ICAI CA Result 2024: ಸಿಎ ಅಂತಿಮ ಪರೀಕ್ಷೆ ಫಲಿತಾಂಶ ಪ್ರಕಟ; ರಿಸಲ್ಟ್ ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ
ICAI CA Final Result 2024: ಸಿಎ ಅಂತಿಮ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ನವೆಂಬರ್‌ನಲ್ಲಿ ನಡೆದಿದ್ದ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಸಿಎ ಫಲಿತಾಂಶ ಚೆಕ್ ಮಾಡುವುದು ಹೇಗೆ ಎಂಬ ಮಾಹಿತಿಯನ್ನೂ ನಾವಿಲ್ಲಿ ನೀಡಿದ್ದೇವೆ ಗಮನಿಸಿ.
ICAI CA Final Result 2024: ಐಸಿಎಐ ಸಿಎ 2024ರ ಅಂತಿಮ ಫಲಿತಾಂಶ ಪ್ರಕಟವಾಗಿದೆ. ನಿನ್ನೆ (ಡಿಸೆಂಬರ್ 27) ರಾತ್ರಿ ಫಲಿತಾಂಶ ಹೊರಬಂದಿದೆ. ಚಾರ್ಟರ್ಡ್ ಅಕೌಂಟೆನ್ಸಿ (CA) ಅಂತಿಮ ಪರೀಕ್ಷೆಯಲ್ಲಿ ಇಬ್ಬರು ಅಭ್ಯರ್ಥಿಗಳು ಪ್ರಥಮ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ತಲಾ ಒಬ್ಬರು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟು 11,500 ಅಭ್ಯರ್ಥಿಗಳು ಚಾರ್ಟರ್ಡ್ ಅಕೌಂಟೆಂಟ್‌ಗಳಾಗಿ ಅರ್ಹತೆ ಪಡೆದಿದ್ದಾರೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ( ICAI ) ತಿಳಿಸಿದೆ. ಹೈದರಾಬಾದ್‌ನ ಹೆರಾಂಬ್ ಮಹೇಶ್ವರಿ ಮತ್ತು ತಿರುಪತಿಯ ರಿಷಬ್ ಒಸ್ತ್ವಾಲ್ ಆರ್ ಇವರಿಬ್ಬರೂ ಶೇಕಡಾ 84.67 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಅಹಮದಾಬಾದ್‌ನ ರಿಯಾ ಕುಂಜನ್‌ಕುಮಾರ್ ಷಾ ಪರೀಕ್ಷೆಯಲ್ಲಿ ಎರಡನೇ ಟಾಪರ್ ಆಗಿದ್ದಾರೆ. 83.50 ಶೇಕಡಾ ಅಂಕಗಳನ್ನು ಗಳಿಸಿದ್ದಾರೆ. ಕೋಲ್ಕತ್ತಾದ ಕಿಂಜಲ್ ಅಜ್ಮೇರಾ ಶೇಕಡಾ 82.17 ಅಂಕಗಳೊಂದಿಗೆ ಮೂರನೇ ರ‍್ಯಾಂಕ್ ಗಳಿಸಿದ್ದಾರೆ.
ಗ್ರೂಪ್ 1ರಲ್ಲಿ ಒಟ್ಟು 66,987 ಅಭ್ಯರ್ಥಿಗಳು ಸಿಎ ಅಂತಿಮ ನವೆಂಬರ್ ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 11,253 ಮಂದಿ ಉತ್ತೀರ್ಣರಾಗಿದ್ದಾರೆ. ಈ ಗುಂಪಿನಲ್ಲಿ ಉತ್ತೀರ್ಣರಾದವರ ಪ್ರಮಾಣ ಶೇ.16.8ರಷ್ಟಿದೆ.
ಗ್ರೂಪ್ 2ರಲ್ಲಿ 49,459 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, 10,566 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಗುಂಪು 2 ರಲ್ಲಿ ಉತ್ತೀರ್ಣರಾದ ಶೇಕಡಾವಾರು ಶೇಕಡಾ 21.36 ರಷ್ಟಿದೆ.
ಒಟ್ಟು 30,763 ಅಭ್ಯರ್ಥಿಗಳು ಹಾಜರಾಗಿದ್ದು, 4,134 ಮಂದಿ ಉತ್ತೀರ್ಣರಾಗಿದ್ದು, ಶೇ.13.44ರಷ್ಟು ಫಲಿತಾಂಶ ಬಂದಿದೆ.
ಫಲಿತಾಂಶ ಪರಿಶೀಲಿಸುವುದು ಹೇಗೆ?
