ವಿದೇಶಗಳಲ್ಲಿ ಕೈತುಂಬಾ ವೇತನ ಕೊಡುವ ಉದ್ಯೋಗಗಳನ್ನು ಬಿಟ್ಟು ಸ್ವದೇಶಕ್ಕೆ ಮರಳುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ; ಇಲ್ಲಿದೆ ಕಾರಣ
ಕನ್ನಡ ಸುದ್ದಿ  /  ಕರ್ನಾಟಕ  /  ವಿದೇಶಗಳಲ್ಲಿ ಕೈತುಂಬಾ ವೇತನ ಕೊಡುವ ಉದ್ಯೋಗಗಳನ್ನು ಬಿಟ್ಟು ಸ್ವದೇಶಕ್ಕೆ ಮರಳುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ; ಇಲ್ಲಿದೆ ಕಾರಣ

ವಿದೇಶಗಳಲ್ಲಿ ಕೈತುಂಬಾ ವೇತನ ಕೊಡುವ ಉದ್ಯೋಗಗಳನ್ನು ಬಿಟ್ಟು ಸ್ವದೇಶಕ್ಕೆ ಮರಳುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ; ಇಲ್ಲಿದೆ ಕಾರಣ

ವಿದೇಶಗಳಲ್ಲಿ ಕೈತುಂಬಾ ವೇತನ ಕೊಡುವ ಉದ್ಯೋಗಗಳನ್ನು ಬಿಟ್ಟು ಸ್ವದೇಶಕ್ಕೆ ಮರಳುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕಾರಣಗಳಾದರೂ ಏನು? ಹೆಚ್ಚುತ್ತಿರುವ ಹಿಮ್ಮುಖ ವಲಸೆ, ಕಡಿಮೆಯಾಗುತ್ತಿರುವ ವಿದೇಶಿ ವ್ಯಾಮೋಹಕ್ಕೆ ಕಾರಣಗಳೇನು? (ವರದಿ: ಎಚ್ ಮಾರುತಿ)

ವಿದೇಶಗಳಲ್ಲಿ ಕೈತುಂಬಾ ವೇತನ ಕೊಡುವ ಉದ್ಯೋಗಗಳನ್ನು ಬಿಟ್ಟು ಸ್ವದೇಶಕ್ಕೆ ಮರಳುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ; ಇಲ್ಲಿದೆ ಕಾರಣ
ವಿದೇಶಗಳಲ್ಲಿ ಕೈತುಂಬಾ ವೇತನ ಕೊಡುವ ಉದ್ಯೋಗಗಳನ್ನು ಬಿಟ್ಟು ಸ್ವದೇಶಕ್ಕೆ ಮರಳುತ್ತಿರುವ ಭಾರತೀಯರ ಸಂಖ್ಯೆಯಲ್ಲಿ ಹೆಚ್ಚಳ; ಇಲ್ಲಿದೆ ಕಾರಣ

ಮೊದಲಿನ ಹಾಗೆ ವಿದೇಶಗಳು ಭಾರತದ ಯುವಕರನ್ನು ಕೈಬೀಸಿ ಕರೆಯುತ್ತಿಲ್ಲ. ಆಯಾ ದೇಶಗಳ ನಾಗರೀಕರಿಗೆ ದೇಶಗಳು ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಕಾನೂನು ರೂಪಿಸಿವೆ. ಅದೆಷ್ಟೋ ರಾಷ್ಟ್ರಗಳಲ್ಲಿ ಹೋರಾಟ ಪ್ರತಿಭಟನೆಗಳೂ ನಡೆದ ವರದಿಗಳನ್ನು ಕಂಡಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕ, ಇಂಗ್ಲೆಂಡ್, ಕೆನಡಾ ಮೊದಲಾದ ದೇಶಗಳಲ್ಲಿ ಉದ್ಯೋಗಾವಕಾಶಗಳು ಕುಸಿಯುತ್ತಿವೆ. ಸಮೀಕ್ಷೆಗೊಳಗಾದವರ ಪೈಕಿ ಶೇ.52ರಷ್ಟು ಯುವಕರು ಉದ್ಯೋಗವಕಾಶಗಳಿಗಾಗಿ ಭಾರತವನ್ನೇ ಆಯ್ಕೆಮಾಡಿಕೊಂಡಿದ್ದಾರೆ. ಶೇ.37 ಮಂದಿ ಆದಾಯ ಮತ್ತು ಜೀವನ ವೆಚ್ಚ ದುಬಾರಿ ಅಲ್ಲ ಎನ್ನುವ ಕಾರಣವನ್ನು ಮುಂದೊಡಿದ್ದರೆ ಶೇ.29ರಷ್ಟು ಮಂದಿ ಭಾರತವೂ ಡಿಜಿಟಲೀಕರಣಗೊಂಡಿರುವ ಕಾರಣಕ್ಕೆ ಆಯ್ಕೆ ಮಾಡಿಕೊಂಡಿರುವುದಾಗಿ ಉತ್ತರಿಸಿದ್ದಾರೆ. ಕೌಟುಂಬಿಕ ಸ್ನೇಹಿ ಪರಿಸರ, ಸುರಕ್ಷತೆ ಮತ್ತು ಗುಣಮಟ್ಟದ ಜೀವನ ನಡೆಸುವ ಕಾರಣಕ್ಕೂ ಭಾರತವನ್ನು ಆಯ್ಕೆ ಮಾಡಿಕೊಂಡಿರುವವರ ಸಂಖ್ಯೆ ಕಡಿಮೆಯೇನಿಲ್ಲ.

