Indian Railways: ಮೈಸೂರು ಬೆಂಗಳೂರು ನಡುವೆ ಸಂಚರಿಸುವ 8 ರೈಲುಗಳ ಸೇವೆ ಅಶೋಕಪುರಂ ನಿಲ್ದಾಣದವರೆಗೂ ವಿಸ್ತರಣೆ
Indian Railways: ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಬೆಂಗಳೂರು ಮೈಸೂರು ನಡುವೆ ಸಂಚರಿಸುವ ಎಂಟು ರೈಲುಗಳ ಬರಲಿದ್ದು, ಇದರಿಂದ ಈ ಭಾಗದಿಂದಲೂ ಜನ ಸಂಚರಿಸಲು ಸಹಕಾರಿಯಾಗಲಿದೆ.

Indian Railways: ಮೈಸೂರು ಹಾಗೂ ಬೆಂಗಳೂರು ರೈಲ್ವೆ ನಿಲ್ದಾಣಗಳ ನಡುವೆ ಸಂಚರಿಸುತ್ತಿರುವ ಪ್ರಮುಖ ರೈಲುಗಳಲ್ಲಿ ಒಟ್ಟು ಎಂಟು ರೈಲುಗಳು ಇನ್ನು ಮುಂದೆ ಮೈಸೂರಿನ ಹೊರ ವಲಯದಲ್ಲಿ ಉನ್ನತೀಕರಿಸಲಾಗಿರುವ ಅಶೋಕಪುರಂ ರೈಲ್ವೆ ನಿಲ್ದಾಣಗಳಿಗೂ ವಿಸ್ತರಣೆಯಾಗಲಿವೆ. ಮೈಸೂರಿನಿಂದ ನಂಜನಗೂಡು, ಚಾಮರಾಜನಗರಕ್ಕೆ ಹೋಗುವ ಮಾರ್ಗದಲ್ಲಿರುವ ಅಶೋಕಪುರಂ ರೈಲ್ವೆ ನಿಲ್ದಾಣ ಹಳೆಯದಾದರೂ ಅದನ್ನು ಈಗ ಅಭಿವೃದ್ದಿಪಡಿಸಲಾಗಿದೆ. ಅಲ್ಲಿ ಇನ್ನೊಂದು ದ್ವಾರವನ್ನು ತೆರೆಯಲಾಗಿದ್ದು ಟಿಕೆಟ್ ಕೌಂಟರ್ ಕೂಡ ಆರಂಭಿಸಲಾಗಿದೆ. ಮೈಸೂರು ದಕ್ಷಿಣ ಭಾಗದ ಜನತೆ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಹೋಗುವ ಬದಲು ಅಶೋಕಪುರಂನಿಂದಲೇ ಬೆಂಗಳೂರು ನಡುವೆ ಸಂಚರಿಸುವ ಎಂಟು ರೈಲುಗಳನ್ನು ಇನ್ನು ಮುಂದೆ ಪ್ರಯಾಣಿಕರ ಬಳಸಿಕೊಳ್ಳಬಹುದು. ಇದರಿಂದ ಮುಖ್ಯ ನಿಲ್ದಾಣದಲ್ಲಿ ಅನಗತ್ಯ ಪ್ರಯಾಣಿಕರ ಒತ್ತಡ ತಗ್ಗಲಿದೆ.
ಇದಲ್ಲದೇ ಅಶೋಕಪುರಂ ಮೈಸೂರು ಬೆಂಗಳೂರು ಹಾಗೂ ಬೆಂಗಳೂರು ಮೈಸೂರು ಅಶೋಕಪುರಂ ನಡುವೆ ಎರಡು ಮೆಮು ಜೋಡಿ ಮೆಮು ರೈಲುಗಳ ಸೇವೆಗೂ ಇದೇ ವೇಳೆ ಚಾಲನೆ ದೊರೆತಿದೆ. ಭಾನುವಾರದಿಂದಲೇ ಮೆಮು ರೈಲುಗಳ ಸೇವೆ ಆರಂಭಗೊಂಡಿದೆ.
