ನಿಮಗೆ ಪರಂಪರೆ ಬಗ್ಗೆ ಆಸಕ್ತಿಯಿದೆಯಾ, ಹಾಗಿದ್ದರೆ ರೈಲ್ವೆ ಇಲಾಖೆ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ
ಕನ್ನಡ ಸುದ್ದಿ  /  ಕರ್ನಾಟಕ  /  ನಿಮಗೆ ಪರಂಪರೆ ಬಗ್ಗೆ ಆಸಕ್ತಿಯಿದೆಯಾ, ಹಾಗಿದ್ದರೆ ರೈಲ್ವೆ ಇಲಾಖೆ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ

ನಿಮಗೆ ಪರಂಪರೆ ಬಗ್ಗೆ ಆಸಕ್ತಿಯಿದೆಯಾ, ಹಾಗಿದ್ದರೆ ರೈಲ್ವೆ ಇಲಾಖೆ ಆಯೋಜಿಸಿರುವ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆಲ್ಲಿ

ಅಂತರಾಷ್ಟ್ರೀಯ ಪರಂಪರೆ ದಿನದ ಅಂಗವಾಗಿ ಭಾರತೀಯ ರೈಲ್ವೆ ಮೈಸೂರು ವಿಭಾಗವು ಹಮ್ಮಿಕೊಂಡಿರುವ ಚಿತ್ರ ಕಲಾ ಸ್ಪರ್ಧೆಯ ಕುರಿತು ಮಾಹಿತಿ ಇಲ್ಲಿದೆ.

ಭಾರತೀಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ಮ್ಯೂಸಿಯಂನಲ್ಲಿ ಅಂತರಾಷ್ಟ್ರೀಯ ಪರಂಪರೆ ದಿನ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.
ಭಾರತೀಯ ರೈಲ್ವೆ ಮೈಸೂರು ವಿಭಾಗದ ರೈಲ್ವೆ ಮ್ಯೂಸಿಯಂನಲ್ಲಿ ಅಂತರಾಷ್ಟ್ರೀಯ ಪರಂಪರೆ ದಿನ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ.

ಮೈಸೂರು: ಇನ್ನೇನು ಈ ವರ್ಷದ ಅಂತರಾಷ್ಟ್ರೀಯ ಪರಂಪರೆ ಬಂದೇ ಬಿಟ್ಟಿತು. 2025ರ ಏಪ್ರಿಲ್ 18ರಂದು ಅಂತರರಾಷ್ಟ್ರೀಯ ಪರಂಪರೆ ದಿನವನ್ನು ಆಚರಿಸಲಾಗುತ್ತಿದ್ದು. ಇದರ ಭಾಗವಾಗಿ ಭಾರತೀಯ ರೈಲ್ವೆಯ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ಮಕ್ಕಳು ಹಾಗೂ ಯುವಕರಿಗೆ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಮೈಸೂರು ರೈಲು ಮ್ಯೂಸಿಯಂ ಮ್ಯೂಸಿಯಂ ಆವರಣದಲ್ಲಿ ನಡೆಯುವ ಪಾರಂಪರಿಕ ದಿನದ ಭಾಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ರೂಪಿಸಲಾಗಿದೆ. ಈ ವರ್ಷದ ವಿಷಯ "ವಿಪತ್ತು ಮತ್ತು ಸಂಘರ್ಷಕ್ಕೆ ತಡೆಗಟ್ಟುವ ಪರಂಪರೆ" ಎಂಬುದು. ಪ್ರಕೃತಿವಿಪತ್ತುಗಳು ಮತ್ತು ಸಶಸ್ತ್ರ ಸಂಘರ್ಷಗಳಿಂದ ಅಪಾಯದಲ್ಲಿರುವ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಅಗತ್ಯವಿರುವ ಸಿದ್ಧತೆ ಮತ್ತು ಕ್ರಮಗಳ ಮೇಲೆ ಗಮನಹರಿಸುತ್ತಿದ್ದು., ಇದರ ಮೇಲೆಯೇ ಚಿತ್ರ ಬರೆಯಲು ಸೂಚಿಸಲಾಗಿದೆ.

