Indian Railways: ಯಲಹಂಕದಿಂದ ತಿರುನಲ್ವೇಲಿಗೆ ವಿಶೇಷ ರೈಲು, ಬೆಂಗಳೂರು ಸಂಬಲ್ಪುರ ಬೇಸಿಗೆ ರೈಲು ವಿಸ್ತರಣೆ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಯಲಹಂಕದಿಂದ ತಿರುನಲ್ವೇಲಿಗೆ ವಿಶೇಷ ರೈಲು, ಬೆಂಗಳೂರು ಸಂಬಲ್ಪುರ ಬೇಸಿಗೆ ರೈಲು ವಿಸ್ತರಣೆ

Indian Railways: ಯಲಹಂಕದಿಂದ ತಿರುನಲ್ವೇಲಿಗೆ ವಿಶೇಷ ರೈಲು, ಬೆಂಗಳೂರು ಸಂಬಲ್ಪುರ ಬೇಸಿಗೆ ರೈಲು ವಿಸ್ತರಣೆ

ಬೆಂಗಳೂರು ಹಾಗೂ ಯಲಹಂಕ ರೈಲ್ವೆ ನಿಲ್ದಾಣದಿಂದ ವಿಶೇಷ ರೈಲು ಸಂಚಾರಕ್ಕೆ ಭಾರತೀಯ ರೈಲ್ವೆ( Indian Railways) ಮುಂದಾಗಿದೆ. ಅದರ ವಿವರ ಇಲ್ಲಿದೆ.

ಬೆಂಗಳೂರು, ಯಶವಂತಪುರದಿಂದ ವಿಶೇಷ ರೈಲು ಸೇವೆ ಇರಲಿದೆ.
ಬೆಂಗಳೂರು, ಯಶವಂತಪುರದಿಂದ ವಿಶೇಷ ರೈಲು ಸೇವೆ ಇರಲಿದೆ.

ಬೆಂಗಳೂರು: ಬೇಸಿಗೆ ರಜೆಯ ಕಾರಣದಿಂದ ಬೆಂಗಳೂರಿನಿಂದ ತಮಿಳುನಾಡಿಗೆ ಹೆಚ್ಚಿನ ಪ್ರಯಾಣಿಕರು ಸಂಚರಿಸುವುದರಿಂದ ವಿಶೇಷ ರೈಲು ಸೌೆಯನ್ನು ಆರಂಭಿಸಲಾಗುತ್ತದೆ. ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ನಾಲ್ಕು ಟ್ರಿಪ್‌ಗಳಿಗಾಗಿ ತಿರುನಲ್ವೇಲಿ ಮತ್ತು ಯಲಹಂಕ ನಿಲ್ದಾಣಗಳ ನಡುವೆ ಬೇಸಿಗೆ ಸಾಪ್ತಾಹಿಕ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ಮುಂದಾಗಿದೆ. ಈ ರೈಲು ಮೇ ಹಾಗೂ ಜೂನ್‌ ತಿಂಗಳಿನಲ್ಲಿ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.

1. ರೈಲು ಸಂಖ್ಯೆ. 06045 ತಿರುನೆಲ್ವೇಲಿ-ಯಲಹಂಕ ಸಾಪ್ತಾಹಿಕ ಬೇಸಿಗೆ ವಿಶೇಷ ರೈಲು ಪ್ರತಿ ಬುಧವಾರ ತಿರುನಲ್ವೇಲಿಯಿಂದ ಮೇ 22, 29, ಜೂನ್ 5 ಮತ್ತು 12, 2024 ರಂದು ಮಧ್ಯಾಹ್ನ 3:15 ಗಂಟೆಗೆ ಹೊರಡುತ್ತದೆ ಮತ್ತು ಮರುದಿನ ಬೆಳಿಗ್ಗೆ 03:15 ಗಂಟೆಗೆ ಯಲಹಂಕವನ್ನು ತಲುಪಲಿದೆ.

2. ರೈಲು ಸಂಖ್ಯೆ. 06046 ಯಲಹಂಕ-ತಿರುನೆಲ್ವೇಲಿ ಸಾಪ್ತಾಹಿಕ ಬೇಸಿಗೆ ವಿಶೇಷ ರೈಲು ಪ್ರತಿ ಗುರುವಾರ ಯಲಹಂಕದಿಂದ ಮೇ 23, 30, ಜೂನ್ 6 ಮತ್ತು 13, 2024 ರಂದು ಬೆಳಿಗ್ಗೆ 05 ಗಂಟೆಗೆ ಹೊರಡಲಿದ್ದು, ಸಂಜೆ 6:45 ಕ್ಕೆ ತಿರುನಲ್ವೇಲಿಯನ್ನು ತಲುಪಲಿದೆ.

ವಿಶೇಷ ರೈಲುಗಳು ಕೋವಿಲ್‌ಪಟ್ಟಿ, ಸಾತೂರ್, ವಿರುದುನಗರ, ಮಧುರೈ, ದಿಂಡಿಗಲ್, ಕರೂರ್, ನಾಮಕ್ಕಲ್, ಸೇಲಂ, ತಿರುಪತ್ತೂರ್, ಬಂಗಾರಪೇಟೆ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲುಗಡೆಯಾಗುತ್ತವೆ.

ವಿಶೇಷ ರೈಲು ಎಸಿ-2 ಟೈರ್ (1), ಎಸಿ-3 ಟೈರ್ (2), ಸ್ಲೀಪರ್ ಕ್ಲಾಸ್ (10), ಜನರಲ್ ಸೆಕೆಂಡ್ ಕ್ಲಾಸ್ (3), ಮತ್ತು ಎಸ್ ಎಲ್ ಆರ್ ಡಿ (2) ಸೇರಿದಂತೆ ಒಟ್ಟು 18 ಕೋಚ್ ಗಳನ್ನು ಹೊಂದಿರಲಿದೆ.

ಸಂಬಲ್ಪುರ- ಬೆಂಗಳೂರು ಬೇಸಿಗೆ ವಿಶೇಷ ಅವಧಿಯ ವಿಸ್ತರಣೆ

ಈಸ್ಟ್ ಕೋಸ್ಟ್ ರೈಲ್ವೇ ರೈಲು ಸಂಖ್ಯೆ. 08321/08322 ಸಂಬಲ್‌ಪುರ- ಬೆಂಗಳೂರು-ಸಂಬಲ್‌ಪುರ ಬೇಸಿಗೆ ಎಕ್ಸ್‌ಪ್ರೆಸ್ ವಿಶೇಷ ಅವಧಿಯನ್ನು ಈಗಾಗಲೇ ಇರುವ ಸಮಯ ಮತ್ತು ನಿಲುಗಡೆಗಳೊಂದಿಗೆ ವಿಸ್ತರಿಸಲಾಗುತ್ತಿದೆ.

1. ರೈಲು ಸಂಖ್ಯೆ 08321 ಸಂಬಲ್‌ಪುರ- ಬೆಂಗಳೂರು ಮೇ 23, 2024 ರಂದು ಸಂಚರಿಸಲಿದೆ. ಸಂಬಲ್‌ಪುರದಿಂದ ಸಂಜೆ 6:45 ಗಂಟೆಗೆ ಹೊರಡಲಿದೆ. ಮರುದಿನ ರಾತ್ರಿ 11:30 ಗಂಟೆಗೆ ಬೆಂಗಳೂರು ತಲುಪಲಿದೆ.

2. ರೈಲು ಸಂಖ್ಯೆ 08322 ಬೆಂಗಳೂರು-ಸಂಬಲ್‌ಪುರವನ್ನು ಮೇ 25, 2024 ರಂದು ಹೊರಡಲಿದೆ. ಬೆಂಗಳೂರಿನಿಂದ ರಾತ್ರಿ 01:15 ಗಂಟೆಗೆ ಹೊರಡಲಿದ್ದು ಮರುದಿನ ಬೆಳಿಗ್ಗೆ 06:30 ಗಂಟೆಗೆ ಸಂಬಲ್‌ಪುರ ತಲುಪಲಿದೆ.

ಮೈಸೂರು-ಜೈಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್‌ ನಿಯಂತ್ರಣ

ಸೆಂಟ್ರಲ್ ರೈಲ್ವೇ ಸೂಚನೆಯಂತೆ, ರೈಲು ಸಂಖ್ಯೆ 12975 ಮೈಸೂರು-ಜೈಪುರ ಬೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಮೇ 25, 2024 ರಂದು ಮೈಸೂರಿನಿಂದ ಒಂದು ಗಂಟೆ ಪ್ರಯಾಣ ತಡವಾಗಿ ಪ್ರಾರಂಭಿಸುತ್ತದೆ. ಇಟಾರ್ಸಿ-ಆಮ್ಲಾ ವಿಭಾಗದಲ್ಲಿ ಇಂಟರ್‌ಲಾಕಿಂಗ್ ಕಾಮಗಾರಿಯಿಂದ ವಿಳಂಬವಾಗಲಿದೆ ಎಂದು ತಿಳಿಸಲಾಗಿದೆ.

ಬುಕಿಂಗ್ ಮತ್ತು ವೇಳಾಪಟ್ಟಿ ಸೇರಿದಂತೆ ಹೆಚ್ಚಿನ ಮಾಹಿತಿಗಾಗಿ ರೈಲ್ವೆ ಪ್ರಯಾಣಿಕರು www.enquiry.indianrail.gov.in ಗೆ ಭೇಟಿ ನೀಡಬಹುದು ಅಥವಾ 139 ಅನ್ನು ಡಯಲ್ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

( ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner