Indian Railways: ವಾಸ್ಕೋ- ಯಶವಂತಪುರ, ಮೈಸೂರು- ಬೆಳಗಾವಿ ರೈಲು ಸಂಚಾರದಲ್ಲಿ ವಿಳಂಬ
ಕರ್ನಾಟಕದಲ್ಲಿ ಸಂಚರಿಸುವ ಕೆಲವು ರೈಲುಗಳು ಮಾರ್ಗದಲ್ಲಿನ ಕಾಮಗಾರಿ ಕಾರಣದಿಂದ ವಿಳಂಬವಾಗಿ ಸಂಚರಿಸಲಿವೆ ಎಂದು ಭಾರತೀಯ ರೈಲ್ವೆ( Indian Railway) ತಿಳಿಸಿದೆ. ಅದರ ವಿವರ ಇಲ್ಲಿದೆ.
ಬೆಂಗಳೂರು: ಭಾರತೀಯ ರೈಲ್ವೆಯ( Indian Railway) ನೈರುತ್ಯ ರೈಲ್ವೆ ವಲಯ ಹಾಗೂ ಕೊಂಕಣ್ ರೈಲ್ವೆ ವಲಯ( Konkan Railway) ವ್ಯಾಪ್ತಿಗೆ ಬರುವ ಗೋವಾದ ವಾಸ್ಕೋದಿಂದ ಯಶವಂತಪುರಕ್ಕೆ ಬರುವ ರೈಲು ಒಂದು ತಿಂಗಳ ಕಾಲ 40 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ. ಮಾರ್ಗದಲ್ಲಿನ ಕಾಮಗಾರಿ ಕಾರಣಕ್ಕೆ ಮೇ 02 ರಿಂದಲೇ ಈ ಬದಲಾವಣೆ ಜಾರಿಯಾಗಲಿದೆ. ಇದಲ್ಲದೇ ಹುಬ್ಬಳ್ಳಿ ಬಳಿ ಸ್ವಿಚ್ ನವೀಕರಣ ಕಾರಣದಿಂದ ಮೈಸೂರು ಬೆಳಗಾವಿ ರೈಲು ಕೂಡ ಸುಮಾರು 40 ನಿಮಿಷಗಳ ಕಾಲ ರೈಲು ಸಂಚಾರ ತಡವಾಗಲಿದೆ. ನಾಲ್ಕು ದಿನಗಳ ಕಾಲ ಮಾತ್ರ ಈ ಬದಲಾವಣೆಯಾಗಲಿದೆ. ಇದೇ ರೀತಿ ತಿರುಪತಿ ಮಾರ್ಗದಲ್ಲಿ ಯಾರ್ಡ್ ಕೆಲಸ ನಡೆಯುತ್ತಿರುವುದರಿದ ಈ ಮಾರ್ಗದಲ್ಲಿ ಸಂಚರಿಸುವ ರೈಲು ಸಂಚಾರದಲ್ಲೂ ಬದಲಾವಣೆ ಮಾಡಲಾಗಿದೆ. ಈಗಾಗಲೇ ಇರುವ ಭಾಗಶಃ ರದ್ದಿನ ಆದೇಶವನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.
ಮೈಸೂರು ಬೆಳಗಾವಿ ರೈಲು ತಡ
ಮೈಸೂರು ಬೆಳಗಾವಿ ರೈಲು ಸಂಚಾರದಲ್ಲಿ ನಾಲ್ಕು ದಿನಗಳ ಕಾಲ ವ್ಯತ್ಯಯವಾಗಲಿದೆ. ಹುಬ್ಬಳ್ಳಿ ಯಾರ್ಡನಲ್ಲಿ ಸ್ವಿಚ್ ನವೀಕರಣ ಕಾರ್ಯದಿಂದಾಗಿ ರೈಲಿನ ನಿಯಂತ್ರಣಕ್ಕೆ ನೈಋತ್ಯ ರೈಲ್ವೆ ನಿರ್ಧರಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯವು ತಿಳಿಸಿದೆ. ರೈಲು ಗಾಡಿ ಸಂಖ್ಯೆ 17326 ಮೈಸೂರು - ಬೆಳಗಾವಿ ಎಕ್ಸ್‌ಪ್ರೆಸ್ ಮೇ 01ಮತ್ತು 02 ಹಾಗೂ ಮೇ 08 ಮತ್ತು 09ರಂದು 40 ನಿಮಿಷಗಳ ಕಾಲ ರೈಲು ಸಂಚಾರ ತಡವಾಗಲಿದೆ. ರೈಲು ಪ್ರಾರಂಭವಾಗುವ ಪ್ರಯಾಣವನ್ನು ಮಾರ್ಗದಲ್ಲಿ ನಿಯಂತ್ರಿಸಲಾಗುತ್ತದೆ
ಯಶವಂತಪುರ ವಾಸ್ಕೋ ರೈಲು ವಿಳಂಬ
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ಸೇತುವೆ ಕ್ರಾಸಿಂಗ್ ರೈಲ್ವೇ ಮೇಲೆ ರಸ್ತೆ ನಿರ್ಮಾಣಕ್ಕಾಗಿ ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್‌ನಿಂದ ಮುಂದಿನ ರೈಲನ್ನು 45 ನಿಮಿಷಗಳವರೆಗೆ ಮರುಹೊಂದಿಸಲು ಕೊಂಕಣ ರೈಲ್ವೆ ಸೂಚನೆ ನೀಡಿದೆ. ಮಜೋರ್ಡಾ-ಮಡ್ಗಾಂವ್ ಟ್ರ್ಯಾಕ್ ನಲ್ಲಿ ಕಾಮಗಾರಿ ಇರುವುದರಿಂದ ರೈಲು ಗಾಡಿ ಸಂಖ್ಯೆ 17310 ವಾಸ್ಕೋ-ಡ-ಗಾಮಾ - ಯಶವಂತಪುರ ಎಕ್ಸ್‌ಪ್ರೆಸ್ ರೈಲು ಮೇ 02 ರಿಂದ ಮೇ 29ರವರೆಗೆ ವಾಸ್ಕೋ-ಡ-ಗಾಮಾದಿಂದ 40 ನಿಮಿಷ ತಡವಾಗಿ ರೈಲು ಪ್ರಾರಂಭಿಸಲಿದೆ. ಈಗಿನ ಪ್ರಕಾರ ರಾತ್ರಿ 10.55 ಕ್ಕೆ ಹೊರಡುವ ರೈಲು ರಾತ್ರಿ 11. 45ಕ್ಕೆ ಹೊರಡಲಿದೆ ಎಂದು ತಿಳಿಸಲಾಗಿದೆ.
ತಿರುಪತಿ ರೈಲು
ನೈಋತ್ಯ ರೈಲ್ವೆಯು ರೈಲು ಸಂಖ್ಯೆ 07589/90 ತಿರುಪತಿ - ಕದಿರಿದೇವರ ಪಲ್ಲಿ - ತಿರುಪತಿಯ ರೈಲನ್ನು, ಕದಿರಿದೇವರ ಪಲ್ಲಿಯಲ್ಲಿ ಯಾರ್ಡ್ ಮಾರ್ಪಾಡು ಕೆಲಸ ಮತ್ತು ಸಂಪೂರ್ಣ ಬ್ಲಾಕ್ ರಾಯದುರ್ಗ - ಕದಿರಿದೇವರಪಲ್ಲಿ ನಿಲ್ದಾಣಗಳ ಕಾರ್ಯಾರಂಭದ ಕಾರಣದಿಂದ ಭಾಗಶಃ ರದ್ದತಿಯನ್ನು ವಿಸ್ತರಿಸಲು ನಿರ್ಧರಿಸಿದೆ.
ರೈಲು ಗಾಡಿ ಸಂಖ್ಯೆ07589 ತಿರುಪತಿ - ಕದಿರಿದೇವರ ಪಲ್ಲಿ ರೈಲು ಮೇ 01ರಿಂದ ಜುಲೈ 31ರವರೆಗೆ ರೈಲು ಕದಿರಿದೇವರ ಪಲ್ಲಿ ಬದಲಿಗೆ ಗುಂತಕಲ್‌ವರೆಗೆ ಮಾತ್ರ ಸಂಚರಿಸಲಿದ್ದು, ಗುಂತಕಲ್-ಕದಿರಿದೇವರಪಲ್ಲಿ ನಡುವೆ ಭಾಗಶಃ ರದ್ದುಗೊಳ್ಳಲಿದೆ.
ರೈಲು ಗಾಡಿ ಸಂಖ್ಯೆ07590 ಕದಿರಿದೇವರ ಪಲ್ಲಿ - ತಿರುಪತಿ ರೈಲು ಮೇ 02ರಿಂದ ಆಗಸ್ಟ್ 01ರ ವರೆಗೆ ರೈಲು ಕದಿರಿದೇವರ ಪಲ್ಲಿ ಬದಲಿಗೆ ಗುಂತಕಲ್‌ನಿಂದ ಹೊರಡಲಿದೆ ಮತ್ತು ಕದಿರಿದೇವರ ಪಲ್ಲಿ-ಗುಂತಕಲ್ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)