ಬೆಂಗಳೂರು, ಮೈಸೂರಿನಿಂದ ಹೊರಡುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಕೆ: ಪ್ರಯಾಣಿಕರ ಹೆಚ್ಚಳ ನಿಯಂತ್ರಣಕ್ಕೆ ಕ್ರಮ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು, ಮೈಸೂರಿನಿಂದ ಹೊರಡುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಕೆ: ಪ್ರಯಾಣಿಕರ ಹೆಚ್ಚಳ ನಿಯಂತ್ರಣಕ್ಕೆ ಕ್ರಮ

ಬೆಂಗಳೂರು, ಮೈಸೂರಿನಿಂದ ಹೊರಡುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳ ಅಳವಡಿಕೆ: ಪ್ರಯಾಣಿಕರ ಹೆಚ್ಚಳ ನಿಯಂತ್ರಣಕ್ಕೆ ಕ್ರಮ

ಭಾರತೀಯ ರೈಲ್ವೆಯಡಿ ಬೆಂಗಳೂರು, ಮೈಸೂರಿನಿಂದ ಹೊರಡುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿ ಅಳವಡಿಸಲಾಗಿದ್ದು, ಆ ಸೇವೆ ಮುಂದುವರಿಯಲಿದೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು, ಮೈಸೂರು ಸಹಿತ ವಿವಿಧ ರೈಲುಗಳ ಅಧಿಕ ಬೋಗಿಗಳ ಹೆಚ್ಚಳ ಅವಧಿ ಮುಂದುವರಿಸಲಾಗಿದೆ.
ಬೆಂಗಳೂರು, ಮೈಸೂರು ಸಹಿತ ವಿವಿಧ ರೈಲುಗಳ ಅಧಿಕ ಬೋಗಿಗಳ ಹೆಚ್ಚಳ ಅವಧಿ ಮುಂದುವರಿಸಲಾಗಿದೆ.

ಬೆಂಗಳೂರು: ಬೆಂಗಳೂರಿನ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಶವಂತಪುರ, ಮೈಸೂರಿನಿಂದ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಹೊರಡುವ ಪ್ರಮುಖ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲು ಹುಬ್ಬಳ್ಳಿ ಕೇಂದ್ರಿತ ನೈಋತ್ಯ ರೈಲ್ವೆ ಮುಂದಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಕೆಳಗಿನ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ತಾತ್ಕಾಲಿಕ ಜೋಡಣೆಯನ್ನು ವಿಸ್ತರಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ. ಕರ್ನಾಟಕದ ನಾನಾ ನಗರಗಳಿಗೆ ಹಾಗೂ ವಿವಿಧ ಭಾಗಗಳಿಗೆ ಸಂಚರಿಸುವ ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳುವಂತೆ ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

ರೈಲುಗಳಿಗೆ ಹೆಚ್ಚುವರಿ ಬೋಗಿಗಳ ತಾತ್ಕಾಲಿಕ ಜೋಡಣೆ ವಿಸ್ತರಣೆ

1. ರೈಲು ಸಂಖ್ಯೆ 16227/16228 ಮೈಸೂರು - ತಾಳಗುಪ್ಪ - ಮೈಸೂರು ದೈನಂದಿನ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಸಾಮಾನ್ಯ ದ್ವಿತೀಯ ದರ್ಜೆ (GS) ಕೋಚ್ ಅಳವಡಿಸಲಾಗುವುದು.

* ರೈಲು ಸಂಖ್ಯೆ 16227 (ಮೈಸೂರು-ತಾಳಗುಪ್ಪ)2025 ರ ಜೂನ್ 2 ರಿಂದ ಜುಲೈ 1, ರವರೆಗೆ ಜಾರಿಯಲ್ಲಿರುತ್ತದೆ.

* ರೈಲು ಸಂಖ್ಯೆ 16228 (ತಾಳಗುಪ್ಪ-ಮೈಸೂರು): ಜೂನ್ 3 ರಿಂದ ಜುಲೈ 2 ರವರೆಗೆ ಜಾರಿಯಲ್ಲಿರುತ್ತದೆ.

2. ರೈಲು ಸಂಖ್ಯೆ 16589/16590 ಕೆಎಸ್ಆರ್ ಬೆಂಗಳೂರು - ಮಿರಜ್ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ AC ಪ್ರಥಮ ದರ್ಜೆ ಕೋಚ್ ಅಳವಡಿಸಲಾಗುವುದು.

* ರೈಲು ಸಂಖ್ಯೆ 16589 (ಕೆಎಸ್‌ಆರ್ ಬೆಂಗಳೂರು - ಮಿರಜ್‌): 2025ರ ಜೂನ್ 2 ರಿಂದ ಜುಲೈ 1, ರವರೆಗೆ ಜಾರಿಯಲ್ಲಿರುತ್ತದೆ.

* ರೈಲು ಸಂಖ್ಯೆ 16590 (ಮಿರಜ್ - ಕೆಎಸ್‌ಆರ್ ಬೆಂಗಳೂರು): ಜೂನ್ 3 ರಿಂದ ಜುಲೈ 2, 2025 ರವರೆಗೆ ಜಾರಿಯಲ್ಲಿರುತ್ತದೆ.

3. ರೈಲು ಸಂಖ್ಯೆ 20653/20654 ಕೆಎಸ್ಆರ್ ಬೆಂಗಳೂರು - ಬೆಳಗಾವಿ - ಕೆಎಸ್ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ AC ಪ್ರಥಮ ದರ್ಜೆ ಕೋಚ್ ಅಳವಡಿಸಲಾಗುವುದು.

* ರೈಲು ಸಂಖ್ಯೆ 20653 (ಕೆಎಸ್‌ಆರ್ ಬೆಂಗಳೂರು - ಬೆಳಗಾವಿ): 2025ರ ಜೂನ್ 2 ರಿಂದ ಜುಲೈ 1 ರವರೆಗೆ ಜಾರಿಯಲ್ಲಿರುತ್ತದೆ.

* ರೈಲು ಸಂಖ್ಯೆ 20654 (ಬೆಳಗಾವಿ - ಕೆಎಸ್‌ಆರ್ ಬೆಂಗಳೂರು): ಜೂನ್ 3 ರಿಂದ ಜುಲೈ 2 ರವರೆಗೆ ಜಾರಿಯಲ್ಲಿರುತ್ತದೆ.

4. ರೈಲು ಸಂಖ್ಯೆ 22685/22686 ಯಶವಂತಪುರ - ಚಂಡೀಗಢ - ಯಶವಂತಪುರ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ AC 3-ಟೈರ್ ಕೋಚ್ ಅಳವಡಿಸಲಾಗುವುದು.

* ರೈಲು ಸಂಖ್ಯೆ 22685 (ಯಶವಂತಪುರ - ಚಂಡೀಗಢ): 2025ರ ಜೂನ್ 7 ರಿಂದ ಜುಲೈ 2 ರವರೆಗೆ ಜಾರಿಯಲ್ಲಿರುತ್ತದೆ.

* ರೈಲು ಸಂಖ್ಯೆ 22686 (ಚಂಡೀಗಢ - ಯಶವಂತಪುರ): ಜೂನ್ 10 ರಿಂದ ಜುಲೈ 5 ರವರೆಗೆ ಜಾರಿಯಲ್ಲಿರುತ್ತದೆ.

5. ರೈಲು ಸಂಖ್ಯೆ 12079/12080 ಕೆಎಸ್ಆರ್ ಬೆಂಗಳೂರು - ಹುಬ್ಬಳ್ಳಿ - ಕೆಎಸ್ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಎರಡನೇ ದರ್ಜೆಯ ಚೇರ್ ಕಾರ್ ಕೋಚ್ ಹೆಚ್ಚುವರಿಯಾಗಿ ಅಳವಡಿಸಲಾಗುವುದು.

* ರೈಲು ಸಂಖ್ಯೆ 12079 (ಕೆಎಸ್ಆರ್ ಬೆಂಗಳೂರು - ಹುಬ್ಬಳ್ಳಿ) ಮತ್ತು ರೈಲು ಸಂಖ್ಯೆ 12080 (ಹುಬ್ಬಳ್ಳಿ - ಕೆಎಸ್ಆರ್ ಬೆಂಗಳೂರು): ಜೂನ್ 2 ರಿಂದ ಜುಲೈ 1, 2025 ರವರೆಗೆ ಜಾರಿಯಲ್ಲಿರುತ್ತದೆ.

6. ರೈಲು ಸಂಖ್ಯೆ 12089/12090 ಕೆಎಸ್ಆರ್ ಬೆಂಗಳೂರು - ಶಿವಮೊಗ್ಗ - ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಎರಡನೇ ದರ್ಜೆಯ ಚೇರ್ ಕಾರ್ ಕೋಚ್ ಅಳವಡಿಸಲಾಗುವುದು.

* ರೈಲು ಸಂಖ್ಯೆ 12089 (ಕೆಎಸ್ಆರ್ ಬೆಂಗಳೂರು - ಶಿವಮೊಗ್ಗ): 2025ರ ಜೂನ್ 2 ರಿಂದ ಜುಲೈ 1 ರವರೆಗೆ ಜಾರಿಯಲ್ಲಿರಲಿದೆ.

