Indian Railways: ಕುಪ್ಪಂ ಯಾರ್ಡ್‌ನಲ್ಲಿ ಕಾಮಗಾರಿ; ಜನವರಿ ಮೂರನೇ ವಾರದಿಂದ ಕರ್ನಾಟಕದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರೀ ವ್ಯತ್ಯಯ
Indian Railways: ಕುಪ್ಪಂ ರೈಲ್ವೆ ಯಾರ್ಡ್‌ನ ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕುಪ್ಪಂ ಮಾರ್ಗವಾಗಿ ಹೋಗುವ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆಯಾಗಲಿದೆ.

ಬೆಂಗಳೂರು: ಕುಪ್ಪಂ ಯಾರ್ಡ್‌ನಲ್ಲಿ ಇಂಜಿನಿಯರಿಂಗ್ ಕಾಮಗಾರಿ ನಡೆಯುತ್ತಿರುವುದರಿಂದ ರೈಲು ಸೇವೆಯಲ್ಲಿ ಬದಲಾವಣೆ ಮಾಡಲು ನಿರ್ಧರಿಸಲಾಗಿದ್ದು 2025 ರ ಜನವರಿ ಮೂರನೇ ವಾರದಿಂದ ಫೆಬ್ರವರಿ ಎರಡನೇ ವಾ ರದವರೆಗೂ ವ್ಯತ್ಯಯವಾಗಲಿದೆ. ಮೂರು ಹೆಚ್ಚುವರಿ ತುರ್ತು ಕ್ರಾಸ್ ಒವರ್‌ಗಳ ಸೇರ್ಪಡೆಯೊಂದಿಗೆ ಕುಪ್ಪಂ ಯಾರ್ಡ್‌ನ ಕಾರ್ಯಾರಂಭಕ್ಕೆ ಅನುಕೂಲವಾಗುವಂತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಕುಪ್ಪಂ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳು ರದ್ದಾದರೆ, ಕೆಲವು ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗುತ್ತಿದೆ. ಇನ್ನೂ ಕೆಲವು ರೈಲುಗಳ ಸಂಚಾರವನ್ನು ನಿಯಂತ್ರಣ ಮಾಡಲಾಗಿದೆ. ಇನ್ನಷ್ಟು ರೈಲುಗಳ ಸಂಚಾರ ಮಾರ್ಗ ಹಾಗೂ ಸಮಯದಲ್ಲಿ ಮರು ಹೊಂದಾಣಿಕೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಿಭಾಗದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
ರೈಲುಗಳ ರದ್ದತಿ
1. ರೈಲು ಸಂಖ್ಯೆ 66527 ಕುಪ್ಪಂ-ಬಂಗಾರಪೇಟೆ ಮೆಮು ಅನ್ನು 2025ರ ಜನವರಿ 21 ರಿಂದ ಫೆಬ್ರವರಿ 8 ರವರೆಗೆ ರದ್ದುಗೊಳಿಸಲಾಗುತ್ತದೆ.
2. ರೈಲು ಸಂಖ್ಯೆ 66528 ಬಂಗಾರಪೇಟೆ-ಕುಪ್ಪಂ ಮೆಮು ಅನ್ನು 2025ರ ಫೆಬ್ರವರಿ 2, 3, 7 ಮತ್ತು 8, ರಂದು ರದ್ದುಗೊಳಿಸಲಾಗುತ್ತದೆ.
ರೈಲುಗಳ ಭಾಗಶಃ ರದ್ದತಿ
1. ರೈಲು ಸಂಖ್ಯೆ 66534 ಕೃಷ್ಣರಾಜಪುರಂ-ಕುಪ್ಪಂ ಮೆಮು, 2025ರ ಜನವರಿ 21 ಮತ್ತು ಫೆಬ್ರವರಿ 8 ರ ನಡುವೆ ತನ್ನ ಪ್ರಯಾಣವನ್ನು ಆರಂಭಿಸಲಿದ್ದು, ಬಂಗಾರಪೇಟೆ ಮತ್ತು ಕುಪ್ಪಂ ನಡುವೆ ಭಾಗಶಃ ರದ್ದುಗೊಳ್ಳುತ್ತದೆ ಮತ್ತು ಬಂಗಾರಪೇಟೆಯಲ್ಲಿ ಕೊನೆಗೊಳ್ಳುತ್ತದೆ.
