ಕನ್ನಡ ಸುದ್ದಿ  /  ಕರ್ನಾಟಕ  /  Infosys: ಭೂಮಿ ವಾಪಾಸ್‌ ಬೆದರಿಕೆ, ಇನ್ಫೋಸಿಸ್‌ ಹುಬ್ಬಳ್ಳಿ ಘಟಕ ಆರಂಭಕ್ಕೆ ತಯಾರಿ, ಉದ್ಯೋಗಿಗಳಿಗೆ ಭರ್ಜರಿ ಆಫರ್‌

Infosys: ಭೂಮಿ ವಾಪಾಸ್‌ ಬೆದರಿಕೆ, ಇನ್ಫೋಸಿಸ್‌ ಹುಬ್ಬಳ್ಳಿ ಘಟಕ ಆರಂಭಕ್ಕೆ ತಯಾರಿ, ಉದ್ಯೋಗಿಗಳಿಗೆ ಭರ್ಜರಿ ಆಫರ್‌

Hubli News ಐಟಿ ದಿಗ್ಗಜ ಸಂಸ್ಥೆ ಇನ್ಫೋಸಿಸ್‌ ಹುಬ್ಬಳ್ಳಿಯಲ್ಲಿ ಕೇಂದ್ರವನ್ನು ಆರಂಭಿಸಲು ಸಿದ್ದತೆ ಮಾಡಿಕೊಂಡಿದ್ದು, ಇಲ್ಲಿಗೆ ವರ್ಗಗೊಳ್ಳುವ ನೌಕರರಿಗೆ ಹಲವು ಸೌಲಭ್ಯ ಘೋಷಿಸಿದೆ.

ಹುಬ್ಬಳ್ಳಿಯಲ್ಲೂ ಸ್ಥಾಪನೆಯಾಗಲಿದೆ ಇನ್ಫೋಸಿಸ್‌ ಘಟಕ
ಹುಬ್ಬಳ್ಳಿಯಲ್ಲೂ ಸ್ಥಾಪನೆಯಾಗಲಿದೆ ಇನ್ಫೋಸಿಸ್‌ ಘಟಕ

ಹುಬ್ಬಳ್ಳಿ: ಇನ್ಫೋಸಿಸ್‌ನ ಸಂಸ್ಥಾಪಕರಲ್ಲೊಬ್ಬರಾದ ಡಾ.ಸುಧಾಮೂರ್ತಿ ಅವರು ಹುಬ್ಬಳ್ಳಿಯವರು. ಅಲ್ಲಿಯೇ ಓದಿ ಬೆಳೆದವರು. ಈ ಕಾರಣಕ್ಕೆ ಹುಬ್ಬಳ್ಳಿ ಬಗ್ಗೆ ಅವರಿಗೆ ಎಲ್ಲಿಲ್ಲದ ಪ್ರೀತಿಯೂ ಹೌದು. ಇಲ್ಲಿನ ಭಾಗದವರಿಗೆ ಉದ್ಯೋಗ ಸಿಗಲಿ. ಈ ಭಾಗವೂ ಇನ್ನಷ್ಟು ಬೆಳೆಯಲಿ ಎನ್ನುವ ಉದ್ದೇಶದಿಂದ ಇಲ್ಲಿ ಇನ್ಫೋಸಿಸ್‌ನ ಘಟಕವೊಂದನ್ನು ತೆರೆಯುವ ಯೋಜನೆಯನ್ನೂ ಹಾಕಿಕೊಂಡಿದ್ದರು. ಹೀಗಿದ್ದರೂ ಈ ಯೋಜನೆ ಈವರೆಗೂ ಜಾರಿಯಾಗಿರಲಿಲ್ಲ. ಸರ್ಕಾರ ಕಡಿಮೆ ದರದಲ್ಲಿ ನೀಡಿದ್ದ ಭೂಮಿಯೂ ಬಳಕೆಯಾಗಿರಲಿಲ್ಲ. ಇದು ವಿಧಾನಸಭೆ ಅಧಿವೇಶನದಲ್ಲೂ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಈಗ ಹುಬ್ಬಳ್ಳಿ ಕೇಂದ್ರಿತವಾಗಿ ಇನ್ಪೋಸಿಸ್‌ ಕೇಂದ್ರ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಹುಬ್ಬಳ್ಳಿ ಕೇಂದ್ರಕ್ಕೆ ವರ್ಗಾವಣೆ ಬಯಸುವ ನೌಕರರಿಗೆ ಭರ್ಜರಿ ವೇತನದ ಆಫರ್‌ಗಳನ್ನು ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ವರದಿಗಳ ಪ್ರಕಾರ, ಇನ್ಫೋಸಿಸ್ ತನ್ನ ಬ್ಯಾಂಡ್ 3 ಮತ್ತು ಅದಕ್ಕಿಂತ ಕೆಳಗಿನ ಉದ್ಯೋಗಿಗಳಿಗೆ ಹುಬ್ಬಳ್ಳಿಗೆ ಆರಂಭಿಕ ಸ್ಥಳಾಂತರದ ನಂತರ 25,000 ರೂ.ಗಳ ಪ್ರೋತ್ಸಾಹಧನವನ್ನು ನೀಡಲಿದೆ ಮತ್ತು ಎರಡು ವರ್ಷಗಳವರೆಗೆ ಪ್ರತಿ ಆರು ತಿಂಗಳಿಗೊಮ್ಮೆ ಹೆಚ್ಚುವರಿಯಾಗಿ 25,000 ರೂ. ಸ್ಥಳಾಂತರಗೊಳ್ಳುವವರಿಗೆ 24 ತಿಂಗಳ ಕೊನೆಯಲ್ಲಿ ನೀಡಲಿದೆ. ಬ್ಯಾಂಡ್‌ 3 ಕ್ಕಿಂತ ಮೇಲ್ಪಟ್ಟ ನೌಕರರಿಗೆ 1.25 ಲಕ್ಷ ರೂ. 4 ನೇ ಬ್ಯಾಂಡ್‌ನವರಿಗೆ 2.5 ಲಕ್ಷ, ಬ್ಯಾಂಡ್ 5ಕ್ಕೆ 5 ಲಕ್ಷ ರೂ., ಬ್ಯಾಂಡ್ 6 ಉದ್ಯೋಗಿಗಳಿಗೆ 6 ಲಕ್ಷ ರೂ., ಬ್ಯಾಂಡ್ 7 ಉದ್ಯೋಗಿಗಳಿಗೆ 8 ಲಕ್ಷ ರೂ., ಆರಂಭಿಕ ಸ್ಥಳಾಂತರ ಪ್ರೋತ್ಸಾಹಧನದ ಹೊರತಾಗಿ 24 ತಿಂಗಳ ಕೊನೆಯಲ್ಲಿ 8 ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಇನ್ಫೋಸಿಸ್ ಸಿಇಒ ಹೇಳಿದ್ದಾರೆ. ಇದರಿಂದ ಬೆಂಗಳೂರು ಸೇರಿದಂತೆ ಇನ್ಫೋಸಿಸ್‌ನಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವವರು ಇಲ್ಲಿಗೆ ಬಂದು ಕೆಲಸ ಮಾಡಲು ಸಹಕಾರಿಯಾಗಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಇದಕ್ಕೂ ಮುನ್ನ ಇನ್ಪೋಸಿಸ್‌ ಇಲ್ಲಿ ಕೇಂದ್ರ ಸ್ಥಾಪಿಸಲೆಂದೇ 58 ಎಕರೆ ಭೂಮಿಯನ್ನು ತಲಾ 35 ಲಕ್ಷ ರೂ. ಮೊತ್ತದಲ್ಲಿ ನೀಡಿತ್ತು. ಆದರೆ ಇಲ್ಲಿ ಮಾರುಕಟ್ಟೆ ದರವೇ ಎಕರೆಗೆ 2 ಕೋಟಿ ರೂ.ವರೆಗೂ ಇದೆ.

