Importance of eye care: ʻಆರೋಗ್ಯಕರ ಕಂಗಳು, ಬದುಕಿನ ಭವಿಷ್ಯದ ಹೊನ್ನುʼ; ಡಾ.ವಿವೇಕ ಭಾಸ್ಕರ ಪ್ರತಿಪಾದನೆ
Importance of eye care: ಬದುಕಿನಲ್ಲಿ ಕಂಗಳ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕಂಗಳೇ ಬದುಕಿನಲ್ಲಿ ಭವಿಷ್ಯದ ಹೊನ್ನು ಎಂದು ಎಸ್.ವಿ.ವೈ.ಎಂನ ಕಾರ್ಯದರ್ಶಿಯೂ ಆಗಿರುವ ಬೆಂಗಳೂರಿನ ಶೇಖರ ಕಣ್ಣಿನ ಆಸ್ಪತ್ರೆಯ ಡಾ.ವಿವೇಕ ಭಾಸ್ಕರ್ ಪ್ರತಿಪಾದಿಸಿದರು.
ಧಾರವಾಡ: ಬದುಕಿನಲ್ಲಿ ಕಂಗಳ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕಂಗಳೇ ಬದುಕಿನಲ್ಲಿ ಭವಿಷ್ಯದ ಹೊನ್ನು ಎಂದು ಎಸ್.ವಿ.ವೈ.ಎಂನ ಕಾರ್ಯದರ್ಶಿಯೂ ಆಗಿರುವ ಬೆಂಗಳೂರಿನ ಶೇಖರ ಕಣ್ಣಿನ ಆಸ್ಪತ್ರೆಯ ಡಾ.ವಿವೇಕ ಭಾಸ್ಕರ್ ಪ್ರತಿಪಾದಿಸಿದರು.
ಟ್ರೆಂಡಿಂಗ್ ಸುದ್ದಿ
ಅವರು, ಬುಧವಾರ (ಡಿ.28) Wednesday Webinar - ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠ ಕಾರ್ಯಕ್ರಮದಲ್ಲಿ ತಂತ್ರಜ್ಞಾನ ಯುಗದಲ್ಲಿ ಕಣ್ಣಿನ ಮಹತ್ವ ಎಂಬ ವಿಷಯದ ಬಗ್ಗೆ ಮಾತನಾಡಿದರು.
ಮನುಷ್ಯನ ಪಂಚೇಂದ್ರಿಯಗಳಾದ ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮಗಳು ಕ್ರಮವಾಗಿ ನೋಡುವುದು, ಕೇಳುವುದು, ವಾಸನೆ ಗ್ರಹಿಸುವುದು, ರುಚಿಗ್ರಹಿಸುವುದು ಮತ್ತು ಸ್ಪರ್ಶ ಗ್ರಹಿಸುವುದು ಹೀಗೆ, ಎಲ್ಲವೂ ಒಂದೊಂದು ವಿಶಿಷ್ಟ ಕಾರ್ಯದ ಕಾರುಬಾರಿಗಳಾಗಿದ್ದು ಇವುಗಳ ಕಾರ್ಯ ಯಾವುದೇ ಅಡೆತಡೆಗಳಿಲ್ಲದೇ ಸುಗಮವಾಗಿ ಸಾಗಿದೆ ಎಂದರೆ, ಆ ವ್ಯಕ್ತಿಯು ಆರೋಗ್ಯವಂತನಾಗಿದ್ದಾನೆ ಎಂದು ಪರಿಗಣಿಸಬಹುದು. ಹಾಗಾಗಿ ಪಂಚೇಂದ್ರಿಯಗಳ ಕಾರ್ಯವು ಮನುಷ್ಯನ ಆರೋಗ್ಯದ ಸೂಚಕಗಳು ಎಂದರೆ ತಪ್ಪಾಗಲಾರದು. ಅದರಲ್ಲೂ, ಈ ತಂತ್ರಜ್ಞಾನದ ಯುಗದಲ್ಲಿ ವಿಶೇಷವಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ ಸಂಗತಿಯೇ ಸರಿ.
