ಪ್ರಶಾಂತಿನಿಲಯ - ಪೆನುಕೊಂಡ - ಹಿಂದೂಪುರ ಮಾರ್ಗ,
  • ರೈಲು ಗಾಡಿ ಸಂಖ್ಯೆ 00635 ಬೆಂಗಳೂರು-ಅಗ್ಥೋರಿ ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ಮೇ 16ರಂದು ಬೆಂಗಳೂರು - ಪೆನುಕೊಂಡ - ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ- ಧರ್ಮವರಂ ಮಾರ್ಗ
  • ರೈಲು ಗಾಡಿ ಸಂಖ್ಯೆ. 22684 ಲಕ್ನೋ ಯಶವಂತಪುರ-ಎಕ್ಸ್‌ಪ್ರೆಸ್‌ ಮೇ 16ರಂದು ಧರ್ಮಾವರಂ - ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ - ಪೆನುಕೊಂಡ - ಹಿಂದೂಪುರ ಮಾರ್ಗ
  • ರೈಲು ಗಾಡಿ ಸಂಖ್ಯೆ 19568 ಓಖಾ - ಟುಟಿಕೋರಿನ್ ಎಕ್ಸ್‌ಪ್ರೆಸ್ ಮೇ 17ರಂದು ಧರ್ಮಾವರಂ - ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ - ಪೆನುಕೊಂಡ - ಹಿಂದೂಪುರ ಮಾರ್ಗದಲ್ಲಿ ಸಂಚರಿಸಲಿದೆ.

Whats_app_banner