Indian Railways: ಜೋಧ್‌ಪುರ ಬೆಂಗಳೂರು, ಮೈಸೂರು ಉದಯಪುರ ಮಾರ್ಗಗಳಲ್ಲಿ ಬದಲಾವಣೆ; ಅರಸಾಳಲ್ಲಿ ತಾಳಗುಪ್ಪ ರೈಲು ನಿಲುಗಡೆ ಮುಂದುವರಿಕೆ-indian railways jodhpur bangalore mysore udaipur yeshwanthpur nizamuddin train routes diverted stoppage at arsal kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಜೋಧ್‌ಪುರ ಬೆಂಗಳೂರು, ಮೈಸೂರು ಉದಯಪುರ ಮಾರ್ಗಗಳಲ್ಲಿ ಬದಲಾವಣೆ; ಅರಸಾಳಲ್ಲಿ ತಾಳಗುಪ್ಪ ರೈಲು ನಿಲುಗಡೆ ಮುಂದುವರಿಕೆ

Indian Railways: ಜೋಧ್‌ಪುರ ಬೆಂಗಳೂರು, ಮೈಸೂರು ಉದಯಪುರ ಮಾರ್ಗಗಳಲ್ಲಿ ಬದಲಾವಣೆ; ಅರಸಾಳಲ್ಲಿ ತಾಳಗುಪ್ಪ ರೈಲು ನಿಲುಗಡೆ ಮುಂದುವರಿಕೆ

Train Updates ಭಾರತೀಯ ರೈಲ್ವೆಯು( Indian Railways) ಬೆಂಗಳೂರು, ಮೈಸೂರಿನ ಕೆಲವು ರೈಲು ಮಾರ್ಗಗಳನ್ನು ಬದಲಿಸಿದೆ.

ಜೋಧಪುರ ಬೆಂಗಳೂರು, ಮೈಸೂರು ಉದಯಪುರ ರೈಲಿನ ಮಾರ್ಗ ಬದಲು ಮಾಡಲಾಗಿದೆ.
ಜೋಧಪುರ ಬೆಂಗಳೂರು, ಮೈಸೂರು ಉದಯಪುರ ರೈಲಿನ ಮಾರ್ಗ ಬದಲು ಮಾಡಲಾಗಿದೆ.

ಬೆಂಗಳೂರು: ಭಾರತೀಯ ರೈಲ್ವೆಯ( Indian Railways) ನೈರುತ್ಯ ರೈಲ್ವೆಯ ಬೆಂಗಳೂರು ಹಾಗೂ ಮೈಸೂರು ವಿಭಾಗದಿಂದ ಹೊರಡುವ ಕೆಲವು ರೈಲುಗಳ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ರೈಲ್ವೆ ಕಾಮಗಾರಿಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದಲ್ಲದೇ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಅರಸಾಳು ಹಾಗೂ ಶಿವಮೊಗ್ಗ ತಾಲ್ಲೂಕಿನ ಕುಂಸಿ ಗ್ರಾಮದ ನಿಲ್ದಾಣಗಳಲ್ಲಿ ಮೈಸೂರು- ತಾಳಗುಪ್ಪ ರೈಲು ನಿಲುಗಡೆಗೆ ಅವಕಾಶ ನೀಡಲಾಗಿದ್ದು, ಇದು ಮುಂದುವರಿಯಲಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.

ರೈಲುಗಳ ತಿರುವು

ವಾಥರ್-ಪಾಲ್ಸಿ ವಿಭಾಗದಲ್ಲಿ ನಡೆಯುತ್ತಿರುವ ಎಂಜಿನಿಯರಿಂಗ್ ಕೆಲಸಗಳಿಂದಾಗಿ ಬೆಂಗಳೂರು ಮೈಸೂರು ಕಡೆಯಿಂದ ಹೋಗುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಕಾಮಗಾರಿ ತ್ವರಿತಗೊಳಿಸಿ ಬೇಗ ಮುಗಿಸಬೇಕಾಗಿರುವುದರಿಂದ ಈ ಮಾರ್ಗದಲ್ಲಿ ಕೆಲವು ರೈಲು ಸಂಚಾರದ ಮಾರ್ಗ ಬದಲು ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಹೇಳಿದೆ.

1. ರೈಲು ಸಂಖ್ಯೆ 16507 ಜೋಧಪುರ-ಕೆ. ಎಸ್. ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಆಗಸ್ಟ್ 22 ರಂದು ಜೋಧ್ಪುರದಿಂದ ಹೊರಡಲಿದ್ದು ಅದು, 2024 ಪುಣೆ ಮಾರ್ಗದ ಮೂಲಕ ಸಂಚರಿಸಲಿದೆ, ಡೌಂಡ್, ಕುರ್ದುವಾಡಿ ಮತ್ತು ಮಿರಾಜ್ ನಿಲ್ದಾಣಗಳ ಮೂಲಕ ಬೆಂಗಳೂರಿಗೆ ಆಗಮಿಸಲಿದೆ.

