IAS, IPS Promotions: 67 ಐಎಎಸ್, 65 ಐಪಿಎಸ್, 23 ಐಎಫ್‌ಎಸ್ ಅಧಿಕಾರಿಗಳಿಗೆ ಮುಂಬಡ್ತಿ, ವೇತನ ಹೆಚ್ಚಳ, ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್
IAS, IPS Promotions: ನಾಗರಿಕ ಸೇವಾ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರ ಹೊಸ ವರ್ಷಕ್ಕೆ ಭರ್ಜರಿ ಗಿಫ್ಟ್ ನೀಡಿದೆ. ಹೊಸ ವರ್ಷದ ಮುನ್ನಾದಿನ 150ಕ್ಕೂ ಹೆಚ್ಚು ಅಧಿಕಾರಿಗಳಿಗೆ ಮುಂಬಡ್ತಿ ಆದೇಶ ಪ್ರಕಟಿಸಿದೆ. 67 ಐಎಎಸ್, 65 ಐಪಿಎಸ್, 23 ಐಎಫ್‌ಎಸ್ ಅಧಿಕಾರಿಗಳಿಗೆ ಮುಂಬಡ್ತಿ, ವೇತನ ಹೆಚ್ಚಳ ಘೋಷಣೆಯಾಗಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ಕರ್ನಾಟಕದ ನಾಗರಿಕ ಸೇವಾ ಕ್ಷೇತ್ರದ 150ಕ್ಕೂ ಹೆಚ್ಚು ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರ ಹೊಸ ವರ್ಷಕ್ಕೆ ಭರ್ಜರಿ ಉಡುಗೊರೆ ನೀಡಿದೆ. ಹೊಸ ವರ್ಷ ಶುರುವಾಗುವ ಮುನ್ನಾ ದಿನ ಕರ್ನಾಟಕ ಸರ್ಕಾರ 150ಕ್ಕೂ ಹೆಚ್ಚು ನಾಗರಿಕ ಸೇವಾ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ. ಈ ಪೈಕಿ 67 ಐಎಎಸ್, 65 ಐಪಿಎಸ್, 23 ಐಎಫ್‌ಎಸ್ ಅಧಿಕಾರಿಗಳಿಗೆ ಮುಂಬಡ್ತಿ, ವೇತನ ಹೆಚ್ಚಳವಾಗಿದೆ.
67 ಐಎಎಸ್ ಅಧಿಕಾರಿಗಳಿಗೆ ಮುಂಬಡ್ತಿ, ವೇತನ ಹೆಚ್ಚಳ
ಕರ್ನಾಟಕ ಸರ್ಕಾರವು ಮಹೇಶ್ವ ರಾವ್, ಟಿ.ಕೆ.ಅನಿಲ್ ಕುಮಾರ್, ಪಂಕಜ್ ಕುಮಾರ್ ಪಾಂಡೆ, ಪಿ.ಹೇಮಲತಾ, ಎ.ಪೊನ್ನುರಾಜ್, ಪಲ್ಲವಿ ಅಕುರಾತಿ, ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಎಂ.ವಿ.ಡಾ. ವೆಂಕಟೇಶ್, ಡಾ. ಬಗಾದಿ ಗೌತಮ್, ನಿತೇಶ್ ಪಾಟೀಲ್, ಮಹಾಂತೇಶ್ ಬೀಳಗಿ ಸೇರಿ 67 ಐಎಎಸ್ ಅಧಿಕಾರಿಗಳು, 65 ಐಪಿಎಸ್ ಅಧಿಕಾರಿಗಳು, 23 ಐಎಫ್‌ಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಆದೇಶ ಪ್ರಕಟಿಸಿದೆ. ಈ ಪೈಕಿ 1995, 2000, 2009, 2012, 2016, 2021ನೇ ಬ್ಯಾಚ್‌ನ ಅಧಿಕಾರಿಗಳು ಮುಂಬಡ್ತಿ ಪಡೆದವರು.
ಐಎಎಸ್ ಅಧಿಕಾರಿಗಳ ಮುಂಬಡ್ತಿ ವಿವರದ ಸರ್ಕಾರಿ ಅಧಿಸೂಚನೆ ಪ್ರತಿ ಇಲ್ಲಿದೆ.
