ಕನ್ನಡ ಸುದ್ದಿ  /  ಕರ್ನಾಟಕ  /  Illegal Hookah Party: ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಹುಕ್ಕಾ ಪಾರ್ಟಿ.. ವಿಡಿಯೋ ಚಿತ್ರೀಕರಿಸಿದ ಪತ್ರಕರ್ತನ ಮೇಲೆ ಹಲ್ಲೆ

Illegal hookah party: ಚಿಕ್ಕಬಳ್ಳಾಪುರದಲ್ಲಿ ಅಕ್ರಮ ಹುಕ್ಕಾ ಪಾರ್ಟಿ.. ವಿಡಿಯೋ ಚಿತ್ರೀಕರಿಸಿದ ಪತ್ರಕರ್ತನ ಮೇಲೆ ಹಲ್ಲೆ

ಚಿಕ್ಕಬಳ್ಳಾಪುರ ಜಿಲ್ಲೆಯ ಕಳವಾರದ ಸ್ಕಂದಗಿರಿ ಬೆಟ್ಟದ ಬಳಿಯ ಮಿಸ್ಟ್ರಿ ರೋಸ್ಟರ್​ ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ಪಾರ್ಟಿ ನಡೆಸಲಾಗಿದೆ. ಮದನ್​ಗೌಡ ಎಂಬವರ ವಿರುದ್ಧ ಹುಕ್ಕಾ ಪಾರ್ಟಿ ಆಯೋಜಿಸಿದ್ದ ಆರೋಪ ಕೇಳಿ ಬಂದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕ್ಕಬಳ್ಳಾಪುರ: ಕೋವಿಡ್​​ನಿಂದಾಗಿ ಎರಡು ವರ್ಷ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಗಿರಲಿಲ್ಲ. ಈ ಬಾರಿಯೂ ಕೋವಿಡ್​ ಉಲ್ಬಣಿಸುವ ಭಯದ ನಡುವೆಯೇ ರಾಜ್ಯದೆಲ್ಲೆಡೆ ಸಡಗರದಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ. ಆದರೆ ಕೆಲವೆಡೆ ಅಹಿತಕರ ಘಟನೆಗಳೂ ಸಂಭವಿಸಿವೆ.

ಟ್ರೆಂಡಿಂಗ್​ ಸುದ್ದಿ

ಅಕ್ರಮ ಹುಕ್ಕಾ ಪಾರ್ಟಿ

ಚಿಕ್ಕಬಳ್ಳಾಪುರ ಜಿಲ್ಲೆಯ ಕಳವಾರದ ಸ್ಕಂದಗಿರಿ ಬೆಟ್ಟದ ಬಳಿಯ ಮೈಸ್ಟ್ರಿ ರೋಸ್ಟರ್​ ಕೆಫೆಯಲ್ಲಿ ಅಕ್ರಮವಾಗಿ ಹುಕ್ಕಾ ಪಾರ್ಟಿ ನಡೆಸಲಾಗಿದೆ. ಮದನ್​ಗೌಡ ಎಂಬವರ ವಿರುದ್ಧ ಹುಕ್ಕಾ ಪಾರ್ಟಿ ಆಯೋಜಿಸಿದ್ದ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಯುವಕ, ಯುವತಿಯರು ಸಾಮೂಹಿಕವಾಗಿ ಹುಕ್ಕಾ ಸೇದುತ್ತಿದ್ದ ವಿಡಿಯೋ ಚಿತ್ರೀಕರಿಸಿದ್ದ ಸ್ಥಳೀಯ ಪತ್ರಕರ್ತನ ಮೇಲೆ ಹಲ್ಲೆ ನಡೆದಿದೆ ಎಂದೂ ಹೇಳಲಾಗಿದೆ.

ಕುಡಿದ ಮತ್ತಿನಲ್ಲಿ ಚಾಲಕನ ಎಡವಟ್ಟು

ಹೊಸ ವರ್ಷಕ್ಕೆ ಭರ್ಜರಿ ಪಾರ್ಟಿ ಮಾಡಿ ಕುಡಿದ ಮತ್ತಿನಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸ್ವಿಫ್ಟ್ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿಯೊಬ್ಬ ಆಟೋಗೆ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಆನಂದ್​ರಾವ್​ ಸರ್ಕಲ್​ ಬಳಿ ನಡೆದಿದೆ. ಹೈಗ್ರೌಂಡ್ಸ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ. ಆದರೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ.

