Bank Holidays: ಬ್ಯಾಂಕ್‌ಗಳಿಗೂ ವಾರದಲ್ಲಿ ಶನಿವಾರ, ಭಾನುವಾರ ರಜೆ; ಬ್ಯಾಂಕ್‌ ಕೆಲಸದ ಅವಧಿ ಬದಲು ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  Bank Holidays: ಬ್ಯಾಂಕ್‌ಗಳಿಗೂ ವಾರದಲ್ಲಿ ಶನಿವಾರ, ಭಾನುವಾರ ರಜೆ; ಬ್ಯಾಂಕ್‌ ಕೆಲಸದ ಅವಧಿ ಬದಲು ಸಾಧ್ಯತೆ

Bank Holidays: ಬ್ಯಾಂಕ್‌ಗಳಿಗೂ ವಾರದಲ್ಲಿ ಶನಿವಾರ, ಭಾನುವಾರ ರಜೆ; ಬ್ಯಾಂಕ್‌ ಕೆಲಸದ ಅವಧಿ ಬದಲು ಸಾಧ್ಯತೆ

ಬ್ಯಾಂಕ್‌ಗಳಿಗೂ ಸಾಫ್ಟ್‌ ವೇರ್‌ ಕಂಪೆನಿಗಳ ರೀತಿ ವಾರದಲ್ಲಿ ಎರಡು ದಿನ ರಜೆ ನೀಡುವ ಪ್ರಸ್ತಾವಕ್ಕೆ ಮರು ಜೀವ ಬಂದಿದ್ದು, ಹೊಸ ಕೆಲಸದ ಅವಧಿಯೊಂದಿಗೆ ಬ್ಯಾಂಕ್‌ ಗಳು ಸೇವೆ ನೀಡುವ ಸಾಧ್ಯತೆಗಳಿವೆ. ಆರ್‌ಬಿಐ ಅನುಮತಿ ನೀಡಿದರೆ ಹೊಸ ರಜೆ ಪದ್ದತಿ ಜಾರಿಗೆ ಬರಲಿದೆ.

ಬ್ಯಾಂಕ್‌ ಗಳು ವಾರದಲ್ಲಿ ಐದು ದಿನ ಕೆಲಸ ಮಾಡುವ ಪದ್ದತಿ ಭಾರತದಲ್ಲೂ ಜಾರಿಗೆ ಬರಬಹುದು,
ಬ್ಯಾಂಕ್‌ ಗಳು ವಾರದಲ್ಲಿ ಐದು ದಿನ ಕೆಲಸ ಮಾಡುವ ಪದ್ದತಿ ಭಾರತದಲ್ಲೂ ಜಾರಿಗೆ ಬರಬಹುದು,

ಬೆಂಗಳೂರು: ಬಹುರಾಷ್ಟ್ರೀಯ ಕಂಪನಿಗಳಲ್ಲಿ ಇರುವಂತೆ, ಬ್ಯಾಂಕ್‌ಗಳಲ್ಲಿಯೂ ಉದ್ಯೋಗಿಗಳಿಗೆ ವಾರದಲ್ಲಿ ಐದು ದಿನ ಕೆಲಸ ಹಾಗೂ ಎರಡು ದಿನ ರಜೆ ಎಂಬ ನಿಯಮ ಜಾರಿಗೆ ಈ ವರ್ಷದ ಅಂತ್ಯದಲ್ಲಿ ಅಥವಾ ಹೊಸ ವರ್ಷದ ಮೊದಲಿಗೆ ಬಹುತೇಕ ಜಾರಿಗೆ ಬರಲಿದೆ. ಉದ್ಯೋಗಿಗಳಿಗೆ ವಾರದಲ್ಲಿ ಎರಡು ದಿನ ರಜೆ ಕುರಿತು ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಷನ್‌ (ಐಬಿಎ) ಹಾಗೂ ಉದ್ಯೋಗಿಗಳ ಒಕ್ಕೂಟದ ನಡುವೆ ಒಡಂಬಡಿಕೆಗೆ ಸಹಿ ಹಾಕಲಾಗಿದ್ದು, ಕೇಂದ್ರ ಸರಕಾರ ಅನುಮೋದನೆ ನೀಡಿದರೆ ಹೊಸ ರಜೆಯ ನಿಯಮ ಜಾರಿಗೆ ಬರಲಿದೆ. ಈ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ಗೂ ಪ್ರಸ್ತಾಪವನ್ನೂ ಸಲ್ಲಿಸಲಾಗಿದೆ.

ದೈನಿಕ್ ಜಾಗರನ್ ಇಂಗ್ಲಿಷ್ ವರದಿಯ ಪ್ರಕಾರ, ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ​​(ಐಬಿಎ) ಮತ್ತು ಒಕ್ಕೂಟಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಬಂದಿವೆ. ಈಗ ಈ ಪ್ರಸ್ತಾವನೆ ಕೇಂದ್ರ ಸರ್ಕಾರದ ಅನುಮೋದನೆಗೆ ಬಾಕಿ ಉಳಿದಿದೆ. ನೀತಿಯ ಈ ಅನುಷ್ಠಾನವು ಸಂಪೂರ್ಣವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರದ ಅಧಿಕಾರವನ್ನು ಅವಲಂಬಿಸಿರುತ್ತದೆ. ಕೇಂದ್ರ ಬ್ಯಾಂಕ್ ದೇಶದ ಎಲ್ಲಾ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತದೆ.

