ಕನ್ನಡ ಸುದ್ದಿ  /  Karnataka  /  India News Business News Gold Silver Price Today In Bengaluru Mangaluru Mysuru Ballari And Other City Pcp

ಕರ್ನಾಟಕದಲ್ಲಿ ಇಂದು ಚಿನ್ನ-ಬೆಳ್ಳಿ ದರ ಯಥಾಸ್ಥಿತಿ ಮುಂದುವರಿಕೆ, ಬೆಂಗಳೂರಿನ ಆಭರಣದಂಗಡಿಗಳು ಬಂದ್‌, ಇತರೆ ನಗರಗಳ ಚಿನ್ನಾಭರಣ ದರ ವಿವರ

Gold Silver Price today: ರಾಜ್ಯದಲ್ಲಿ ಚಿನ್ನ ಮತ್ತು ಬೆಳ್ಳಿ ದರ ಇಂದು ಯಥಾಸ್ಥಿತಿ ಮುಂದುವರೆದಿದೆ. ಕಾವೇರಿ ನೀರಿಗೆ ಸಂಬಂದಪಟ್ಟಂತೆ ಬೆಂಗಳೂರು ಬಂದ್‌ ಇರುವುದರಿಂದ ಉದ್ಯಾನನಗರಿಯ ಚಿನ್ನದಂಗಡಿಗಳೂ ಬಾಗಿಲು ಹಾಕಿವೆ. ಇದೇ ಸಮಯದಲ್ಲಿ ಮೈಸೂರು, ಮಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧೆಡೆ ಚಿನ್ನ-ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.

ಕರ್ನಾಟಕದಲ್ಲಿ ಇಂದು ಚಿನ್ನ-ಬೆಳ್ಳಿ ದರ ಯಥಾಸ್ಥಿತಿ ಮುಂದುವರಿಕೆ
ಕರ್ನಾಟಕದಲ್ಲಿ ಇಂದು ಚಿನ್ನ-ಬೆಳ್ಳಿ ದರ ಯಥಾಸ್ಥಿತಿ ಮುಂದುವರಿಕೆ (REUTERS)

ಬೆಂಗಳೂರು: ಕರ್ನಾಟಕದಲ್ಲಿ ಇಂದು ಕೂಡ ಚಿನ್ನ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ನಿನ್ನೆಯೂ ಚಿನ್ನದ ದರ ಯಥಾಸ್ಥಿತಿ ಹೊಂದಿತ್ತು. ಮೊನ್ನೆಗೆ ಹೋಲಿಸಿದರೆ ಬೆಳ್ಳಿ ದರ ನಿನ್ನೆ ಬೆಳ್ಳಿ ದರ ತುಸು ಏರಿಕೆ ಕಂಡಿತ್ತು. ಆದರೆ, ಇಂದು ಬೆಳ್ಳಿ ದರವೂ ಯಥಾಸ್ಥಿತಿ ಕಾಯ್ದುಕೊಂಡಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಷಯಕ್ಕೆ ಸಂಬಂಧಪಟ್ಟಂತೆ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ. ಹೀಗಾಗಿ, ಉದ್ಯಾನನಗರಿಯ ಬಹುತೇಕ ಬಂಗಾರದ ಅಂಗಡಿಗಳು ಬಾಗಿಲು ಹಾಕಿವೆ. ಮೈಸೂರು, ಮಂಗಳೂರು ಸೇರಿದಂತೆ ವಿವಿಧ ಪ್ರಮುಖ ನಗರಗಳು ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಇಂದಿನ ಚಿನ್ನದ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.

ಟ್ರೆಂಡಿಂಗ್​ ಸುದ್ದಿ

22 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,495 ರೂ. ಇದೆ. ಇಂದಿನ 8 ಗ್ರಾಂ ಚಿನ್ನದ ಬೆಲೆ 43,960 ರೂ. ಇದೆ. ಹತ್ತು ಗ್ರಾಂ ಚಿನ್ನಕ್ಕೆ ಇಂದು 54,950 ರೂ. ನೀಡಬೇಕು. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 5,49,500 ರೂ. ನೀಡಬೇಕು.

24 ಕ್ಯಾರೆಟ್‌ ಚಿನ್ನದ ದರ

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 5,995 ರೂ. ಆಗಿದೆ. ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 47,960 ರೂ. ನೀಡಬೇಕಾಗುತ್ತದೆ. ಹತ್ತು ಗ್ರಾಂ ಚಿನ್ನದ ದರ ಇಂದು 59,950 ರೂ. ಇದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ 5,99,500 ರೂ. ನೀಡಬೇಕು.

ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ

ಇಂದಿನ ಬೆಳಗಿನ ಧಾರಣೆಯಂತೆ 10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 54,950 ರೂ. ಇದೆ. ಮಂಗಳೂರಿನಲ್ಲಿ 54,950 ರೂ., ಮೈಸೂರಿನಲ್ಲಿ 54,950 ರೂ. ಇದೆ. ಸಾಮಾನ್ಯವಾಗಿ ರಾಜ್ಯದ ಬಹುತೇಕ ನಗರಗಳಲ್ಲಿ ಇಂದು ಇದೇ ದರ ಇರುತ್ತದೆ. ಮಜೂರಿ, ಇತರೆ ಶುಲ್ಕ ಇತ್ಯಾದಿಗಳಿಂದ ಚಿನ್ನದಂಗಡಿಯಿಂದ ಚಿನ್ನದಂಗಡಿಗೆ ದರ ವ್ಯತ್ಯಾಸ ಇರಬಹುದು.

ಕರ್ನಾಟಕದ ಇತರೆ ಕಡೆಗಳಲ್ಲಿ 22 ಕ್ಯಾರೆಟ್‌ ಚಿನ್ನದ ದರ ಈ ಮುಂದಿನಂತೆ ಇದೆ. ಚೆನ್ನೈನಲ್ಲಿ 55,210 ರೂ., ಮುಂಬೈನಲ್ಲಿ 54,950 ರೂ., ದೆಹಲಿಯಲ್ಲಿ 55,100 ರೂ., ಕೋಲ್ಕತಾದಲ್ಲಿ 54,950 ರೂ., ಹೈದರಾಬಾದ್‌ 54,950 ರೂ., ಕೇರಳ 54,950 ರೂ., ಪುಣೆ 54,950 ರೂ., ಅಹಮದಾಬಾದ್‌ 55,000 ರೂ., ಜೈಪುರ 55,100 ರೂ. ಲಖನೌ 55,100 ರೂ., ಕೊಯಮುತ್ತೂರು 55,210 ರೂ., ಮದುರೈ 55,210 ರೂ. ಹಾಗೂ ವಿಜಯವಾಡ 54,950 ರೂಪಾಯಿ ಇದೆ.

ವಿವಿಧ ನಗರಗಳಲ್ಲಿ ಅಪರಂಜಿ ಚಿನ್ನದ ದರ

10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಬೆಂಗಳೂರಿನಲ್ಲಿ 59,950 ರೂ. ಇದೆ. ಮಂಗಳೂರು, ಮೈಸೂರು, ದಾವಣಗೆರೆ, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿಯೂ ಇದೇ ದರ ಇದೆ. ಚೆನ್ನೈನಲ್ಲಿ 60,230 ರೂ., ಮುಂಬೈನಲ್ಲಿ 59,950 ರೂ., ದೆಹಲಿಯಲ್ಲಿ 60,100 ರೂ., ಕೋಲ್ಕತಾದಲ್ಲಿ 59,950 ರೂ., ಹೈದರಾಬಾದ್‌ 59,950 ರೂ., ಕೇರಳ 59,950 ರೂ., ಪುಣೆ 59,950 ರೂ., ಅಹಮದಾಬಾದ್‌ 60,000 ರೂ., ಜೈಪುರ 60,100 ರೂ., ಲಖನೌ 60,100 ರೂ., ಕೊಯಮುತ್ತೂರು 60,230 ರೂ., ಮದುರೈ 60,230, ವಿಜಯವಾಡ 59,950 ರೂ. ಇದೆ

ಇಂದಿನ ಬೆಳ್ಳಿ ದರ

ಬೆಳ್ಳಿ ದರವೂ ಇಂದು ತಟಸ್ಥವಾಗಿದೆ. ಅಂದರೆ, ನಿನ್ನೆಯ ದರದಲ್ಲಿಯೇ ಬೆಳ್ಳಿ ಖರೀದಿಸಬಹುದು. ಇಂದು 1 ಗ್ರಾಂ ಬೆಳ್ಳಿ ದರ 75 ರೂ. ಇದೆ. 8 ಗ್ರಾಂ ದರ ಇಂದು 600 ರೂ. ಮತ್ತು 10 ಗ್ರಾಂ ಬೆಳ್ಳಿ ದರ 750 ಇದೆ. 100 ಗ್ರಾಂ ಬೆಳ್ಳಿಗೆ ಇಂದು 7,500 ರೂ. ಮತ್ತು 1 ಕೆಜಿ ಬೆಳ್ಳಿ ದರ ಇಂದು 75,000 ರೂ ಇದೆ.