Indian Railways: ನಾಳೆ ಮೈಸೂರು ಶಿವಮೊಗ್ಗ, ತಾಳಗುಪ್ಪ ರೈಲಿನ ಸಂಚಾರದಲ್ಲಿ ಬದಲಾವಣೆ ; ಚಾಮರಾಜನಗರ ಪ್ಯಾಸೆಂಜರ್ ರದ್ದು
Indian Railways: ಕಾಮಗಾರಿ ಕಾರಣದಿಂದಾಗ ಮೈಸೂರು ಹಾಗೂ ಅರಸೀಕರೆ, ಚಾಮರಾಜನಗರ ಪ್ಯಾಸೆಂಜರ್ ರೈಲುಏಪ್ರಿಲ್ 16ರ ಬುಧವಾರದಂದು ರದ್ದುಪಡಿಸಲಾಗಿದೆ. ಕೆಲ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

Indian Railways:ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ವಿಜೆಎನ್‌ಎಲ್) ಯೋಜನೆಯಡಿ ಹಬ್ಬನಘಟ್ಟ ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ಕಾಲುವೆ ದಾಟುವ ಕಾಮಗಾರಿ ನಡೆಯಲಿರುವ ಕಾರಣ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ, ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ನಿಯಂತ್ರಿಸಲಾಗಿದೆ. ಅದರಲ್ಲು ಮುಖ್ಯವಾಗಿ ಅರಸೀಕೆರೆ - ಮೈಸೂರು ಪ್ಯಾಸೆಂಜರ್ ರೈಲು ಹಾಗೂ ಮೈಸೂರು - ಚಾಮರಾಜನಗರ, ಚಾಮರಾಜನಗರ - ಮೈಸೂರು ಪ್ಯಾಸೆಂಜರ್ ಸಂಚಾರವನ್ನು 2025ರ ಏಪ್ರಿಲ್ 16 ರಂದು ರದ್ದುಪಡಿಸಲಾಗಿದ್ದರೆ, ಮೈಸೂರು - ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು ಕೆಲ ಹೊತ್ತು ನಿಯಂತ್ರಿಸಲಾಗುತ್ತದೆ. ಒಂದು ದಿನದ ಮಟ್ಟಿಗೆ ಈ ಬದಲಾವಣೆ ಮಾಡಲಾಗಿದ್ದು ಪ್ರಯಾಣಿಕರು ಸಹಕರಿಸುವಂತೆ ನೈರುತ್ಯ ರೈಲ್ವೆ ವಲಯದ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ.ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಈ ರೈಲು ರದ್ದು
ರೈಲು ಸಂಖ್ಯೆ 56267 ಅರಸೀಕೆರೆ - ಮೈಸೂರು ಪ್ಯಾಸೆಂಜರ್ ರೈಲು ಏಪ್ರಿಲ್ 16, 2025 ರಂದು ರದ್ದುಗೊಳಿಸಲಾಗಿದೆ.
ಏಪ್ರಿಲ್ 29, ಮೇ 3, 10 ಮತ್ತು ಜೂನ್ 10, 2025 ರಂದು ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರು-ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಮೈಸೂರಿನ ಬದಲು ಅರಸೀಕೆರೆಯಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
ರೈಲು ಸಂಖ್ಯೆ 16225 ಮೈಸೂರು - ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 16, 2025 ರಂದು ಮೈಸೂರು ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ.
ರೈಲು ಸಂಖ್ಯೆ 16206 ಮೈಸೂರು - ತಾಳಗುಪ್ಪ ಎಕ್ಸ್‌ಪ್ರೆಸ್ ರೈಲು 2025ರ ಏಪ್ರಿಲ್ 16 ರಂದು ಮಾರ್ಗ ಮಧ್ಯದಲ್ಲಿ 20 ನಿಮಿಷಗಳ ಕಾಲ ನಿಯಂತ್ರಿಸಲಾಗುವುದು.
ಮೈಸೂರು - ಚಾಮರಾಜನಗರ ನಡುವಿನ ರೈಲು ಸಂಚಾರ ರದ್ದು
ತಾಂತ್ರಿಕ ಕಾರಣದಿಂದ ರೈಲು ಸಂಖ್ಯೆ 56210 ಮೈಸೂರು - ಚಾಮರಾಜನಗರ ಮತ್ತು ರೈಲು ಸಂಖ್ಯೆ 56207 ಚಾಮರಾಜನಗರ - ಮೈಸೂರು ಪ್ಯಾಸೆಂಜರ್ 2025ರ 16 ಏಪ್ರಿಲ್ ರಂದು ರದ್ದುಗೊಳಿಸಲಾಗಿದೆ.
ಇದೇ ಕಾಮಗಾರಿ ಹಿನ್ನೆಲೆಯಲ್ಲಿ ಏಪ್ರಿಲ್ 29, ಮೇ 3, 10 ಮತ್ತು 2025ರ ಜೂನ್ 10 ರಂದು ರೈಲು ಸಂಖ್ಯೆ 56267 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ರೈಲು ರದ್ದಾಗಲಿದೆ.
2. 2025ರ ಜೂನ್ 10 ರಂದು ರೈಲು ಸಂಖ್ಯೆ 16206 ಮೈಸೂರು-ತಾಳಗುಪ್ಪ ಡೈಲಿ ಎಕ್ಸ್ ಪ್ರೆಸ್ ಮತ್ತು ರೈಲು ಸಂಖ್ಯೆ 16205 ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲುಗಳು ರದ್ದಾಗಲಿವೆ.
ರೈಲುಗಳ ನಿಯಂತ್ರಣ / ತಡವಾಗಿ ಪ್ರಾರಂಭ
1. 2025 ರ ಜೂನ್ 10 ರಂದು ರೈಲು ಸಂಖ್ಯೆ 56266 ಮೈಸೂರು-ಅರಸೀಕೆರೆ ಡೈಲಿ ಪ್ಯಾಸೆಂಜರ್ ರೈಲು ಮಾರ್ಗ ಮಧ್ಯದಲ್ಲಿ60 ನಿಮಿಷ ನಿಯಂತ್ರಿಸಲಾಗುತ್ತದೆ.
2. 2025ರ ಜೂನ್ 10 ರಂದು ರೈಲು ಸಂಖ್ಯೆ 56265 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ಮತ್ತು ರೈಲು ಸಂಖ್ಯೆ 06269 ಮೈಸೂರು-ಎಸ್ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ ರೈಲುಗಳು ತಮ್ಮ ಮೂಲ ನಿಲ್ದಾಣದಿಂದ 60 ನಿಮಿಷ ತಡವಾಗಿ ಹೊರಡಲಿವೆ.