2. ಆಗಸ್ಟ್ 22,2024 ರಂದು ಮೈಸೂರಿನಿಂದ ಹೊರಡುವ ರೈಲು ಸಂಖ್ಯೆ 19668 ಮೈಸೂರು-ಉದಯಪುರ ಸಿಟಿ ಎಕ್ಸ್ಪ್ರೆಸ್ ಅನ್ನು ಮಿರಾಜ್, ಕುರ್ದುವಾಡಿ, ದೌಂಡ್ ಮತ್ತು ಪುಣೆ ನಿಲ್ದಾಣಗಳ ಮೂಲಕ ಸಂಚರಿಸಲು ಅವಕಾಶ ಮಾಡಿಕೊಡಲಾಗುವುದು.

3. ಆಗಸ್ಟ್ 22,2024 ರಂದು ಯಶ್ವಂತಪುರದಿಂದ ಹೊರಡುವ ರೈಲು ಸಂಖ್ಯೆ 12629 ಯಶ್ವಂತಪುರ-ಹಜ್ರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್ ಅನ್ನು ಮಿರಾಜ್, ಕುರ್ದುವಾಡಿ, ದೌಂಡ್ ಮತ್ತು ಮನಮಾಡ್ ನಿಲ್ದಾಣಗಳ ಮೂಲಕ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಳಿದ ದಿನಗಳಲ್ಲಿ ಎಂದಿನಂತೆ ಹಿಂದಿನ ಮಾರ್ಗಗಳಲ್ಲಿಯೇ ಈ ರೈಲು ಸಂಚರಿಸಲಿವೆ.

ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ

ರೈಲು ಸಂಖ್ಯೆ 16227/16228 ನ ತಾತ್ಕಾಲಿಕ ನಿಲುಗಡೆ ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ ಪ್ರೆಸ್ ರೈಲು 1 ನಿಮಿಷ ಹೊಸ ನಗರ ತಾಲ್ಲೂಕಿನ ಅರಸಾಳುವಿನಲ್ಲಿ ಮತ್ತು ರೈಲು ಸಂಖ್ಯೆ 16206/16205 ಮೈಸೂರು-ತಾಳಗುಪ್ಪ-ಮೈಸೂರು ಎಕ್ಸ್‌ಪ್ರೆಸ್‌ ರೈಲ ನ್ನು ಅರಸಾಳು ಹಾಗೂ ಕುಂಸಿ ನಿಲ್ದಾಣಗಳಲ್ಲಿ 1 ನಿಮಿಷದವರೆಗೆ ಆಗಸ್ಟ್ 24,2024 ರಿಂದ ಫೆಬ್ರವರಿ 23,2025 ರವರೆಗೆ ಈಗಿನ ನಿಲುಗಡೆ ಸಮಯದೊಂದಿಗೆ ಮುಂದುವರಿಸಲಾಗುವುದು. ಅರಸಾಳು ರೈಲ್ವೆ ನಿಲ್ದಾಣ ಮಾಲ್ಗುಡಿ ನಿಲ್ದಾಣ ಎಂದೇ ಬದಲಾಯಿಸಲಾಗಿದೆ. ಏಕೆಂದರೆ ಈ ನಿಲ್ದಾಣದಲ್ಲಿಯೇ ಶಂಕರ್‌ ನಾಗ್‌ ತಮ್ಮ ಪ್ರಖ್ಯಾತ ಮಾಲ್ಗುಡಿ ಡೇಸ್‌ ಧಾರವಾಹಿ ಚಿತ್ರೀಕರಿಸಿದ್ದರು. ಕಲಾವಿದ ಜಾನ್‌ ದೇವರಾಜ್‌ ಈ ನಿಲ್ದಾಣಕ್ಕೆ ವಿಶೇಷ ರೂಪ ನೀಡಿದ್ದರು.

ಹಾಸನ ರೈಲು ಸಂಚಾರ ಪುನಾರಂಭ

ಬೆಂಗಳೂರು–ಮಂಗಳೂರು ಮಾರ್ಗದ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆ ಬಳಿ ಭೂಕುಸಿತ ಸಂಭವಿಸಿದ್ದ ಸ್ಥಳದಲ್ಲಿ ಮಣ್ಣು ತೆರವು ಕಾರ್ಯಾಚರಣೆ ಪೂರ್ಣಗೊಂಡು ರೈಲು ಸಂಚಾರ ಮತ್ತೆ ಆರಂಭವಾಗಿದೆ.

ಈಗಾಗಲೇ ರೈಲು ಹಳಿಗಳ ಸುರಕ್ಷತೆಯನ್ನು ಪರೀಕ್ಷಿಸಲಾಗಿದ್ದು, ‘ರೈಲು ಮಾರ್ಗದ ಮಣ್ಣು ತೆರವುಗೊಳಿಸಿ ಹಳಿಗಳ ಪಕ್ಕದಲ್ಲಿ ಭೂಕುಸಿತದ ಸಾಧ್ಯತೆ ಇರುವೆಡೆ ಮರಳಿನ ಚೀಲಗಳನ್ನು ಇರಿಸಲಾಗಿದೆ. ಈ ಮಾರ್ಗವನ್ನು ರೈಲು ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಿದ್ದಾರೆ. ಹೀಗಾಗಿ, ಎಲ್ಲ ರೈಲುಗಳು ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ. ಭಾರೀ ಮಳೆ ಹಾಗೂ ಭೂಕುಸಿತದಿಂದ ಮೂರು ವಾರ ಈ ಭಾಗದ ಎಂಟು ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು.