Indian Railways: ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ನಡುವಿನ ಮೆಮು ವಿಶೇಷ ರೈಲುಗಳ ಸಂಚಾರ ನಾಳೆಯಿಂದ ರದ್ದು
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ನಡುವಿನ ಮೆಮು ವಿಶೇಷ ರೈಲುಗಳ ಸಂಚಾರ ನಾಳೆಯಿಂದ ರದ್ದು

Indian Railways: ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್ ನಡುವಿನ ಮೆಮು ವಿಶೇಷ ರೈಲುಗಳ ಸಂಚಾರ ನಾಳೆಯಿಂದ ರದ್ದು

Indian Railways: ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ನಡುವೆ ಸಂಚರಿಸುತ್ತಿದ್ದ ಮೆಮು ರೈಲು ಸೇವೆಯನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಲಾಗಿದೆ. ಸೋಮವಾರದಿಂದ ಈ ರೈಲು ಸಂಚರಿಸುವುದಿಲ್ಲ.

ಬೆಂಗಳೂರು ಚಿಕ್ಕಬಳ್ಳಾಪುರ ನಡುವಿನ ಮೆಮು ರೈಲು ಸಂಚಾರ ರದ್ದಾಗಿದೆ.
ಬೆಂಗಳೂರು ಚಿಕ್ಕಬಳ್ಳಾಪುರ ನಡುವಿನ ಮೆಮು ರೈಲು ಸಂಚಾರ ರದ್ದಾಗಿದೆ.

ಬೆಂಗಳೂರು: ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ಚಲಿಸುವ ಮೆಮು ವಿಶೇಷ ರೈಲು ಸೇವೆಗಳನ್ನು2025ರ ಜನವರಿ 20 ರಿಂದ ಜಾರಿಗೆ ಬರುವಂತೆ ಮುಂದಿನ ಸಲಹೆಯವರೆಗೆ ಸಂಚಾರ ರದ್ದುಪಡಿಸಲಾಗಿದೆ. ಈ ಕುರಿತು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ವಲಯವು ಆದೇಶ ಹೊರಡಿಸಿದೆ. ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ಭಾಗಗಳಿಗೆ ಮೆಮು ರೈಲು ಸೇವೆಯನ್ನು ಭಾರತೀಯ ರೈಲ್ವೆಯು ಆರಂಭಿಸಿದೆ. ಅದರಲ್ಲಿ ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ನಡುವಿನ ಮೆಮು ರೈಲು ಕೂಡ ಒಂದು. ಕೆಲವು ವರ್ಷದಿಂದ ಇದರ ಸಂಚಾರ ಇತ್ತಾದರೂ ಈಗ ತಾತ್ಕಾಲಿಕವಾಗಿ ಈ ಮಾರ್ಗದಲ್ಲಿ ಮೆಮು ರೈಲು ಸಂಚಾರ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ಬೆಂಗಳೂರು ಹಾಗೂ ಚಿಕ್ಕಬಳ್ಳಾಪುರ ನಡುವೆ ಮೆಮು ರೈಲು ಬೆಳಿಗ್ಗೆ ಹಾಗೂ ಸಂಜೆ ಈಗ ಸಂಚರಿಸುತ್ತಿದೆ. ಈ ರೈಲು ಭಾನುವಾರ ಹೊರತುಪಡಿಸಿ ವಾರದ ಆರು ದಿನ ಸಂಚರಿಸುತ್ತಿದೆ. ಬೆಂಗಳೂರಿನಿಂದ ಬೈಯ್ಯಪ್ಪನಹಳ್ಳಿ, ಯಲಹಂಕ, ಕೆಂಪೇಗೌಡ ವಿಮಾನ ನಿಲ್ದಾಣ, ದೇವನಹಳ್ಳಿ, ನಂದಿಬೆಟ್ಟ ನಿಲ್ದಾಣ ಮಾರ್ಗದಲ್ಲಿ ಸಂಚರಿಸುತ್ತಿದೆ.

ಈ ಕೆಳಗಿನ ಮೆಮು ವಿಶೇಷ ಸೇವೆಗಳನ್ನು ರದ್ದುಗೊಳಿಸಲಾಗುತ್ತಿದೆ.

1. ರೈಲು ಸಂಖ್ಯೆ 06535/06536 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ಮೆಮು ವಿಶೇಷ ರೈಲು 2025ರ ಜನವರಿ 20ರಿಂದ ಮುಂದಿನ ಆದೇಶದವರೆಗೆ ರದ್ದಾಗಿದೆ.

2. ರೈಲು ಸಂಖ್ಯೆ 06537/06538 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ಮೆಮು ವಿಶೇಷ ರೈಲು 2025ರ ಜನವರಿ 20 ರಿಂದ ಮುಂದಿನ ಆದೇಶದವರೆಗೆ ರದ್ದಾಗಿದೆ.

3. ರೈಲು ಸಂಖ್ಯೆ 06532/06531 ಚಿಕ್ಕಬಳ್ಳಾಪುರ-ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ ಕೂಡ 2025ರ ಜನವರಿ 20, ರಿಂದ ಮುಂದಿನ ಆದೇಶದವರೆಗೆ ರದ್ದಾಗಿದೆ.

Whats_app_banner