2. ರೈಲು ಸಂಖ್ಯೆ 66529 ಕುಪ್ಪಂ-ಕೆಎಸ್‌ಆರ್ ಬೆಂಗಳೂರು ಮೆಮು ರೈಲು 2025ರ ಫೆಬ್ರವರಿ 2, 3, 7 ಮತ್ತು 8 ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ, ಕುಪ್ಪಂ ಮತ್ತು ಬಂಗಾರಪೇಟೆ ನಡುವೆ ಭಾಗಶಃ ರದ್ದುಗೊಳ್ಳುತ್ತದೆ. ಇದು ಬಂಗಾರಪೇಟೆಯಿಂದ ನಿಗದಿತ ನಿರ್ಗಮನದ ಸಮಯದಲ್ಲಿ ಬಂಗಾರಪೇಟೆಯಿಂದ ಪ್ರಯಾಣ ಆರಂಭಿಸಲಿದೆ.
3. ರೈಲು ಸಂಖ್ಯೆ 16520 ಕೆಎಸ್‌ಆರ್ ಬೆಂಗಳೂರು-ಜೋಲಾರ್‌ಪೇಟ್ಟೈ ಮೆಮು ರೈಲು 2025ರ ಫೆಬ್ರವರಿ 8 ರಂದು ತನ್ನ ಪ್ರಯಾಣ ಪ್ರಾರಂಭಿಸಿದರೂ ಬಂಗಾರಪೇಟೆ ಮತ್ತು ಜೋಲಾರ್‌ಪೇಟ್ಟೈ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಬಂಗಾರಪೇಟೆಯಲ್ಲಿ ಕೊನೆಗೊಳ್ಳಲಿದೆ.
4. ರೈಲು ಸಂಖ್ಯೆ 16519 ಜೋಲಾರ್‌ಪೇಟ್ಟೈ-ಕೆಎಸ್‌ಆರ್ ಬೆಂಗಳೂರು ಮೆಮು ರೈಲು 2025ರ ಫೆಬ್ರವರಿ 9 ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸಿ, ಜೋಲಾರ್‌ಪೇಟೆ ಮತ್ತು ಬಂಗಾರಪೇಟೆ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಬಂಗಾರಪೇಟೆಯಿಂದ ನಿಗದಿತ ನಿರ್ಗಮನದ ಸಮಯದಲ್ಲಿ ಸೇವೆ ಆರಂಭಿಸಲಿದೆ.
ರೈಲುಗಳ ನಿಯಂತ್ರಣ
1. ರೈಲು ಸಂಖ್ಯೆ. 00638 ಓಖ್ಲಾ-ಎಸ್‌ಎಂವಿಟಿ ಬೆಂಗಳೂರು ಪಾರ್ಸೆಲ್ ಕಾರ್ಗೋ ಎಕ್ಸ್‌ಪ್ರೆಸ್ ಅನ್ನು2025ರ ಜನವರಿ 22 ಮತ್ತು 29 ರಂದು ಪ್ರಾರಂಭವಾಗುವ ಅದರ ಪ್ರಯಾಣದಲ್ಲಿ ಕ್ರಮವಾಗಿ 150 ನಿಮಿಷಗಳು ಮತ್ತು 120 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.
2. ರೈಲು ಸಂಖ್ಯೆ.18637 ಹಟಿಯಾ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್, 2025ರ ಜನವರಿ 25 ರಂದು ಪ್ರಾರಂಭವಾಗುವ ಪ್ರಯಾಣವು ಮಾರ್ಗದಲ್ಲಿ 10 ನಿಮಿಷಗಳವರೆಗೆ ನಿಯಂತ್ರಿಸಲ್ಪಡಲಿದೆ.
3. ರೈಲು ಸಂಖ್ಯೆ.22818 ಮೈಸೂರು-ಹೌರಾ ಸಾಪ್ತಾಹಿಕ ಎಕ್ಸ್‌ಪ್ರೆಸ್,2025ರ ಜನವರಿ 26 ರಂದು ಪ್ರಾರಂಭವಾಗುವ ಪ್ರಯಾಣವು ಮಾರ್ಗದಲ್ಲಿ 15 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
4. ರೈಲು ಸಂಖ್ಯೆ.16526 ಕೆಎಸ್‌ಆರ್ ಬೆಂಗಳೂರು-ಕನ್ಯಾಕುಮಾರಿ ಡೈಲಿ ಎಕ್ಸ್‌ಪ್ರೆಸ್, 2025 ರ ಜನವರಿ 27, 28 ಮತ್ತು 29 ರಂದು ಪ್ರಾರಂಭವಾಗುವ ಪ್ರಯಾಣವು ಮಾರ್ಗದಲ್ಲಿ 45 ನಿಮಿಷಗಳವರೆಗೆ ನಿಯಂತ್ರಿಸಲ್ಪಡಲಿದೆ.
