Indian Railways: ಮಲೆನಾಡಲ್ಲಿ ಗುಡ್ಡ ಕುಸಿತ, ಎರಡು ದಿನ ಬೆಂಗಳೂರು, ಕೇರಳ, ಕಾರವಾರ, ವಿಜಯಪುರ ರೈಲುಗಳ ಸಂಚಾರ ರದ್ದು
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಮಲೆನಾಡಲ್ಲಿ ಗುಡ್ಡ ಕುಸಿತ, ಎರಡು ದಿನ ಬೆಂಗಳೂರು, ಕೇರಳ, ಕಾರವಾರ, ವಿಜಯಪುರ ರೈಲುಗಳ ಸಂಚಾರ ರದ್ದು

Indian Railways: ಮಲೆನಾಡಲ್ಲಿ ಗುಡ್ಡ ಕುಸಿತ, ಎರಡು ದಿನ ಬೆಂಗಳೂರು, ಕೇರಳ, ಕಾರವಾರ, ವಿಜಯಪುರ ರೈಲುಗಳ ಸಂಚಾರ ರದ್ದು

Railway Updates ಮಳೆ ಹಾಗೂ ಭೂಕುಸಿತದ ಕಾರಣದಿಂದ ಬೆಂಗಳೂರು ಹಾಗೂ ವಿಜಯಪುರದಿಂದ ಮಂಗಳೂರು ಕಡೆಗೆ ಹೋಗುವ ಕೆಲವು ರೈಲುಗಳನ್ನು ರದ್ದುಪಡಿಸಲಾಗಿದೆ. ಅದರ ವಿವರ ಇಲ್ಲಿದೆ.

ಮಳೆ ಅನಾಹುತಗಳ ದುರಸ್ತಿ ಕಾರ್ಯದಿಂದಾಗಿ ಕೆಲವು ರೈಲುಗಳ ಸಂಚಾರವನ್ನು ಹಾಸನ ಭಾಗದಲ್ಲಿ ರದ್ದುಪಡಿಸಲಾಗಿದೆ.
ಮಳೆ ಅನಾಹುತಗಳ ದುರಸ್ತಿ ಕಾರ್ಯದಿಂದಾಗಿ ಕೆಲವು ರೈಲುಗಳ ಸಂಚಾರವನ್ನು ಹಾಸನ ಭಾಗದಲ್ಲಿ ರದ್ದುಪಡಿಸಲಾಗಿದೆ.

ಬೆಂಗಳೂರು: ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿ ರೈಲ್ವೆ ಮಾರ್ಗಗಳ ದುರಸ್ಥಿ ಕಾರ್ಯ ನಡೆಯುತ್ತಿರುವುದರಿಂದ ಹಾಸನದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರು, ಕೇರಳ, ಕಾರವಾರ, ವಿಜಯಪುರಕ್ಕೆ ಸಂಚರಿಸುವ ರೈಲುಗಳ ಸೇವೆಯನ್ನು ರದ್ದುಪಡಿಸಲಾಗಿದೆ.ಕೆಲವು ರೈಲುಗಳು ಆಗಸ್ಟ್‌ 4ರ ಶನಿವಾರವೇ ಸಂಚಾರ ನಿಲ್ಲಿಸಿದ್ದವು. ಆಗಸ್ಟ್‌ 5 ಹಾಗೂ 6ರ ಭಾನುವಾರ ಹಾಗೂ ಸೋಮವಾರದಂದೂ ಕೂಡ ಕೆಲವು ರೈಲುಗಳ ಸಂಚಾರವನ್ನು ಸಂಪೂರ್ಣ ರದ್ದುಪಡಿಸಲಾಗಿದೆ. ಆನಂತರದ ರೈಲು ಸಂಚಾರದಲ್ಲಿ ವ್ಯತ್ಯಯವಾಗುವುದಿಲ್ಲ ಎಂದು ಮಂಗಳೂರು ರೈಲ್ವೆ ನಿಲ್ದಾಣದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೈಋತ್ಯ ರೈಲ್ವೆ ವ್ಯಾಪ್ತಿಯ ಎಡಕುಮೇರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ಮಧ್ಯೆ ಗುಡ್ಡ ಕುಸಿತ ಉಂಟಾಗಿರುವ ಕಾರಣ ಆಗಸ್ಟ್‌ 5 ಮತ್ತು 6ರಂದು ಹಲವು ರೈಲು ಸಂಚಾರ ರದ್ದು ಪಡಿಸಲಾಗಿದೆ.ಇದರಲ್ಲಿ ಆಗಸ್ಟ್‌ 5ರಂದು ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ (ರೈಲು ನಂ. 16511) , ಆ.5ಮತ್ತು 6 ರಂದು ಕಣ್ಣೂರು- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ನಂ.16512) , ಆ.5 ರಂದು ಕೆಎಸ್‌ಆರ್ ಬೆಂಗಳೂರು-ಕಾರವಾರ ಸ್ಪೆಷಲ್ ಎಕ್ಸ್‌ಪ್ರೆಸ್ (ರೈಲು ನಂ. 16595) , ಆ.5ಮತ್ತು 6ರಂದು ಕಾರವಾರ -ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ (ರೈಲು ನಂ. 16596) ಸಂಪೂರ್ಣ ರದ್ದು ಮಾಡಲಾಗಿದೆ.

ಆ.5 ರಂದು ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ (ರೈಲು ನಂ. 16585), ಆ.5 ಮತ್ತು 6 ರಂದು ಮುರುಡೇಶ್ವರ -ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ (ರೈಲು ನಂ.16586), ಆ.5 ರಂದು ವಿಜಯಪುರ- ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ನಂ. 07377), ಆ.5 ಮತ್ತು 6 ರಂದು ಮಂಗಳೂರು ಸೆಂಟ್ರಲ್ – ವಿಜಯಪುರ ಸ್ಪೆಷಲ್ ಎಕ್ಸ್ಪ್ರೆಸ್ (ರೈಲು ನಂ.7378) ಸಂಪೂರ್ಣ ರದ್ದು ಪಡಿಸಲಾಗಿದೆ.

ಆ.5ರಂದು ಯಶವಂತಪುರ ಜಂಕ್ಷನ್-ಕಾರವಾರ ಎಕ್ಸ್‌ಪ್ರೆಸ್ (ರೈಲು ನಂ.16515) , ಆ.6ರಂದು ಕಾರವಾರ -ಯಶವಂತಪುರ ಜಂಕ್ಷನ್ (ರೈಲು ನಂ.18516), ಆ.5ರಂದು ಮಂಗಳೂರು ಜಂಕ್ಷನ್ – ಯಶವಂತಪುರ ಜಂಕ್ಷನ್ ಎಕ್ಸ್‌ಪ್ರೆಸ್ (ರೈಲು ನಂ. 16576) ಸಂಪೂರ್ಣ ರದ್ದು ಮಾಡಲಾಗಿದೆ. ಮಲೆನಾಡು, ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲುಗಳ ಸಂಚಾರ ವ್ಯತ್ಯಯದಿಂದ ಪ್ರಯಾಣಿಕರಿಗೆ ತೊಂದರೆಯಾಗಲಿದ್ದು. ಸಹಕರಿಸಬೇಕು ಎಂದು ಕೋರಲಾಗಿದೆ.

Whats_app_banner