ಹಲವಾರು ವರ್ಷಗಳಿಂದಲೂ ಇಂತಹದೇ ಪ್ರಸ್ತಾವವಿದ್ದರೂ ಅನುಮತಿ ದೊರಕಿಲ್ಲ. ಐದು ವರ್ಷದ ಹಿಂದೆ ಇದೇ ರೀತಿಯ ಚರ್ಚೆಗಳು ನಡೆದಾಗ ಆರ್‌ಬಿಐ ಇದನ್ನು ಸಂಪೂರ್ಣವಾಗಿ ನಿರಾಕರಿಸಿತ್ತು. ಇದಾದ ಬಳಿಕ ಮತ್ತೆ ಇಂತಹ ಚರ್ಚೆಗಳು ಶುರುವಾಗಿದ್ದು. ಅಂತಿಮ ತೀರ್ಮಾನ ಆಗಬೇಕಿದೆ.

ಸದ್ಯ ಎರಡು ವಾರಕ್ಕೆ ಒಮ್ಮೆ ಎರಡು ದಿನಗಳ ರಜೆ ಇದೆ.ಎರಡು ಹಾಗೂ ನಾಲ್ಕನೇ ಶನಿವಾರ ರಜೆಯಿದ್ದು, ಮೊದಲ ಹಾಗೂ ಮೂರನೇ ಶನಿವಾರ ಬ್ಯಾಂಕ್‌ಗಳು ಸೇವೆ ಸಲ್ಲಿಸಲಿವೆ. ಇನ್ನು ಮುಂದೆ ಇದೂ ಬದಲಾಗಲಿದೆ.

ಕೇಂದ್ರ ಸರಕಾರವು ಎರಡು ದಿನ ರಜೆಗೆ ಅನುಮತಿ ನೀಡಿದರೆ, ಬ್ಯಾಂಕ್‌ಗಳ ಕಾರ್ಯನಿರ್ವಹಣೆ ಸಮಯವೂ ಬದಲಾಗಿದೆ. ಅಂದರೆ, ನೌಕರರು ದಿನಕ್ಕೆ 40 ನಿಮಿಷ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಬೆಳಿಗ್ಗೆ 10 ಗಂಟೆ ಬದಲು 9.45ಕ್ಕೆ ಬ್ಯಾಂಕ್‌ ನೌಕರರ ಕೆಲಸ ಆರಂಭವಾಗಲಿದೆ. ಅಲ್ಲದೆ ಸಂಜೆ 5 ಗಂಟೆ ಬದಲಿಗೆ 5.30ರವರೆಗೆ ಕೆಲಸ ಮಾಡಬೇಕಾಗುತ್ತದೆ.

ಹೊಸ ರಜೆ ನಿಮಯಗಳು ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಹಾಗೂ ಖಾಸಗಿ ಬ್ಯಾಂಕ್‌ಗಳ ಉದ್ಯೋಗಿಗಳಿಗೆ ಅನ್ವಯವಾಗಲಿವೆ. ವರ್ಷಾಂತ್ಯಕ್ಕೆ ಕೇಂದ್ರ ಸರಕಾರವು ಈ ಹೊಸ ರಜೆ ನಿಯಮಗಳಿಗೆ ಅನುಮೋದನೆ ನೀಡುವ ಸಾಧ್ಯತೆ ಇದೆ ಎಂದು ಬ್ಯಾಂಕ್‌ ಒಕ್ಕೂಟಗಳು ಹೇಳಿವೆ.

ಸದ್ಯ, ದೇಶದ ಬ್ಯಾಂಕ್‌ ನೌಕರರಿಗೆ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ರಜೆ ಇದೆ. ಜೊತೆಗೆ ಭಾನುವಾರವೂ ರಜೆ ಇದೆ. ಮೊದಲ, ಮೂರನೇ ಹಾಗೂ ಐದನೇ ಶನಿವಾರ ಬಂದಲ್ಲಿ ಅಂದು ಕೂಡ ಕೆಲಸ ಮಾಡಬೇಕಿದೆ.

ಮೊದಲೆಲ್ಲಾ ವಾರದಲ್ಲಿ ಆರು ದಿನ ಬ್ಯಾಂಕ್‌ ಇದ್ದರೆ ಶನಿವಾರ ಅರ್ಧ ದಿನ ಇತ್ತು. ಎಲ್ಲಾ ಶನಿವಾರಗಳೂ ಅರ್ಧ ದಿನ ಮಾತ್ರ ಕೆಲಸ ಮಾಡಬೇಕಿತ್ತು. ಇದನ್ನು ಬದಲಿಸಿ ಮೊದಲ ಹಾಗು ಮೂರನೇ ಶನಿವಾರ ಪೂರ್ಣ ದಿನದ ಕೆಲಸ , ಎರಡು ಹಾಗೂ ನಾಲ್ಕನೇ ವಾರ ಪೂರ್ಣ ರಜೆಯ ವ್ಯವಸ್ಥೆಯನ್ನು ಬ್ಯಾಂಕ್‌ಗಳು ಇತರೆ ಸರ್ಕಾರಿ ಕಚೇರಿಗಳಂತೆಯೇ ರೂಪಿಸಿಕೊಂಡಿವೆ.

Whats_app_banner