Indian Railways: ಮೈಸೂರು ಶಿರಡಿ, ತೂತುಕುಡಿ, ಚಾಮರಾಜನಗರ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ, ಜನವರಿ 1ರಿಂದ ಜಾರಿ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಮೈಸೂರು ಶಿರಡಿ, ತೂತುಕುಡಿ, ಚಾಮರಾಜನಗರ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ, ಜನವರಿ 1ರಿಂದ ಜಾರಿ

Indian Railways: ಮೈಸೂರು ಶಿರಡಿ, ತೂತುಕುಡಿ, ಚಾಮರಾಜನಗರ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆ, ಜನವರಿ 1ರಿಂದ ಜಾರಿ

Indian Raiways: ಭಾರತೀಯ ರೈಲ್ವೆ ಮೈಸೂರು ವಿಭಾಗದಿಂದ ಹೊರಡುವ ಹಾಗೂ ಬರುವ ಕೆಲವು ರೈಲುಗಳ ಸಮಯದಲ್ಲಿ ವ್ಯತ್ಯಾಸವಾಗಲಿದೆ. ಜನವರಿ ಒಂದರಿಂದ ಇದು ಜಾರಿಯಾಗಲಿದೆ.

ಜನವರಿ 1ರಿಂದಲೇ ಹಲವು ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆಯಾಗಲಿದೆ.
ಜನವರಿ 1ರಿಂದಲೇ ಹಲವು ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆಯಾಗಲಿದೆ.

ಮೈಸೂರು:ಮೈಸೂರಿನಿಂದ ಹೊರಡುವ ಹಾಗೂ ಮೈಸೂರಿಗೆ ಬರುವ ಕೆಲವು ರೈಲುಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಹೊಸ ರೈಲ್ವೆ ವೇಳಾಪಟ್ಟಿ 2025 ರ ಜನವರಿ 01 ರಿಂದ ಜಾರಿಗೆ ಬರಲಿದ್ದು, ಭಾರತೀಯ ರೈಲ್ವೆಯಾದ್ಯಂತ ಮೈಸೂರು ಮತ್ತು ಇತರ ನಿಲ್ದಾಣಗಳಿಂದ ಹೊರಡುವ/ಆಗಮಿಸುವ ಹಲವಾರು ರೈಲುಗಳ ಆಗಮನ ಮತ್ತು ನಿರ್ಗಮನ ಸಮಯವನ್ನು ಪರಿಷ್ಕರಿಸಲಾಗಿದೆ. ಎಲ್ಲಾ ಪ್ರಯಾಣಿಕರು ರೈಲು ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಈ ಕೆಳಗೆ ನೀಡಿರುವ ‘ವೆಬ್ ಸೈಟ್ ಲಿಂಕ್‌’ನ ಸಹಾಯದಿಂದ ಹೊಸ ರೈಲು ವೇಳಾಪಟ್ಟಿಯನ್ನು ದಯಮಾಡಿ ಪರಿಶೀಲಿಸಲು ಭಾರತೀಯ ರೈಲ್ವೆ ನೈರುತ್ಯ ವಲಯದ ಮೈಸೂರು ವಿಭಾಗ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ತಿಳಿಸಿದ್ದಾರೆ.

1. ಮೈಸೂರಿನಿಂದ ಸಾಯಿನಗರ ಶಿರಡಿಗೆ ಹೊರಡುವ ರೈಲು ಸಂಖ್ಯೆ 16217 ದಿನಾಂಕ 2025 ಜನವರಿ 06 ರಿಂದ ಬೆಳಿಗ್ಗೆ 05:00 ಗಂಟೆಗೆ ಮೈಸೂರಿನಿಂದ ಹೊರಡಲಿದೆ

2. ಟುಟಿಕೋರಿನ್‌ (ತೂತುಕುಡಿ)ನಿಂದ ಮೈಸೂರಿಗೆ ಹೊರಡುವ ರೈಲು ನಂ.16235 ಪಾಂಡವಪುರ ನಿಲ್ದಾಣಕ್ಕೆ 08:39 ಗಂಟೆಗೆ ತಲುಪುತ್ತದೆ ಮತ್ತು 08:40 ಗಂಟೆಗೆ ಹೊರಟು ಅಂತಿಮವಾಗಿ 09:30 ಗಂಟೆಗೆ ಮೈಸೂರು ತಲುಪುತ್ತದೆ.

3. ನಂಜನಗೂಡಿನಿಂದ ಮೈಸೂರಿಗೆ ಹೊರಡುವ ರೈಲು ನಂ.06299 ನಂಜನಗೂಡಿನಿಂದ 10:25 ಗಂಟೆಗೆ ಹೊರಟು 11:15 ಗಂಟೆಗೆ ಮೈಸೂರು ತಲುಪಲಿದೆ. ಮಾರ್ಗದಲ್ಲಿ ರೈಲು ಸುಜಾತಪುರಂ ಹಾಲ್ಟ್ ನಲ್ಲಿ 10:25 - 10:29, ತಾಂಡವಪುರ ಹಾಲ್ಟ್ 10:32 - 10:33, ಕಡಕೋಳ 10:38 - 10-:39, ಅಶೋಕಪುರಂ 10:48 - 10:49, ಚಾಮರಾಜಪುರಂ ನಿಲ್ದಾಣದಲ್ಲಿ 10:54 - 10:55 ಆಗಮಿಸುತ್ತದೆ - ನಿರ್ಗಮಿಸುತ್ತದೆ

