Indian Railways: ಮಂಗಳೂರು ಬೆಂಗಳೂರು ರೈಲುಸೇವೆ 15 ದಿನಗಳ ಬಳಿಕ ಇಂದಿನಿಂದ ಪುನಾರಂಭ; ವಿಜಯಪುರ ರೈಲು ಇಂದೂ ಇಲ್ಲ-indian railways mangalore bangalore train service will resume from august 14 cancelled after hassan landslide hsm ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಮಂಗಳೂರು ಬೆಂಗಳೂರು ರೈಲುಸೇವೆ 15 ದಿನಗಳ ಬಳಿಕ ಇಂದಿನಿಂದ ಪುನಾರಂಭ; ವಿಜಯಪುರ ರೈಲು ಇಂದೂ ಇಲ್ಲ

Indian Railways: ಮಂಗಳೂರು ಬೆಂಗಳೂರು ರೈಲುಸೇವೆ 15 ದಿನಗಳ ಬಳಿಕ ಇಂದಿನಿಂದ ಪುನಾರಂಭ; ವಿಜಯಪುರ ರೈಲು ಇಂದೂ ಇಲ್ಲ

Indian Railways ಮಂಗಳೂರು ಬೆಂಗಳೂರು( Mangalore Bangalore Trains) ನಡುವಿನ ರೈಲು ಸಂಚಾರ ಬುಧವಾರದಿಂದ ಪುನಾರಂಭಗೊಳ್ಳಲಿದೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ಮಂಗಳೂರು ಹಾಗೂ ಬೆಂಗಳೂರಿನ ರೈಲು ಸೇವೆ ಬುಧವಾರ ಆರಂಭಗೊಳ್ಳುತ್ತಿದೆ.
ಮಂಗಳೂರು ಹಾಗೂ ಬೆಂಗಳೂರಿನ ರೈಲು ಸೇವೆ ಬುಧವಾರ ಆರಂಭಗೊಳ್ಳುತ್ತಿದೆ.

ಮಂಗಳೂರು: ಶನಿವಾರ ಭೂಕುಸಿತದಿಂದ ಸ್ಥಗಿತಗೊಂಡಿದ್ದ ಮಂಗಳೂರು ಬೆಂಗಳೂರು ರೈಲುಸೇವೆಗಳು ಬುಧವಾರದಿಂದ ಪುನರಾರಂಭಗೊಳ್ಳಲಿದೆ. ಈ ವಿಷಯವನ್ನು ನೈಋತ್ಯ ರೈಲ್ವೆ ಮಂಗಳವಾರ ರಾತ್ರಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. ಸಕಲೇಶಪುರ ಹಾಗು ಬಾಳ್ಳುಪೇಟೆ ನಡುವೆ ಗುಡ್ಡ ಕುಸಿತದಿಂದ ರೈಲು ಸೇವೆಗಳು ಸ್ಥಗಿತಗೊಂಡಿದ್ದವು. ಇದೀಗ ಎಲ್ಲಾ ರೈಲು ಸೇವೆಗಳು ನಾಳೆಯಿಂದ ಪುನರಾರಂಭವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆದರೆ ಮಂಗಳವಾರ ಹೊರಡಬೇಕಿದ್ದ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್ ಪ್ರೆಸ್ ವಿಶೇಷ ರೈಲು ಸೇವೆ ರದ್ದುಗೊಂಡಿದೆ. ಸಕಲೇಶಪುರ ಮತ್ತು ಬಾಳ್ಳುಪೇಟೆ ನಿಲ್ದಾಣಗಳ ಮಧ್ಯೆ ಮಣ್ಣು ಕುಸಿತದಿಂದ ಸಂಚಾರಕ್ಕೆ ಅಡೆತಡೆ ಉಂಟಾಗಿತ್ತು. ಅದೀಗ ಸಂಚಾರಕ್ಕೆ ಯೋಗ್ಯ ಎಂದು ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.

ರೈಲ್ವೆ ಹಳಿಗೆ ಮಣ್ಣು ಬಿದ್ದಿರುವ ಕಾರಣ ಮಂಗಳೂರಿನಿಂದ ಹಾಸನ ಮಾರ್ಗವಾಗಿ ಹೋಗುವ ಬೆಂಗಳೂರು, ವಿಜಯಪುರ ರೈಲು ಸೇವೆಗಳನ್ನು ಭಾನುವಾರ, ಸೋಮವಾರ ಮತ್ತು ಮಂಗಳವಾರ ರದ್ದುಗೊಳಸಿಲಾಗಿತ್ತು.