ಮೊಬೈಲ್, ಲ್ಯಾಪ್‌ಟಾಪ್ ಮತ್ತು ದೂರದರ್ಶನಗಳಂತಹ ಪರದೆಗಳ ಯಥೇಚ್ಛ ಬಳಕೆಯಿಂದ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಾಣಿಸುತ್ತಿರುವುದನ್ನು ಗಮನಿಸಬಹುದು. ಹೀಗೆಂದ ಮಾತ್ರಕ್ಕೆ ತಂತ್ರಜ್ಞಾನ ತೊರೆದು ಬದುಕುವುದು ಎಂದರ್ಥವಲ್ಲ, ಅವಶ್ಯಕತೆಯನ್ನು ಅರಿತು ಬಳಸುವುದು ಎಂದರ್ಥ ಎಂಬುದನ್ನು ತಿಳಿಯಪಡಿಸಿದರು. ಕಣ್ಣಿಗೆ ಸಂಬಂಧಿಸಿ ಕಣ್ಣಿಗೆ ಪೊರೆ ಬರುವುದು ಇದು ಇಳಿವಯಸ್ಸಿನವರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಕಾಯಿಲೆಯಾಗಿದ್ದು ಶಸ್ತ್ರ ಚಿಕಿತ್ಸೆಯ ಮೂಲಕ ಗುಣಪಡಿಸಬಹುದು.
ಕಣ್ಣು ಗೀಜು ಕಟ್ಟುವುದು, ಪಿಚ್ಚುಗಟ್ಟುವುದು ಅಥವಾ ಮದ್ರಾಸ್ ಐ ಎಂದು ಕರೆಯಲ್ಪಡುವ ಈ ಖಾಯಿಲೆಯು ಸಾಕ್ರಾಮಿಕವಾಗಿದ್ದು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿ ಔಷಧೋಪಚಾರಗಳಿಂದ ಗುಣಪಡಿಸಬಹುದು.
ಕಣ್ಣಿನ ತುರಿಕೆ ಇದು ಅಲ್ಪಕಾಲಿಕ ಅಥವಾ ದೀರ್ಘಕಾಲಿಕ ಬೇನೆಯಾಗಿದ್ದು, ಬಿಸಿಲು ಮತ್ತು ಬೆಳಕು ನೋಡಲು ಸಾಧ್ಯವಾಗುವುದಿಲ್ಲ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡುವುದರಿಂದ ಗುಣಪಡಿಸಿಕೊಳ್ಳಬಹುದು. ಇರುಳು ಕುರುಡು ಇದು ವಿಟಮಿನ್ ಎ ಕೊರತೆಯಿಂದ ಉಂಟಾಗುವ ಖಾಯಿಲೆಯಾಗಿದ್ದು, ಕೆಲವೊಮ್ಮೆ ಅನುವಂಶೀಯ ಪ್ರಭಾವವನ್ನು ಇಲ್ಲಿ ಗಮನಿಸಬಹುದು.
ಮೆಳ್ಳಗಣ್ಣು ಕಣ್ಣನ ಖಾಯಿಲೆಯಾಗಿದ್ದು ಚಿಕ್ಕ ವಯಸ್ಸಿನಲ್ಲೇ ಸೂಕ್ತ ಚಿಕಿತ್ಸೆ, ಚಷ್ಮ ಅಥವಾ ಅಗತ್ಯ ಬಿದ್ದಲ್ಲಿ ಶಸ್ತ್ರ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಆದಷ್ಟು ಕಣ್ಣುಗಳ ವಿಷಯದಲ್ಲಿ ಜಾಗರೂಕತೆಯನ್ನು ತೋರುವುದರಿಂದ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬಹುದು. ಹೀಗೆ ಕಣ್ಣಿಗೆ ಸಂಭಂದಿಸಿದ ವಿವಿಧ ಖಾಯಿಲೆಗಳ ಕುರಿತು ಮಾಹಿತಿ ನೀಡುವುದರ ಜತೆಗೆ, ಅವುಗಳಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳುವ ಬಗೆಯನ್ನು ಡಾ.ವಿವೇಕ ಭಾಸ್ಕರ್ ತಿಳಿಯಪಡಿಸಿದರು.
ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 688 ವಿದ್ಯಾರ್ಥಿಗಳು ಮತ್ತು 855 ವಿದ್ಯಾರ್ಥಿನಿಯರು ಸೇರಿದಂತೆ 1543 ಮಕ್ಕಳು ಪಾಲ್ಗೊಂಡು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ವೆಬಿನಾರ್ ಯಶಸ್ವಿಗೊಳಿಸಿದರು.
ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಪಠ್ಯ ವಿಷಯಗಳ ಹೊರತಾಗಿ ಜ್ಞಾನ ವೃದ್ಧಿಗೆ ಪೂರಕವಾಗುವಂತಹ ವಿಷಯಗಳ ಮೇಲೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿ ಬುಧವಾರ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಎಂಬ ಶೀರ್ಷಿಕೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ವೆಬಿನಾರ್‌ಗಳನ್ನು ಸಂಘಟಿಸುತ್ತಿದೆ.