ಕನ್ನಡ ಸುದ್ದಿ  /  Karnataka  /  Ibps Po Mt Recruitment 2022 Apply Before August 28, Notification Syllabus And Other Important Details In Kannada

IBPS Recruitment: ಐಬಿಪಿಎಸ್‌ ಪೊಬೆಷನರಿ ಅಧಿಕಾರಿ, ಮ್ಯಾನೇಜ್‌ಮೆಂಟ್‌ ಟ್ರೇನಿ ಹುದ್ದೆಗಳಿಗೆ ಆಗಸ್ಟ್‌ 28ರೊಳಗೆ ಅರ್ಜಿ ಸಲ್ಲಿಸಿ

ಭಾರತೀಯ ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS)ಯು ಈ ಸಾಲಿನ ಪ್ರೊಬೆಷನರಿ ಆಫೀಸರ್‌ (IBPS PO) ಮತ್ತು ಮ್ಯಾನೇಜ್‌ಮೆಂಟ್‌ ಟ್ರೇನಿ (MT) ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಐಬಿಪಿಎಸ್‌ ಪಿಒ ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಐಬಿಪಿಎಸ್‌ ಕರ್ನಾಟಕ ಸೇರಿದಂತೆ ದೇಶದ ವಿವಿಧ ಬ್ಯಾಂಕ್‌ಗಳಲ್ಲಿರುವ 6434 ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಐಬಿಪಿಎಸ್‌ ಪೊಬೆಷನರಿ ಅಧಿಕಾರಿ, ಟ್ರೇನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಐಬಿಪಿಎಸ್‌ ಪೊಬೆಷನರಿ ಅಧಿಕಾರಿ, ಟ್ರೇನಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಬೆಂಗಳೂರು: ಭಾರತೀಯ ಬ್ಯಾಂಕಿಂಗ್‌ ಸಿಬ್ಬಂದಿ ನೇಮಕಾತಿ ಸಂಸ್ಥೆ (IBPS)ಯು ಈ ಸಾಲಿನ ಪ್ರೊಬೆಷನರಿ ಆಫೀಸರ್‌ (IBPS PO) ಮತ್ತು ಮ್ಯಾನೇಜ್‌ಮೆಂಟ್‌ ಟ್ರೇನಿ (MT) ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಐಬಿಪಿಎಸ್‌ ಪಿಒ ನೇಮಕಾತಿ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ. ಐಬಿಪಿಎಸ್‌ ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ, ಆಯ್ಕೆ ವಿಧಾನ, ವಿದ್ಯಾರ್ಹತೆ, ಸಿಲೆಬಸ್‌, ಪರೀಕ್ಷಾ ವಿಧಾನ ಸೇರಿದಂತೆ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ. ಲೇಟೆಸ್ಟ್‌ ಸರಕಾರಿ ಉದ್ಯೋಗಗಳ ಮಾಹಿತಿಗಾಗಿ ನಿಯಮಿತವಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡುತ್ತಿರಿ.

ಐಬಿಪಿಎಸ್‌ ಕರ್ನಾಟಕ ಸೇರಿದಂತೆ ದೇಶದ ವಿವಿಧ ಬ್ಯಾಂಕ್‌ಗಳಲ್ಲಿರುವ 6434 ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಆಗಸ್ಟ್‌ 28ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಐಬಿಪಿಎಸ್‌ ಪಿಒ ನೇಮಕಾತಿ 2022 ಪ್ರಮುಖ ದಿನಾಂಕಗಳು (IBPS PO Recruitment: Important Dates)

ಆನ್‌ಲೈನ್‌ ನೋಂದಣಿ ಆರಂಭ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02.08.2022 ರಿಂದ 22.08.2022

ಅರ್ಜಿ ಶುಲ್ಕ/ ಇಂಟಿಮೇಷನ್‌ ಶುಲ್ಕ ಪಾವತಿ ದಿನಾಂಕ (ಆನ್‌ಲೈನ್‌): 02.08.2022 ರಿಂದ 22.08.2022

