ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 2 ಹೊಸ ಪ್ಲಾಟ್‌ಫಾರಂ; 180 ಕೋಟಿ ರೂ ಯೋಜನಾ ವೆಚ್ಚ
ಕನ್ನಡ ಸುದ್ದಿ  /  ಕರ್ನಾಟಕ  /  ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 2 ಹೊಸ ಪ್ಲಾಟ್‌ಫಾರಂ; 180 ಕೋಟಿ ರೂ ಯೋಜನಾ ವೆಚ್ಚ

ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 2 ಹೊಸ ಪ್ಲಾಟ್‌ಫಾರಂ; 180 ಕೋಟಿ ರೂ ಯೋಜನಾ ವೆಚ್ಚ

Indian Railways: ಬೆಂಗಳೂರು ರೈಲ್ವೆ ನಿಲ್ದಾಣಗಳ ಉನ್ನತೀಕರಣ, ಮೇಲ್ದರ್ಜೆಗೇರಿಸುವಿಕೆ ಕಾರ್ಯಗಳನ್ನು ಭಾರತೀಯ ರೈಲ್ವೆ ಕೈಗೆತ್ತಿಕೊಂಡಿದೆ. ಇದರಂತೆ, 180 ಕೋಟಿ ರೂ ಯೋಜನಾ ವೆಚ್ಚದಲ್ಲಿ ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 2 ಹೊಸ ಪ್ಲಾಟ್‌ಫಾರಂ ನಿರ್ಮಾಣವಾಗಲಿದೆ.

ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 2 ಹೊಸ ಪ್ಲಾಟ್‌ಫಾರಂ; 180 ಕೋಟಿ ರೂ ಯೋಜನಾ ವೆಚ್ಚ (ಸಾಂಕೇತಿಕ ಚಿತ್ರ)
ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 2 ಹೊಸ ಪ್ಲಾಟ್‌ಫಾರಂ; 180 ಕೋಟಿ ರೂ ಯೋಜನಾ ವೆಚ್ಚ (ಸಾಂಕೇತಿಕ ಚಿತ್ರ)

Indian Railways: ಬೆಂಗಳೂರು ರೈಲ್ವೆ ನಿಲ್ದಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ರೈಲ್ವೆ ಸಚಿವಾಲಯ ಮುಂದಾಗಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 180 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಹೊಸ ಪ್ಲಾಟ್‌ಫಾರಂಗಳನ್ನು ಸೇರಿಸಲು ಮುಂದಾಗಿದೆ. ಇದೇ ರೀತಿ ಕಂಟೋನ್ಮೆಂಟ್‌ ಮತ್ತು ಯಶವಂತಪುರ ಜಂಕ್ಷನ್ ನಿಲ್ದಾಣಗಳ ಉನ್ನತೀಕರಣದ ಯೋಜನೆಯನ್ನೂ ಸಚಿವಾಲಯ ಪರಿಗಣಿಸಿದೆ. ರೈಲ್ವೆ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಅವರು ದ ಹಿಂದೂ ಜತೆಗೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಕೆಎಸ್‌ಆರ್ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ 2 ಹೊಸ ಪ್ಲಾಟ್‌ಫಾರಂ; 180 ಕೋಟಿ ರೂ ಯೋಜನಾ ವೆಚ್ಚ

ಬೆಂಗಳೂರಿನ ಹೆಚ್ಚುತ್ತಿರುವ ಪ್ರಯಾಣಿಕರ ಅಗತ್ಯಗಳನ್ನು ಎತ್ತಿ ತೋರಿಸಿದ ಕೇಂದ್ರ ಸಚಿವ ವಿ ಸೋಮಣ್ಣ ಅವರು, ಬೆಂಗಳೂರು ಕಂಟೋನ್ಮೆಂಟ್ ಮತ್ತು ಯಶವಂತಪುರ ಜಂಕ್ಷನ್ ರೈಲು ನಿಲ್ದಾಣಗಳು ವಿಶ್ವದರ್ಜೆಯ ಗುಣಮಟ್ಟವನ್ನು ಪೂರೈಸುವುದಕ್ಕೆ ಅಗತ್ಯವಾದ ಉನ್ನತೀಕರಣಕ್ಕೆ ಒಳಗಾಗಲಿವೆ ಎಂದು ಹೇಳಿದರು.

