ಕನ್ನಡ ಸುದ್ದಿ  /  ಕರ್ನಾಟಕ  /  Indian Railway: ಯಶವಂತಪುರ ಕಾರವಾರ ರೈಲು ತಲುಪುವ ಸಮಯದಲ್ಲಿ ಬದಲಾವಣೆ

Indian Railway: ಯಶವಂತಪುರ ಕಾರವಾರ ರೈಲು ತಲುಪುವ ಸಮಯದಲ್ಲಿ ಬದಲಾವಣೆ

Train Updates ಭಾರತೀಯ ರೈಲ್ವೆ( Indian Railway) ಕರ್ನಾಟಕದ ಕೆಲವು ರೈಲುಗಳ ಸಮಯದಲ್ಲಿ ಬದಲಾವಣೆ, ಕೋಚ್‌ಗಳ ಸೇರ್ಪಡೆ ನಿರ್ಧಾರ ಕೈಗೊಂಡಿದೆ.

ಕೆಲ ರೈಲುಗಳ ಸಮಯದಲ್ಲಿ ಬದಲಾವಣೆಯಾಗಿದೆ.
ಕೆಲ ರೈಲುಗಳ ಸಮಯದಲ್ಲಿ ಬದಲಾವಣೆಯಾಗಿದೆ.

ಬೆಂಗಳೂರು: ಯಶವಂತಪುರದಿಂದ ಹಾಸನ ಮಂಗಳೂರು ಉಡುಪಿ ಮಾರ್ಗವಾಗಿ ಕಾರವಾರ ನಡುವೆ ಸಂಚರಿಸುವ ಕೊಂಕಣ ರೈಲ್ವೆಯ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಯಶವಂತಪುರದಿಂದ ಹೊರಟು ನಾನಾ ನಗರ, ನಿಲ್ದಾಣಗಳಲ್ಲಿ ಈಗಿರುವ ಸಮಯದಲ್ಲಿಯೇ ನಿಲುಗಡೆಯಾಗಿರುವ ಈ ರೈಲು ಕಾರವಾರವನ್ನು ತಡವಾಗಿ ತಲುಪಲಿದೆ ಎಂದು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯದ ಪ್ರಕಟಣೆ ತಿಳಿಸಿದೆ. ಕೊಂಕಣ ರೈಲ್ವೇ (KR) ರೈಲು ಸಂಖ್ಯೆ 16515 ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್‌ಗೆ ಮಾನ್ಸೂನ್ ಸಮಯದಲ್ಲಿ ಪರಿಷ್ಕರಣೆ ಮಾಡಲಾಗಿದ್ದು 2024ರ ಜೂನ್ 10 ರಿಂದಲೇ ಜಾರಿಗೆ ಬಂದಿದೆ. ಯಶವಂತಪುರದಿಂದ ಕಾರವಾರ (Karwar) ನಿಲ್ದಾಣಕ್ಕೆ ಆಗಮನದ ಸಮಯವನ್ನು ರಾತ್ರಿ 11 ಗಂಟೆಗಳಿಂದ 11 :10 ಗಂಟೆಗಳಿಗೆ ಪರಿಷ್ಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೆಚ್ಚುವರಿ ಕೋಚ್‌

ನೈಋತ್ಯ ರೈಲ್ವೆಯು 2024ರ ಜೂನ್‌ 13 ರಿಂದ ಯಶವಂತಪುರದಿಂದ ಹೊರಡುವ 82653/82654 ಯಶವಂತಪುರ-ಜೈಪುರ-ಯಶವಂತಪುರ ರೈಲು ಸಂಖ್ಯೆಗಳಿಗೆ ಒಂದು ಹೆಚ್ಚುವರಿ ಸ್ಲೀಪರ್ ದರ್ಜೆಯ ಕೋಚ್ ಅನ್ನು ಶಾಶ್ವತವಾಗಿ ಹೆಚ್ಚಿಸಲು ನಿರ್ಧರಿಸಿದೆ ಎಂದು ತಿಳಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ರೈಲುಗಳ ತಿರುವು