ಪರೀಕ್ಷಾ ಪೂರ್ವ ತರಬೇತಿಗೆ ಕಾಲ್‌ಲೆಟರ್‌ ಡೌನ್‌ಲೋಡ್‌: ಸೆಪ್ಟೆಂಬರ್‌/ಅಕ್ಟೋಬರ್‌ 2022

ಪರೀಕ್ಷೆಯ ಪೂರ್ವ ತರಬೇತಿ: ಸೆಪ್ಟೆಂಬರ್/ಅಕ್ಟೋಬರ್ 2022

ಆನ್‌ಲೈನ್ ಪರೀಕ್ಷೆಗಾಗಿ ಕಾಲ್‌ಲೆಟರ್ ಡೌನ್‌ಲೋಡ್ - ಪೂರ್ವಭಾವಿ ಅಕ್ಟೋಬರ್ 2022

ಆನ್‌ಲೈನ್ ಪರೀಕ್ಷೆ - ಪೂರ್ವಭಾವಿ ಅಕ್ಟೋಬರ್ 2022

ಆನ್‌ಲೈನ್ ಪರೀಕ್ಷೆಯ ಫಲಿತಾಂಶ - ಪೂರ್ವಭಾವಿ ನವೆಂಬರ್ 2022

ಆನ್‌ಲೈನ್ ಪರೀಕ್ಷೆಗಾಗಿ ‌ ಕಾಲ್‌ಲೆಟರ್ ಡೌನ್‌ಲೋಡ್ (ಮುಖ್ಯ ಪರೀಕ್ಷೆ)ನವೆಂಬರ್ 2022

ಆನ್‌ಲೈನ್ ಪರೀಕ್ಷೆ (ಮುಖ್ಯ ಪರೀಕ್ಷೆ) ನವೆಂಬರ್ 2022

ಫಲಿತಾಂಶದ ಘೋಷಣೆ - (ಮುಖ್ಯ ಪರೀಕ್ಷೆ) ಡಿಸೆಂಬರ್ 2022

ಸಂದರ್ಶನ: ಜನವರಿ/ಫೆಬ್ರವರಿ 2023

ಐಬಿಪಿಎಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಐಬಿಪಿಎಸ್‌ನ ಪ್ರೊಬೆಷನರಿ ಆಫೀಸರ್‌ (IBPS PO) ಮತ್ತು ಮ್ಯಾನೇಜ್‌ಮೆಂಟ್‌ ಟ್ರೇನಿ (MT) ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಹೊರತುಪಡಿಸಿ ಬೇರೆ ಯಾವುದೇ ವಿಧಾನಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಐಬಿಪಿಎಸ್‌ ಪಿಒ/ಎಂಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟು?

ಅರ್ಜಿ ಸಲ್ಲಿಸಲಿ ಕನಿಷ್ಠ 20 ವರ್ಷ ಮತ್ತು ಗರಿಷ್ಠ 30ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ವಯೋಮಿತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಸಡಿಲಿಕೆ ನೀಡಲಾಗುತ್ತದೆ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಐದು ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ ಹತ್ತು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಐಬಿಪಿಎಸ್‌ ಅರ್ಜಿ ಶುಲ್ಕವೆಷ್ಟು?

ಐಬಿಪಿಎಸ್‌ ಪಿಒ/ಎಂಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಾಮಾನ್ಯ ಅಭ್ಯರ್ಥಿಗಳಿಗೆ 850 ರೂ., ಒಬಿಸಿಗೇ 850 ರೂ. ಮತ್ತು ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 175 ರೂ. ವಯೋಮಿತಿ ನಿಗದಿಪಡಿಸಲಾಗಿದೆ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಪಾವತಿ ವಿಧಾನಗಳ ಮೂಲಕ ಪಾವತಿಸಬೇಕು.

ಕನ್ನಡದಲ್ಲಿಯೂ ಐಬಿಪಿಎಸ್‌ ಪರೀಕ್ಷೆ ಬರೆಯಲು ಅವಕಾಶ

ಕಳೆದ ಹಲವು ವರ್ಷಗಳಿಂದ ಕನ್ನಡಾಭಿಮಾನಿಗಳು ಮತ್ತು ಹಿಂದಿ ಹೇರಿಕೆ ತಡೆಗಟ್ಟಲು ಪ್ರಯತ್ನಿಸುವ ಹೋರಾಟಗಾರರು ಮತ್ತು ಇತರರ ಹೋರಾಟದ ಫಲದಿಂದ ಐಬಿಪಿಎಸ್‌ ಪರೀಕ್ಷೆಯನ್ನು ಇದೀಗ ಕನ್ನಡದಲ್ಲಿಯೂ ನಡೆಸಲಾಗುತ್ತದೆ. ಈಗ ಐಬಿಪಿಎಸ್‌ ಪರೀಕ್ಷೆಗಳನ್ನು ಕನ್ನಡ ಸೇರಿದಂತೆ ಸುಮಾರು ಹದಿಮೂರು ಭಾಷೆಗಳಲ್ಲಿಯೇ ಬರೆಯಬಹುದು. ಆನ್‌ಲೈನ್‌ ಅರ್ಜಿ ಸಲ್ಲಿಕೆ ಸಂದರ್ಭದಲ್ಲಿಯೇ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಐಬಿಪಿಎಸ್‌ ಪಿಒ ಮತ್ತು ಎಂಟಿ ಹುದ್ದೆಗಳಿಗೆ ಪ್ರಿಲಿಮಿನರಿ, ಮೇನ್ಸ್‌ ಮತ್ತು ಸಂದರ್ಶನ ಎಂಬ ಮೂರು ವಿಧಾನಗಳ ಮೂಲಕ ನೇಮಕ ನಡೆಸಲಾಗುತ್ತದೆ. ಐಬಿಪಿಎಸ್‌ ಪರೀಕ್ಷೆಯ ಸಿಲೆಬಸ್‌ ಅಥವಾ ಪಠ್ಯಕ್ರಮ, ಅರ್ಜಿ ಸಲ್ಲಿಸುವ ಲಿಂಕ್‌ ಸೇರಿದಂತೆ ಸಂಪೂರ್ಣ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ಲಿಂಕ್‌: www.ibps.in

ವಿಭಾಗ