5. ರೈಲು ಸಂಖ್ಯೆ.16219 ಚಾಮರಾಜನಗರ-ತಿರುಪತಿ ಡೈಲಿ ಎಕ್ಸ್‌ಪ್ರೆಸ್, 2025ರ ಜನವರಿ 27, 28 ಮತ್ತು 29 ರಂದು ಪ್ರಾರಂಭವಾಗುವ ಪ್ರಯಾಣವು ಮಾರ್ಗದಲ್ಲಿ 45 ನಿಮಿಷಗಳವರೆಗೆ ನಿಯಂತ್ರಿಸಲ್ಪಡುತ್ತದೆ.
6. ರೈಲು ಸಂಖ್ಯೆ 22602 ಸಾಯಿನಗರ ಶಿರಡಿ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ವೀಕ್ಲಿ ಎಕ್ಸ್‌ಪ್ರೆಸ್, 2025ರ ಜನವರಿ 31 ರಂದು ಪ್ರಾರಂಭವಾಗುವ ಪ್ರಯಾಣವು ಮಾರ್ಗದಲ್ಲಿ 45 ನಿಮಿಷಗಳವರೆಗೆ ನಿಯಂತ್ರಿಸಲ್ಪಡುತ್ತದೆ.
7. ರೈಲು ಸಂಖ್ಯೆ 22697 ಎಸ್‌ಎಸ್‌ಎಸ್ ಹುಬ್ಬಳ್ಳಿ-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ವೀಕ್ಲಿ ಎಕ್ಸ್‌ಪ್ರೆಸ್, ಫೆಬ್ರವರಿ 1, 2025 ರಂದು ಪ್ರಾರಂಭವಾಗುವ ಪ್ರಯಾಣವು ಮಾರ್ಗದಲ್ಲಿ 15 ನಿಮಿಷಗಳವರೆಗೆ ನಿಯಂತ್ರಿಸಲ್ಪಡುತ್ತದೆ.
8. ರೈಲು ಸಂಖ್ಯೆ. 13434 ಮಾಲ್ಡಾ ಟೌನ್- ಎಸ್‌ಎಂವಿಟಿ ಬೆಂಗಳೂರು ಅಮೃತ್ ಭಾರತ್ ಸಾಪ್ತಾಹಿಕ ಎಕ್ಸ್‌ಪ್ರೆಸ್, 2025ರ ಫೆಬ್ರವರಿ 2 ರಂದು ಪ್ರಾರಂಭವಾಗುವ ಪ್ರಯಾಣವು ಮಾರ್ಗದಲ್ಲಿ 60 ನಿಮಿಷಗಳವರೆಗೆ ನಿಯಂತ್ರಿಸಲ್ಪಡಲಿದೆ.
9. ರೈಲು ಸಂಖ್ಯೆ. 12863 ಹೌರಾ-ಎಸ್‌ಎಂವಿಟಿ ಬೆಂಗಳೂರು ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, 2025ರ ಫೆಬ್ರವರಿ 7 ರಂದು ಪ್ರಾರಂಭವಾಗುವ ಪ್ರಯಾಣವು ಮಾರ್ಗದಲ್ಲಿ 180 ನಿಮಿಷಗಳವರೆಗೆ ನಿಯಂತ್ರಿಸಲ್ಪಡುತ್ತದೆ.
10. ರೈಲು ಸಂಖ್ಯೆ. 16316 ತಿರುವನಂತಪುರಂ ಉತ್ತರ-ಮೈಸೂರು ಡೈಲಿ ಎಕ್ಸ್‌ಪ್ರೆಸ್, 2025ರ ಫೆಬ್ರವರಿ 8 ರಂದು ಪ್ರಾರಂಭವಾಗುವ ಪ್ರಯಾಣವು ಮಾರ್ಗದಲ್ಲಿ 90 ನಿಮಿಷಗಳವರೆಗೆ ನಿಯಂತ್ರಿಸಲ್ಪಡುತ್ತದೆ.
11. ರೈಲು ಸಂಖ್ಯೆ. 12028 ಕೆಎಸ್‌ಆರ್ ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್, 2025ರ ಫೆಬ್ರವರಿ 9 ರಂದು ಪ್ರಾರಂಭವಾಗುವ ಪ್ರಯಾಣವು ಮಾರ್ಗದಲ್ಲಿ 15 ನಿಮಿಷಗಳ ಕಾಲ ನಿಯಂತ್ರಿಸಲ್ಪಡಲಿದೆ.