4. ಮೈಸೂರಿನಿಂದ ನಂಜನಗೂಡಿಗೆ ಹೊರಡುವ ಪ್ಯಾಸೆಂಜರ್ ರೈಲು ನಂ.06300 ನಂಜನಗೂಡಿಗೆ 10:00 ಗಂಟೆಗೆ ತಲುಪಲಿದೆ

5. ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗುವ ಪ್ಯಾಸೆಂಜರ್ ರೈಲು ನಂ.60276 ಮೈಸೂರಿನಿಂದ 11:45 ಗಂಟೆಗೆ ನಿರ್ಗಮಿಸುತ್ತದೆ ಮತ್ತು ಚಾಮರಾಜನಗರಕ್ಕೆ 13:30 ಗಂಟೆಗೆ ತಲುಪುತ್ತದೆ. ಮಾರ್ಗದಲ್ಲಿ ರೈಲು ಚಾಮರಾಜಪುರಂನಲ್ಲಿ 11:50-11:51, ಅಶೋಕಪುರಂ 11:56-11:55, ಕಡಕೋಳ 12:08-12:09, ತಾಂಡವಪುರ ಹಾಲ್ಟ್ 12:14-12:15, ಸುಜಾತಪುರಂ ಹಾಲ್ಟ್ 12:18-12:19, ನಂಜನಗೂಡು ಟೌನ್ 12:23-12:25, ಚಿನ್ನದಗುಡಿ ಹುಂಡಿ ಹಾಲ್ಟ್ 12:35-12:36, ನರಸಾಂಬುಧಿ ಹಾಲ್ಟ್ 12:38-12:39, ಕವಲಂದೆ ಹಾಲ್ಟ್ 12:44-12:45, ಕೊಣ್ಣನೂರು ಹಾಲ್ಟ್ 12:50-12:51, ಬದನಗುಪ್ಪೆ ಹಾಲ್ಟ್ 12:56-12:57, ಮರಿಯಾಲ ಹಾಲ್ಟ್ 13:03-13:04 ಗಂಟೆಗೆ ಆಗಮಿಸುತ್ತದೆ - ನಿರ್ಗಮಿಸುತ್ತದೆ

6. ಚಾಮರಾಜನಗರದಿಂದ ಮೈಸೂರಿಗೆ ಹೊಗುವ ಪ್ಯಾಸೆಂಜರ್ ರೈಲು ನಂ.06234 ಅಶೋಕಪುರಂಗೆ 11:53 ಕ್ಕೆ ತಲುಪುತ್ತದೆ ಮತ್ತು 11:55 ಕ್ಕೆ ನಿರ್ಗಮಿಸುತ್ತದೆ ಹಾಗು ಚಾಮರಾಜಪುರಂಗೆ 12:01 ಕ್ಕೆ ಆಗಮಿಸಿ 12:02 ಕ್ಕೆ ನಿರ್ಗಮಿಸುತ್ತದೆ.

7. ಚಾಮರಾಜನಗರದಿಂದ ತುಮಕೂರು ಪ್ಯಾಸೆಂಜರ್ ರೈಲು ನಂ.07345 ಚಿನ್ನದಗುಡಿ ಹುಂಡಿಯಲ್ಲಿ 07:51- 07:52, ನಂಜನಗೂಡು ಟೌನ್ 08:02-08:04, ಸುಜಾತಪುರಂ ಹಾಲ್ಟ್ 08:08 - 08:09, ತಾಂಡವಪುರ ಹಾಲ್ಟ್ 08:13 - 08:14, ಕಡಕೋಳ 08:19-08:20, ಅಶೋಕಪುರಂ 08:33-08:34 ಮತ್ತು ಚಾಮರಾಜಪುರಂ 08:39-08:40.

ರೈಲುಗಳ ಸಂಚಾರ ಬದಲಾವಣೆ ಮಾಹಿತಿಗೆ ಈ ಲಿಂಕ್‌ ಕೂಡ ನೋಡಬಹುದು

---

ಹೊಸ ವರ್ಷ ಹೇಗಿರುತ್ತೆ? ಇಲ್ಲಿದೆ 2025 ರ ರಾಶಿವಾರು ಮಾಹಿತಿ

2025 ನಿಮಗೆ ಏನೆಲ್ಲಾ ಶುಭಫಲಗಳನ್ನು ನೀಡಲಿದೆ? ಹೊಸ ವರ್ಷದಲ್ಲಿ ಬದಲಾವಣೆಗಳು, ಉದ್ಯೋಗ ಪ್ರಗತಿ, ವಿದ್ಯಾಭ್ಯಾಸ, ಪ್ರೀತಿ, ದಾಂಪತ್ಯ ಸೇರಿದಂತೆ ನೀವು ತಿಳಿಯಬಯಸುವ ಸಮಗ್ರ ಮಾಹಿತಿ ಇಲ್ಲಿದೆ. ಪ್ರತಿ ರಾಶಿಯ ಸಮಗ್ರ ವಿವರ ಇಲ್ಲಿ ಲಭ್ಯ. ನೀವು ಈವರೆಗೆ ನೋಡಿಲ್ಲ ಅಂತಾದ್ರೆ ಬೇಗ ನೋಡಿ. ಈಗಾಗಲೇ ನೋಡಿದ್ದರೆ ನಿಮ್ಮ ಆಪ್ತರಿಗೂ ಈ ಬಗ್ಗೆ ತಿಳಿಸಿ.

Whats_app_banner