ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಬೆಂಗಳೂರಿಗೆ ಆಗಮಿಸುವ ಹೊರ ರಾಜ್ಯದ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ

Indian Railways: ಬೆಂಗಳೂರಿಗೆ ಆಗಮಿಸುವ ಹೊರ ರಾಜ್ಯದ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ

Train Updates ನೈರುತ್ಯ ರೈಲ್ವೆ ಹುಬ್ಬಳ್ಳಿ ವಲಯವು ಕೆಲವು ರೈಲುಗಳಲ್ಲಿನ ಸಂಚಾರದಲ್ಲಿನ ಬದಲಾವಣೆಯಾಗಿರುವುದನ್ನು ಪ್ರಕಟಿಸಿದೆ.

ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಂಗಳೂರು: ಈಶಾನ್ಯ ರೈಲ್ವೆಯಲ್ಲಿನ ಸುರಕ್ಷತೆಗೆ ಸಂಬಂಧಿಸಿದ ಹಲವಾರು ಕಾಮಗಾರಿಗಳು ನಡೆಯುತ್ತಿರುವ ಕಾರಣದಿಂದ ಬೆಂಗಳೂರಿಗೆ ಆಗಮಿಸುವ ಹೊರ ರಾಜ್ಯದ ಕೆಲವು ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಬಿಹಾರದ ದಾನಾಪುರ, ಅಸ್ಸಾಂನ ಕಾಮಾಕ್ಯ ರೈಲುಗಳು ಆಗಮಿಸುವ ರೈಲುಗಳ ಸಮಯದಲ್ಲಿ ಬದಲಾವಣೆಯಾಗಲಿದೆ. ಇದಲ್ಲದೇ ಯಶವಂತಪುರ ಜೈಪುರ ರೈಲುಗಳ ಸಂಖ್ಯೆಯಲ್ಲಿ ಬದಲಾವಣೆ ಮಾಡಲಾಗಿದೆ. ಪ್ರಯಾಣಿಕರು ಸಹಕರಿಸಬೇಕು ಎಂದು ಭಾರತೀಯ ರೈಲ್ವೆ ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಲಯ( South Western division Hubli) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ್‌ ಕನಮಡಿ ಅವರು ತಿಳಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ರೈಲುಗಳ ನಿಯಂತ್ರಣ

1. 2024 ರ ಜೂನ್ 19 ರಂದು ದಾನಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ.12296 ದಾನಪುರ-SMVT ಬೆಂಗಳೂರು ಎಕ್ಸ್‌ಪ್ರೆಸ್ ಪ್ರಯಾಣವನ್ನು 190 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

2. 2024 ರ ಜೂನ್ 19 ರಂದು ಕಾಮಾಖ್ಯದಿಂದ ಪ್ರಾರಂಭವಾಗುವ ರೈಲು ಸಂಖ್ಯೆ.12552 ಕಾಮಾಖ್ಯ-SMVT ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್ ಪ್ರಯಾಣವನ್ನು 165 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

3. 2024 ರ ಜೂನ್ 19 ರಂದು ದಾನಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ.06510 ಡಣಾಪುರ-SMVT ಬೆಂಗಳೂರು ಎಕ್ಸ್‌ಪ್ರೆಸ್ ಪ್ರಯಾಣವನ್ನು 90 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

4. 2024 ರ ಜೂನ್ 21 ಮತ್ತು 28 ರಂದು ನರಸಾಪುರದಿಂದ ಪ್ರಾರಂಭವಾಗುವ ರೈಲು ಸಂಖ್ಯೆ.07153 ನರಸಾಪುರ-SMVT ಬೆಂಗಳೂರು ಎಕ್ಸ್‌ಪ್ರೆಸ್ ಪ್ರಯಾಣವನ್ನು 10 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

ರೈಲಿನ ತಿರುವು

1. ರೈಲು ಸಂಖ್ಯೆ. 22534 ಯಶವಂತಪುರ-ಗೋರಖ್‌ಪುರ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ .2024ರ ಜೂನ್‌ 12 ರಂದು ಯಶವಂತಪುರದಿಂದ ಮನಕ್ ನಗರ, ಲಕ್ನೋ, ಮಲ್ಹೋರ್ ನಿಲ್ದಾಣಗಳ ಮೂಲಕ ಸಂಚರಿಸಲಿದೆ ಎಂದು ತಿಳಿಸಲಾಗಿದೆ.

ರೈಲು ಸಂಖ್ಯೆಗಳಲ್ಲಿ ಬದಲಾವಣೆ

ನೈಋತ್ಯ ರೈಲ್ವೆಯು 82653/82654 ಯಶವಂತಪುರ-ಜೈಪುರ-ಯಶವಂತಪುರ ರೈಲು ಸಂಖ್ಯೆಯನ್ನು ಪರಿಷ್ಕೃತ ರೈಲು ಸಂಖ್ಯೆ 20667/20668 ಯಶವಂತಪುರ-ಜೈಪುರ-ಯಶವಂತಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ಗೆ ಬದಲಾಯಿಸಲು ನಿರ್ಧರಿಸಿದೆ. ಅದೇ ಸಮಯ ಮತ್ತು ನಿಲುಗಡೆಯೊಂದಿಗೆ. ಈ ಬದಲಾವಣೆಯು ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 20667 ಗೆ 2024ರ ಅಕ್ಟೋಬ್‌ 03 ರಿಂದ ಮತ್ತು ಜೈಪುರದಿಂದ ಹೊರಡುವ ರೈಲು ಸಂಖ್ಯೆ 20668 ಗೆ 2024ರ ಅಕ್ಟೋಬರ್‌ 05 ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

ಟಿ20 ವರ್ಲ್ಡ್‌ಕಪ್ 2024

ವಿಭಾಗ