2025 ಫೆಬ್ರವರಿ 16 ರಿಂದ, ಎರಡು ಜೋಡಿ ಮೆಮು ರೈಲು ಸೇವೆಗಳು (ರೈಲು ಸಂಖ್ಯೆ 06525/26 & 66551/52) ಮೈಸೂರಿನಿಂದ ಅಶೋಕಪುರಂ ರೈಲು ನಿಲ್ದಾಣಕ್ಕೆ ವಿಸ್ತರಿಸಲಾಗುವುದು. ಈ ವಿಸ್ತರಣೆಯು ಅಶೋಕಪುರಂ, ಮೈಸೂರು ಮತ್ತು ಬೆಂಗಳೂರಿನ ನಡುವಿನ ಸಂಪರ್ಕವನ್ನು ವೃದ್ಧಿಸಲಿದೆ. ಈ ಸೇವೆಗಳು ದೈನಂದಿನ ಪ್ರಯಾಣಿಕರು ಮತ್ತು ದೂರ ಪ್ರಯಾಣಿಸುವವರಿಗೆ ಆರಾಮದಾಯಕ ಹಾಗೂ ಪರಿಣಾಮಕಾರಿ ಪ್ರಯಾಣದ ಅನುಭವವನ್ನು ಒದಗಿಸಲಿದೆ ಎಂದು ರೈಲ್ವೆ ಇಲಾಖೆ ಮೈಸೂರು ಕಚೇರಿ ತಿಳಿಸಿದೆ.
ಬೆಂಗಳೂರಿನಿಂದ ಮೈಸೂರುವರೆಗೆ ಸಂಚರಿಸುವ ಎಂಜಿಆರ್ ಚೆನ್ನೈ ಸೆಂಟ್ರಲ್ ಕಾವೇರಿ ಎಕ್ಸ್‌ಪ್ರೆಸ್, ಮೈಸೂರು ಕೆಎಸ್‌ಆರ್ ಬೆಂಗಳೂರು ಸಿಟಿ ಮಾಲ್ಗುಡಿ ಎಕ್ಸೆಪ್ರೆಸ್, ಕಾಚಿಗುಡ ಮೈಸೂರು ಎಕ್ಸ್‌ಪ್ರೆಸ್, ಚನ್ನೈ ಸೆಂಟ್ರಲ್ ಮೈಸೂರು ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು ಮೈಸೂರು ಮೆಮು, ಮೈಸೂರು ಕೆಎಸ್‌ಆರ್ ಬೆಂಗಳೂರು ಮೆಮು ರೈಲುಗಳು ಅಶೋಕಪುರಂ ರೈಲ್ವೆ ನಿಲ್ದಾಣದವರೆಗೂ ವಿಸ್ತರಣೆಗೊಳ್ಳಲಿವೆ.
ಬೆಂಗಳೂರಿನಿಂದ ಮೈಸೂರುವರೆಗೆ ಸಂಚರಿಸುವ ಎಂಜಿಆರ್ ಚೆನ್ನೈ ಸೆಂಟ್ರಲ್ ಕಾವೇರಿ ಎಕ್ಸ್‌ಪ್ರೆಸ್, ಮೈಸೂರು ಕೆಎಸ್‌ಆರ್ ಬೆಂಗಳೂರು ಸಿಟಿ ಮಾಲ್ಗುಡಿ ಎಕ್ಸೆಪ್ರೆಸ್, ಕಾಚಿಗುಡ ಮೈಸೂರು ಎಕ್ಸ್‌ಪ್ರೆಸ್, ಚನ್ನೈ ಸೆಂಟ್ರಲ್ ಮೈಸೂರು ಎಕ್ಸ್‌ಪ್ರೆಸ್ ಕೆಎಸ್‌ಆರ್ ಬೆಂಗಳೂರು ಮೈಸೂರು ಮೆಮು, ಮೈಸೂರು ಕೆಎಸ್‌ಆರ್ ಬೆಂಗಳೂರು ಮೆಮು ರೈಲುಗಳು ಅಶೋಕಪುರಂ ರೈಲ್ವೆ ನಿಲ್ದಾಣದವರೆಗೂ ವಿಸ್ತರಣೆಗೊಳ್ಳಲಿವೆ.
ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸಲು ಮತ್ತು ರೈಲು ಸೇವೆಗಳನ್ನು ಸುಧಾರಿಸಲು, ನೈಋತ್ಯ ರೈಲ್ವೆ ಮೈಸೂರು ವಿಭಾಗವು ಅಶೋಕಪುರಂ ರೈಲು ನಿಲ್ದಾಣದಲ್ಲಿ ನವೀಕರಿಸಿದ ಸೌಲಭ್ಯಗಳನ್ನು ಒದಗಿಸಿದೆ. ಎಲ್ಲಾ ಪ್ರಯಾಣಿಕರಿಗೆ ಸುಗಮ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು, ನಿಲ್ದಾಣದ ದ್ವಿತೀಯ ಪ್ರವೇಶದ ಬಳಿ ಹೊಸ ಬುಕ್ಕಿಂಗ್ ಕಚೇರಿ ನಿರ್ಮಿಸಲಾಗಿದೆ. ಈ ಕಚೇರಿಯು ಪ್ರಯಾಣಿಕರಿಗೆ ಅನುಕೂಲಕರ ಟಿಕೆಟ್ ಸೌಲಭ್ಯಗಳನ್ನು ಒದಗಿಸಲಿದೆ. ಅಶೋಕಪುರಂ ರೈಲು ನಿಲ್ದಾಣದ ನವೀಕರಿತ ಸೌಲಭ್ಯಗಳು ಪ್ರಯಾಣಿಕರ ಸೇವೆಗಳನ್ನು ಸುಧಾರಿಸಿ, ಸುಗಮ ಮತ್ತು ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುವ ಉದ್ದೇಶ ಹೊಂದಿದೆ ಎನ್ನುವುದು ರೈಲ್ವೆ ಅಧಿಕಾರಿಗಳ ವಿವರಣೆ.
ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಅಶೋಕಪುರಂ ರೈಲು ನಿಲ್ದಾಣದ ದ್ವಿತೀಯ ಪ್ರವೇಶದ ಬಳಿ ಹೊಸ ಬುಕ್ಕಿಂಗ್ ಕಚೇರಿ ಉದ್ಘಾಟಿಸಿ, ಅಶೋಕಪುರಂ ಮತ್ತು ಬೆಂಗಳೂರು ನಡುವಿನ ವಿಶೇಷ ಮೆಮು ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿದರು.
ಈ ವೇಳೆ ಮಾತನಾಡಿದ ಸಚಿವ ಸೋಮಣ್ಣ, ಮೈಸೂರು ವಿಭಾಗದಲ್ಲಿ ರೈಲು ಸಂಪರ್ಕ ಮತ್ತು ಪ್ರಯಾಣಿಕರ ಅನುಭವವನ್ನು ಸುಧಾರಿಸಲು ರೈಲ್ವೆ ಹಮ್ಮಿಕೊಂಡಿರುವ ಕಾರ್ಯಗಳನ್ನು ಶ್ಲಾಘಿಸಿದರು. ಅವರು ಈ ಭಾಗದ ಜನರ ಹಿತದೃಷ್ಟಿಯಿಂದ ಇನ್ನಷ್ಟು ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಸಿ.ಎನ್. ಮಂಜೇಗೌಡ, ಕೆ. ವಿವೇಕಾನಂದ ಹಾಗೂ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರವಾಲ್ ಅವರು ಸಚಿವರಿಗೆ ಸಾಥ್ ನೀಡಿದರು.
