ಹಿರಿಯ ಐಪಿಎಸ್‌ ಅಧಿಕಾರಿಗಳಾದ ಚಂದ್ರಸೇಖರ್‌, ಶ್ರೀನಾಥ್‌ ಮಹಾದೇವ ಜೋಶಿ, ಸಿಕೆಬಾಬಾ ಸೇರಿ 24 ಪೊಲೀಸ್‌ ಸಿಬ್ಬಂದಿಗೆ ರಾಷ್ಟ್ರಪತಿ ಪದಕ-independence day 2024 1037 police medals for central and state forces announced including 24 from karnataka mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಹಿರಿಯ ಐಪಿಎಸ್‌ ಅಧಿಕಾರಿಗಳಾದ ಚಂದ್ರಸೇಖರ್‌, ಶ್ರೀನಾಥ್‌ ಮಹಾದೇವ ಜೋಶಿ, ಸಿಕೆಬಾಬಾ ಸೇರಿ 24 ಪೊಲೀಸ್‌ ಸಿಬ್ಬಂದಿಗೆ ರಾಷ್ಟ್ರಪತಿ ಪದಕ

ಹಿರಿಯ ಐಪಿಎಸ್‌ ಅಧಿಕಾರಿಗಳಾದ ಚಂದ್ರಸೇಖರ್‌, ಶ್ರೀನಾಥ್‌ ಮಹಾದೇವ ಜೋಶಿ, ಸಿಕೆಬಾಬಾ ಸೇರಿ 24 ಪೊಲೀಸ್‌ ಸಿಬ್ಬಂದಿಗೆ ರಾಷ್ಟ್ರಪತಿ ಪದಕ

Independence Day 2024 Police Medals; ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ 1037 ಪೊಲೀಸ್ ಪದಕಗಳನ್ನು ಕೇಂದ್ರ ಮತ್ತು ರಾಜ್ಯ ಪೊಲೀಸ್ ಪಡೆಗಳ ಅಧಿಕಾರಿ ಸಿಬ್ಬಂದಿಗೆ ಘೋಷಿಸಲಾಗಿದೆ. ಇದು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಪದಕವಾಗಿದ್ದು, ಕರ್ನಾಟಕದ 24 ಪೊಲೀಸ್ ಸಿಬ್ಬಂದಿಗೆ ಪದಕ ಲಭಿಸಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಹಿರಿಯ ಐಪಿಎಸ್‌ ಅಧಿಕಾರಿಗಳಾದ ಚಂದ್ರಸೇಖರ್‌ (ಮಧ್ಯದಲ್ಲಿರುವವರು), ಶ್ರೀನಾಥ್‌ ಮಹಾದೇವ ಜೋಶಿ (ಎಡ ಚಿತ್ರ), ಸಿಕೆಬಾಬಾ (ಬಲಚಿತ್ರ) ಸೇರಿ 24 ಪೊಲೀಸ್‌ ಸಿಬ್ಬಂದಿಗೆ ರಾಷ್ಟ್ರಪತಿ ಪದಕ
ಹಿರಿಯ ಐಪಿಎಸ್‌ ಅಧಿಕಾರಿಗಳಾದ ಚಂದ್ರಸೇಖರ್‌ (ಮಧ್ಯದಲ್ಲಿರುವವರು), ಶ್ರೀನಾಥ್‌ ಮಹಾದೇವ ಜೋಶಿ (ಎಡ ಚಿತ್ರ), ಸಿಕೆಬಾಬಾ (ಬಲಚಿತ್ರ) ಸೇರಿ 24 ಪೊಲೀಸ್‌ ಸಿಬ್ಬಂದಿಗೆ ರಾಷ್ಟ್ರಪತಿ ಪದಕ

ಬೆಂಗಳೂರು: ದೇಶದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕರ್ನಾಟಕದ 19 ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕ ಘೋಷಿಸಲಾಗಿದೆ.‌ ಆದರೆ ಈ ಬಾರಿ ರಾಜ್ಯಕ್ಕೆ ರಾಷ್ಟ್ರಪತಿ ಶೌರ್ಯ ಪದಕ, ಶೌರ್ಯ ಪದಕಗಳನ್ನು ರಾಜ್ಯಕ್ಕೆ ನೀಡಿಲ್ಲ. ವಿಶಿಷ್ಟ ಸೇವಾ ಪದಕ ಮತ್ತು ಶ್ಲಾಘನೀಯ ಸೇವಾ ಪದಕ ಸೇರಿ ಒಟ್ಟು 24 ಪದಕಗಳನ್ನು ಘೋಷಿಸಲಾಗಿದೆ.