ರೈಲುಗಳ ಮರು ಹೊಂದಿಕೆ
1. ರೈಲು ಸಂಖ್ಯೆ 07313 ಎಸ್‌ಎಸ್‌ಎಸ್ ಹುಬ್ಬಳ್ಳಿ-ಕೊಲ್ಲಂ ವಿಶೇಷ ಎಕ್ಸ್‌ಪ್ರೆಸ್, 2025 ರ ಜನವರಿ 23 ಮತ್ತು 30 ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ. ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ 90 ನಿಮಿಷಗಳ ಕಾಲ ಮರುಹೊಂದಿಸುವ ಜತೆಗೆ ಮಾರ್ಗದಲ್ಲಿ ಹೆಚ್ಚುವರಿ 90 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
2. ರೈಲು ಸಂಖ್ಯೆ 22501 ಎಸ್‌ಎಂವಿಟಿ ಬೆಂಗಳೂರು-ನ್ಯೂ ಟಿನ್ಸುಕಿಯಾ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ 2025 ರ ಫೆಬ್ರವರಿ 4 ರಂದು ಪ್ರಯಾಣವನ್ನು ಬೆಂಗಳೂರಿನಿಂದ 120 ನಿಮಿಷ ಮರುಹೊಂದಿಸಲಾಗುತ್ತದೆ.
3. ರೈಲು ಸಂಖ್ಯೆ 22697 ಎಸ್‌ಎಸ್‌ಎಸ್ ಹುಬ್ಬಳ್ಳಿ–ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, 2025 ರ ಫೆಬ್ರವರಿ 8 ರಂದು ಪ್ರಯಾಣ ಪ್ರಾರಂಭಿಸುತ್ತದೆ, ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣದಿಂದ 35 ನಿಮಿಷಗಳ ಕಾಲ ಮರುಹೊಂದಿಸಲಾಗುತ್ತದೆ ಮತ್ತು ಮಾರ್ಗದಲ್ಲಿ ಹೆಚ್ಚುವರಿ 25 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
ಈ ರೈಲುಗಳಿಗೆ ಕುಪ್ಪಂನಲ್ಲಿ ನಿಲುಗಡೆ ಇಲ್ಲ
1. ರೈಲು ಸಂಖ್ಯೆ.12296 ದಾನಪುರ-ಎಸ್‌ಎಂವಿಟಿ ಬೆಂಗಳೂರು ಸಂಘ ಮಿತ್ರ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, 2025 ರ ಜನವರಿ 23, ರಿಂದ ಫೆಬ್ರವರಿ 06 ರವರೆಗೆ ಪ್ರಯಾಣ.
2. ರೈಲು ಸಂಖ್ಯೆ.12863 ಹೌರಾ-ಎಸ್‌ಎಂವಿಟಿ ಬೆಂಗಳೂರು ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, 2025 ರ ಜನವರಿ 23 ರಿಂದ ಫೆಬ್ರವರಿ 07 ರವರೆಗೆ ಪ್ರಯಾಣ.
3. ರೈಲು ಸಂಖ್ಯೆ.07153 ನರಸಾಪುರ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ಎಕ್ಸ್‌ಪ್ರೆಸ್, 2025 ರ ಜನವರಿ 24, 31 ಮತ್ತು ಫೆಬ್ರವರಿ 07 ರಂದು ಪ್ರಾರಂಭವಾಗುತ್ತದೆ.
4. ರೈಲು ಸಂಖ್ಯೆ.17210 ಕಾಕಿನಾಡ ಟೌನ್-SMVT ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, 2025 ರ ಜನವರಿ 24 ರಿಂದ ಫೆಬ್ರವರಿ 07 ರವರೆಗೆ ಪ್ರಯಾಣ.
5. ರೈಲು ಸಂಖ್ಯೆ.16021 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಕಾವೇರಿ ಡೈಲಿ ಎಕ್ಸ್‌ಪ್ರೆಸ್, 2025 ರ ಜನವರಿ 24 ರಿಂದ ಫೆಬ್ರವರಿ 08 ರವರೆಗೆ ಪ್ರಯಾಣ.
6. ರೈಲು ಸಂಖ್ಯೆ.16220 ತಿರುಪತಿ-ಚಾಮರಾಜನಗರ ಡೈಲಿ ಎಕ್ಸ್‌ಪ್ರೆಸ್, 2025 ರ ಜನವರಿ 24 ರಿಂದ ಫೆಬ್ರವರಿ 8 ರವರೆಗೆ ಪ್ರಯಾಣ.
