Independence Day 2024: ಸ್ವಾತಂತ್ರ್ಯ ದಿನದಂದು ಮಳೆ ಬರುತ್ತಾ, ಬಿಸಿಲು ಜೋರಿರುತ್ತಾ? ಹೀಗಿದೆ ಆಗಸ್ಟ್ 15ರ ಹವಾಮಾನ ವರದಿ-independence day 2024 karnataka weather report of august 15th rain news independence day weather report ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Independence Day 2024: ಸ್ವಾತಂತ್ರ್ಯ ದಿನದಂದು ಮಳೆ ಬರುತ್ತಾ, ಬಿಸಿಲು ಜೋರಿರುತ್ತಾ? ಹೀಗಿದೆ ಆಗಸ್ಟ್ 15ರ ಹವಾಮಾನ ವರದಿ

Independence Day 2024: ಸ್ವಾತಂತ್ರ್ಯ ದಿನದಂದು ಮಳೆ ಬರುತ್ತಾ, ಬಿಸಿಲು ಜೋರಿರುತ್ತಾ? ಹೀಗಿದೆ ಆಗಸ್ಟ್ 15ರ ಹವಾಮಾನ ವರದಿ

ಸ್ವಾತಂತ್ರ್ಯ ದಿನಕ್ಕೆ ಇನ್ನೆರಡೇ ದಿನಗಳು ಬಾಕಿ ಇವೆ. ಸ್ವಾತಂತ್ರ್ಯೋತ್ಸವ ಎಂದರೆ ಭಾರತದಾದ್ಯಂತ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿರುತ್ತದೆ. ಈ ದಿನ ಮಳೆ ಬರುತ್ತಾ, ಬಿಸಿಲು ಜೋರಿರುತ್ತಾ, ಅಂದು ಕರ್ನಾಟಕ ಹವಾಮಾನ ಹೇಗಿರಬಹುದು ಎಂಬ ಬಗ್ಗೆ ಎಲ್ಲರಲ್ಲೂ ಕುತೂಹಲ ಇರಬಹುದು. ಆಗಸ್ಟ್‌ 15ರ ಹವಾಮಾನ ವರದಿ ಇಲ್ಲಿದೆ.

ಸ್ವಾತಂತ್ರ್ಯ ದಿನದಂದು ಮಳೆ ಬರುತ್ತಾ, ಬಿಸಿಲು ಜೋರಿರುತ್ತಾ? ಹೀಗಿದೆ ಆಗಸ್ಟ್ 15ರ ಹವಾಮಾನ ವರದಿ
ಸ್ವಾತಂತ್ರ್ಯ ದಿನದಂದು ಮಳೆ ಬರುತ್ತಾ, ಬಿಸಿಲು ಜೋರಿರುತ್ತಾ? ಹೀಗಿದೆ ಆಗಸ್ಟ್ 15ರ ಹವಾಮಾನ ವರದಿ

ಬೆಂಗಳೂರು: ಆಗಸ್ಟ್‌ 15 ಭಾರತೀಯರಿಗೆ ಬಹಳ ವಿಶೇಷ. ಅಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ಈ ದಿನದಂದು ಶಾಲಾ–ಕಾಲೇಜುಗಳು, ಸರ್ಕಾರಿ ಕಚೇರಿಗಳು ಸೇರಿದಂತೆ ವಿವಿಧೆಡೆ ಧ್ವಜಾರೋಹಣ ಸೇರಿದಂತೆ ದೇಶಭಕ್ತಿಯನ್ನು ಸಾರುವ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನದಂದು ಮಳೆ ಬರುತ್ತಾ, ಬಿಸಿಲು ಇರುತ್ತಾ, ಹವಾಮಾನ ಹೇಗಿರಬಹುದು ಎಂಬುದನ್ನು ಎಲ್ಲರೂ ಯೋಚಿಸುತ್ತಾರೆ. ಆಗಸ್ಟ್ 15ರ ಹವಾಮಾನ ವರದಿ ಇಲ್ಲಿದೆ ನೋಡಿ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಾದ್ಯಂತ ಸಾಧಾರಣ ಮಳೆ

ಆಗಸ್ಟ್ 15 ರಂದು ರಾಜ್ಯದಾದ್ಯಂತ ಸಾಧಾರಣ ಮಳೆ ಇರಲಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಒಣಹವೆ ಇರಲಿದೆ. ಹಾವೇರಿ, ಗದಗ, ಕೊಪ್ಪಳ ರಾಯಚೂರಿನಲ್ಲಿ ಹಗುರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನಲ್ಲಿ ಮಳೆ

ಸ್ವಾತಂತ್ರ್ಯೋತ್ಸವ ದಿನ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೋ ಅಲರ್ಟ್‌ ಫೋಷಿಸಲಾಗಿದೆ. ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ, ವಿಜಯನಗರದಲ್ಲಿ ಬಿಸಿಲಿನ ವಾತಾವರಣ ಇರಲಿದೆ.

ಹೀಗಿರಲಿದೆ ಬೆಂಗಳೂರು ಹವಾಮಾನ

ಬೆಂಗಳೂರಿನಲ್ಲಿ ಈ ವಾರ ಪೂರ್ತಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಆಗಸ್ಟ್‌ 15 ರಂದು ನಗರದ ವಿವಿಧ ಏರಿಯಾಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ವರದಿ ತಿಳಿಸಿದೆ. ಬೆಂಗಳೂರಿನಲ್ಲಿ ಆಗಸ್ಟ್‌ 15ರ ತನಕ ಮೋಡ ಕವಿದ ವಾತಾವರಣ ಇರಲಿದ್ದು, ಬಹುತೇಕ 16 ಹಾಗೂ 17 ರಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನವು 30 ಡಿಗ್ರಿ ಸೆಲ್ಸಿಯಸ್‌ ಇದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಒಟ್ಟಾರೆ ಸ್ವಾತಂತ್ರ್ಯ ದಿನದಂದು ರಾಜ್ಯದ ವಿವಿಧ ಕಡೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಸ್ವಾತಂತ್ರ್ಯೋತ್ಸವಕ್ಕೆ ತಯಾರಿ ನಡೆಸುವವರು ಮುನ್ನೆಚ್ಚರಿಕಾ ಕ್ರಮವಾಗಿ ಮಳೆಯ ಬಗ್ಗೆ ಜಾಗೃತಿ ವಹಿಸುವುದು ಮುಖ್ಯವಾಗುತ್ತದೆ.