* ರೈಲು ಸಂಖ್ಯೆ 12090 (ಶಿವಮೊಗ್ಗ - ಕೆಎಸ್ಆರ್ ಬೆಂಗಳೂರು): ಜೂನ್ 3 ರಿಂದ ಜುಲೈ 2 ರವರೆಗೆ ವರ್ಧನೆ ಜಾರಿಯಲ್ಲಿರುತ್ತದೆ.

7. ರೈಲು ಸಂಖ್ಯೆ 12649/12650 ಯಶವಂತಪುರ - ಹಜರತ್ ನಿಜಾಮುದ್ದೀನ್ - ಯಶವಂತಪುರ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ AC 3-ಟೈರ್ ಕೋಚ್ ಅಳವಡಿಸಲಾಗುವುದು.

* ರೈಲು ಸಂಖ್ಯೆ 12649 (ಯಶವಂತಪುರ - ಹಜರತ್ ನಿಜಾಮುದ್ದೀನ್): 2025ರ ಜೂನ್ 4 ರಿಂದ ಜೂನ್ 8 ರವರೆಗೆ ಜಾರಿಯಲ್ಲಿರುತ್ತದೆ.

* ರೈಲು ಸಂಖ್ಯೆ 12650 (ಹಜರತ್ ನಿಜಾಮುದ್ದೀನ್ - ಯಶವಂತಪುರ): ಜೂನ್ 7 ರಿಂದ ಜೂನ್ 10 ರವರೆಗೆ ಜಾರಿಯಲ್ಲಿರುತ್ತದೆ.

8. ರೈಲು ಸಂಖ್ಯೆ 12629/12630 ಯಶವಂತಪುರ - ಹಜರತ್ ನಿಜಾಮುದ್ದೀನ್ - ಯಶವಂತಪುರ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್‌ಗೆ ಒಂದು ಹೆಚ್ಚುವರಿ AC 3-ಟೈರ್ ಕೋಚ್‌ನೊಂದಿಗೆ ಹೆಚ್ಚಿಸಲಾಗುವುದು.

* ರೈಲು ಸಂಖ್ಯೆ 12629 (ಯಶವಂತಪುರ - ಹಜರತ್ ನಿಜಾಮುದ್ದೀನ್): 2025ರ ಜೂನ್ 5ರಿಂದ ಜಾರಿಯಲ್ಲಿರುತ್ತದೆ.

* ರೈಲು ಸಂಖ್ಯೆ 12630 (ಹಜರತ್ ನಿಜಾಮುದ್ದೀನ್ - ಯಶವಂತಪುರ): ಜೂನ್ 11 ರಿಂದ ಜಾರಿಯಲ್ಲಿರುತ್ತದೆ.

9. ರೈಲು ಸಂಖ್ಯೆ 16591/16592 ಹುಬ್ಬಳ್ಳಿ - ಮೈಸೂರು - ಹುಬ್ಬಳ್ಳಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಕೋಚ್ ಅಳವಡಿಸಲಾಗುವುದು.

* ರೈಲು ಸಂಖ್ಯೆ 16591 (ಹುಬ್ಬಳ್ಳಿ - ಮೈಸೂರು): 2025ರ ಮೇ 25 ರಿಂದ ಜುಲೈ 1, ರವರೆಗೆ ಜಾರಿಯಲ್ಲಿರುತ್ತದೆ.

* ರೈಲು ಸಂಖ್ಯೆ 16592 (ಮೈಸೂರು - ಹುಬ್ಬಳ್ಳಿ): ಮೇ 28 ರಿಂದ ಜುಲೈ 4, ರವರೆಗೆ ಜಾರಿಯಲ್ಲಿರುತ್ತದೆ.

10. ರೈಲು ಸಂಖ್ಯೆ 16535/16536 ಮೈಸೂರು - ಪಂಢರಪುರ - ಮೈಸೂರು ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಸ್ಲೀಪರ್ ಕ್ಲಾಸ್ ಕೋಚ್ ಅಳವಡಿಸಲಾಗುವುದು.

* ರೈಲು ಸಂಖ್ಯೆ 16535 (ಮೈಸೂರು - ಪಂಢರಪುರ): 2025 ರ ಮೇ 26 ರಿಂದ ಜುಲೈ 2 ರವರೆಗೆ ಜಾರಿಯಲ್ಲಿರುತ್ತದೆ.

* ರೈಲು ಸಂಖ್ಯೆ 16536 (ಪಂಢರಪುರ - ಮೈಸೂರು): ಮೇ 27 ರಿಂದ ಜುಲೈ 3 ರವರೆಗೆ ಜಾರಿಯಲ್ಲಿರುತ್ತದೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.