ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೀದರ್‌ನ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ, ಯಾವ ರೈಲು, ಎಲ್ಲಿಯವರೆಗೆ

Indian Railways: ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಬೀದರ್‌ನ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ, ಯಾವ ರೈಲು, ಎಲ್ಲಿಯವರೆಗೆ

ಭಾರತೀಯ ರೈಲ್ವೆ ಹುಬ್ಬಳ್ಳಿ ವಲಯವು ಬೇಸಿಗೆಯಲ್ಲಿ ಆರಂಭಿಸಿದ್ದ 24 ವಿಶೇಷ ರೈಲುಗಳ ಸೇವೆಯನ್ನು ಮುಂದುವರೆಸಿದೆ.

ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯವು ಕೆಲವು ವಿಶೇಷ ರೈಲುಗಳ ಸೇವೆ ಮುಂದುವರಿಸಿದೆ.
ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯವು ಕೆಲವು ವಿಶೇಷ ರೈಲುಗಳ ಸೇವೆ ಮುಂದುವರಿಸಿದೆ.

ಹುಬ್ಬಳ್ಳಿ: ಕರ್ನಾಟಕದ ಬೆಂಗಳೂರು, ಯಶವಂತಪುರ, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಸಹಿತ ಪ್ರಮುಖ ನಗರಗಳಿಂದ ಬೇಸಿಗೆ ರಜೆಯ ವೇಳೆ ಭಾರತೀಯ ರೈಲ್ವೆ( Indian Railway) ಆರಂಭಿಸಿದ್ದ ವಿಶೇಷ ರೈಲುಗಳ ಸಂಚಾರವನ್ನು ಇನ್ನೂ ಕೆಲವು ದಿನಗಳ ಕಾಲ ವಿಸ್ತರಿಸಲಾಗಿದೆ. ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಲಯದ ಮೈಸೂರು, ಹುಬ್ಬಳ್ಳಿ ಹಾಗೂ ಬೆಂಗಳೂರು ವಿಭಾಗಗಳಿಂದ 24 ರೈಲುಗಳನ್ನು ಆರಂಭಿಸಲಾಗಿತ್ತು. ಈ ರೈಲುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಪ್ರಯಾಣಿಕರಿಗಾಗಿ ಜೂನ್‌ ತಿಂಗಳವರೆಗೂ ಇವುಗಳ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ. ಮುಂದೆ ಪರಿಸ್ಥಿತಿ ನೋಡಿಕೊಂಡು ಮತ್ತೆ ವಿಸ್ತರಣೆ ತೀರ್ಮಾನ ಕೈಗೊಳ್ಳುವುದಾಗಿ ನೈರುತ್ಯ ರೈಲ್ವೆ ವಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಈ ರೈಲುಗಳ ಸೇವೆಯನ್ನು ಪ್ರಯಾಣಿಕರು ಬಳಸಿಕೊಳ್ಳಬೇಕು. ರೈಲುಗಳ ಸಂಚಾರ, ದರ ಹಾಗೂ ಇತರೆ ಮಾಹಿತಿ ಬೇಕಿದ್ದರೆ www.enquiry.indianrail.gov.in ಸಂಪರ್ಕಿಸುವಂತೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ರೈಲುಗಳ ವಿವರ ಹೀಗಿದೆ.