ಈ ವಿಶೇಷ ದಿನದ ಅಂಗವಾಗಿ, ಪೋಸ್ಟರ್-ಮೇಕಿಂಗ್ ಮತ್ತು ಚಿತ್ರಕಲೆ/ಚಿತ್ರ ಸ್ಪರ್ಧೆ( ಮಾಧ್ಯಮ: ವಾಟರ್‌ಕಲರ್, ಕ್ರೇಯಾನ್ಸ್, ಪೆನ್ಸಿಲ್ ಇತ್ಯಾದಿ. ಕಾಗದದ ಗಾತ್ರ: A3 (297mm × 420mm)) "ಪರಂಪರೆ ಅನ್ವೇಷಣೆ – ಹಳೆಯದನ್ನು ಸಂರಕ್ಷಿಸಿ, ಭವಿಷ್ಯವನ್ನು ಪ್ರೇರೇಪಿಸಿ" ಎಂಬ ವಿಷಯದಲ್ಲಿ ಆಯೋಜಿಸಲಾಗಿದೆ. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ. ಈ ಕಾರ್ಯಕ್ರಮವು ಸೃಜನಶೀಲತೆಯನ್ನು ಪ್ರೇರೇಪಿಸುವುದು, ಕಲಿಕೆಯನ್ನು ಉತ್ತೇಜಿಸುವುದು ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಮೆಚ್ಚುವಂತೆ ಯುವ ಮನಸ್ಸುಗಳನ್ನು ಪ್ರೇರೇಪಿಸುವ ಉದ್ದೇಶವನ್ನು ಹೊಂದಿದೆ ಎನ್ನುವುದು ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯರಾದ ಗಿರೀಶ ಧರ್ಮರಾಜ ಕಲಗೊಂಡ ಅವರ ವಿವರಣೆ.

ವಯೋವರ್ಗಗಳು:

- ಗುಂಪು 1: 6 ರಿಂದ 9 ವರ್ಷ

- ಗುಂಪು 2: 10 ರಿಂದ 13 ವರ್ಷ

- ಗುಂಪು 3: 14 ರಿಂದ 17 ವರ್ಷ

ವಿಷಯಗಳು:

(i) ರೈಲುಗಳು ಮತ್ತು ಪರಂಪರೆ

(ii) ಮೈಸೂರಿನ ಸಾಂಸ್ಕೃತಿಕ ಪರಂಪರೆ

(iii) ಸ್ಮಾರಕಗಳು ಮತ್ತು ಐತಿಹಾಸಿಕ ಸ್ಥಳಗಳು

(iv) ಪಾರಂಪರಿಕ ಕಲೆ ಮತ್ತು ಕೈಗಾರಿಕೆಗಳು

(v) ಪರಂಪರೆಯ ಶಾಶ್ವತ ಸಂರಕ್ಷಣೆ

ಆಯೋಜಕರಿಂದ ಕೇವಲ ಕಲಾಕಾಗದ ಮತ್ತು ಕ್ರೇಯಾನ್ಸ್ ಒದಗಿಸಲಾಗುತ್ತದೆ. ಉಳಿದ ಸಾಮಗ್ರಿ ಭಾಗವಹಿಸುವವರೇ ತರಬೇಕು. ಪ್ರತಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 2025ರ ಏಪ್ರಿಲ್ 16. ಪ್ರತಿ ವಯೋವರ್ಗದಲ್ಲಿ ಮೊದಲ, ಎರಡನೇ ಮತ್ತು ಮೂರನೇ ಬಹುಮಾನಗಳನ್ನು ನೀಡಲಾಗುವುದು ಜೊತೆಗೆ ಎಲ್ಲಾ ಭಾಗವಹಿಸುವವರಿಗೆ ವಿಶೇಷ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ವಿಜೇತ ಕಲಾಕೃತಿಗಳನ್ನು ಮೈಸೂರಿನ ರೈಲು ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುವುದು. ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಹೆಸರು, ವಯಸ್ಸು, ಶಾಲೆ ಮತ್ತು ಸಂಪರ್ಕ ವಿವರಗಳನ್ನು ನೀಡಬೇಕು ಮತ್ತು ಮೈಸೂರಿನ ರೈಲು ಮ್ಯೂಸಿಯಂ ರಿಸೆಪ್ಷನ್‌ನಲ್ಲಿ ಅಥವಾ ಸ್ಕ್ಯಾನ್ ಮಾಡಿದ ಪ್ರತಿಯನ್ನು sserailmuseum@gmail.com ಗೆ ಇಮೇಲ್ ಮೂಲಕ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಶಿವಶಂಕರ್ ಕೆ.ಟಿ., ಮೊಬೈಲ್ ಸಂಖ್ಯೆ: 9164872586.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
Whats_app_banner