65 ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಮುಂಬಡ್ತಿ, ವೇತನ ಹೆಚ್ಚಳ
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 65 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ, ವೇತನ ಹೆಚ್ಚಳ ನೀಡಿ ಕೆಲವರನ್ನು ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಆದೇಶದ ಪ್ರಕಾರ, ವಿಕಾಸ್ ಕುಮಾರ್ ವಿಕಾಶ್ - ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ(ಪಶ್ಚಿಮ), ರಮಣ್ ಗುಪ್ತ- ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಗುಪ್ತದಳ), ಡಾ. ಚೇತನ್ ಸಿಂಗ್ ರಾಥೋಡ್-ಉತ್ತರ ವಲಯ ಐಜಿಪಿ(ಬೆಳಗಾವಿ), ಅಮಿತ್ ಸಿಂಗ್- ಪಶ್ಚಿಮ ವಲಯ ಐಜಿಪಿ (ಮಂಗಳೂರು), ಕಾರ್ತಿಕ್ ರೆಡ್ಡಿ- ಡಿಐಜಿಪಿ ಪ್ರಧಾನ ಕಚೇರಿ(ಆಡಳಿತ), ಕುಲದೀಪ್ ಕುಮಾರ್ ಆರ್. ಜೈನ್- ಬೆಂಗಳೂರು ನಗರ ಜಂಟಿ ಪೊಲೀಸ್ ಆಯುಕ್ತ (ಆಡಳಿತ), ಜಿ. ಸಂಗೀತಾ -ಡಿಐಜಿಪಿ ಸಿಐಡಿ ಅರಣ್ಯ ವಿಭಾಗ, ರೇಣುಕಾ ಕೆ. ಸುಕುಮಾರ್- ಡಿಸಿಆರ್‌ಇಡಿ ಐಜಿಪಿ, ಜೆ.ಕೆ. ರಶ್ಮಿ - ಡೆಪ್ಯೂಟಿ ಕಮಾಂಡೆಂಟ್, ಹೋಂ ಗಾರ್ಡ್ ಮತ್ತು ಸಿವಿಲ್ ಡಿಫೆನ್ಸ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಹುಬ್ಬಳ್ಳಿ-ಧಾರವಾಡ ಆಯುಕ್ತ ಎನ್. ಶಶಿಕುಮಾರ್, ಗುಪ್ತದಳ ಐಜಿಪಿ ಡಾ.ವೈ.ಎಸ್. ರವಿಕುಮಾರ್, ಸೀಮಾ ಲಡ್ಕರ್- ಮೈಸೂರು ನಗರ ಆಯುಕ್ತರು ಸೇರಿ ಹಲವರಿಗೆ ವೇತನ ಹೆಚ್ಚಳ ಮತ್ತು ಮುಂಬಡ್ತಿ ನೀಡಿ ಇರುವ ಸ್ಥಳದಲ್ಲಿಯೇ ಮುಂದುವರಿಯುವಂತೆ ರಾಜ್ಯ ಸರ್ಕಾರ ಆದೇಶದಲ್ಲಿ ತಿಳಿಸಿದೆ. ಇದರಲ್ಲಿ 2012 ಹಾಗೂ 2016 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಗಳು ಹೆಚ್ಚು ಮುಂಬಡ್ತಿ ಪಡೆದಿದ್ದಾರೆ.
65 ಐಪಿಎಸ್ ಅಧಿಕಾರಿಗಳ ವರ್ಗಾವಣೆ, ಮುಂಬಡ್ತಿ ಆದೇಶಕ್ಕೆ ಸಂಬಂಧಿಸಿದ ಅಧಿಸೂಚನೆ ಇಲ್ಲಿದೆ
ಐಎಫ್‌ಎಸ್ ಅಧಿಕಾರಿಗಳ ಮುಂಬಡ್ತಿ ಮತ್ತು ವರ್ಗಾವಣೆ ವಿವರದ ಪಿಡಿಎಫ್ ಇಲ್ಲಿದೆ