1. 07305 ಹುಬ್ಬಳ್ಳಿ-ಗೋಮತಿ ನಗರ ಶನಿವಾರಗಳಂದು 2024ರ ಮೇ 18ರಿಂದ ಜೂನ್‌ 15ರವರಗೆ

2. 07306 ಗೋಮತಿ ನಗರ- ಹುಬ್ಬಳ್ಳಿ ಮಂಗಳವಾರಗಳಂದು 2024ರ ಮೇ 21ರಿಂದ ಜೂನ್‌ 18ರವರಗೆ

3. 07311 ಹುಬ್ಬಳ್ಳಿ-ಅಹಮದಾಬಾದ್ ಭಾನುವಾರದಂದು 2024ರ ಮೇ 26ರಿಂದ ಜೂನ್‌ 16ರವರೆಗೆ

4. 07312 ಅಹಮದಾಬಾದ್- ಹುಬ್ಬಳ್ಳಿ ಸೋಮವಾರದಂದು 2024ರ ಮೇ 27ರಿಂದ ಜೂನ್‌ 17ರವರೆಗೆ

5. 07315 ಹುಬ್ಬಳ್ಳಿ-ಮುಜಫರ್‌ಪುರ ಮಂಗಳವಾರ 2024 ರ ಮೇ 28ರಿಂದ ಜೂನ್‌ 11ರವರೆಗೆ

6. 07316 ಮುಜಫರ್‌ಪುರ-ಹುಬ್ಬಳ್ಳಿ ಶುಕ್ರವಾರದಂದು 2024ರ ಮೇ 31ರಿಂದ ಜೂನ್‌ 14ರವರೆಗೆ

7. 06225 ಹುಬ್ಬಳ್ಳಿ-ಯೋಗ ನಗರಿ ಋಷಿಕೇಶ ಸೋಮವಾರದಂದು 2024ರ ಮೇ 27ರಿಂದ ಜೂನ್‌10ರವರೆಗೆ

8. 06226 ಯೋಗ ನಗರಿ ರಿಷಿಕೇಶ- ಹುಬ್ಬಳ್ಳಿ ಗುರುವಾರದಂದು 2024ರ ಮೇ 30ರಿಂದಜೂನ್‌ 13ರವರೆಗೆ

9. 06281 ಮೈಸೂರು-ಅಜ್ಮೀರ್ ಶನಿವಾರ 2024ರ ಮೇ 18ರಿಂದ ಜೂನ್‌ 15ರವರೆಗೆ

10. 06282 ಅಜ್ಮೀರ್-ಮೈಸೂರು ಮಂಗಳವಾರ 2024ರ ಮೇ 21ರಿಂದ ಜೂನ್‌ 18ರವರೆಗೆ

11. 06221 ಮೈಸೂರು- ಮುಜಫರ್‌ಪುರ ಸೋಮವಾರ 2024ರ ಜೂನ್‌ 03ರಿಂದ ಜೂನ್‌ 10ರವರೆಗೆ

12. 06222 ಮುಜಫರ್‌ಪುರ-ಮೈಸೂರು ಗುರುವಾರ 2024 ಜೂನ್‌ 06ರಿಂದ ಜೂನ್‌ 13ರವರೆಗೆ

13. 06507 ಬೆಂಗಳೂರು-ಖರಗ್‌ಪುರ ಶುಕ್ರವಾರ 2024ರ ಮೇ 17ರಿಂದ ಜೂನ್‌ 14ರವರೆಗೆ

14. 06508 ಖರಗ್‌ಪುರ-ಬೆಂಗಳೂರು ಸೋಮವಾರ 2024ರ ಮೇ 20ರಿಂದ ಜೂನ್‌ 17ರವರೆಗೆ

15. 06585 ಬೆಂಗಳೂರು-ಹೌರಾ ಶುಕ್ರವಾರ 2024ರ ಮೇ 24ರಿಂದ ಜೂನ್‌ 14ರವರೆಗೆ

16. 06586 ಹೌರಾ- ಬೆಂಗಳೂರು ಶನಿವಾರ 2024ರ ಮೇ 25ರಿಂದ ಜೂನ್‌ 15ರವರೆಗೆ

17. 06569 ಬೆಂಗಳೂರು-ಗುವಹಾಟಿ ಭಾನುವಾರ 2024ರ ಮೇ 19ರಿಂದ ಜೂನ್‌ 09ರವರೆಗೆ

18. 06570 ಗುವಾಹಟಿ-ಬೆಂಗಳೂರು ಬುಧವಾರ 2024ರ ಮೇ 22ರಿಂದ ಜೂನ್‌ 12ರವರೆಗೆ

19. 06217 ಯಶವಂತಪುರ-ಗಯಾ ಶನಿವಾರ 2024ರ ಮೇ 25ರಿಂದ ಜೂನ್‌ 15ರವರೆಗೆ

20. 06218 ಗಯಾ-ಯಶವಂತಪುರ ಸೋಮವಾರ 2024ರ ಮೇ 27ರಿಂದ ಜೂನ್‌ 17ರವರೆಗೆ

21. 06563 ಬೆಂಗಳೂರು-ಮಾಲ್ಡಾ ಟೌನ್ ಭಾನುವಾರ 2024ರ ಜೂನ್‌ 02ರಿಂದ ಜೂನ್‌ 09ರವರೆಗೆ

22. 06564 ಮಾಲ್ಡಾ ಟೌನ್-ಬೆಂಗಳೂರು ಬುಧವಾರ 2024ರ ಜೂನ್‌ 05ರಿಂದ ಜೂನ್‌ 12ರವರೆಗೆ

23. 06589 ಬೆಂಗಳೂರು-ಬೀದರ್ ಭಾನುವಾರ ಮತ್ತು ಮಂಗಳವಾರ 2024 ಮೇ 12ರಿಂದ ಜೂನ್‌ 16ರವರೆಗೆ

24. 06590 ಬೀದರ್- ಬೆಂಗಳೂರು ಸೋಮವಾರ ಮತ್ತು ಬುಧವಾರ 2024ರ ಮೇ 13ರಿಂದ ಜೂನ್‌ 17ರವರೆಗೆ.

IPL_Entry_Point