ಶನಿವಾರ ದಿನವಿಡೀ ಅರ್ಧದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಗಮ್ಯ ಸ್ಥಾನಕ್ಕೆ ತಲುಪಿಸಲು ಇಲಾಖೆ ಹರಸಾಹಸಪಟ್ಟಿತ್ತು. ಆದಾಗ್ಯೂ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಿಶ್ರ ಪ್ರತಿಕ್ರಿಯೆ ಬಂದಿದ್ದವು.

ಎರಡು ಬಾರಿ ಭೂಕುಸಿತ

ಜುಲೈ 26ರ ಸಂಜೆ ಧಾರಾಕಾರ ಮಳೆಯಿಂದಾಗಿ ಸೇತುವೆಯೊಂದರ ಬಳಿ ಭೂಕುಸಿತವಾಗಿತ್ತು. ತಕ್ಷಣವೇ, ಎಸ್‌ಡಬ್ಲ್ಯೂಆರ್ನ ಮೈಸೂರು ವಿಭಾಗ ಬೆಂಗಳೂರು-ಮಂಗಳೂರು ಸೆಕ್ಟರ್‌ನಲ್ಲಿ ರೈಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ, ಟ್ರ್ಯಾಕ್ ಮರುಸ್ಥಾಪನೆ ಕಾರ್ಯ ಪ್ರಾರಂಭಿಸಿತ್ತು. ಈ ದುರಸ್ಥಿ ಕಾರ್ಯವನ್ನು ಪೂರ್ಣಗೊಳಿಸಲು ರೈಲ್ವೆಗೆ ಸುಮಾರು 10 ದಿನಗಳು ಬೇಕಾಗಿದ್ದವು. ಬಳಿಕ ಆಗಸ್ಟ್ 4ರಂದು ಬೆಳಿಗ್ಗೆ 8.58ಕ್ಕೆ ರೈಲ್ವೆ ಹಳಿಯನ್ನು 'ಫಿಟ್' ಎಂದು ಪ್ರಮಾಣೀಕರಿಸಲಾಗಿತ್ತು. ಆರಂಭದಲ್ಲಿ ಗೂಡ್ಸ್ ಟ್ರೈನ್ನ್ನು ಓಡಿಸಿ ಸುರಕ್ಷತೆಯನ್ನು ಪರೀಕ್ಷಿಸಲಾಯಿತು. ಆಗಸ್ಟ್ 8ರಂದು ಮೊದಲ ಪ್ಯಾಸೆಂಜರ್ ರೈಲು ಗೋಮ್ಮಟೇಶ್ವರ ಎಕ್ಸ್ಪ್ರೆಸ್ ಮಧ್ಯಾಹ್ನ 12.37ಕ್ಕೆ ಯಶಸ್ವಿಯಾಗಿ ಹಾದುಹೋಯಿತು.

ಆದರೆ ಮತ್ತೆ ಶನಿವಾರ ಭೂಕುಸಿತ ಉಂಟಾಯಿತು. ಬೃಹತ್ ಯಂತ್ರಗಳನ್ನು ಬಳಸಿ ಮಣ್ಣು ತೆರವುಗೊಳಸಲಾಗಿದ್ದರೂ ಮತ್ತೆ ಅದೇ ಜಾಗದಲ್ಲಿ ಕುಸಿತವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿತ್ತು. ರೈಲ್ವೆ ಇಲಾಖೆ ಸತತವಾಗಿ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಇದೀಗ ಮಣ್ಣು ತೆರವುಗೊಳಿಸಿದೆ. ಭಾರಿ ಮಳೆಯಾಗದಿದ್ದರೂ ಭೂಕುಸಿತ ಉಂಟಾಗುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದ್ದು, ಘಟ್ಟ ಪ್ರದೇಶಗಳಲ್ಲಿನ ಸುರಕ್ಷತೆಗೂ ಇದು ಸವಾಲೊಡ್ಡಿದೆ. ಇದಕ್ಕೆ ನಾನಾ ಕಾರಣಗಳನ್ನು ವಿಶ್ಲೇಶಿಷಲಾಗುತ್ತಿದೆ.

(ವರದಿ: ಹರೀಶ ಮಾಂಬಾಡಿ. ಮಂಗಳೂರು)