Indian Railways: ದಸರಾ ಹಬ್ಬಕ್ಕೆ ಅರಸೀಕೆರೆ-ಮೈಸೂರು ನಡುವೆ ಡೆಮು ವಿಶೇಷ ರೈಲು ಸೇವೆ, ನಾಳೆಯಿಂದ ಮೂರು ದಿನಗಳ ಕಾಲ ಸಂಚಾರ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ದಸರಾ ಹಬ್ಬಕ್ಕೆ ಅರಸೀಕೆರೆ-ಮೈಸೂರು ನಡುವೆ ಡೆಮು ವಿಶೇಷ ರೈಲು ಸೇವೆ, ನಾಳೆಯಿಂದ ಮೂರು ದಿನಗಳ ಕಾಲ ಸಂಚಾರ

Indian Railways: ದಸರಾ ಹಬ್ಬಕ್ಕೆ ಅರಸೀಕೆರೆ-ಮೈಸೂರು ನಡುವೆ ಡೆಮು ವಿಶೇಷ ರೈಲು ಸೇವೆ, ನಾಳೆಯಿಂದ ಮೂರು ದಿನಗಳ ಕಾಲ ಸಂಚಾರ

ಅರಸೀಕೆರೆ ಹಾಗೂ ಮೈಸೂರು ನಡುವೆ ಡೆಮು ರೈಲು ಸೇವೆಯನ್ನು ಅಕ್ಟೋಬರ್‌ 10ರಿಂದ ಮೂರು ದಿನ ಕಾಲ ಭಾರತೀಯ ರೈಲ್ವೆ ಹುಬ್ಬಳ್ಳಿ ವಲಯದ ಮೈಸೂರು ವಿಭಾಗವು ಆರಂಭಿಸಲಿದೆ.

ಅರಸೀಕೆರೆ ಹಾಗೂ ಮೈಸೂರು ನಡುವೆ ಡೆಮು ರೈಲು ಸೇವೆಯನ್ನು ದಸರಾ ವೇಳೆ ಆರಂಭಿಸಲಾಗುತ್ತಿದೆ.
ಅರಸೀಕೆರೆ ಹಾಗೂ ಮೈಸೂರು ನಡುವೆ ಡೆಮು ರೈಲು ಸೇವೆಯನ್ನು ದಸರಾ ವೇಳೆ ಆರಂಭಿಸಲಾಗುತ್ತಿದೆ.

ಬೆಂಗಳೂರು: ದಸರಾ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು, ನೈಋತ್ಯ ರೈಲ್ವೆಯು ಅಕ್ಟೋಬರ್ 10, 11 ಮತ್ತು 12, 2024 ರಂದು ಅರಸೀಕೆರೆ ಮತ್ತು ಮೈಸೂರು ನಿಲ್ದಾಣಗಳ ನಡುವೆ ಎರಡೂ ದಿಕ್ಕುಗಳಲ್ಲಿ ಮೂರು ಟ್ರಿಪ್ ಡೆಮು ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ಈಗಾಗಲೇ ಮೈಸೂರು ದಸರಾ ಹಿನ್ನೆಲೆಯಲ್ಲಿ ಬೆಳಗಾವಿ, ವಿಜಯಪುರ, ಚಾಮರಾಜನಗರ ಸಹಿತ ಹಲವು ಭಾಗಗಳಿಗೆ ವಿಶೇಷ ರೈಲು ಸಂಚಾರ ಆರಂಭಗೊಂಡಿದೆ. ಬೆಂಗೂರಿನಿಂದ ಮಂಗಳೂರು ಮಾರ್ಗವಾಗಿ ಕಾರವಾರ ವಿಶೇಷ ರೈಲು ಸೇವೆಯೂ ಶುರುವಾಗಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರು ಮಾರ್ಗವಾಗಿ ತೆರಳುವ ರೈಲುಗಳಿಗೆ ಅರಸಿಕೆರೆಯೇ ಕೇಂದ್ರ ಸ್ಥಾನ. ಇಲ್ಲಿ ಇಳಿದರೆ ಮೈಸೂರಿಗೆ ತಲುಪಬಹುದು. ಈ ಕಾರಣದಿಂದ ಸಂಪರ್ಕ ಕಲ್ಪಿಸಿ ಪ್ರಯಾಣಿಕರಿಗೆ ಉಪಯೋಗಲೆಂದು ಈ ಡೆಮು ರೈಲು ಆರಂಭಿಸಲಾಗುತ್ತಿದೆ.