ಯಾರ್ಡ್ ದಟ್ಟಣೆ ಮತ್ತು ನವದೆಹಲಿ ಮತ್ತು ದೆಹಲಿ ಸರಾಯ್ ರೋಹಿಲ್ಲಾ ಯಾರ್ಡ್‌ನಲ್ಲಿನ ಕಾರ್ಯಾಚರಣೆಯ ನಿರ್ಬಂಧಗಳ ಕಾರಣದಿಂದ ಕೆಳಗಿನ ರೈಲುಗಳ ಮಾರ್ಗ ಬದಲಿಸಲು ಉತ್ತರ ರೈಲ್ವೆ ಸೂಚನೆ ನೀಡಿದೆರೈಲು ಸಂಖ್ಯೆ. 12213/12214 ಯಶವಂತಪುರ-ದೆಹಲಿ ಸರೈ ರೋಹಿಲ್ಲಾ-ಯಶವಂತಪುರ ಡುರೊಂಟೊ ಎಕ್ಸ್‌ಪ್ರೆಸ್ ರೈಲ ನ್ನು2024ರ ಜುಲೈ 01 ರಿಂದ ಜಾರಿಗೆ ಬರುವಂತೆ ಪಲ್ವಾಲ್, ಓಖ್ಲಾ, ಲಜಪತ್ ನಗರ ನಿಲ್ದಾಣಗಳ ಮೂಲಕ ಸಂಚರಿಸಲು ತೀರ್ಮಾನಿಸಲಾಗಿದೆ.

ರೇಕ್‌ಗಳ ಪರಿವರ್ತನೆ

ನೈರುತ್ಯ ರೈಲ್ವೆಯು ಕೆಲವು ರೈಲಯಗಳ ಸಾಂಪ್ರದಾಯಿಕ ರೇಕ್‌ಗಳಿಂದ ಲಿಂಕ್ ಹಾಫ್‌ಮನ್ ಬುಷ್ (LHB) ರೇಕ್‌ಗಳಿಗೆ ಪರಿವರ್ತಿಸಲು ನಿರ್ಧರಿಸಿದೆ. ಈ ಕ್ರಮವು ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದೆ.

ಈ ರೈಲುಗಳಿಗೆ ಪರಿಷ್ಕೃತ ಕೋಚ್ ಸಂಯೋಜನೆಯು ಈ ಕೆಳಗಿನಂತಿರುತ್ತದೆ: ಎಸಿ ಎರಡು ಶ್ರೇಣಿ- 01 ಕೋಚ್ ಎಸಿ-3 ಶ್ರೇಣಿ - 03 ಕೋಚ್‌ಗಳು, ಸ್ಲೀಪರ್ ಕ್ಲಾಸ್- 10 ಕೋಚ್‌ಗಳು, ಸಾಮಾನ್ಯ ಎರಡನೇ ದರ್ಜೆ- 4 ಕೋಚ್‌ಗಳು ಮತ್ತು 1 ಬ್ರೇಕ್ ವ್ಯಾನ್ ಕಮ್ ಜನರೇಟರ್ ವ್ಯಾನ್ ಮತ್ತು 1 ಎಸ್‌ಎಲ್‌ಆರ್‌ಡಿ ಇರಲಿವೆ.

1. 2024 ಜೂನ್ 21 ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ. 17309 ವಾಸ್ಕೋ-ಡ-ಗಾಮಾ- ಯಶವಂತಪುರ ಎಕ್ಸ್‌ಪ್ರೆಸ್.

2. ರೈಲು ಸಂಖ್ಯೆ. 17310 ಯಶವಂತಪುರ - ವಾಸ್ಕೋ-ಡ-ಗಾಮಾ ಎಕ್ಸ್‌ಪ್ರೆಸ್ 2024ಜೂನ್ 22 ರಿಂದ ಜಾರಿಗೆ ಬರಲಿದೆ.