ವಿಶಿಷ್ಟ ಸೇವಾ ಪದಕ: ಎಂ.ಚಂದ್ರಸೇಖರ್‌(ಐಪಿಎಸ್) ಎಡಿಜಿಪಿ, ಐಎಸ್‌ಡಿ, ಬೆಂಗಳೂರು

ಶ್ಲಾಘನೀಯ ಸೇವಾ ಪದಕ: ಜೋಶಿ ಶ್ರೀನಾಥ್‌ ಮಹಾದೇವ (ಐಪಿಎಸ್)‌ ಎಸ್.ಪಿ. ಲೋಕಾಯುಕ್ತ, ಸಿ.ಕೆ.ಬಾಬಾ(ಐಪಿಎಸ್) ಎಸ್.ಪಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್.ಪಿ.

ಶಾಘನೀಯ ಸೇವಾ ಪದಕ ಪುರಸ್ಕೃತರು

ರಾಮಗೊಂಡ ಬಿ ಬಸರಗಿ ಎಎಸ್‌ ಪಿ (ಬಳ್ಳಾರಿ ಜಿಲ್ಲೆ), ಎಂ.ಡಿ.ಶರತ್ (ಎಸ್‌ ಪಿ. ಸಿಐಡಿ,ಬೆಂಗಳೂರು), ವಿ.ಸಿ.ಗೋಪಾಲ ರೆಡ್ಡಿ (ಡಿಸಿಪಿ, ಬೆಂಗಳೂರು), ಪಿ.ಮುರಳೀಧರ (ಡಿವೈಎಸ್‌ ಪಿ, ಚಿಂತಾಮಣಿ ಉಪ ವಿಭಾಗ ಚಿಕ್ಕಬಳ್ಳಾಪುರ ಜಿಲ್ಲೆ), ಗಿರಿ ಕೆ.ಸಿ (ಡಿವೈಎಸ್‌ ಪಿ, ಚನ್ನಪಟ್ಟಣ ಉಪ ವಿಭಾಗ, ರಾಮನಗರ ಜಿಲ್ಲೆ), ಬಸವೇಶ್ವರ ( ಸಹಾಯಕ ನಿರ್ದೇಶಕ, ರಾಜ್ಯ ಗುಪ್ತ ವಾರ್ತೆ ಕಲಬುರಗಿ), ಕೆ.ಬಸವರಾಜ (ಡಿವೈ ಎಸ್‌ ಪಿ, ಐಸ್‌ ಡಿ, ಕಲಬುರಗಿ), ಎಸ್.ಮಹೇಶ್ (‌ಸಹಾಯಕ ನಿರ್ಧೇಶಕ, ರಾಜ್ಯ ಗುಪ್ತ ವಾರ್ತೆ, ಬೆಂಗಳೂರು), ರವೀಶ್‌ ಎಸ್‌.ನಾಯಕ್ (‌ ಎಸಿಪಿ, ಸಿಸಿಆರ್‌ ಬಿ, ಬೆಂಗಳುರು ನಗರ), ಪ್ರಬಾಕರ್‌ ಜಿ. (ಎಸಿಪಿ, ಸಂಚಾರ ಯೋಜನೆ, ಬೆಂಗಳೂರು ನಗರ), ಹರೀಶ್‌ ಎಚ್.ಆರ್(‌ ಸಹಾಯಕ ಕಮಾಂಡೆಂಟ್‌, ಕೆಎಸ್‌ ಆರ್‌ ಪಿ, ಹಾಸನ), ಮಂಜುನಾಥ ಎಸ್‌ ಕಲ್ಲೇದೇವರ್‌ ( ಪೊಲೀಸ್‌ ಸಬ್‌ ಇನ್‌ ಸ್ಪೆಕ್ಟರ್‌ ,ಎಫ್‌ ಪಿಬಿ ದಾವಣಗೆರೆ), ಗೌರಮ್ಮ ( ಎಎಸ್‌ ಐ, ಬೆಂಗಳೂರು), ಮಹಬೂಬ್‌ ಸಾಬ್‌ ಎಸ್‌ ಮುಜಾವರ್‌ ( ಸಿಎಚ್‌ ಸಿ, ಮಡಗುಳಿ ಪೊಲೀಸ್‌ ಠಾಣೆ ವಿಜಯಪುರ ಜಿಲ್ಲೆ), ವಿಜಯಕುಮಾರ್ (ಸಿಎಚ್‌ ಡಿ, ಡಿಸಿಆರ್‌ ಬಿ ಉಡುಪಿ),

ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣೆ ವಿಭಾಗದಲ್ಲಿ ಹಿರಿಯ ಪ್ಲಾಟೂನ್‌ ಕಮಾಂಡರ್‌ ಬಸವಲಿಂಗ ಕುರುಬ ಬಚಲಪ್ಪ; ವಿಜಯ್‌ ಕುಮಾರ್‌ ಎನ್;‌ ರೇವಣಪ್ಪ ಬಿ; ಡಾ.ಸತೀಶ್‌ ವೈ. ಇರ್ಕಲ್;‌ ಡಾ.ಮುರಳಿ ಮೋಹನ್‌ ಅವರಿಗೆ ವಿಶಿಷ್ಟ ಸೇವಾ ಪದಕ ಪ್ರಕಟಿಸಲಾಗಿದೆ.

ದೇಶದಲ್ಲಿ 1037 ಪೊಲೀಸ್ ಸಿಬ್ಬಂದಿಗೆ ಸೇವಾ ಪದಕ ಘೋಷಣೆ

ಸರ್ಕಾರವು ಬುಧವಾರ (ಆಗಸ್ಟ್ 14) ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ವಿವಿಧ ಕೇಂದ್ರ ಮತ್ತು ರಾಜ್ಯ ಪಡೆಗಳ 1,037 ಪೊಲೀಸ್ ಸಿಬ್ಬಂದಿಗೆ ಸೇವಾ ಪದಕಗಳನ್ನು ಘೋಷಿಸಿದೆ.

ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪದಕ (ಪಿಎಂಜಿ) ಮತ್ತು ಶೌರ್ಯಕ್ಕಾಗಿ 231 ಪದಕ (ಜಿಎಂ) ಸೇರಿದಂತೆ 214 ಸಿಬ್ಬಂದಿಗೆ ಶೌರ್ಯ ಪದಕಗಳನ್ನು ನೀಡಲಾಗುತ್ತದೆ. ಅಗ್ನಿಶಾಮಕ ಯೋಧರಿಗೆ ನಾಲ್ಕು ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿಗೆ ಒಂದು ಗ್ಯಾಲಂಟರಿ ಮೆಡಲ್‌ ಒಳಗೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಹೇಳಿದೆ

ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ (ಸಿಆರ್‌ಪಿಎಫ್) ಗರಿಷ್ಠ 52, ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೆ 31, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದಿಂದ ತಲಾ 17 ಪೊಲೀಸ್ ಸಿಬ್ಬಂದಿ, ಛತ್ತೀಸ್‌ಗಢದಿಂದ 15 ಮತ್ತು ಮಧ್ಯಪ್ರದೇಶದಿಂದ ಒಂದು ಡಜನ್ ಪದಕಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇತರೆ ಪದಕಗಳಲ್ಲಿ ವಿಶಿಷ್ಟ ಸೇವೆಗಾಗಿ 94 ರಾಷ್ಟ್ರಪತಿಗಳ ಪೊಲೀಸ್ ಪದಕ ಮತ್ತು 729 ಉತ್ತಮ ಸೇವೆಗಾಗಿ ಇರುವ ಪದಕಗಳು ಸೇರಿವೆ. ಈ ಪದಕಗಳನ್ನು ವರ್ಷಕ್ಕೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಎರಡು ಬಾರಿ ಘೋಷಿಸಲಾಗುತ್ತದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆ ಎಚ್‌ಟಿ ಕನ್ನಡ ಬೆಸ್ಟ್‌. ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿ ರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲು kannada.hindustantimes.com/nation-and-world ಕ್ಕೆ ಭೇಟಿ ನೀಡಿ.)