ಹೈದರಾಬಾದ್‌ ಏಕೆ?

ವಿದೇಶಗಳಲ್ಲಿ ಕೆಲಸ ಮಾಡಬೇಕೆಂಬ ಬಯಕೆ ಹೊಂದಿರುವವರ ಸಂಖ್ಯೆ ಶೇ. 78ರಿಂದ ಶೇ.54ಕ್ಕೆ ಕುಸಿದಿದೆ ಎಂದು ಅಧ್ಯಯನವೊಂದು ಹೇಳುತ್ತದೆ. ಹಾಗಾದರೆ ವಿದೇಶಗಳಿಗೆ ಹೋಗದೆ ಭಾರತದಲ್ಲೇ ಉಳಿಯುವುದಾದರೆ ಅವರ ಆಯ್ಕೆಯ ನಗರ ಯಾವುದಾಗಿರಬಹುದು ಎಂಬ ಪ್ರಶ್ನೆ ಮೂಡಬಹುದು. ಅಂತಹ ಉದ್ಯೋಗಿಗಳ ಮೊದಲ ಆಯ್ಕೆ ಹೈದರಾಬಾದ್‌, ಎರಡನೆಯದಾಗಿ ಬೆಂಗಳೂರು ನಂತರ ದೆಹಲಿ ಎಂದು ಈ ಅಧ್ಯಯನದ ವರದಿ ಹೇಳುತ್ತದೆ. ಆರ್ಥಿಕ ಭದ್ರತೆ ಮತ್ತು ಉದ್ಯೋಗದಲ್ಲಿ ಉನ್ನತಿ ಹೊಂದಲು ಈ ನಗರಗಳನ್ನು ಅಯ್ಕೆ ಮಾಡಿಕೊಳ್ಳುತ್ತಿರುವುದಾಗಿ ಹೇಳುತ್ತಾರೆ.

ಬೆಳೆಯುತ್ತಿರುವ ಐಟಿ ಉದ್ಯಮ, ಅಗ್ಗದ ಗುಣಮಟ್ಟದ ಜೀವನ ಸುರಕ್ಷಾ ನಗರ ಎಂಬ ಕಾರಣಗಳಿಗಾಗಿ ಹೈದರಾಬಾದ್‌ ಅನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದಾಗಿ ಉತ್ತರಿಸಿದ್ದಾರೆ. ಇಂಗ್ಲೆಂಡ್‌ ನಲ್ಲೇ ಕಂಪ್ಯೂಟರ್‌ ಸೈನ್ಸ್‌ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದಿದ್ದರೂ ಅಲ್ಲಿ ಉದ್ಯೋಗ ಹುಡುಕುವುದು ಕಷ್ಡವಾಯಿತು. ನನ್ನ ಜೊತೆ ನನ್ನ ಪತ್ನಿಯೂ ಇದ್ದರು. ಹಾಗಾಗಿ ಭಾರತವನ್ನೇ ಆಯ್ಕೆ ಮಾಡಿಕೊಂಡು ಹೈದರಾಬಾದ್‌ ನಲ್ಲಿ ಆರಂಕಿಯ ಸಂಬಳಕ್ಕೆ ಸೇರಿಕೊಂಡಿದ್ಧೇನೆ ಎಂದು ಒಬ್ಬರು ಹೇಳುತ್ತಾರೆ. ಕೇವಲ ಐಟಿ ಮಾತ್ರವಲ್ಲ, ಹಣಕಾಸು, ಫಾರ್ಮಾ ಮೊದಲಾದ ವಿಭಾಗಗಳಲ್ಲಿಯೂ ಸಾಕಷ್ಟು ಉದ್ಯೋಗಾವಕಾಶಗಳಿವೆ ಎಂದೂ ಅವರು ಹೇಳುತ್ತಾರೆ.

ಕೆನಡಾದಲ್ಲಿ ಉದ್ಯೋಗಿಯಾಗಿದ್ದ ಮತ್ತೊಬ್ಬರು ಅಲ್ಲಿಂದ ಹಿಂತಿರುಗಿ ಭಾರತದಲ್ಲೇ ಉದ್ಯೋಗ ಹುಡುಕಿಕೊಂಡಿದ್ದಾರೆ. ಕೆನಡಾದಲ್ಲಿ ನನ್ನ ತಾಯಿಯ ಆರೋಗ್ಯದ ವೆಚ್ಚವೇ ನನನ್ನ ಸಂಬಳವನ್ನು ಮೀರುತ್ತಿತ್ತು. ಹಾಗಾಗಿ ಭಾರತಕ್ಕೆ ಮರಳಿದ್ದಾಗಿ ಅವರು ಹೇಳುತ್ತಾರೆ. ಭಾರತಕ್ಕೆ ವಿಮಾನದ ಟಿಕೆಟ್‌ ಪಡೆಯುವುದು ವಿದೇಶಗಳಲ್ಲಿ ಒಂದು ತಿಂಗಳ ಜೀವನ ನಡೆಸುವುದಕ್ಕಿಂತ ಸುಲಭ. ಹಾಗಾಗಿ ನಾನು ಕೂಡಲೇ ಸ್ವದೇಶಕ್ಕೆ ಮರಳಿ ಇಲ್ಲಿಯೇ ಉದ್ಯೋಗ ಹುಡುಕಿಕೊಂಡಿದ್ದಾಗಿ ಮತ್ತೊಬ್ಬರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

