Indian Railways: ಮೈಸೂರು,ಬೆಂಗಳೂರಿನಿಂದ ತಮಿಳುನಾಡಿಗೆ ವಿಶೇಷ ರೈಲು, ಮಂಗಳೂರು ವಿಜಯಪುರ ರೈಲು ಸಂಚಾರ ನಾಳೆಯೂ ರದ್ದು-indian railways mysore karaikudi via bangalore special train from august14 mangalore vijay pura train cancelled kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಮೈಸೂರು,ಬೆಂಗಳೂರಿನಿಂದ ತಮಿಳುನಾಡಿಗೆ ವಿಶೇಷ ರೈಲು, ಮಂಗಳೂರು ವಿಜಯಪುರ ರೈಲು ಸಂಚಾರ ನಾಳೆಯೂ ರದ್ದು

Indian Railways: ಮೈಸೂರು,ಬೆಂಗಳೂರಿನಿಂದ ತಮಿಳುನಾಡಿಗೆ ವಿಶೇಷ ರೈಲು, ಮಂಗಳೂರು ವಿಜಯಪುರ ರೈಲು ಸಂಚಾರ ನಾಳೆಯೂ ರದ್ದು

Train Updates ಭಾರತೀಯ ರೈಲ್ವೆ( Indian Railways) ನೈರುತ್ಯ ವಲಯವು ಮೈಸೂರಿನಿಂದ ತಮಿಳುನಾಡಿಗೆ ವಿಶೇಷ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಮಂಗಳೂರು ವಿಜಯಪುರ ರೈಲನ್ನು ಬುಧವಾರದಂದು ರದ್ದುಪಡಿಸಿದೆ.

ಮೈಸೂರು ಬೆಂಗಳೂರು ಮಾರ್ಗವಾಗಿ ತಮಿಳುನಾಡಿನ ಕರೈಕುಡಿಗೆ ವಿಶೇಷ ರೈಲು ಸಂಚರಿಸಲಿದೆ.
ಮೈಸೂರು ಬೆಂಗಳೂರು ಮಾರ್ಗವಾಗಿ ತಮಿಳುನಾಡಿನ ಕರೈಕುಡಿಗೆ ವಿಶೇಷ ರೈಲು ಸಂಚರಿಸಲಿದೆ.

ಬೆಂಗಳೂರು: ಸ್ವಾತಂತ್ರ್ಯೋತ್ಸವ ಹಾಗೂ ವಾರಾಂತ್ಯದ ರಜೆ ಇರುವುದರಿಂದ ತಮಿಳುನಾಡು ಭಾಗಕ್ಕೆ ವಿಶೇಷ ರೈಲನ್ನು ಓಡಿಸಲು ಹುಬ್ಬಳ್ಳಿ ಕೇಂದ್ರಿತ ನೈರುತ್ಯ ರೈಲ್ವೆ ಮುಂದಾಗಿದೆ. ಮೈಸೂರು- ಬೆಂಗಳೂರು- ಕಾರೈಕುಡಿ ನಡುವೆ ವಿಶೇಷ ರೈಲು ತಲಾ ಒಂದು ಬಾರಿ ಸಂಚರಿಸಲಿದೆ.ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು, ನೈಋತ್ಯ ರೈಲ್ವೆಯು ಸಾಂಸ್ಕೃತಿಕ ನಗರ ಮೈಸೂರು ಮತ್ತು ತಮಿಳುನಾಡಿನ ಕಾರೈಕ್ಕುಡಿ ನಡುವೆ ವಿಶೇಷ ರೈಲುಗಳ ಎರಡು ಟ್ರಿಪ್ಗಳನ್ನು ನಿರ್ವಹಿಸಲಿದೆ ಎಂದು ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ

ರೈಲು ಸಂಖ್ಯೆ 06295 ಮೈಸೂರಿನಿಂದ ಆಗಸ್ಟ್ 14 ಮತ್ತು 17 ರಂದು ರಾತ್ರಿ 9:30 ಕ್ಕೆ ಹೊರಡಲಿದೆ. ಮತ್ತು ಮರು ದಿನ ಮಧ್ಯಾಹ್ನ 12:45 ಕ್ಕೆ ಕಾರೈಕ್ಕುಡಿ ತಲುಪುತ್ತದೆ.