ಈ ಕುರಿತು ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದರು. ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಅವರು ಅಭಿವೃದ್ಧಿ ಕೇಂದ್ರದ ಸುತ್ತಲೂ ಸ್ಥಳೀಯವಾಗಿ ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಸಂಸ್ಥೆ ವಿಫಲವಾಗಿದೆ. ಕೇಂದ್ರ ಆರಂಭಿಸದೇ ಇದ್ದರೆ ಭೂಮಿ ವಾಪಾಸ್‌ ಪಡೆಯಿರಿ ಎಂದು ಆಗ್ರಹಿಸಿದ್ದರು.

ಇದಕ್ಕೆ ಉತ್ತರ ನೀಡಿದ್ದ ಸಚಿವ ಎಂ.ಬಿ.ಪಾಟೀಲ್‌, ಕೈಗಾರಿಕೆ ಸ್ಥಾಪನೆಗೆ ಕಡಿಮೆ ದರದಲ್ಲಿ ಭೂಮಿ, ಇತರೆ ಸೌಲಭ್ಯಗಳನ್ನು ಸರ್ಕಾರ ನೀಡುತ್ತದೆ. ಸ್ಥಳೀಯವಾಗಿ ಉದ್ಯೋಗ ಸಿಗುವ ಜತೆಗೆ ಅಭಿವೃದ್ದಿಯೂ ಆಗಲಿದೆ ಎನ್ನುವುದು ಇದರ ಹಿಂದಿರುವ ಆಶಯ. ಘಟಕ ಸ್ಥಾಪಿಸದೇ ಇದ್ದರೆ ಭೂಮಿ ಪಡೆಯುವುದು ಅನಿವಾರ್ಯ ಎಂದು ಹೇಳಿದ್ದರು.

ಇದಾದ ನಂತರ ಇಲ್ಲಿ ಕೇಂದ್ರ ತೆರೆಯುವ ಪ್ರಕ್ರಿಯೆಗೆ ಇನ್ಫೋಸಿಸ್‌ ಗಂಭೀರ ಪ್ರಯತ್ನ ಮಾಡುತ್ತಿರುವ ಮಾತುಗಳು ಕೇಳಿ ಬಂದಿವೆ.