Gol gumbaz Train Timings: ಮೈಸೂರು ಫಂಡರಪುರ ಗೋಲಗುಂಬಜ್‌ ರೈಲು ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ
ಕನ್ನಡ ಸುದ್ದಿ  /  ಕರ್ನಾಟಕ  /  Gol Gumbaz Train Timings: ಮೈಸೂರು ಫಂಡರಪುರ ಗೋಲಗುಂಬಜ್‌ ರೈಲು ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ

Gol gumbaz Train Timings: ಮೈಸೂರು ಫಂಡರಪುರ ಗೋಲಗುಂಬಜ್‌ ರೈಲು ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ

Train Timings changed ಗೋಲಗುಂಬಜ್‌ ( Golgumbaz train) ರೈಲು ಮೈಸೂರಿನಿಂದ ಫಂಡರಪುರ ವರೆಗಿನ ಮಾರ್ಗದ ಕೆಲವು ನಿಲ್ದಾಣ ತಲುಪುವ ಹಾಗೂ ಹೊರಡುವ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಗೋಲಗುಂಬಜ್‌ ರೈಲು ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಗೋಲಗುಂಬಜ್‌ ರೈಲು ಸಂಚಾರ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಂಗಳೂರು: ಮೈಸೂರಿನಿಂದ ಮಹಾರಾಷ್ಟ್ರದ ಫಂಡರಪುರವರೆಗೆ ಸಂಚರಿಸುವ ಗೋಲಗುಂಬಜ್ ಎಕ್ಸ್‌ಪ್ರೆಸ್‌ ರೈಲಿನ ಸಮಯದಲ್ಲಿ ಬದಲಾವಣೆಯಾಗಿದೆ. ಫಂಡರಪುರ ರೈಲಿನ ಸೇವೆಯನ್ನು ವಿಸ್ತರಿಸುವಂತೆ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬೇಡಿಕೆ ಇಟ್ಟ ನಂತರ ಈ ರೈಲಿನ ಸಂಚಾರದಲ್ಲೂ ಕೊಂಚ ಬದಲಾವಣೆ ಮಾಡಲಾಗಿದೆ.

ಮೈಸೂರು-ಪಂಢರಪುರ ಗೋಲಗುಂಬಜ್ ಎಕ್ಸ್‌ಪ್ರೆಸ್ (16535) ರೈಲಿನ ಜತೆಯಲ್ಲಿ ಚನ್ನಪಟ್ಟಣ-ಕೆಎಸ್‌ಆರ್ ಬೆಂಗಳೂರು ಪ್ಯಾಸೆಂಜರ್ ಸ್ಪೆಷಲ್ (06582) ಮತ್ತು ಕೆಎಸ್‌ಆರ್ ಬೆಂಗಳೂರು-ಅರಸೀಕೆರೆ ಪ್ಯಾಸೆಂಜರ್ ಸ್ಪೆಷಲ್ (06273) ರೈಲುಗಳ ವೇಳಾಪಟ್ಟಿಯನ್ನು ಜುಲೈ 2, 2024 ರಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಈ ರೈಲು ಜುಲೈ 2ರಿಂದ ಜಾರಿಗೆ ಬರುವಂತೆ ಮೈಸೂರಿನಿಂದ ಹದಿನೈದು ನಿಮಿಷ ತಡವಾಗಿ ಹೊರಡಲಿದೆ. ಮಧ್ಯಾಹ್ನ 3.30ರ ಬದಲು 3.45ಕ್ಕೆ ಹೊರಡಲಿದೆ. ಅಲ್ಲಿಂದ ಪಾಂಡವಪುರದಿಂದ 4.03ಕ್ಕೆ , ಮಂಡ್ಯದಿಂದ 4.25ಕ್ಕೆ ಹೊರಡಲಿದೆ. ಮದ್ದೂರು. ಚನ್ನಪಟ್ಟಣ, ರಾಮನಗರ, ಬಿಡದಿ ಹಾಗೂ ಕೆಂಗೇರಿ ಸಮಯದಲ್ಲೂ ಬದಲಾವಣೆಯಾಗಿದೆ.ಬೆಂಗಳೂರಿನಿಂದ ಸಂಜೆ 6ರ ಬದಲು 6.35ಕ್ಕೆ ಹೊರಡಲಿದೆ. ಯಶವಂತಪುರದಿಂದ ಸಂಜೆ 6.47, ತುಮಕೂರಿನಿಂದ ರಾತ್ರಿ 7.44ಕ್ಕೆ ಹೊರಡಲಿದೆ. ಅರಸಿಕೆರೆಯನ್ನು ರಾತ್ರಿ 9.05, ಬೀರೂರನ್ನು 9.44ಕ್ಕೆ, ದಾವಣಗೆರೆಯನ್ನು ರಾತ್ರಿ 11.12ಕ್ಕೆ ಬಿಡಲಿದೆ. ಹಾವೇರಿಯನ್ನು ರಾತ್ರಿ 12.24ಕ್ಕೆ ಬಿಡಲಿದೆ. ಅಲ್ಲಿಂದ ಮುಂದೆ ಹುಬ್ಬಳ್ಳಿ, ಗದಗ, ಬಾದಾಮಿ, ಬಾಗಲಕೋಟೆ, ಆಲಮಟ್ಟಿ, ವಿಜಯಪುರ, ಸೋಲಾಪುರ ಹಾಗೂ ಫಂಡರಪುರ ತಲುಪುವ ಸಮಯದಲ್ಲಿ ಬದಲಾವಣೆಯಿಲ್ಲ.

ಅದೇ ರೀತಿ ಚನ್ನಪಟ್ಟಣ ಬೆಂಗಳೂರು ಪ್ಯಾಸೆಂಜರ್‌ ರೈಲು 25 ನಿಮಿಷ ಮುಂಚೆ ಹೊರಡಲಿದೆ. ಬೆಂಗಳೂರನ್ನು ಕೂಡ 25 ಮುಂಚೆಯೇ ತಲುಪಲಿದೆ. ಬೆಂಗಳೂರು ಅರಸಿಕೆರೆ ಪ್ಯಾಸೆಂಜರ್‌ ರೈಲು ಕೂಡ ಅರ್ಧಗಂಟೆ ಮುಂಚೆ ಹೊರಡಲಿದೆ. ಆದರೆ ಅರಸಿಕೆರೆಯನ್ನೂ ಈ ಮೊದಲು ಇದ್ದ ಸಮಯದಲ್ಲಿಯೇ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ರೈಲುಗಳ ಪರಿಷ್ಕೃತ ಸಮಯಗಳಿಗಾಗಿ, ಲಿಂಕ್ ಮೇಲೆ ಕ್ಲಿಕ್ ಮಾಡಿ ತಿಳಿದುಕೊಳ್ಳಬಹುದು:https://swr.indianrailways.gov.in/view_detail.jsp?lang=0&dcd=7584&id=0,4,268.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಧಿಕೃತ ವೆಬ್‌ಸೈಟ್‌: www.enquiry.indianrail.gov.in ಗೆ ಭೇಟಿ ನೀಡಿ ಅಥವಾ 139 ಸಹಾಯವಾಣಿಗೆ ಡಯಲ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಸುಗಮ ಮತ್ತು ತೊಂದರೆರಹಿತ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಪ್ರಯಾಣಿಕರು ಈ ಪರಿಷ್ಕೃತ ಸಮಯವನ್ನು ಗಮನಿಸಬೇಕು ಎಂದು ಡಾ.ಮಂಜುನಾಥ ಕನಮಡಿ ಮನವಿ ಮಾಡಿದ್ದಾರೆ.

Whats_app_banner