ಐತಿಹಾಸಿಕ ಕೋಟೆ ಒಳಗೆ ಎಣ್ಣೆ ಪಾರ್ಟಿ

ಹೊಸ ವರ್ಷ ಆಚರಿಸಲು ಯುವಕರು ರಾಯಚೂರು ನಗರದ ಬಸ್ ನಿಲ್ದಾಣದ ಬಳಿ ಇರುವ ಐತಿಹಾಸಿಕ ಕೋಟೆ ಒಳಗೆ ಎಣ್ಣೆ ಪಾರ್ಟಿ ಮಾಡಿದ್ದು, ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಬಂದು ಯುವಕರನ್ನು ಚದುರಿಸಿದ್ದಾರೆ. ಈ ವೇಳೆ ಯುವಕರು ಹಾಗೂ ಪೊಲೀಸರ ನಡುವೆ ಗಲಾಟೆ ನಡೆದಿದೆ. ಕೋಟೆಯ ಗೇಟನ್ನು ಲಾಕ್​ ಮಾಡಲಾಗಿದ್ದರೂ, ಗೇಟ್​ ಹತ್ತಿ ಯುವಕರು ಒಳಗೆ ಹೋಗಿದ್ದರು.

ಬೆಂಗಳೂರಲ್ಲಿ ಲಾಠಿಚಾರ್ಜ್​

ಬೆಂಗಳೂರಿನಲ್ಲಿ ಹೊಸ ವರ್ಷಸ ಸಂಭ್ರಮಾಚರಣೆ ಜೋರಾಗಿಯೇ ಇತ್ತು. ಮಧ್ಯರಾತ್ರಿ 1 ಗಂಟೆಯ ವರೆಗೆ ಆಚರಿಸಲು ಅವಕಾಶ ನೀಡಲಾಗಿತ್ತು. 1 ಗಂಟೆ ಕಳೆದರೂ ಜನರು ರಸ್ತೆಯ ಮೇಲೆಯೇ ಎಂಜಾಯ್​ ಮಾಡುತ್ತ ಇದ್ದರು. ಹೀಗಾಗಿ ಜನರ ಬೃಹತ್ ಗುಂಪನ್ನು ಚದುರಿಸಲು ಬೆಂಗಳೂರು ಪೊಲೀಸರು ಲಾಠಿಚಾರ್ಜ್​ ನಡೆಸಿದ್ದಾರೆ.

ಗಮನಿಸಬಹುದಾದ ಇತರೆ ಸುದ್ದಿಗಳು

How India welcomed 2023: ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಹೊಸ ವರ್ಷದ ಸಂಭ್ರಮ ಹೇಗಿತ್ತು? ಚಿತ್ರಗಳು

ಇಡೀ ಜಗತ್ತೇ ಹೊಸ ವರ್ಷದ ಸಂಭ್ರಮದ ಮೂಡ್‌ನಲ್ಲಿದೆ. ಭಾರತದಲ್ಲಿಯೂ ಎಲ್ಲೆಡೆ ಹ್ಯಾಪಿ ನ್ಯೂ ಇಯರ್‌ ಸಂಭ್ರಮ. ನಿನ್ನೆ ರಾತ್ರಿ ದೇಶದ ಪ್ರಮುಖ ನಗರಗಳಲ್ಲಿಯಂತೂ ಸಂಭ್ರಮ ಮುಗಿಲುಮುಟ್ಟಿತ್ತು. ಕಳೆದ ಎರಡು ವರ್ಷಗಳ ಬಳಿಕ ಕೊರೊನಾ ನಿರ್ಬಂಧ ತೆರವಾದ ಬಳಿಕ ಅತ್ಯಧಿಕ ಸಂಖ್ಯೆಯ ಜನರು ನಗರಗಳ ಪ್ರಮುಖ ಸ್ಥಳಗಳಲ್ಲಿ ನೆರೆದು ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ ಕೋರಿದ್ದಾರೆ. ದೆಹಲಿ, ಮುಂಬಯಿ, ಬೆಂಗಳೂರು ಮತ್ತು ಇತರೆ ನಗರಗಳಲ್ಲಿ ಹೊಸ ವರ್ಷಕ್ಕೆ ಸ್ವಾಗತ ಹೇಗಿತ್ತು ಎಂಬ ಚಿತ್ರಪಟ ಇಲ್ಲಿದೆ ಕ್ಲಿಕ್​ ಮಾಡಿ.

IPL_Entry_Point