ಪರೀಕ್ಷೆಯ ಫಲಿತಾಂಶಗಳನ್ನು ಸಂಸ್ಥೆಯ ಫಲಿತಾಂಶ ಪೋರ್ಟಲ್ icai.nic.in ನಲ್ಲಿ ಪರಿಶೀಲಿಸಬಹುದು. ಫಲಿತಾಂಶಗಳನ್ನು ಪರಿಶೀಲಿಸಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆಗಳನ್ನು ರೋಲ್ ಸಂಖ್ಯೆಗಳೊಂದಿಗೆ ನಮೂದಿಸಬೇಕಾಗುತ್ತದೆ.
1) icai.nic.in ಗೆ ಹೋಗಿ.
2) ನಂತರ CA ಅಂತಿಮ ಫಲಿತಾಂಶ ಅಥವಾ ಮೆರಿಟ್ ಪಟ್ಟಿ ಡೌನ್‌ಲೋಡ್ ಲಿಂಕ್ ತೆರೆಯಿರಿ.
3) ಫಲಿತಾಂಶವನ್ನು ಪರಿಶೀಲಿಸಲು, ನೋಂದಣಿ ಸಂಖ್ಯೆಯ ಜೊತೆಗೆ ನಿಮ್ಮ ಆರು ಅಂಕಿಯ ರೋಲ್ ಸಂಖ್ಯೆಯನ್ನು ನಮೂದಿಸಿ.
4) ಅರ್ಹತಾ ಪಟ್ಟಿಯನ್ನು ಪರಿಶೀಲಿಸಲು, ನಿಮ್ಮ ರೋಲ್ ನಂಬರ್ ನಮೂದಿಸಿ.
5) ಫಲಿತಾಂಶವನ್ನು ಸಲ್ಲಿಸಿ ಮತ್ತು ಡೌನ್‌ಲೋಡ್ ಮಾಡಿ/ಮೆರಿಟ್ ಪಟ್ಟಿಯನ್ನು ಪರಿಶೀಲಿಸಿ ಎಂಬ ಆಯ್ಕೆ ಇದೆ ಅದನ್ನು ಕ್ಲಿಕ್ ಮಾಡಿ
ಯಾವಾಗ ಪರೀಕ್ಷೆ ನಡೆದಿತ್ತು?
ICAI ನವೆಂಬರ್ 3, 5 ಮತ್ತು 7 ರಂದು ಗ್ರೂಪ್ 1 ಅಂತಿಮ ಕೋರ್ಸ್ ಪರೀಕ್ಷೆಯನ್ನು ಮಾಡಲಾಗಿತ್ತು.
ಗ್ರೂಪ್ 2 ಪರೀಕ್ಷೆಯು ನವೆಂಬರ್ 9, 11 ಮತ್ತು 13 ರಂದು ನಡೆದಿತ್ತು
ಧಾರವಾಡದ ಆರತಿ ನಾಯ್ಕರ್ ಸಿಎ ಉತ್ತೀರ್ಣ
ಧಾರವಾಡದ ವಿದ್ಯಾರ್ಥಿನಿ ಆರತಿ ನಾಯ್ಕರ್ ಇನ್ಸಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ ನಡೆಸಿದ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದು, ಧಾರವಾಡಕ್ಕೆ ಕೀರ್ತಿ ತಂದಿದ್ದಾರೆ.
ಆರತಿ ನಾಯ್ಕರ್ ಅವರ ತಂದೆ ಫಕ್ಕೀರಪ್ಪ ನಾಯ್ಕರ್ ಭಾರತೀಯ ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದು, ಇದೀಗ ಹು-ಧಾ ಕಮೀಶ್ನರೇಟ್‌ನಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಪುತ್ರಿ ಆರತಿ ಹಾಗೂ ಈಗಾಗಲೇ ಪುತ್ರ ವಿನಾಯಕ ಇಬ್ಬರೂ ಸಿಎ ಉತ್ತೀರ್ಣರಾಗಿದ್ದಾರೆ.
ಆರತಿ ನಗರದ ಪ್ರಜೆಂಟೇಶನ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ, ಜೆಎಸ್‌ಎಸ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಸಿಎಸ್‌ಐ ಕಾಲೇಜಿನಲ್ಲಿ ಬಿಕಾಂ ಶಿಕ್ಷಣವನ್ನು ಪೂರೈಸಿದ್ದು, ಈ ಸಾಧನೆಗೆ ಪ್ರೋತ್ಸಾಹಿಸಿದ ಪೋಷಕರು ಹಾಗೂ ಶಿಕ್ಷಕರು, ಪ್ರಾಧ್ಯಾಪಕರನ್ನು ಸ್ಮರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಗುತ್ತಿಗೆದಾರನ ಬೆತ್ತಲೆಗೊಳಿಸಿ ಹಣ ಸುಲಿಗೆ: ಮೂವರ ಬಂಧನ; ಜಮೀನು ಖರೀದಿ ವಿವಾದದಲ್ಲಿ ಮೋಸ ಹೋದ ಮುಖ್ಯ ಶಿಕ್ಷಕ ಆತ್ಮಹತ್ಯೆ