ವಿದೇಶದಲ್ಲಿ ಕೆಲಸ ಮಾಡುತ್ತಿದ್ದವರ ಅಂತರಾಳದ ಮಾತಿದು

ಇದನ್ನೂ ಓದಿ: ಕೆಲಸದ ಸ್ಥಳಕ್ಕೂ ಬೇಕು ವಾಸ್ತು; ಉತ್ಪಾದಕತೆ ಹೆಚ್ಚಿಸಿ ಯಶಸ್ಸು ಸಾಧಿಸಲು ಪರಿಣಾಮಕಾರಿ ವಾಸ್ತು ಸಲಹೆ

ವಿದೇಶಗಳಲ್ಲಿ ಕೈತುಂಬಾ ಸಂಬಳ ತರುವ ಉದ್ಯೋಗಳನ್ನು ಬಿಟ್ಟು ಸ್ವದೇಶ ಭಾರತಕ್ಕೆ ಮರಳುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇದೊಂದು ರೀತಿಯಲ್ಲಿ ಹಿಮ್ಮುಖ ವಲಸೆ ಅಥವಾ ರಿವರ್ಸ್‌ ಮೈಗ್ರೇಷನ್‌ ಎಂದೂ ಹೇಳಬಹುದಾಗಿದೆ. ಸಾಮಾಜಿಕ ವ್ಯವಸ್ಥೆಗಳು, ಆರೋಗ್ಯ, ರಾಜಕೀಯ ಸ್ಥಿರತೆಯಂತಹ ಕಾರಣಗಳಿಗಿಂತಲೂ ಹೆಚ್ಚಾಗಿ ಸುರಕ್ಷತೆ ಮತ್ತು ಭಾವನಾತ್ಮಕ ವಿಷಯಗಳಿಗಾಗಿ ಭಾರತಕ್ಕೆ ಮರಳುತ್ತಿದ್ದಾರೆ. ಅಮೆರಿಕದಲ್ಲಿ ಕೈತುಂಬಾ ವೇತನ ತರುವ ಉದ್ಯೋಗದಲ್ಲಿದ್ದೇನೆ. ಆದರೆ ನನಗೆ ಅಲ್ಲಿ ಒಂಟಿತನ ಕಾಡುತ್ತಿತ್ತು. ಮಾತನಾಡಲೂ ಆತ್ಮೀಯರು ಜೊತೆಗಿರಲಿಲ್ಲ. ಅಪಾರವಾದ ಕೆಲಸದಿಂದ ಒತ್ತಡ ಹೆಚ್ಚುತ್ತಿತ್ತು. ಇದರಿಂದ ನಾನು ಖಿನ್ನತೆಗೊಳಗಾಗಿದ್ದೆ. ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಆಗಾಗ್ಗೆ ಹಲ್ಲೆ ನಡೆಯುತ್ತಿರುವ ಸುದ್ದಿ ನನ್ನನ್ನು ಕಂಗೆಡಿಸಿತ್ತು. ಹಾಗಾಗಿ ನಾನು ಭಾರತಕ್ಕೆ ಮರಳಿದೆ. ಅಲ್ಲಿ ಉದ್ಯೋಗ ಬಿಟ್ಟಿದ್ದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ. ಈಗ ಹೈದರಾಬಾದ್‌ ನಲ್ಲಿ ಉದ್ಯೋಗ ಹುಡುಕಿಕೊಂಡಿದ್ಧೇನೆ. ಬಂಧುಬಳಗದ ಜತೆ ಇದ್ಧೇನೆ ಎಂದು ಹೇಳುತ್ತಾರೆ. ಕಾಲಾಯ ತಸ್ಮೈ ನಮಃ ಎಂದು ಇದಕ್ಕೇ ಹೇಳುವುದು. ನಮ್ಮ ದೇಶವೇ ನಮಗೆ ಚೆನ್ನ. ಹಣದ ವ್ಯಾಮೋಹಕ್ಕಿಂತಲೂ ಜೀವನವೇ ಮುಖ್ಯ ಎನ್ನುವುದು ಐವ ಜನಾಂಗಕ್ಕೆ ಅರ್ಥವಾಗುತ್ತಿರುವುದು ಅಚ್ಚರಿಯ ವಿಷಯವೇ ಸರಿ!

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner