ಜೂನ್ ತಿಂಗಳಲ್ಲಿ ಒಂದು ದಿನ ಅರಸೀಕೆರೆ ಮೈಸೂರು ರೈಲು ಸಂಚಾರ ರದ್ದು, ಶಿವಮೊಗ್ಗ ಎಕ್ಸ್‌ಪ್ರೆಸ್ ಭಾಗಶಃ ಸಂಚಾರ
ಭಾರತೀಯ ರೈಲ್ವೆ ನೈರುತ್ಯ ವಲಯದ ಮೈಸೂರು ವಿಭಾಗದಲ್ಲಿ ರೈಲ್ವೆ ಸೇತುವೆ ಕಾಮಗಾರಿ ಇರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ಜೂನ್‌ನಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಲಾಗಿದೆ.

ಮೈಸೂರು: ಮೈಸೂರು ರೈಲ್ವೆ ವಿಭಾಗದ ಕೃಷ್ಣರಾಜನಗರ ಮತ್ತು ಹೊಸ ಅಗ್ರಹಾರ ರೈಲು ನಿಲ್ದಾಣಗಳ ನಡುವೆ ನಡೆಯಲಿರುವ ಸೇತುವೆ ನಿರ್ವಹಣಾ ಕಾರ್ಯದ ಕಾರಣ, ಕೆಳಗಿನ ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಜೂನ್ ತಿಂಗಳಲ್ಲಿ ಒಂದು ದಿನ ಅರಸೀಕೆರೆ ಮೈಸೂರು ಪ್ಯಾಸೆಂಜರ್ ರೈಲು ಸಂಚಾರ ಸಂಪೂರ್ಣ ರದ್ದಾದರೆ, ಮೈಸೂರು ಶಿವಮೊಗ್ಗ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಭಾಗಶಃ ಸಂಚಾರ ಮಾಡಲಿದೆ ಎಂದು ನೈರುತ್ಯ ರೈಲ್ವೆ ವಲಯ ಮೈಸೂರು ವಿಭಾಗದ ಹಿರಿಯ ಕಾನೂನು ಅಧಿಕಾರಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್. ಶ್ರೀಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರೈಲುಗಳ ಸಂಚಾರದ ಕುರಿತು ಮಾಹಿತಿಯನ್ನು ರೈಲ್ವೆ ವೆಬ್‌ಸೈಟ್ ಇಲ್ಲವೇ ರೈಲ್ವೆ ನಿಲ್ದಾಣದ ಕಚೇರಿಗಳಲ್ಲಿ ಪಡೆದುಕೊಳ್ಳುವಂತೆ ಸೂಚಿಸಿದ್ದಾರೆ.
ಸಂಪೂರ್ಣ ರದ್ದು
ರೈಲು ಸಂಖ್ಯೆ 56267 ಅರಸೀಕೆರೆ–ಮೈಸೂರು ಪ್ಯಾಸೆಂಜರ್ ರೈಲು ಜೂನ್ 8, 2025 ರಂದು ಸಂಪೂರ್ಣವಾಗಿ ರದ್ದಾಗಲಿದೆ.
ಭಾಗಶಃ ರದ್ದು
ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಜೂನ್ 8, 2025 ರಂದು ಮೈಸೂರು ಮತ್ತು ಅರಸೀಕೆರೆ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಅರಸೀಕೆರೆಯಿಂದ ಶಿವಮೊಗ್ಗ ಟೌನ್‌ವರೆಗೆ ಮಾತ್ರ ಸಂಚರಿಸಲಿದೆ.
ರೈಲು ಸಂಚಾರ ನಿಯಂತ್ರಣ
ಹಾಸನ ಮತ್ತು ಮಾವಿನಕೆರೆ ನಡುವೆ ಟ್ರ್ಯಾಕ್ ನವೀಕರಣ ಕಾಮಗಾರಿ ನಡೆಯುವುದರಿಂದ ಕೆಳಗಿನ ರೈಲುಗಳ ಸೇವೆಯನ್ನು 25 ದಿನಗಳ ಕಾಲ ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತದೆ.
1. ರೈಲು ಸಂಖ್ಯೆ 16221 ತಾಳಗುಪ್ಪ - ಮೈಸೂರು ಎಕ್ಸ್‌ಪ್ರೆಸ್, ಮೇ 27ರವರೆಗೆ, ಮೇ 30ರಿಂದ ಜೂನ್ 03, ಜೂನ್ 06ರಿಂದ 10 ಮತ್ತು ಜೂನ್ 13ರಿಂದ 17ರವರೆಗೆ ಪ್ರಯಾಣ ಆರಂಭಿಸುವ ರೈಲುಗಳು ಮಾರ್ಗಮಧ್ಯದಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
2. ರೈಲು ಸಂಖ್ಯೆ 16225 ಮೈಸೂರು - ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್, ಮೇ 27ರವರೆಗೆ, ಮೇ 30ರಿಂದ ಜೂನ್ 03, ಜೂನ್ 06ರಿಂದ 10 ಮತ್ತು ಜೂನ್ 13ರಿಂದ 17ರವರೆಗೆ ಪ್ರಯಾಣ ಆರಂಭಿಸುವ ರೈಲುಗಳು ಮಾರ್ಗಮಧ್ಯದಲ್ಲಿ 80 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
3. ರೈಲು ಸಂಖ್ಯೆ 06583 ಕೆಎಸ್‌ಆರ್ ಬೆಂಗಳೂರು - ಹಾಸನ ಡೆಮು, ಮೇ 27ರವರೆಗೆ, ಮೇ 30ರಿಂದ ಜೂನ್ 03, ಜೂನ್ 06ರಿಂದ 10 ಮತ್ತು ಜೂನ್ 13ರಿಂದ 17ರವರೆಗೆ ಪ್ರಯಾಣ ಆರಂಭಿಸುವ ರೈಲುಗಳು ಮಾರ್ಗಮಧ್ಯದಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎರಡು ಎಕ್ಸ್ ಪ್ರೆಸ್ ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಗೆರತ್ಪುರ್-ವಡೋದರ ವಿಭಾಗದ ವಸದ್ ಮತ್ತು ರಾನೋಲಿ ನಿಲ್ದಾಣಗಳ ನಡುವೆ ಬ್ರಿಡ್ಜ್ ಕಾರ್ಯ ನಡೆಯಲಿರುವ ಕಾರಣ, ಕೆಳಗೆ ತಿಳಿಸಲಾದ ಎರಡು ಪ್ರಮುಖ ಎಕ್ಸ್ ಪ್ರೆಸ್ ರೈಲುಗಳ ಸಂಚಾರದಲ್ಲಿ ನಿಯಂತ್ರಣವಾಗಲಿದೆ.
ಮೇ 28 ಮತ್ತು ಜೂನ್ 4, 2025 ರಂದು ಭಗತ್ ಕಿ ಕೋಠಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16533 ಭಗತ್ ಕಿ ಕೋಠಿ – ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ಮಾರ್ಗದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲ್ಪಡುತ್ತದೆ.
ಜೂನ್ 8, 2025 ರಂದು ಅಜ್ಮೀರ್ ನಿಲ್ದಾಣದಿಂದ ಪ್ರಯಾಣ ಆರಂಭಿಸುವ ರೈಲು ಸಂಖ್ಯೆ 16209 ಅಜ್ಮೀರ್ – ಮೈಸೂರು ಎಕ್ಸ್ ಪ್ರೆಸ್ ಮಾರ್ಗದಲ್ಲಿ 55 ನಿಮಿಷಗಳ ಕಾಲ ವಿಳಂಬವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.