ಮರುದಿನ ಹಿಂದಿರುಗುವ ಪ್ರಯಾಣದಲ್ಲಿ, ರೈಲು ಸಂಖ್ಯೆ 06296 ಆಗಸ್ಟ್ 15 ಮತ್ತು 18 ರಂದು ಸಂಜೆ 7 ಗಂಟೆಗೆ ಕಾರೈಕ್ಕುಡಿಯಿಂದ ಹೊರಡಲಿದೆ. ಮತ್ತು ಮರುದಿನ ಬೆಳಿಗ್ಗೆ 9:10 ಕ್ಕೆ ಮೈಸೂರು ತಲುಪುತ್ತದೆ.

ಈ ವಿಶೇಷ ರೈಲುಗಳು ಪ್ರಮುಖ ನಿಲ್ದಾಣಗಳಲ್ಲಿ ಎರಡೂ ದಿಕ್ಕುಗಳಲ್ಲಿ ನಿಲ್ಲುತ್ತದೆ. ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಕೆಎಸ್‌ಆರ್ ಬೆಂಗಳೂರು, ಬೆಂಗಳೂರು ಕಂಟೋನ್ಮೆಂಟ್, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ನಾಮಕ್ಕಲ್, ಕರೂರ್, ತಿರುಚ್ಚಿರಾಪಳ್ಳಿ ಮತ್ತು ಪುದುಕ್ಕೊಟ್ಟೈನಲ್ಲಿ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದ್ದಾರೆ.

ವಿಶೇಷ ರೈಲು ಎರಡು ಎಸಿ-2 ಟೈರ್, ಎರಡು ಎಸಿ-3 ಟೈರ್, ಆರು ಸ್ಲೀಪರ್ ಕ್ಲಾಸ್, ಆರು ಜನರಲ್ ಸೆಕೆಂಡ್ ಕ್ಲಾಸ್ ಮತ್ತು ಎರಡು ಎಸ್‌ಎಲ್‌ಆರ್/ಡಿ ಸೇರಿದಂತೆ 18 ಕೋಚ್‌ಗಳನ್ನು ಒಳಗೊಂಡಿರುತ್ತದೆ.

ಮಂಗಳೂರು ವಿಜಯಪುರ ರೈಲು ರದ್ದು

ಮೈಸೂರು ವಿಭಾಗದ ಸಕಲೇಶಪುರ-ಬಾಳ್ಳುಪೇಟೆ ನಿಲ್ದಾಣಗಳ ನಡುವಿನ ಭೂಕುಸಿತಕ್ಕೆ ಸಂಬಂಧಿಸಿದಂತೆ, ಈಗಾಗಲೇ ಹಳಿ ಪುನಃಸ್ಥಾಪಿಸಲಾಗಿದೆ ಮತ್ತು ರೈಲು ಕಾರ್ಯಾಚರಣೆಗೆ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಲಾಗಿದೆ. ಆದರೂ ಇನ್ನೂ ಸಣ್ಣ ಪುಟ್ಟ ಕೆಲಸಗಳು ಇರುವುದರಿಂದ ಬುಧವಾರವೂ ಮಂಗಳೂರು ವಿಜಯಪುರ ರೈಲು ಸೇವೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಎರಡು ದಿನದ ಹಿಂದೆ ಬಿಡುಗಡೆ ಮಾಡಿದ್ದ ರೈಲ್ವೆ ಬುಲೆಟಿನ್ ನಲ್ಲಿಮಂಗಳೂರು ವಿಜಯಪುರ ರೈಲು ಬುಧವಾರ ಆರಂಭದ ಮಾಹಿತಿ ನೀಡಲಾಗಿತ್ತು. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ - ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ಬುಲೆಟಿನ್ ಸಂಖ್ಯೆ ಪ್ರಕಾರ ಆಗಸ್ಟ್ 14 ರ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.

ಉಳಿದಂತೆ ಈ ಮಾರ್ಗದ ಎಲ್ಲಾ ರೈಲು ಸೇವೆಗಳನ್ನು ಅವುಗಳ ನಿಗದಿತ ದಿನಾಂಕಗಳು ಮತ್ತು ಸಮಯದ ಪ್ರಕಾರ ನಾಳೆಯಿಂದ(ಬುಧವಾರ) ಪುನರಾರಂಭಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.