7. ರೈಲು ಸಂಖ್ಯೆ.16525 ಕನ್ಯಾಕುಮಾರಿ-ಕೆಎಸ್‌ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, 2025 ರ ಜನವರಿ 24 ರಿಂದ ಫೆಬ್ರವರಿ 8 ರವರೆಗೆ ಪ್ರಯಾಣ.
8. ರೈಲು ಸಂಖ್ಯೆ.16316 ತಿರುವನಂತಪುರಂ ಉತ್ತರ-ಮೈಸೂರು ಡೈಲಿ ಎಕ್ಸ್‌ಪ್ರೆಸ್, 2025 ರ ಜನವರಿ 24 ರಿಂದ ಫೆಬ್ರವರಿ 8 ರವರೆಗೆ ಪ್ರಯಾಣ.
9. ರೈಲು ಸಂಖ್ಯೆ.22666 ಕೊಯಮತ್ತೂರು-ಕೆಎಸ್‌ಆರ್ ಬೆಂಗಳೂರು ಉದಯ್ ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್,2025 ರ ಜನವರಿ 25 ರಿಂದ ಫೆಬ್ರವರಿ 8 ರವರೆಗೆ ಪ್ರಯಾಣ.
10. ರೈಲು ಸಂಖ್ಯೆ.22625 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್–ಕೆಎಸ್ಆರ್ ಬೆಂಗಳೂರು ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, 2025 ರ ಜನವರಿ 25 ರಿಂದ ಫೆಬ್ರವರಿ 8 ರವರೆಗೆ ಪ್ರಯಾಣ.
11. ರೈಲು ಸಂಖ್ಯೆ.12639 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್ಆರ್ ಬೆಂಗಳೂರು ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, 2025 ರ ಜನವರಿ 25 ರಿಂದ ಫೆಬ್ರವರಿ 8 ರವರೆಗೆ ಪ್ರಯಾಣ.
12. ರೈಲು ಸಂಖ್ಯೆ.66549 ಜೋಲಾರ್‌ಪೇಟ್ಟೈ-ಕೆಎಸ್‌ಆರ್ ಬೆಂಗಳೂರು ಮೆಮು, 2025 ರ ಜನವರಿ 25 ರಿಂದ ಫೆಬ್ರವರಿ 8 ರವರೆಗೆ ಪ್ರಯಾಣ.
13. ರೈಲು ಸಂಖ್ಯೆ.12609 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಮೈಸೂರು ಡೈಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್,2025 ರ ಜನವರಿ 25 ರಿಂದ ಫೆಬ್ರವರಿ 8 ರವರೆಗೆ ಪ್ರಯಾಣ.
14. ರೈಲು ಸಂಖ್ಯೆ.12607 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್, 2025 ರ ಜನವರಿ 25 ರಿಂದ ಫೆಬ್ರವರಿ 8ರವರೆಗೆ ಪ್ರಯಾಣ.
15. ರೈಲು ಸಂಖ್ಯೆ.16519 ಜೋಲಾರ್‌ಪೇಟ್ಟೈ-ಕೆಎಸ್‌ಆರ್ ಬೆಂಗಳೂರು ಮೆಮು, 2025 ರ ಜನವರಿ 25 ರಿಂದ ಫೆಬ್ರವರಿ 8ರವರೆಗೆ ಪ್ರಯಾಣ.
16. ರೈಲು ಸಂಖ್ಯೆ. 22617 ತಿರುಪತಿ-SMVT ಬೆಂಗಳೂರು ಟ್ರೈ-ವೀಕ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, 2025 ರ ಜನವರಿ 26, 28, 31 ರಂದು ಪ್ರಾರಂಭವಾಗುವ ಪ್ರಯಾಣ
17. ರೈಲು ಸಂಖ್ಯೆ.16566 ಮಂಗಳೂರು ಸೆಂಟ್ರಲ್-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್, ಪ್ರಯಾಣವು 2025 ರ ಜನವರಿ 27 ಮತ್ತು ಫೆಬ್ರವರಿ 3 ರಂದು ಪ್ರಾರಂಭವಾಗುತ್ತದೆ.
18. ರೈಲು ಸಂಖ್ಯೆ.22601 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್-ಸಾಯಿನಗರ ಶಿರಡಿ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಪ್ರಯಾಣ 2025 ರ ಜನವರಿ 29 ಮತ್ತು ಫೆಬ್ರವರಿ 5 ರಂದು ಪ್ರಾರಂಭವಾಗುತ್ತದೆ.