ವಿಶೇಷ ರೈಲು ಸೇವೆಯ ವಿವರಗಳು ಈ ಕೆಳಗಿನಂತಿವೆ

ರೈಲು ಸಂಖ್ಯೆ 06207 ಅರಸೀಕೆರೆ-ಮೈಸೂರು ಡೆಮು ವಿಶೇಷ ರೈಲು ಅರಸೀಕೆರೆಯಿಂದ ಮಧ್ಯಾಹ್ನ 2.30ಕ್ಕೆ ಹೊರಟು, ಅದೇ ದಿನ ಸಂಜೆ 6.40ಕ್ಕೆ ಮೈಸೂರು ತಲುಪಲಿದೆ.

ರೈಲು ಸಂಖ್ಯೆ 06208 ಮೈಸೂರು-ಅರಸೀಕೆರೆ ಡೆಮು ವಿಶೇಷ ರೈಲು ಮೈಸೂರಿನಿಂದ ಸಂಜೆ 6.50ಕ್ಕೆ ಹೊರಟು, ಅದೇ ದಿನ ರಾತ್ರಿ 11.43ಕ್ಕೆ ಅರಸೀಕೆರೆ ತಲುಪಲಿದೆ.

ಈ ವಿಶೇಷ ರೈಲುಗಳು ಎರಡೂ ದಿಕ್ಕುಗಳಲ್ಲಿ ಹಬ್ಬನಘಟ್ಟ, ಬಾಗೇಶಪುರ, ಹಾಸನ, ಮಾವಿನಕೆರೆ, ಹೊಳೆ ನರಸೀಪುರ, ಅನ್ನೇಚಾಕನಹಳ್ಳಿ ಹಾಲ್ಟ್, ಶ್ರವಣೂರು ಹಾಲ್ಟ್, ಮಂದಗೆರೆ, ಬಿರವಳ್ಳಿ ಹಾಲ್ಟ್, ಅಕ್ಕಿಹೆಬ್ಬಾಳು, ಹೊಸ ಅಗ್ರಹಾರ, ಅರ್ಜುನಹಳ್ಳಿ ಹಾಲ್ಟ್, ಹಂಪಾಪುರ, ಕೃಷ್ಣರಾಜನಗರ, ಡೋರನಹಳ್ಳಿ, ಸಾಗರಕಟ್ಟೆ, ಕಲ್ಲೂರು ಎಡಹಳ್ಳಿ ಹಾಲ್ಟ್, ಕೃಷ್ಣರಾಜಸಾಗರ, ಮತ್ತು ಬೆಳಗುಳ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ.

ಈ ವಿಶೇಷ ಡೆಮು ರೈಲುಗಳು 8 ಕಾರ ಡೆಮು ಬೋಗಿಗಳನ್ನು ಒಳಗೊಂಡಿರಲಿವೆ ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಮಾಹಿತಿ ನೀಡಿದ್ದಾರೆ.

ಈಗಾಗಲೇ ಅರಸೀಕೆರೆ ಹಾಗೂ ಮೈಸೂರು ನಡುವೆ ನಿತ್ಯ ಬೆಳಿಗ್ಗೆ, ಮಧ್ಯಾಹ್ನ,ಸಂಜೆ ರೈಲುಗಳಿವೆ. ಇದಲ್ಲದೇ ಧಾರವಾಡ, ಬೆಳಗಾವಿ, ಶಿವಮೊಗ್ಗಕ್ಕೆ ಹೋಗುವ ರೈಲುಗಳು ಅರಸಿಕೆರೆ ಮಾರ್ಗವಾಗಿ ಚಲಿಸುತ್ತಿವೆ.ನಿತ್ಯ ಹತ್ತಕ್ಕೂ ಹೆಚ್ಚು ರೈಲುಗಳು ಮೈಸೂರು ಹಾಗೂ ಅರಸಿಕೆರೆ ನಡುವೆ ಸಂಚರಿಸಲಿವೆ. ಆದರೆ ಡೆಮು ಸೇವೆ ಇರಲಿಲಿಲ್ಲ. ಅರಸೀಕೆರೆಯಿಂದ ಮೈಸೂರಿಗೆ ಬರುವವರಿಗೆ ಹಾಗೂ ಮೈಸೂರಿನಿಂದ ಅರಸೀಕೆರೆಗೆ ಹೋಗುವವರಿಂದ ಇದರಿಂದ ಸಹಕಾರಿಯಾಗಲಿದೆ.

 

Whats_app_banner