ವೈಟ್‌ಫೀಲ್ಡ್‌, ಹೂಡಿ ಹಾಲ್ಟ್‌, ಕಾರ್ಮೆಲಾರಂ ಮತ್ತು ಬೆಳ್ಳಂದೂರು ಸೇರಿ ನಿಲ್ದಾಣಗಳಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ಭವಿಷ್ಯದ ವರ್ಧನೆಗಳ ಕುರಿತು ಸಚಿವರು ಅಧಿಕಾರಿಗಳೊಂದಿಗೆ ಜನವರಿ 16 ರಂದು ಭೇಟಿ ವೇಳೆ ಚರ್ಚೆ ನಡೆಸಿದರು. ಲೆವೆಲ್ ಕ್ರಾಸಿಂಗ್ 134 ರಲ್ಲಿ, ರೋಡ್ ಓವರ್ ಬ್ರಿಡ್ಜ್ (ROB) ಯೋಜನೆಗಳನ್ನು ಪರಿಶೀಲಿಸಿದ ಸಚಿವರು, ಮಳೆ ಬಂದಾಗ ಪ್ರವಾಹ ಸ್ಥಿತಿ ಉಂಟುಮಾಡು ಪಾಣತ್ತೂರು ಸೇತುವೆ ಕೆಳಗೆ ಸುಧಾರಿತ ಒಳಚರಂಡಿ ಪರಿಹಾರಗಳು ಮತ್ತು ಹೆಚ್ಚುವರಿ ವೆಂಟ್‌ಗಳನ್ನು ನಿರ್ಮಿಸುವಂತೆ ಸೂಚಿಸಿದರು.

ಉಪನಗರ ರೈಲು ಯೋಜನೆ 2027ರ ಮಾರ್ಚ್‌ನಲ್ಲಿ ಜಾರಿಗೆ ನಿರೀಕ್ಷೆ

ಬೆಂಗಳೂರು ಕಂಟೋನ್ಮೆಂಟ್-ವೈಟ್‌ಫೀಲ್ಡ್ ಚತುಷ್ಪಥ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದ ಸಚಿವ ಸೋಮಣ್ಣ, ಇದು ನಿಗದಿತ ಸಮಯದಲ್ಲೇ ಮುಗಿಯಲಿದೆ ಎಂದು ಖಚಿತಪಡಿಸಿದರು. ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್‌ಆರ್‌ಪಿ) ಭಾಗಗಳು ಮಾರ್ಚ್ 2027 ರ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಸಚಿವರು ಬೆಂಗಳೂರು ನಿವಾಸಿಗಳಿಗೆ ಭರವಸೆ ನೀಡಿದರು ಎಂದು ವರದಿ ವಿವರಿಸಿದೆ.

ಈ ಉಪಕ್ರಮಗಳ ಜೊತೆಗೆ, ದಟ್ಟಣೆಯನ್ನು ನಿವಾರಿಸಲು ಮತ್ತು ಪ್ರದೇಶದಾದ್ಯಂತ ಸಂಪರ್ಕವನ್ನು ಸುಧಾರಿಸಲು 280-ಕಿಮೀ ವೃತ್ತಾಕಾರದ ರೈಲ್ವೆ ಯೋಜನೆ ಮತ್ತು ದೇವನಹಳ್ಳಿ ಬಳಿ ಹೊಸ ಟರ್ಮಿನಲ್ ಅನ್ನು ಘೋಷಿಸಲಾಗಿದೆ. ಈ ಪರಿವರ್ತಕ ಯೋಜನೆಗಳು ಬೆಂಗಳೂರಿನ ವಿಸ್ತರಿಸುತ್ತಿರುವ ಜನಸಂಖ್ಯೆಯನ್ನು ಪೂರೈಸುವ ಗುರಿಯನ್ನು ಹೊಂದಿವೆ. ಆಧುನಿಕ ರೈಲ್ವೆ ಮೂಲಸೌಕರ್ಯಕ್ಕಾಗಿ ನಗರವನ್ನು ಮಾನದಂಡವಾಗಿ ರೂಪಿಸಲಿವೆ ಎಂದು ಸಚಿವರು ವಿವರಿಸಿದ್ದಾಗಿ ವರದಿ ಹೇಳಿದೆ.

Whats_app_banner