ಸರ್ ಎಂ ವಿಶ್ವೇಶ್ವರಯ್ಯ: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅಚ್ಚರಿಯ ಸಾಧನೆ ಮಾಡಿದ್ದ ಮೈಸೂರು ದಿವಾನರೇ ಭಾರತ ರತ್ನ ಗೌರವ ಪಡೆದ ಮೊದಲ ಕನ್ನಡಿಗ
ಕನ್ನಡ ಸುದ್ದಿ  /  ಕರ್ನಾಟಕ  /  ಸರ್ ಎಂ ವಿಶ್ವೇಶ್ವರಯ್ಯ: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅಚ್ಚರಿಯ ಸಾಧನೆ ಮಾಡಿದ್ದ ಮೈಸೂರು ದಿವಾನರೇ ಭಾರತ ರತ್ನ ಗೌರವ ಪಡೆದ ಮೊದಲ ಕನ್ನಡಿಗ

ಸರ್ ಎಂ ವಿಶ್ವೇಶ್ವರಯ್ಯ: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅಚ್ಚರಿಯ ಸಾಧನೆ ಮಾಡಿದ್ದ ಮೈಸೂರು ದಿವಾನರೇ ಭಾರತ ರತ್ನ ಗೌರವ ಪಡೆದ ಮೊದಲ ಕನ್ನಡಿಗ

Sir M Visvesvaraya: ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯ ಅವರು. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ದೇಶದ ಅತ್ಯುನ್ನತ ಗೌರವ ನೀಡಲಾಗಿದೆ.

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯ
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಸರ್ ಎಂ ವಿಶ್ವೇಶ್ವರಯ್ಯ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ (LK Advani) ಅವರಿಗೆ ಇಂದು (ಫೆಬ್ರವರಿ 3, ಶನಿವಾರ) ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ (Bharat Ratna) ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ, ಬಿಜೆಪಿ ನಾಯಕರು ಹಾಗೂ ಉಪ ಪ್ರಧಾನಿಯಾಗಿ ಅವರು ನೀಡಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ದೇಶದ ಅತ್ಯುನ್ನತ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಮೊದಲ ಕನ್ನಡಿಗ ಯಾರು? ಅವರ ಸಾಧನೆ ಏನು ಅನ್ನೋದನ್ನ ತಿಳಿಯೋಣ. ಭಾರತ ಕಂಡ ಅತ್ಯಂತ ಶ್ರೇಷ್ಠ ಇಂಜಿನಿಯರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ (Sir M Visvesvaraya) ಅವರು ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರಾಗಿದ್ದಾರೆ.

ಅಭಿವೃದ್ಧಿಯ ಹರಿಕಾರರಾಗಿ ದೇಶಾದ್ಯಂತ ಕೈಗಾರಿಕೆ, ಅಣೆಕಟ್ಟುಗಳು, ಬ್ಯಾಂಕಿಂಗ್, ಶಿಕ್ಷಣ ಹೀಗೆ ನಾನಾ ಕ್ಷೇತ್ರಗಳಲ್ಲಿ ದೇಶವನ್ನು ಪ್ರಗತಿಯ ಪಥದತ್ತ ಮುನ್ನಡೆಸಿದ್ದವರು ಸರ್ ಎಂ ವಿಶ್ವೇಶ್ವರಯ್ಯನವರು. ಕೆಆರ್‌ಎಸ್ ನಿರ್ಮಾಣದಿಂದ ಇವತ್ತು ಹಳೆ ಮೈಸೂರು ಭಾಗ ಹಚ್ಚ ಹಸಿರಿನಿಂದ ಇರವುದಕ್ಕೆ ಇವರೇ ಕಾರಣ. 1955ರಲ್ಲಿ ವಿಶ್ವೇಶ್ವರಯ್ಯ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

ಇಂಜಿನಿಯರ್, ವಿದ್ವಾಂಸರು, ರಾಜಕಾರಣಿ, ವಾಸ್ತು ಶಿಲ್ಪಿ, ಸಂಸ್ಕೃತ ಪಂಡಿತರು, ಆಯುರ್ವೇದಿಕ್ ಪಂಡಿತರೂ ಆಗಿದ್ದರು. ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1860ರ ಸೆಪ್ಟೆಂಬರ್ 15 ರಂದು ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ಜನಿಸಿದರು. ದೇಶದ ಇಂಜಿನಿಯರ್ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯ ನೆನಪಿಗಾಗಿ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಇಂಜಿನಿಯರ್ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವೇಶ್ವರಯ್ಯ ಅವರು ಕೇವಲ 12 ವರ್ಷದವರಾಗಿದ್ದಾಗ ಅವರ ತಂದೆ ತೀರಿಕೊಂಡರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುದ್ದೇನಹಳ್ಳಿಯಲ್ಲಿ ಮುಗಿಸುತ್ತಾರೆ. ನಂತರ ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಸೇರುತ್ತಾರೆ. 1881 ರಲ್ಲಿ ಬಿಎಂ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆಯುತ್ತಾರೆ. ನಂತರ ಮೈಸೂರು ಸರ್ಕಾರದ ನೆರವಿನಿಂದ ಪೂನಾದ ಸೈನ್ಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದಲು ಸೇರುತ್ತಾರೆ.

1883ರಲ್ಲಿ ಎಲ್‌ಸಿಇ ಮತ್ತು ಎಫ್‌ಸಿಇ ಪರೀಕ್ಷೆಗಳನ್ನು ಪ್ರಥಮ ಸ್ಥಾನದಲ್ಲಿ ಪೂರ್ಣಗೊಳಿಸುತ್ತಾರೆ. ಮೈಸೂರಿನ ಕೃಷ್ಣ ರಾಜಸಾಗರ ಅಣೆಕಟ್ಟು ನಿರ್ಮಾಣದ ಜವಾಬ್ದಾರಿಯನ್ನು ಇವರು ಮುಖ್ಯ ಇಂಜಿನಿಯರ್ ಆಗಿ ನಿರ್ವಹಣೆ ಮಾಡಿದ್ದರು. ರಾಜನೀತಿಯನ್ನು ಅರಿತಿದ್ದ ಇವರು ಮೈಸೂರಿನ ದಿವಾರಾಗಿ ಸೇವೆ ಸಲ್ಲಿಸಿದ್ದರು. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner